Mysore
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿ ಕಾಂತರೆಡ್ಡಿ.ಜಿ ಅಧಿಕಾರ ಸ್ವೀಕಾರ
![](https://janamitra.co/wp-content/uploads/2024/07/WhatsApp-Image-2024-07-05-at-10.33.43-AM.jpeg)
ಮೈಸೂರು: ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿ ಕಾಂತ ರೆಡ್ಡಿ.ಜಿ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಲಕ್ಷ್ಮೀ ಕಾಂತ ರೆಡ್ಡಿ ಅವರು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಹಿಂದೆ ಕೆಲಸ ನಿರ್ವಹಿಸಿದ್ದರು.
Mysore
ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು
![](https://janamitra.co/wp-content/uploads/2025/01/WhatsApp-Image-2025-01-25-at-16.54.42_051e6794.jpg)
ಮೈಸೂರು: ಶ್ರೀ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 27ರಂದು 155 ಜೋಡಿಗಳು ಸತಿ-ಪತಿಗಳಾಗಲಿದ್ದಾರೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಉಡಿಗಾಲ ಆರ್.ಕುಮಾರಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಪ್ರಸಕ್ತ ವರ್ಷದ ಸಾಮೂಹಿಕ ವಿವಾಹದಲ್ಲಿ 155 ಜೋಡಿಗಳು ಸತಿ-ಪತಿಗಳಾಗಲಿದ್ದು, ಇದರಲ್ಲಿ ಮೈಸೂರು ಜಿಲ್ಲೆಯ 29 ಜೋಡಿಗಳು ಹಾಗೂ ಚಾಮರಾಜನಗರ ಜಿಲ್ಲೆಯ 43 ಜೋಡಿಗಳು ಸೇರಿವೆ. ಸುತ್ತೂರು ಶ್ರೀ ಮಠ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ಸ್‌ನ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ, ಗದಗ ಜಿಲ್ಲೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಶ್ರೀ ಕಲ್ಲಯ್ಯಜ್ಜ ಅವರು ಉಪಸ್ಥಿತರಿದ್ದು ನವ ವಧು-ವರರನ್ನು ಆಶಿರ್ವದಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಾಹವಾಗಲಿರುವ ವಧು-ವರರ ವಿವರ:ವೀರಶೈವ ಲಿಂಗಾಯತ ಸಮುದಾಯ-3 ಜೋಡಿ. ಪರಿಶಿಷ್ಠ ಜಾತಿ-84 ಜೋಡಿ. ಪರಿಶಿಷ್ಟ ಪಂಗಡ-22 ಜೋಡಿ. ಹಿಂದುಳಿದ ವರ್ಗ-22 ಜೋಡಿ. ಅಂತರ್ಜಾತಿ-23 ಜೋಡಿ. ಅಂತರಧರ್ಮ -1 ಜೋಡಿ. ವಿಶೇಷ ಜೋಡಿಗಳ ವಿವರ: ತಮಿಳುನಾಡು-17ಜೋಡಿ.ವಿಶೇಷ ಚೇತನರು-3 ಜೋಡಿ.ಮರು ವಿವಾಹ 1 ಜೋಡಿ ಎಂದು ಅವರು ಹೇಳಿದರು
Mysore
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್‌ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
![](https://janamitra.co/wp-content/uploads/2024/11/allwyn_040619_vishwanath1.jpg)
ಮೈಸೂರು: ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡೋದು ಸರ್ಕಾರ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದೆ ಎಂದು ಎಂಎಲ್‌ಸಿ ಡಾ. ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ನೀಡಲಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದೆಯಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ.? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೋ ಶಾಸಕರ ಅಧಿಕಾರಿಗಳಾಗಬಾರದು ಎಂದು ಎಚ್.ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಸಿಎಂ ಅದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸೆಟಲ್ಮೆಂಟ್ ಮಾಡಬಹುದಿತ್ತು. ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.
