Connect with us

Chikmagalur

ದತ್ತಮಾಲಾ ಧಾರಣೆ ಹೆಚ್.ಡಿ.ಕೆ ಗೆ ರಘು ಸಕಲೇಶಪುರ ಟ್ವೀಟ್ ಮಾಡಿ,ಸ್ವಾಗತ

Published

on

 

ದತ್ತಮಾಲಾ ಧಾರಣೆ ಹೆಚ್.ಡಿ.ಕೆ ಗೆ ರಘು ಸಕಲೇಶಪುರ ಟ್ವೀಟ್ ಮಾಡಿ,ಸ್ವಾಗತ

ಚಿಕ್ಕಮಗಳೂರು : ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹೇಳಿಕೆಯನ್ನು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ.

ದತ್ತಮಾಲಾ ಧಾರಣೆಯನ್ನು ಯಾಕೆ ಮಾಡಬಾರದು ಎಂಬ ಹೆಚ್‌ಡಿಕೆ ಹೇಳಿಕೆಗೆ ಹರ್ಷ ವ್ಯಕ್ತಪಡಿಸಿರುವ ಹಿಂದು ಮುಖಂಡರು. ಬಜರಂಗದಳ, ವಿಶ್ವಹಿಂದು ಪರಿಷತ್‌ನಿಂದ ಹೆಚ್.ಡಿ.ಕೆಗೆ ಆಹ್ವಾನ ನೀಡುವ ಸಾಧ್ಯತೆಯಿದೆ. ವಿಶ್ವಹಿಂದು ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 17 ರಿಂದ 26 ರವರೆಗೂ ನಡೆಯುಲಿರುವ ದತ್ತಮಾಲಾ ಅಭಿಯಾನ ನಡೆಯಲಿದೆ.

* ಈ ಬಾರಿ ನಡೆಯುಲಿರುವ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೆಚ್ ಡಿ ಕೆ ಆಹ್ವಾನ ?
ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಂಘಟನೆಯ ಮುಖಂಡರು ಖದ್ದು ಹೆಚ್ ಡಿಕೆ ಯನ್ನು ಭೇಟಿಯಾಗಿ 1 ದಿನಗಳ ಕಾಲ ನಡೆಯುವ ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಿ ಆಹ್ವಾನ ನೀಡುವ ಸಾಧ್ಯತೆ ಕಂಡುಬರುತ್ತಿವೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ನ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಚಿಕ್ಕಮಗಳೂರು : ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾವಪ್ಪಿರುವ ದುರಂತ ಘಟನೆ

Published

on

ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು,ಆಕಾಶ್ (13) ಮೃತ ದುರ್ದೈವಿ
ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ
ನೇರಳೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು
ಮರದಿಂದ ಜಾರಿ ಬೀಳುವಾಗ ವಿದ್ಯುತ್ ತಂತಿ ಹಿಡಿದ ಬಾಲಕ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದ ಬಾಲಕನ ಆಸ್ಪತ್ರೆಗೆ ದಾಖಲು ಮಾಡಿದ್ದು,ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Continue Reading

Chikmagalur

ನಗರಸಭೆ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

Published

on

ಚಿಕ್ಕಮಗಳೂರು : ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಮತ್ತಷ್ಟು ಹಣ ಪೀಕಲು ಪ್ಲಾನ್ ಮಾಡಿದ್ದ ಬಿಲ್ ಕಲೆಕ್ಟ‌ರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ನಗರಸಭೆ ವಾರ್ಡ್ 2 ರ ಬಿಲ್ ಕಲೆಕ್ಟರ್ ಪ್ರದೀಪ್ ಸಿಕ್ಕಿಬಿದ್ದ ಭ್ರಷ್ಟ

ಸದಾಶಿವಮೂರ್ತಿ ಎಂಬುವವರ ಬೈಪಾಸ್‌ ರಸ್ತೆಯ ಜಾಗದ ಇ-ಸ್ವತ್ತು ಮಾಡಿಕೊಡಲು ಚಿಕ್ಕಮಗಳೂರು ನಗರಸಭೆ ವಾರ್ಡ್2 ಬಿಲ್ ಕಲೆಕ್ಟರ್ ಪ್ರದೀಪ್‌ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾನೆ.

ಸದಾಶಿವಮೂರ್ತಿ ಮಗ ರಾಕೇಶ್ ನೀಡಿದ ದೂರಿನ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾ ಇನ್ಸ್‌ಪೆಕ್ಟ‌ರ್ ಅನಿಲ್‌ ರಾಥೋಡ್ ಹಾಗೂ ಮಲ್ಲಿಕಾರ್ಜುನ ನೇತೃತ್ವದ ತಂಡ ಪ್ರದೀಪ್ ನನ್ನು ನಗರಸಭೆ ಕಚೇರಿ ಎದುರು ಬಂಧಿಸಿದ್ದಾರೆ

Continue Reading

Chikmagalur

ರೈಲು‌ ನಿಲ್ದಾಣದಲ್ಲೇ ಅಪರಿಚಿತ ಆತ್ಮಹತ್ಯೆ

Published

on

ಚಿಕ್ಕಮಗಳೂರು : ಅಪರಿಚಿತ ವ್ಯಕ್ರಿಯೋರ್ವ ರೈಲು ನಿಲ್ದಾಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ರೈಲು ನಿಲ್ದಾಣದ ಮೇಲ್ಸೇತುವೆಯ ಕಂಬಕ್ಕೆ ಮಧ್ಯ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.. ಘಟನೆ ಕುರಿತು ತರೀಕೆರೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು.. ಮೃತನ‌ ಗುರುತು ಪತ್ತೆಗಾಗಿ ತಲಾಶ್ ನಡೆಸಿದ್ದಾರೆ.

Continue Reading

Trending

error: Content is protected !!