Mysore
ದಸರಾ ಹಬ್ಬದ ಅಂಗವಾಗಿ ಕೆಎಂಪಿ ಕೆ ಟ್ರಸ್ಟ್ ಆಯೋಜಿಸಿರುವ ಮನೆ ಮನೆ ದಸರಾ ಗೊಂಬೆ ಕೂರಿಸುವ ಸ್ಪರ್ಧೆ
ಮೈಸೂರು: ಯಾವುದೋ ಸುದ್ದಿಗಳನ್ನ ಮೂರುದಿನಗಳ ಕಾಲ ಪ್ರಚಾರ ಮಾಡುವ ಬದಲು ನಮ್ಮ ಇತಿಹಾಸ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಗೊಂಬೆ ಜೋಡಣೆಯಂತಹ ಗೊಂಬೆ ಮನೆ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಪ್ರಸಿದ್ದ ಹಾಸ್ಯಗಾರ್ತಿ ಸುಧಾ ಬರಗೂರು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದರು.
ಮೈಸೂರು ದಸರಾ ಹಬ್ಬದ ಅಂಗವಾಗಿ ಕೆಎಂಪಿ ಕೆ ಟ್ರಸ್ಟ್ ಆಯೋಜಿಸಿರುವ ಮನೆ ಮನೆ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ನಂಜು ಮಳಿಗೆಯಲ್ಲಿರುವ ಸೌಮ್ಯಲಕ್ಷ್ಮಿ ಸತ್ಯನಾರಾಯಣ ಅವರ ನಿವಾಸಕ್ಕೆ ಭೇಟಿ ನೀಡಿದ ಸುಧಾ ಬರಗೂರು ಗೊಂಬೆ ಜೋಡಣೆ ಕಂಡು ಮನತುಂಬಿ ಮಾತನಾಡಿದರು
ನಮ್ಮ ಇತಿಹಾಸವನ್ನ ಗೊಂಬೆಗಳ ಮೂಲಕ ಸೌಮ್ಯಲಕ್ಷ್ಮೀ ಕಟ್ಟಿಕೊಟ್ಟಿದ್ದಾರೆ. ಇದನ್ನ
ಉಳಿಸಿ ಬೆಳೆಸಬೇಕಿದೆ.ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯವಿದೆ ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ನಮ್ಮ ಇತಿಹಾಸವನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ, ಈ ಗೊಂಬೆ ಮನೆ ಸಂಸ್ಕೃತಿಯನ್ನು
ಉಳಿಸಿ ಬೆಳೆಸಬೇಕಿದೆ.ಇದೊಂದು ಅದ್ಭುತ ಕಲೆ.ಇದೆಲ್ಲಾ ಮುಂದಿನ ಜನಾಂಗಕ್ಕೆ ತಿಳಿಯಬೇಕು ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಕೋರಿದರು
ಹೆಣ್ಣು ಮಕ್ಕಳಿಗೆ ಒಂದು ಕ್ರೇಜ್ ಇರುತ್ತದೆ,ಬಳೆ,ಬಿಂದಿ,ಸೀರೆ,ವಡವೆ ಕಲೆಕ್ಟ್ ಮಾಡುವುದು.
ಹಿಂದೆ ನಾವು ಚಿಕ್ಕವರಾಗಿದ್ದಾಗ ಪುಟ್ಟ ಗೊಂಬೆಗಳನ್ನು ಜೋಡಿಸಿದ್ದನ್ನ ನೋಡಿದ್ದೆ.ಕಬ್ಬಿಣದ ಪುಟ್ಟ ಪೆಟ್ಟಿಗೆಯನ್ನ ಗೊಂಬೆ ಹಬ್ಬದಲ್ಲಿ ಕೆಳಗಿಳಿಸುತ್ತಿದ್ದರು.
ಸಿಬಾಕಾ,ಬಿನಾಕಾ ಪೇಸ್ಟ್ ಬರುತ್ತಿತ್ತು ಅದರಲ್ಲಿ ಪುಟ್ಟ ಗೊಂಬೆಗಳು ಇರುತ್ತಿತ್ತು ಅವುಗಳನ್ನು ಜೋಡಿಸಿ ಆನಂದಿಸುತ್ತಿದ್ದೆವು ಎಂದು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡರು.