ಸಿಎಂ ಅದಾಗಲೆಲ್ಲಾ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ಕೊಡ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ. ನಾನು ಡೆಮೋಕ್ರ್ಯಾಟಿಕ್ ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆ. ಸಿಎಂ ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದರು.
ಜನಾರ್ಧನರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ. ದುಡ್ಡೇನು ಅವರಪ್ಪನ ಮನೆಯಿಂದ ತಂದಿದ್ದಾ? ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು.
ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿ ಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಜನಾರ್ಧನರೆಡ್ಡಿ-ಶ್ರೀರಾಮುಲು ನಡುವೆ ವೈಮನಸ್ಸು ವಿಚಾರವಾಗಿ ಶ್ರೀರಾಮುಲು ಪರ MLC ಎಚ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ವರಿಷ್ಠರು ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಇರೋರು ಡಮ್ಮಿ ವರಿಷ್ಠರು. ಯಾರೋ ಹೇಳಿದ್ದನ್ನು ಬಂದು ಹೇಳುವ ವರಿಷ್ಠರು ಇದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಇದೇ ತರಹದ ವರಿಷ್ಠರು ಇದ್ದಾರೆ. ವಿಜಯೇಂದ್ರ ಯಾರು? ಯಡಿಯೂರಪ್ಪ ಯಾರು? ಎಂದು ಎಲ್ಲರಿಗೂ ಗೊತ್ತು. ವಿಜಯೇಂದ್ರಗೆ ಅಧಿಕಾರ ಮಾಡಲು ಯತ್ನಾಳ್ ಗುಂಪು ಬಿಡುತ್ತಿಲ್ಲ. ನನ್ನ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ನನ್ನನ್ನು ಬಿಜೆಪಿ ಸಭೆಗೆ ಕರೆಯೋದಿಲ್ಲ. ಸಭೆಯಲ್ಲಿ ಎಲ್ಲಿ ನಾನು ಕೆಲವು ವಿಷಯ ಬಾಯಿ ಬಿಡುತ್ತೇನೋ ಎಂದು ಕರೆಯೋದಿಲ್ಲ. ಮೈಸೂರಿನ ಬಿಜೆಪಿಯವರು ಕರೆಯೋದಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಸಭೆಗೂ ಕರೆದಿಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
Mysore
ನಂಜನಗೂಡು: ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ
![](https://janamitra.co/wp-content/uploads/2025/01/WhatsApp-Image-2025-01-25-at-15.31.46_8199e24f-scaled.jpg)
ನಂಜನಗೂಡು ಜ.25 ಮಹದೇವಸ್ವಾಮಿ ಪಟೇಲ್.
ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕರುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಗಿಡಕ್ಕೆ ನೀರಾಕುವ ಮೂಲಕ ಉದ್ಘಾಟಿಸಿದರು.
ಬಳಿಕ ಶಾಸಕರು ಮಾತನಾಡಿ ಪಶುವೈದ್ಯ ಆಸ್ಪತ್ರೆ ಆಗಬೇಕೆಂದು ಸಾಕಷ್ಟು ಬಳಿ ಗ್ರಾಮಸ್ಥರು ಹೇಳಿದ್ದೀರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೆ, ಇವಾಗ ನಿಮ್ಮ ಊರಿಗೆ ಪ್ರತ್ಯೇಕವಾಗಿ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಲಾಗಿದೆ ಮುಖ್ಯಮಂತ್ರಿ ಅವರು ಮಾಡಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಪಶು ವೈದ್ಯಕೀಯ ಸಚಿವರಾದ ವೆಂಕಟೇಶ್ ಅವರನ್ನು