Connect with us

Mandya

ಶ್ರೀ ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆದ ಸ್ಟಾರ್ ಚಂದ್ರು

Published

on

ಮೇಲುಕೋಟೆ: ಇಲ್ಲಿನ ದಕ್ಷಿಣ ಬದರೀ ಎಂದೇ ಹೆಸರುವಾಸಿಯಾದ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಚೆಲುವ ನಾರಾಯಣ ಸ್ವಾಮಿ ಸನ್ನಿಧಿಗೆ ತೆರಳಿ ದೇವರ ದರ್ಶನ ಪಡೆದರು, ನಂತರ ಶ್ರೀ ರಾಮಾನುಜಾಚಾರ್ಯರು, ಯಧುಗಿರಿ ಕಲ್ಯಾಣನಾಯಕಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೇಲುಕೋಟೆ, ಬಳ್ಳಿಘಟ್ಟ, ಜಕ್ಕನಹಳ್ಳಿ, ಅಮೃತಿ, ಮಾಣಿಕ್ಯನಹಳ್ಳಿ, ಸುಂಕತೊಣ್ಣುರು, ಮಹದೇಶ್ವರಪುರ, ಲಕ್ಷ್ಮೀಸಾಗರ ಹಳೇಬಿಡು ಸೇರಿದಂತೆ ಮೇಲುಕೋಟೆ ಹೋಬಳಿಯಲ್ಲಿ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

 

ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಮೇಲುಕೋಟೆ ಆರಾದ್ಯ ದೈವ ಶ್ರೀ ಚೆಲುವ ನಾರಾಯಣ ಸ್ವಾಮಿಯ ದರ್ಶನ ಪಡೆದು ಕ್ಷೇತ್ರದಲ್ಲಿ ಮತ ಪ್ರಚಾರ ಆರಂಭಿಸಿದ್ದೇನೆ. ಕಾಂಗ್ರೆಸ್ ಪಕ್ಷ ಚುನಾವಣೆ ನಿಲ್ಲುವುದಕ್ಕೆ ಅವಕಾಶ ಕೊಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಕ್ಷೇತ್ರ ಸರಳ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತಸಂಘ ಬೆಂಬಲ ನೀಡಿ ಸಹಕಾರ ನೀಡುತ್ತಿದೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಕಾಂಗ್ರೆಸ್ ಸರ್ಕಾರದೊಂದಿಗೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ರೈತ ಸಂಘವನ್ನು ಬೆಂಬಲಿಸಿ ಜಯಕ್ಕೆ ಕಾರಣರಾಗಿದ್ದಾರೆ. ನಮ್ಮ ಗೆಲುವಿಗೆ ಕಾಂಗ್ರೆಸ್ ಪಕ್ಷ ಹಾಗೂ ಸ್ಥಳೀಯ ಮುಖಂಡರ ಪಾತ್ರ ಬಹುಮುಖ್ಯವಾಗಿದೆ. ಇದೀಗಾ ನಾವೆಲ್ಲ ಒಗ್ಗಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವಿಗಾಗಿ ಶ್ರಮಿಸೋಣ ಎಂದರು.

ಕಳೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾವೆಲ್ಲ ಹೇಗೆ ಒಗ್ಗಟಿನಿಂದ ಕೆಲಸ ಮಾಡಿದ್ವೋ ಆದೇ ರೀತಿ ಈ ಚುನಾವಣೆಯನ್ನು ಮಾಡೋಣಾ ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ಹೊಂದಾಣಿಕೆಯಿಂದ ಚುನಾವಣೆ ಮಾಡಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಮುಖಂಡರಾದ ಎಚ್.ತ್ಯಾಗರಾಜು, ಕೆ.ಬಿ.ನರಸಿಂಹೇಗೌಡ, ಬಿ.ರೇವಣ್ಣ, ಕೃಷ್ಣೇಗೌಡ, ಪರಮೇಶ್‌ಗೌಡ, ದಿಲೀಪ್, ಮರಿಗೌಡ ಭಾಗವಹಿಸಿದ್ದರು

Continue Reading
Click to comment

Leave a Reply

Your email address will not be published. Required fields are marked *

Mandya

ಕುಟುಂಬ ಕಲ್ಯಾಣ ಯೋಜನಾ ವಿಧಾನಗಳ ಅರಿವು ಕಾರ್ಯಕ್ರಮ

Published

on

ಶ್ರೀರಂಗಪಟ್ಟಣ : ಪ್ರತಿ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ಅವರು ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂ ಮಚ್ಚಿ ಬಜಾರ್ ಬೀದಿಯ 4ನೇ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ಇವರಿಂದ ಆಯೋಜಿಸಿದ್ದ “ತಾಯಂದಿರಿಗೆ ಕುಟುಂಬ ಕಲ್ಯಾಣ ಯೋಜನಾ ವಿಧಾನಗಳ ಅರಿವು” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಾಯಿ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಏರುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲು ಕುಟುಂಬ ಕಲ್ಯಾಣ ಯೋಜನೆಗಳು ಸಹಕಾರಿಯಾಗಲಿವೆ. ಪ್ರತಿ ಅರ್ಹ ದಂಪತಿಗಳು ಚಿಕ್ಕ ಕುಟುಂಬ ಸುಖಿ ಕುಟುಂಬ ನಿಯಮ ಪಾಲಿಸಿ. ಇದರಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಮುದಾಯದಲ್ಲಿ ಮದುವೆ ವಯಸ್ಸು,ಜನನ ನಡುವೆ ಅಂತರ ಹೆರಿಗೆ, ಸುರಕ್ಷಿತ ಗರ್ಭಪಾತ, ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಅರ್ಹ ಫಲಾನುಭವಿಗಳು ಕುಟುಂಬ ಕಲ್ಯಾಣ ಯೋಜನೆಗಳ ಸೇವೆ ಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಏರ್ಪಡಿಸಿ ಶಾಶ್ವತ ಹಾಗೂ ತಾತ್ಕಾಲಿಕ ಆಯ್ಕೆ ವಿಧಾನಗಳ ಕುರಿತು ತಾಯಂದಿರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಾದೇವಮ್ಮ,ಅಂಗನವಾಡಿ ಕಾರ್ಯಕರ್ತೆ ಅಶ್ಮಾ ಬಾನು ಹಾಗೂ ಗರ್ಭಿಣಿಯರು,ಬಾಣಂತಿಯರು, ಮಕ್ಕಳ ತಾಯಂದಿರು ಹಾಜರಿದ್ದರು.

Continue Reading

Mandya

ಮನೆ ಮನೆಗೆ ಬಸವ ಜ್ಯೋತಿ ಕಾರ್ಯಕ್ರಮದ 147ನೇ ಆಧ್ಯಾತ್ಮಿಕ ಕಾರ್ಯಕ್ರಮ

Published

on

ಮಂಡ್ಯ: ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ (ರಿ) ಇವರ ವತಿಯಿಂದ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮಮಠದ ಸಭಾಂಗಣದಲ್ಲಿ

ಮನೆ ಮನೆಗೆ ಬಸವ ಜ್ಯೋತಿ ಕಾರ್ಯಕ್ರಮದ 147ನೇ ಆಧ್ಯಾತ್ಮಿಕ ಕಾರ್ಯಕ್ರಮವು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎಸ್.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಮೌಲ್ಯಯುತವಾದ ವಚನಗಳನ್ನು ಪ್ರತಿಯೊಬ್ಬರೂ ಸಹ ಮನೆ ಮನೆಯಲ್ಲಿಯೂ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರೆಲ್ಲರಿಗೂ ಸಹ ಬೋಧಿಸುವುದರಿಂದ ಒಳ್ಳೆಯ ಸುಧಾರಣೆ ಆಗುತ್ತದೆ ಎಂದರು.

ವಚನಗಳು ಪ್ರಾಣ ಇದ್ದಂತೆ. ಅವುಗಳೆಲ್ಲವನ್ನು ಸಂರಕ್ಷಿಸುವ ಹೊಣೆಯು ನಮ್ಮದಾಗಿದೆ. ಬಸವಣ್ಣನವರು ಶಿಕ್ಷಣಕ್ಕೆ ಮಹತ್ತರವಾದ ಹಾಗೂ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಇಡೀ ಪ್ರಪಂಚಕ್ಕೆ ಬಸವಣ್ಣನವರ ಧರ್ಮದ ಆದರ್ಶಗಳು ಹೃದಯಕ್ಕೆ ಮತ್ತು ಮನಸ್ಸಿಗೆ ಬೇಕಾಗಿದೆ.

ನಮ್ಮ ಜೀವನದ ನಡೆಗೆ ಪ್ರೇರಣೆ ಕೊಡುವ ಏಕೈಕ ಧರ್ಮವೆಂದರೆ ಅದು ಬಸವ ಧರ್ಮ ಎಂದು ತಿಳಿಸಿದರು. ಯಾರು ಬಸವ ಧರ್ಮದಲ್ಲಿ ನಡೆದುಕೊಳ್ಳುತ್ತಾರೋ ಅವರೆಲ್ಲರನ್ನು ಈ ಧರ್ಮವು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳೆಲ್ಲರಿಗೂ ಸಹ ಪ್ರಸಾದವನ್ನು ವಿನಿಯೋಗಿಸಲಾಯಿತು. ವೇದಿಕೆಯಲ್ಲಿ ಬಸವೇಶ್ವರ ಪತ್ತಿನ ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಬಸವರಾಜಪ್ಪ, ಶಿವಕುಮಾರ್, ಚೆನ್ನಪ್ಪ, ರುದ್ರಸ್ವಾಮಿ, ಬಸವರಾಜಣ್ಣ, ಎಂ. ಜಗದೀಶ್, ಮಧುಸೂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mandya

ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012 ರ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ

Published

on

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶಕಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪೊಲೀಸ್ ಇಲಾಖೆ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಕ್ಕಳ ನ್ಯಾಯ ( ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ಹಾಗೂ ತಿದ್ದುಪಡಿ

ಕಾಯ್ದೆ 2021, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ( ಕರ್ನಾಟಕ ತಿದ್ದುಪಡಿ ಕಾಯ್ದೆ 2016 ) ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012 ರ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವು ಯಶಸ್ವಿಯಾಗಿ ಜರುಗಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೊಷಕರು ತಮ್ಮ ಮಕ್ಕಳನ್ನು ಹೆಚ್ಚು ಜಾಗೃತಗೊಳಿಸಿ ಬಾಲಾಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಬೇಕು. ಹಾಗೆಯೇ ಪೋಷಕರೂ ಸಹ ಬಾಲ್ಯ ವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡಬೇಕು. ಜೊತೆಗೆ ಮಕ್ಕಳ ಮೇಲಿನ ಲೈಂಗಿಕ ಕೃತ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ನಾಗರೀಕರು ಕಾನೂನಿನ ತೀಕ್ಣತೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರ ವಹಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕೆಂದು ಅವರು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಸ್ ರಾಜಮೂರ್ತಿ ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಮಿಕ್ಕೆರೆ ವೆಂಕಟೇಶ್, ಡಿ.ವೈ.ಎಸ್.ಪಿ,ಗಳಾದ ಗಂಗಾಧರ್ ಸ್ವಾಮಿ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶ್ವಥ್ ನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!