ಇಡೀ ದಸರಾ ಪರಿಕಲ್ಪನೆಯನ್ನ ಸೌಮ್ಯ ಅವರು ಇಪ್ಪತ್ತು ವರ್ಷಗಳ ಶ್ರಮ ದಿಂದ ಮಾಡಿದ್ದಾರೆ, ಪೌರಾಣಿಕ ಕಥೆಗಳು,ದೇವಸ್ಥಾನ,ಅದರ ಅರ್ಚಕರು ಹೊರಬರುವುದು ಹೀಗೆ ಪ್ರತಿಯೊಂದನ್ನೂ ಗೊಂಬೆ ಮೂಲಕ ಮೈಸೂರಿನ ಸೌಮ್ಯಲಕ್ಷ್ಮಿ ಗೊಂಬೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಅದಕ್ಕೆ ಅವರನ್ನ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಅರಮನೆ,ಝೂ,ಕೆಆರ್ ಎಸ್ ನೋಡೋರು ಮರೆಯದೆ ಈ ಗೊಂಬೆಮನೆಗೂ ಭೇಟಿ ಕೊಡಿ ಎಂದು ಅವರು ಮನವಿ ಮಾಡಿದರು.
ಸುಮಂಗಲಿ ಸ್ಯಾರಿ ಅಂಗಡಿ ಕೂಡಾ ಇಲ್ಲಿದೆ,ಅಂದರೆ ಮೈಸೂರಿನ ವಿಶೇಷತೆಗಳನ್ನ ಗೊಂಬೆಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ.ಇದಕ್ಕೆ ಹ್ಯಾಟ್ಸ್ ಅಪ್ ಎಂದು ನುಡಿದರು.
ಈ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಆರ್ ಎಚ್ ಪವಿತ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ , ಅಜಯ್ ಶಾಸ್ತ್ರಿ, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ನವೀನ್ ಕೆಂಪಿ, ಮಿರ್ಲೆ ಪನಿಷ್, ಮತ್ತಿತರರು ಹಾಜರಿದ್ದರು.
Mysore
ಚುಂಚನಕಟ್ಟೆ ಕಾವೇರಿ ನದಿಯಲ್ಲಿ ಶ್ರೀ ರಾಮ ದೇವರ ತೆಪ್ಪೋತ್ಸವ
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ :- ಕಿವಿತುಂಬೆಲ್ಲಾ ಪಟಾಕಿ ಸದ್ದು. . . ಇದರ ನಡುವೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತಾದಿಗಳು . . . ಅಲಂಕೃತಗೊಂಡಿದ್ದ ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡ ಸೀತಾ ರಾಮ ಲಕ್ಷ್ಮಣ. . . ನದಿಯಲ್ಲಿ ಮೂರು ಸುತ್ತು ಸುತ್ತಿದ ಉತ್ಸವ ಮೂರ್ತಿಗಳು . . . ದೇವಲೋಕವೇ ಧರೆಗೆ ಬಂದ ಅನುಭವ . . . ಈ ಇಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ. . .
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪುರಾಣ ಪ್ರಸಿದ್ದವಾಗಿರುವ ಶ್ರೀ ರಾಮದೇವರ ತೆಪ್ಪೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ರಾತ್ರಿ 7.45 ರ ನಂತರ ಇಲ್ಲಿನ ಶ್ರೀ ರಾಮದೇವರ ದೇವಾಲಯದಿಂದ ಶ್ರೀ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ವರ್ಣರಂಜಿತ ವಿದ್ಯುತ್ ಲೈಟ್‌ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊoಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಅನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8.15ರ ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ 3 ಭಾರಿ ತಿರುಗಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಅರ್ಚಕ ವಾಸುದೇವನ್ ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋ..ವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದಾಗ ದೇವಲೋಕವೇ ಧರೆಗೆ ಬಂದಂತೆ ಭಾಸವಾಯಿತು.
ಕಾವೇರಿ ನದಿಯಲ್ಲಿ ಸುತ್ತಿ ಬಂದ ಶ್ರೀರಾಮ, ಲಕ್ಷಣ, ಸೀತಾ ದೇವರುಗಳ ಉತ್ಸವ ಮೂರ್ತಿಗಳನ್ನು ಭಕ್ತಾಧಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥವನ್ನು ಈಡೇರುವಂತೆ ಪ್ರಾರ್ಥಿಸಿಕೊಂಡರು.