ಕರೆತಂದು ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕರುಗಳಿಗೆ ಜಂತು ನಾಶ, ಮತ್ತು ಕಂದೂರೋಗ, ಬರಬಾರದು ಎಂದು ಪಶುವೈದ್ಯಕೀಯ ಮಲ್ಲಿಕಾರ್ಜುನ ರವರು ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ಉಚಿತವಾಗಿ ಎಲ್ಲಾ ಕರುಗಳಿಗೆ ತೊಂದರೆ ಆಗಬಾರದುವೆಂದು ನಿಯಂತ್ರಣ ಮೂಲಕ ಲಸಿಕೆ ನೀಡಿದ್ದಾರೆ ಈ ಅವಕಾಶವನ್ನು ರೈತ ಬಾಂಧವರು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪಶುವೈದ್ಯ ಇಲಾಖೆಯ ಸಹಕಾರ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡಿ
ಕರುಗಳನ್ನು ಉತ್ತಮ ರೀತಿಯಲ್ಲಿ ಪಾಲನೆ ಪೋಷಣೆ ಮಾಡಿದರೆ 500 ಉದ್ಯಮಿ ಲಾಭಾಂಶ ಮಾಡುವುದಕ್ಕೆ ಮುಖ್ಯ ಅಂಶವಾಗಿರುತ್ತದೆ. ಕಾಲಕಾಲಕ್ಕೆ ಕರುಗಳಿಗೆ ಜಂತು ನಾಶ ಉತ್ಸವ ನೀಡಿದರೆ. ಒಳವರಿ ಜೀವಿ ಮತ್ತು ಹೂರ ಒಳ ಜೀವಿಗಳಿಗೆ ಜಂತುಹುಳಗಳು ಮುಕ್ತ ಮಾಡಿದರೆ ಉತ್ತಮ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ಸರಿಯಾಗಿ ಕಾಲಕಾಲಕ್ಕೆ ಮುಖ್ಯವಾಗಿ ಲಸಿಕೆ ಹಾಕಿಸಿದರೆ ಹಸುಗೆ ಯಾವುದೇ ಕಾರಣಕ್ಕೂ ಮುಂದಿನ ಗಳಲ್ಲಿ ಅಬೋಶನ್ ಹಾಗುವುದಿಲ್ಲ, ಮತ್ತು ಹಸು ಗರ್ಭ ಕಟ್ಟುತ್ತದೆ, ಅಥವಾ ಕಂದು ಹಾಕುವುದಿಲ್ಲ ಆದ್ದರಿಂದ ರೈತರು ಲಸಿಕೆ ಹಾಕಿಸಿ ಇಂತಹ ತಡೆಗಟ್ಟಬಹುದು ಎಂದು ತಿಳಿಸಿದರು.
ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನ, ಆಯೋಜಿಸಲಾಗಿತ್ತು.
ಎಚ್.ಎಫ್.ತಳಿ, ಜೆರ್ಸಿ ತಳಿ , ನಾಟ ತಳಿ, ವಿಜೇತರಾಗಿದ್ದ ರೈತರಿಗೆ ಬಹುಮಾನವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಗ್ರಾ. ಪಂ ಅಧ್ಯಕ್ಷರಾದ ವನಕರ ನಾಯಕ, ಉಪಾಧ್ಯಕ್ಷರಾದ ಲತಾ ಬಸಪ್ಪ , ಶಾಂತ ಮಲ್ಲು, ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ಸಿದ್ದರಾಜು, ಮಣಿಕಂಠ , ನಾಗಮ್ಮ , ಶಾರದಮ್ಮ, ಗುರುಸಿದ್ದಪ್ಪ , ಪುಟ್ಟಸ್ವಾಮಿ, ನಂಜನಗೂಡು ಪಶುವೈದ್ಯಾಧಿಕಾರಿ, ಪಶುವೈದ್ಯ ಸಿಬ್ಬಂದಿಗಳು, ಸೇರಿದಂತೆ ಮುಖಂಡರು, ಯಜಮಾನರು ಮತ್ತು ಗ್ರಾಮಸ್ಥರು ಗಳ ಇದ್ದರು.
-
Mysore19 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Mysore16 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್‌ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu20 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu17 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
Kodagu15 hours ago
ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ
-
Kodagu20 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Hassan14 hours ago
ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ
-
Mysore15 hours ago
ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು