Mandya
ಹುಣ್ಣಿಮೆಯ ಅಂಗವಾಗಿ ದಾಸೋಹ ಹುಣ್ಣಿಮೆ ಕಾರ್ಯಕ್ರಮ
ಮಂಡ್ಯ : ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನದಲ್ಲಿ ಹುಣ್ಣಿಮೆಯ ಅಂಗವಾಗಿ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಜರುಗಿತು.
ಕಾಯಕಯೋಗಿ ಫೌಂಡೇಶನ್ ವತಿಯಿಂದ ನಡೆದ 26ನೇ ದಾಸೋಹ ಹುಣ್ಣಿಮೆಯನ್ನು ಮನ್ ಮೂಲ್ ಅಧ್ಯಕ್ಷ ಶಿವಪ್ಪ ಉದ್ಘಾಟಿಸಿ ಮಾತನಾಡಿದರು.

ನಗರಸಭೆ ಮಾಜಿ ಸದಸ್ಯೆ ಕೆ. ವಿದ್ಯಾಮಂಜುನಾಥ್ ಅಧ್ಯಕ್ಷತೆ ವಹಿಸಿ, ಇಂಜಿನಿಯರ್ ವಿ.ಎಂ.ಮಹೇಂದ್ರ ವೀರರಾಜಪುರ ರವರು ದಾಸೋಹಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೂಡಾ ಮಾಜಿ ಸದಸ್ಯೆ ಕಾವ್ಯ ಸೋಮಶೇಖರ್, ಜೆಎಲ್ಎಂ ಸಂಘಟನೆಯ ಮುಖಂಡರಾದ ಎಂ.ಎಸ್.ಮಂಜುನಾಥ್, ಶಿವಾನಂದ್, ಮೆಣಸಗೆರೆ ಶಿವಲಿಂಗಪ್ಪ, ಅವ್ವೇರಹಳ್ಳಿ ಬಸವಲಿಂಗು, ದಿನೇಶ್ ಬನ್ನಂಗಾಡಿ ಹಾಗೂ ಹಿಂದುಳಿದ ವರ್ಗಗಳ ಮುಖಂಡ ಎಲ್.ಸಂದೇಶ್ ಸೇರಿದಂತೆ ಸಾರ್ವಜನಿಕರು ಸಾರ್ವಜನಿಕರು ಉಪಸ್ಥಿತರಿದ್ದರು.
Mandya
ದಲಿತ ಸಿಎಂ ಆಯ್ಕೆಗೆ ಒತ್ತಾಯ : ಜೆ.ಪ್ರಸನ್ನ
ಮಂಡ್ಯ: ರಾಜ್ಯಕ್ಕೆ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತೆ ಭೀಮ ಸೇನೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜೆ.ಪ್ರಸನ್ನ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಹಿಂದುಳಿದ ಸಮುದಾಯಗಳ ರಾಜಕೀಯ ಪ್ರತಿನಿಧಿತ್ವವನ್ನು ಬಲಪಡಿಸಲು ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದರು.

ಜಿ.ಪರಮೇಶ್ವರ್ ಅಥವಾ ಸತೀಶ್ ಜಾರಕಿಹೋಳಿ ಅವರು ಸಚಿವರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಇವರು ಸಮರ್ಥ ನಾಯಕರಾಗಿದ್ದು, ರಾಜ್ಯದ ಅಭಿವೃದ್ಧಿಯ ದೃಷ್ಠಿಕೋನ ಹೊಂದಿದವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಸಲಿತ ಸಮುದಾಯಕ್ಕೆ ರಾಜಕೀಯ ಹುದ್ದೆಯ ಅತ್ಯನ್ನತ ಸ್ಥಾನ ದೊರೆಯುವ ಅಗತ್ಯ ಈಗ ಹೆಚ್ಚಾಗಿದ್ದು, ಸತೀಶ್ ಜಾರಕಿಹೋಳಿ ಅಥವಾ ಜಿ.ಪರಮೇಶ್ವರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದರು.
ಒಂದು ವೇಳೆ ಮಾಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುವುದು ಎಂದು ಎಚ್ಚರಿಸಿದರು.