ಆನಂತರ ಉತ್ಸವ ಮೂರ್ತಿಗಳನ್ನು ಮತ್ತೆ ದೇವಾಲಯಕ್ಕೆ ಒತ್ತು ತರಲಾಯಿತು. ಈ ಬಾರಿಯ ತೆಪ್ಪೋತ್ಸವಕ್ಕೆ ಗುಂಡ್ಲುಪೇಟೆ ಆನಂದ್‌ಕುಮಾರ್ ಎಂಬುವವರು ಭಾರಿ ಪಟಾಕಿಗಳನ್ನು ಸಿಡಿಸುವ ಮೂಲಕ ತೆಪ್ಪೋತ್ಸವಕ್ಕೆ ಕಳೆತಂದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ತಸೀಲ್ದಾರ್ ನರಗುಂದ, ಉಪತಹಸೀಲ್ದಾರ್ ಕೆ.ಜೆ.ಶರತ್ , ಗ್ರಾಮ ಲೆಕ್ಕಿಗರಾದ ಮೇಘ, ಮೌನೇಶ್,ಕಾವೇರಿ,ಪ್ರಿಯಾ,
ದೇವಾಲಯದ ಇಓ ಕೆ.ರಘು, ಪಾರುಪತ್ತೆದಾರ್ ಯತೀರಾಜ್, ಸೇರಿದಂತೆ 3 ಸಾವಿರ ಭಕ್ತಾಧಿಗಳು ಹಾಜರಿದ್ದರು.
Mysore
ಇಂದು ಬೆಳ್ಳಂಬೆಳಗ್ಗೆ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದ ಕ್ಷೇತ್ರದ ಶಾಸಕರು ,ನಟ ಡಾಲಿ ಧನಂಜಯ
ವರದಿ : ಮಹದೇವಸ್ವಾಮಿ ಪಟೇಲ್
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಕ್ಷೇತ್ರದ ಯುವ ಶಾಸಕ ದರ್ಶನ್ ಧ್ರುವನಾರಾಯಣ್, ಹಾಗೂ ಕನ್ನಡ ಚಿತ್ರರಂಗದ ನಾಯಕ ನಟ ಡಾಲಿ ಧನಂಜಯ ಅವರು, ಭೇಟಿ ನೀಡಿ ದೇವರ ದರ್ಶನ ಪಡೆದರು.
ಇಂದು ಭಾನುವಾರ ಬೆಳ್ಳಂಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಶಾಸಕರಿಗೆ ಮತ್ತು ಕನ್ನಡ ಚಿತ್ರರಂಗದ ನಾಯಕ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತವನ್ನು ಕೋರಿದರು.
ಶ್ರೀ ನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ಸುಬ್ರಮಣ್ಯ ದೇವರ ದರ್ಶನ ಪಡೆದು, ದೇವರ ಕೃಪೆಗೆ ಪಾತ್ರನಾಗಿ ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ದೇವಸ್ಥಾನ ಕಾರ್ಯನಿರ್ವಾಹಕಧಿಕಾರಿ ಜಗದೀಶ್, ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಶಂಕರ್, ಕಾಂಗ್ರೆಸ್ ಪಕ್ಷದ ಯೂತ್ ಅಧ್ಯಕ್ಷ ದೇಬೂರು ಅಶೋಕ್, ಸೇರಿದಂತೆ ಹಲವಾರು ಭಾಗವಹಿಸಿದ್ದರು.
Mysore
ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ
ಮೈಸೂರು : ಮೈಸೂರು ವಿವಿ 105ನೇ ಘಟಿಕೋತ್ಸವದಲ್ಲಿ ಇಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಅವರಿಗೆ ಪಿಎಚ್ ಡಿ ಪದವಿಯನ್ನು ಉನ್ನತ ಶಿಕ್ಷಣ ಸಚಿವರಾದ ಡಾ ಸುಧಾಕರ್ ಅವರು ಪ್ರದಾನ ಮಾಡಿದರು.
ಪ್ರೊ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ತಾಲ್ಲೂಕಿನ ಸ್ಥಳನಾಮಗಳು ಸಾಂಸ್ಕೃತಿಕ ಅಧ್ಯಯನ ಪಿ.ಎಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ಅಂಗೀಕರಿಸಿದೆ.
-
Kodagu20 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu19 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech16 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports21 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International23 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Cinema23 hours ago
ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣ: ಪತ್ನಿ ಕರೀನಾ ಕಪೂರ್ ಫಸ್ಟ್ ರಿಯಾಕ್ಷನ್!
-
Mysore20 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore19 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು