Connect with us

Hassan

ದಕ್ಷ, ಪ್ರಮಾಣಿಕ ಡಿಸಿ ಸತ್ಯಭಾಮ ೪ ವರ್ಷ ವರ್ಗವಣೆ ಬೇಡ, ಹಾಸನ ಜಿಲ್ಲೆಯಲ್ಲೆ ಕರ್ತವ್ಯ ನಿರ್ವಹಿಸಲಿ : ಆರ್. ಮರಿಜೋಸೇಫ್ ಮನವಿ

Published

on

ಹಾಸನ: ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಸತ್ಯಭಾಮ ಅವರನ್ನು ಕನಿಷ್ಠ ನಾಲ್ಕು ವರ್ಷಗಳ ಕಾಲವಾದರೂ ಇಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೇಫ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಲೋಕಾಸಭೆ ಚುನಾವಣೆ ಪ್ರಯುಕ್ತ ವರ್ಗವಣೆ ಮಾಡದೇ ಅವರನ್ನೇ ಮುಂದುವರೆಸಬೇಕೆಂದು ಚುನಾವಣಾ ಆಯೋಗಕ್ಕೆ ದಲಿತ ಹಾಗೂ ಅಧಿವಾಸಿ ಬುಡಕಟ್ಟುಗಳ ಸಂಘಟನೆಗಳ ಮೂಲಕ ಕೋರುತ್ತಿದ್ದು, ಹಾಸನ ಜಿಲ್ಲೆಗೆ ಬಂದ ೮ ತಿಂಗಳಿನಿಂದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಜಿಲ್ಲೆಯ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಜಿಲ್ಲಾ ಅಧಿಕಾರಿಯನ್ನು ಸರಕಾರವು ೪ ವರ್ಷಗಳ ಅವಧಿವರೆಗೂ ವರ್ಗವಣೆ ಮಾಡದೇ ಅವರನ್ನೆ ಮುಂದುವರೆಸಿದರೇ ದಲಿತರ ಮತ್ತು ಅಧಿವಾಸಿ ಬುಡಕಟ್ಟು ಸಮುದಾಯದವರ ಭೂಮಿ ಸಮಸ್ಯೆಗಳು, ಸ್ಮಶಾಣದ ಭೂ ಸಮಸ್ಯೆಗಳು, ವಸತಿ ಸಮಸ್ಯೆಗಳು ಸೇರಿದಂತೆ ಈ ಸಮುದಾಯದಲ್ಲಿ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ದಕ್ಷ ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗವು ವರ್ಗವಣೆ ಮಾಡಬಾರದೆಂದು ನಮ್ಮ ಸಂಘಟನೆಗಳ ಮುಖಂಡರ ಮೂಲಕ ಕರ್ನಾಟಕ ಚುನಾವಣಾ ಆಯೋಗದ ಆಯುಕ್ತರಿಗೆ ಕಳಾಕಳಿಯ ಮನವಿ ಮಾಡುತ್ತಿರುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಅಧಿವಾಸಿ ಬಿರ್ಸಾ ಮುಂಡಾ ಯುವ ಸೇನೆ ರಾಜ್ಯ ಸಂಚಾಲಕ ನವೀನ್ ಸದಾ, ಜಿಲ್ಲಾ ಕಾರ್ಯದರ್ಶಿ ಹರೀಶ್ ಹುಳುವಾರೆ, ಜಿಲ್ಲಾ ಹಕ್ಕಿಪಿಕ್ಕಿ ಮೂಲ ಬುಡಕಟ್ಟು ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಸತ್ಯರಾಜ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ರಾಷ್ಟ್ರೀಯ ಹೆದ್ದಾರಿ 75ರ ಮಾವನೂರು ಗ್ರಾಮದ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.

ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಹಿರೇಗೌಡನಹಳ್ಳಿ ಗ್ರಾಮಕ್ಕೆ ಆಲೂರು ತಾಲೂಕಿನ ಪಟ್ನ ಗ್ರಾಮದ ಒಂದೇ ಕುಟುಂಬದವರು ತಮ್ಮ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆ ಹೋಗಿ ಹಿಂದಿರುಗಿ ಬರಗುವ ಬರುವಾಗ ಮಾವನೂರು ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಯಂತ್ರಣ ತಪ್ಪಿ

ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರು ಪವಾಢ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಅಲ್ಪ ಸ್ವಲ್ಪ ಗಾಯವಾಗಿದ್ದು, ಉಳಿದ ಮೂವರು ಯಾವುದೇ ಪ್ರಾಣ ಅಪಾಯ ಇಲ್ಲದೆ ಪಾರಾಗಿದ್ದಾರೆ.

ಕಾರು ಪಲ್ಟಿಯಾದ ಸದ್ದು ಕೇಳಿದ ಸ್ಥಳೀಯರು ಹಾಗೂ ವಾಹನ ಸವಾರರು ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ.

ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಸ್ಥಳಕ್ಕೆ ಆಲೂರು ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಅಪಘಾತಕ್ಕೀಡಾಗಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಆಲೂರು ತಾಲೂಕಿನ ಪಟ್ನ ಗ್ರಾಮದ ಸತೀಶ್ ನಾಯಕ, ರಾಜ ನಾಯಕ, ಪ್ರವೀಣ್ ಕಮಲಮ್ಮ, ವಿನುತಾ, ಹಾಗೂ ಚಿಕ್ಕ ಮಕ್ಕಳಾದ ಪ್ರೀತಮ್, ಪಾಪು ಎಂದು ತಿಳಿದು ಬಂದಿದೆ.

Continue Reading

Hassan

ಬಂಧಿಸುವ ವೇಳೆ ದರೋಡೆಕೋರ ಪ್ರಮುಖ ಆರೋಪಿ ಸತೀಶ್ ದಾಳಿ

Published

on

ಹಾಸನ: ರಾಬ್ರಿ ಸೇರಿದಂತೆ ನಾಲ್ಕು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸತೀಶ್ ನನ್ನು ಚನ್ನರಾಯಪಟ್ಟಣ ತಾಲೂಕಿನ ಬೂಕನಬೆಟ್ಟದಲ್ಲಿ ಸೆರೆ ಹಿಡಿಯುವಾಗ ತಮ್ಮ ರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾಹಿತಿ ನೀಡಿದರು.

ತಮ್ಮ ಕಛೇರಿಯಲ್ಲಿ ಭಾನುವಾರದಂದು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಒಂದು ರಾಬ್ರಿ ಕೇಸು ಫೈಲ್ ಆಗಿದ್ದು, ರಾತ್ರಿ ಸಮಯದಲ್ಲಿ ವಾಹನವನ್ನು ಅಡ್ಡಿಪಡಿಸಿ ಅವರ ಬಳಿ ಇದ್ದ ಹಣ ಇತರೆಯನ್ನು ಕಸಿದುಕೊಳ್ಳುತ್ತಿದ್ದ ಮಂಡ್ಯದ ಮಾಡಚಾಕನಹಳ್ಳಿ ಗ್ರಾಮದ ಯೋಗೀಶ್ ೨೮ ವರ್ಷ, ಮಂಡ್ಯ ಜಿಲ್ಲೆಯ ಗೊರವನಹಳ್ಳಿ ಗ್ರಾಮದ ರಾಘವೇಂದ್ರ ೩೪ ವರ್ಷ ಮತ್ತು ಮಂಡ್ಯ ಜಿಲ್ಲೆಯ ಮಾಡಚಾಕನಹಳ್ಳಿ ಗ್ರಾಮದ ಕಾರ್ತಿಕ್ ೨೨ ವರ್ಷ ಎನ್ನುವ ಮೂವರು ಜನ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ವಿಚಾರಣೆಯನ್ನು ಮುಂದುವರೆಸುವಾಗ ಮುಖ್ಯ ಆರೋಪಿ ಇರುವವರು ಸತೀಶ್ ವ್ಯಕ್ತಿ ಎಂಬುದು ತನಿಖೆಯಲ್ಲಿ ಕಂಡು ಬಂದಿರುತ್ತದೆ ಎಂದರು. ಈ ತನಿಖೆಯನ್ನು ಚುರುಕುಗೊಳಿಸುವಾಗ ರಾತ್ರಿ ಸಮಯದಲ್ಲಿ ಹಿರಿಸಾವೆ ಬಳಿ ಸತೀಶ್ ಎನ್ನುವವರು ತಲೆ ಮರೆಯಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿತ್ತು. ಮಾಹಿತಿ ಆಧಾರಿಸಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್. ರಘುಪತಿ, ಸಬ್ ಇನ್ಸ್ ಪೆಕ್ಟರ್ ಭಾರತ್ಡ್ಡಿ ಸೇರಿ ಬೂಕನಹಳ್ಳಿ ಬೆಟ್ಟದಲ್ಲಿ ಒಂದು ಆಫರೇಷನ್ ಮಾಡಲು ಸಿದ್ಧಪಡಿಸಿದರು.