ಗೋಷ್ಟಿಯಲ್ಲಿ ನೂರ್ ಅಹಮದ್, ಟಿ.ಉಮಾಪತಿ, ರವಿಕುಮಾರ್, ರಜಿನಿ, ಅಹಲಾಯಿ ಇದ್ದರು.
Mandya
ಜೂ.4 ರಂದು ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಿಸಿ : ತಗ್ಗಹಳ್ಳಿ ವೆಂಕಟೇಶ್
ಮಂಡ್ಯ: ರಾಜ್ಯ ಹಾಗೂ ಜಿಲ್ಲೆಯ ಎಲ್ಲಾ ಜನತೆ ಜೂ.೪ರಂದು ಮೈಸೂರು ಭಾಗದ ಅಭಿವೃದ್ಧಿಯ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಆಚರಿಸಬೇಕು ಎಂದು ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಹಳ್ಳಿಗಳು, ಪಟ್ಟಣಗಳ ಜನರು ಸ್ವಯಂ ಪ್ರೇರಣೆಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ ಮಾಡಬೇಕು ಎಂದರು.

ಜಿಲ್ಲಾಡಳಿತ, ಜಿ.ಪಂ ಸಿಇಓ ಅವರು ವಿಶೇಷ ಆದೇಶ ಹೊರಡಿಸಿ ಜಿಲ್ಲಾದ್ಯಂತ ಇರುವ ಶಾಲೆ-ಕಾಲೇಜುಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಗ್ರಾ.ಪಂ ಕಚೇರಿ, ನಾಡಾ ಕಚೇರಿ, ಹಾಗೂ ಎಲ್ಲ ಸರಕಾರಿ ಕಚೇರಿಗಳಲ್ಲಿ ಮಹಾರಾಜರ ಜಯಂತಿ ಆಚರಣೆ ಮಾಡಿ, ಉಪನ್ಯಾಸ ನೀಡುವ ಮೂಲಕ ಅವರನ್ನು ಸ್ಮರಿಸುವಂತೆ ಮಾಡಬೇಕೆಂದು ಕೋರಿದರು.
ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹ ಸ್ವಯಂಪ್ರೇರಣೆಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ, ಅನ್ನದಾನ ಮಾಡುವ ಮೂಲಕ ಗೌರವ ಸಮರ್ಪಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಟಿ.ಜಗದೀಶ್, ಸಹಕಾರ್ಯದರ್ಶಿ ಬಿ.ಎಂ.ದೇವೇಗೌಡ, ಸಾಂಸ್ಕೃತಿ ಕಾರ್ಯದರ್ಶಿ ಟಿ.ಡಿ.ನಾಗರಾಜು, ಪ್ರಧಾನ ಸಂಚಾಲಕ ಚಂದ್ರಶೇಖರ ದ.ಕೋಹಳ್ಳಿ ಇದ್ದರು.
Mandya
ಅನುಪಯುಕ್ತ ಬಿ.ಮಿಲ್ ಅನ್ನು ಟೆಂಡರ್ ಮೂಲಕ ಉತ್ತಮ ಮೊತ್ತಕ್ಕೆ ಮಾರಾಟ : ಸಿ.ಡಿ.ಗಂಗಾಧರ್
ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿನ ಅನುಪಯುಕ್ತ ಬಿ.ಮಿಲ್ ಅನ್ನು ಟೆಂಡರ್ ಮೂಲಕ ಉತ್ತಮ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಕಾರ್ಖಾನೆಯ ಅನುಪಯುಕ್ತ ವಸ್ತುಗಳು ಹಾಗು ಬಿ.ಮಿಲ್ ಅನ್ನು ಗುಜರಿ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ. ಬಿ.ಮಿಲ್ ಬಳಕೆಗೆ ಯೋಗ್ಯವಾಗಿದ್ದರೂ ಮಾರಾಟ ಮಾಡಲಾಗಿದೆ ಎಂದು ವಿನಃ ಕಾರಣ ಆರೋಪ ಮಾಡುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.

ಈ ರೀತಿಯ ಅಪಪ್ರಚಾರದಲ್ಲಿ ತೊಡಗಿರುವ ಕಿಡಿಗೇಡಿಗಳು ಖಾಸಗಿ ಕಾರ್ಖಾನೆಗಳ ಜತೆ ಹೊಂದಾಣಿಕೆ ಮಾಡಿಕೊಂಡು ಆರೋಪ ಮಾಡುತ್ತಿದ್ದಾರೆ. ಅನುಪಯುಕ್ತ ವಸ್ತುಗಳ ಗರಿಷ್ಟ ಮಾರಾಟದ ವೆಚ್ಚ ೪ ಕೋಟಿ ೮೬ ಸಾವಿರ ರೂಗಳಿದ್ದು, ಟೆಂಡರ್‌ನಲ್ಲಿ ಒಟ್ಟು ೬ ಸಂಸ್ಥೆಗಳು ಭಾಗವಹಿಸಿದ್ದವು. ಅದರಲ್ಲಿ ಅತಿಹೆಚ್ಚು ಬಿಡ್ ಮಾಡಿದ ಎಸ್.ಎನ್ ಟ್ರೇಡರ್‍ಸ್ ಸಂಸ್ಥೆಗೆ ೩.೯೨ ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳನ್ನು ಒದಗಿಸಿದರು.
ಈ ಎಲ್ಲವುಗಳ ಸಮಬಂಧ ಮೇ ೭ ಮತ್ತು ೨೩ರಂದು ರೈತ ಮುಖಂಡು ಹಾಗೂ ರೈತ ಹಿತರಕ್ಷಣಾ ಸಮಿತಿ ಜತೆ ಸಭೆ ನಡೆಸಲಾಗಿದೆ. ಅವರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಈ ಬಾರಿ ಹೆಚ್ಚು ಕಬ್ಬು ಅರೆಯುವಂತ ಸಲಹೆ ನೀಡಿದ್ದಾರೆ.

ಮೈಶುಗರ್‌ನಿಂದ ಒಟ್ಟು ೫.೯೦ ಮೆಟ್ರಿಕ್ ಟನ್‌ನಷ್ಟು ಕಬ್ಬನ್ನು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ದಿನಕ್ಕೆ ೩ ಸಾವಿರ ಟನ್‌ನಂತೆ ಕಬ್ಬನ್ನು ನುರಿಸಲಾಗುವುದು. ಹಂಗಾಮು ಮುಗಿಯುವಷ್ಟರಲ್ಲಿ ಕನಿಷ್ಠ ಎಂದರೂ ೪.೯೦ ಮೆಟ್ರಿಕ್‌ಟನ್‌ನಷ್ಟು ಕಬ್ಬನ್ನು ಅರಿಯಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಹಂಗಾಮಿನ ಟನ್ ಕಬ್ಬಿಗೆ ಸರಕಾರದಿಂದ ನೀಡಲಾಗುವ ಹೆಚ್ಚುವರಿ ೫೦ರೂ ಹಣವನ್ನು ಮುಂದಿನ ವಾರದಲ್ಲಿ ನೀಡಲಾಗುವುದು. ಮೈಶುಗರ್ ಕಾರ್ಖಾನೆಯಿಂದ ನೀಡಬೇಕಾದ ಹಣವನ್ನು ಜೂನ್ ಅಂತ್ಯದೊಳಗೆ ಪಾವತಿ ಮಾಡಿ, ಜುಲೈ ೨ನೇ ವಾರದಲ್ಲಿ ಕಾರ್ಖಾನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಕಿಸಾನ ಮೋರ್ಚಾದ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್, ರಾಮಕೃಷ್ಣ, ಉದಯ್‌ಕುಮಾರ್, ದೀಪಕ್ ಇದ್ದರು.
-
Special20 hours agoಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!
-
Hassan22 hours agoಹಾಸನ ಜಿಲ್ಲೆಯಲ್ಲಿ ಭಾರೀ ಮಳೆ: ಕೆರೆ–ಕಟ್ಟೆಗಳು ತುಂಬಿ ರೈತರಲ್ಲಿ ಸಂತಸ
-
Special8 hours agoLPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!
-
State22 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
National21 hours agoಈ ಬಾರಿ ಕೋಲ್ಕತ್ತಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
-
Mysore24 hours agoತಿ. ನರಸೀಪುರದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ: ಶಾಂತಿ ಮತ್ತು ತ್ಯಾಗದ ಸಂದೇಶ
-
Politics5 hours agoಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ, ಸಂಪುಟ ಸೇರಲಿದ್ದಾರೆ 12-13 ಹಿರಿಯ ನಾಯಕರು!
-
Chamarajanagar5 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