ಈ ವೇಳೆ ಆರೋಪಿ ಸತೀಶ್ ಎನ್ನುವವರು ಪೊಲೀಸ್ ತಂಡದಲ್ಲಿರುವ ಪಿಸಿ ಪುಟ್ಟರಾಜು ಎನ್ನುವವರನ್ನು ಡ್ರ್ಯಾಗರ್ ಮೂಲಕ ಕೈಲಿ ಹೊಡೆದು ಏಟು ಮಾಡುತ್ತಾರೆ. ನಂತರ ಪಿ.ಎಸ್.ಐ. ಭರತ್ ರೆಡ್ಡಿ ತಕ್ಷಣ ಫೈರಿಂಗ್ ಮಾಡಿದಾಗ ಆರೋಪಿ ಇತನು ಕೂಡ ಮಂಡ್ಯ ಜಿಲ್ಲೆಯ ಆಡ್ಯಾ ಗ್ರಾಮದ ಸತೀಶ್ ೩೪ ವರ್ಷ ಎನ್ನುವನ ಕಾಲಿಗೆ ಪೆಟ್ಟು ಬೀಳುತ್ತದೆ. ನಂತರ ಬಂಧಿಸಲಾಗಿದ್ದು, ಈಗಾಗಲೇ ಕೇಸು ದಾಖಲಾಗಿದ್ದು, ತನಿಖೆ ಇನ್ನಷ್ಟು ಚುರುಕುಗೊಳಿಸಲಾಗಿದೆ. ಈಗಾಗಲೇ ಸತೀಶ್ ಮೇಲೆ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ೮ ಜನರ ತಂಡವಿದ್ದು, ಉಳಿದ ನಾಲ್ಕು ಜನರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ವಾಹನ ಅಡ್ಡಗಟ್ಟಿ ರಾಬ್ರಿ ನಡೆದಿದ್ದು, ಆ ರಾಬ್ರಿಗೆ ಇವರ ಹಿನ್ನಲೆ ಹಾಗೂ ಮಾಸ್ಟರ್ ಮೈಂಡ್ ಆಗಿದೆ ಎಂದು ತಿಳಿದು ಬಂದಿದ್ದರಿಂದ ದಸ್ತಗಿರಿ ಮಾಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಂಧಿಸುವ ವೇಳೆ ಪಿಸಿ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಆರೋಪಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ನಾಲ್ಕು ಕೇಸುಗಳಲ್ಲಿ ಎರಡು ಕೇಸುಗಳು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್ನೊಂದು ೨೦೨೪ರ ಮಾರ್ಚ್ ತಿಂಗಳಲ್ಲಿ ನುಗ್ಗೆಹಳ್ಳಿಯಲ್ಲಿ ಆಗಿರುವ ಪ್ರಕರಣವಾಗಿದೆ. ತನಿಖೆ ಇನ್ನಷ್ಟು ಪ್ರಗತಿಯಲ್ಲಿದ್ದು, ನಂತರ ಇನ್ನಷ್ಟು ಸತ್ಯಾಂಶಗಳು ಹೊರ ಬರಲಿದೆ ಎಂದು ತಿಳಿಸಿದರು.

Continue Reading

Hassan

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿವೃತ್ತ ಯೋಧರ ಮಕ್ಕಳಿಗೆ ವಿವಿಧ ಸ್ಪರ್ದೆ

Published

on

ಹಾಸನ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಹೌಸಿಂಗ್ ಬೋರ್ಡ್ ಬಳಿ ಇರುವ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಸೈನಿಕರ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಮತ್ತು ರಸಪ್ರಸ್ನೆ ಸ್ಪರ್ದೆಯಲ್ಲಿ ಸುಮಾರು ೪೫ಕ್ಕೂ ಹೆಚ್ಚಿನ ಮಕ್ಕಳು ಉತ್ಸಹದಿಂದ ಪಾಲ್ಗೊಂಡಿದ್ದು, ಸ್ಪರ್ದೆಯಲ್ಲಿ ಗೆದ್ದ ಮಕ್ಕಳಿಗೆ ಆಗಸ್ಟ್ ೧೫ ರಂದು ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ.

ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮಾತನಾಡಿ, ಪ್ರಸ್ತೂತದಲ್ಲಿ ಸ್ಪರ್ದೆ ಮಾತ್ರವಲ್ಲ. ಈ ಮಕ್ಕಳ ಮುಂದಿನ ಬೆಳೆವಣಿಗೆ ನಮ್ಮ ದೇಶದ ಆಸ್ತಿ, ಈಗ ನಡೆಯುತ್ತಿರುವ ಕ್ರೀಡೆಯನ್ನು ನಾವುಗಳೆಲ್ಲಾ ನೋಡುತ್ತಿದ್ದು, ಗೋಲ್ಡ್ ಮೆಡಲ್ ತಂದಿದ್ದಾರೆ. ದೇಶದ ಮಕ್ಕಳು, ಸೈನಿಕರ ಮಕ್ಕಳು ನಮ್ಮೆಲ್ಲರ ಆಸ್ತಿ. ಚಿಕ್ಕ ಚಿಕ್ಕ ಸ್ಪರ್ದೆಯಲ್ಲಿ ಪಾಲ್ಗೊಂಡು ಮುಂದೆ ದೊಡ್ಡ ದೊಡ್ಡ ಸ್ಪರ್ದೆಯಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಸಂಸ್ಕಾರ ಉಳ್ಳ ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ದೊಡ್ಡ ಆಸ್ತಿ ಆಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಾಗರ್ ಮಾತನಾಡಿ, ಸ್ವತಂತ್ರ್ಯ ದಿನದ ಅಂಗವಾಗಿ ನಾವು ನಮ್ಮ ಹಾಸನ ಜಿಲ್ಲಾ ಮಾಜಿ ಸೈನಿಕರ ಕುಟುಂಬ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ದೆ, ಕ್ವಿಜ್ ಸ್ಪರ್ದೆಯನ್ನು ಕಳೆದ ವರ್ಷವೂ ಕೂಡ ಹಮ್ಮಿಕೊಂಡಂತೆ ಈ ವರ್ಷವೂ ಕೂಡ ಏರ್ಪಡಿಸಲಾಗಿದೆ ಎಂದರು. ಪ್ರಸ್ತೂತದಲ್ಲಿ ಸ್ಪರ್ದೆ ಎಂಬುದು ಹೆಚ್ಚಾಗಿದ್ದು, ಮಾಜಿ ಸೈನಿಕರ ಮಕ್ಕಳಿಗೂ ಭಾಗವಹಿಸಲು ದೈರ್ಯ ಬರಲೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿವಿಧ ಸ್ಪರ್ದೆಯಲ್ಲಿ ಸುಮಾರು ೪೦ ರಿಂದ ೪೫ ಜನ ಮಕ್ಕಳುಬಹಳ ಉತ್ಸಹದಿಂದ ಪಾಲ್ಗೊಂಡಿದ್ದು, ದೇಶ ಭಕ್ತ ಕುರಿತು ಡ್ರಾಯಿಂಗ್ ಬರೆಯಲು ಅವಕಾಶ ಕೊಟ್ಟಿರುವಂತೆ ಮಕ್ಕಳು ತುಂಬ ಚನ್ನಾಗಿ ಬರೆದಿದ್ದಾರೆ ಎಂದು ಇದೆ ವೇಳೆ ಶ್ಲಾಘಿಸಿದರು.

ಇದೆ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಖಜಾಂಚಿ ಬಾಲಕೃಷ್ಣ, ಚನ್ನರಾಯಪಟ್ಟಣ ತಾಲೂಕು ನಿರ್ದೇಶಕರಾದ ಚಂದ್ರಶೇಖರ್, ತಾಲೂಕು ನಿರ್ದೇಶಕ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!