Mandya
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರಚಾರ
ಮಂಡ್ಯ : ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರು ನಾಳೆ ಭಾನುವಾರ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.
ಬೆಳಿಗ್ಗೆ 7.30 ಗಂಟೆಗೆ ಎಚ್.ಮಲ್ಲೀಗೆರೆ ಗ್ರಾಮ ಪಂಚಾಯಿತಿಯಿಂದ ಪ್ರಾರಂಭವಾಗಲಿದ್ದು, ಬಳಿಕ ಹೊಳಲು, ಮಲ್ಲನಾಯಕನಕಟ್ಟೆ, ಚಂದಗಾಲು, ಹುಳ್ಳೇನಹಳ್ಳಿ, ಶಿವಳ್ಳಿ, ಮುದಗಂದೂರು, ದುದ್ದ, ಬೇವುಕಲ್ಲು, ಜಿ.ಮಲ್ಲಿಗೆರೆ ನಂತರ ಮಧ್ಯಾಹ್ನ 1 ಗಂಟೆಗೆ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು

ಮಧ್ಯಾಹ್ನ 1.40ಕ್ಕೆ ಬಳಘಟ್ಟ, ಜಕ್ಕನಹಳ್ಳಿ, ಮಾಣಿಕ್ಯನಹಳ್ಳಿ, ಹಳೇಬೀಡು, ಸುಂಕಾತೊಣ್ಣೂರು ಲಕ್ಷ್ಮಿಸಾಗರ, ಟಿ.ಎಸ್. ಛತ್ರ, ಹಿರೇಮರಳಿ, ಚಿಕ್ಕಾಡೆ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಿ.ಕೆ.ನಾಗರಾಜು, ಎಚ್.ತ್ಯಾಗರಾಜು, ದಯಾನಂದ್, ವಿಜಯಕುಮಾರ್ ಇದ್ದರು.
Mandya
ಪ್ರಸ್ತುತ ದಿನಗಳಲ್ಲಿ ಸಂವಿಧಾನ ನಾಶಕ್ಕಾಗಿ ಮೂಲಬೇರುಗಳನ್ನು ಒಂದೊಂದಾಗಿ ಕತ್ತರಿಸಲಾಗುತ್ತಿದೆ : ಚಂದ್ರಶೇಖರಯ್ಯ
ಮಂಡ್ಯ: ಪ್ರಸ್ತುತ ದಿನಗಳಲ್ಲಿ ಸಂವಿಧಾನ ನಾಶಕ್ಕಾಗಿ ಮೂಲಬೇರುಗಳನ್ನು ಒಂದೊಂದಾಗಿ ಕತ್ತರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಜಾರಿಯಾಗಿ ೭೭ನೇವರ್ಷ ಕಳೆದರೂ ಶೇ.೪೩ರಷ್ಟು ಕಡು ಬಡತವರಿದ್ದಾರೆ ಎಂದು ರಾಜ್ಯ ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕರ್ನಾಟಕ ಸಂವಿಧಾನ ಸೇನೆ(ಕೆಎಸ್‌ಎಸ್) ಆಯೋಜಿಸಿದ್ದ ಸಂವಿಧಾನ ಜಾರಿ ದಿನ ಪ್ರಯುಕ್ತ ಭಾರತದ ೭೬ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ದಿಗಾಗಿ ಎಸ್ಸಿ ಎಸ್ಪಿ ಮತ್ತು ಟಿಎಸ್ಪಿ ಯೋಜನೆಯಿದೆ. ೨೦೧೪ರಿಂದ ಇಲ್ಲಿಯವರೆಗೆ ಎಸ್ಸಿಎಸ್ಪಿಯಲ್ಲಿ ೨ಲಕ್ಷದ ೩ಸಾವಿರ ಕೋಟಿ ರೂ.ಖರ್ಚಾಗಿದೆ. ಟಿಎಸ್ಪಿಯಲ್ಲಿ ೭೯ಸಾವಿರ ಕೋಟಿ ರೂ.ಖರ್ಚಾಗಿದೆ. ಒಟ್ಟು ೨ಲಕ್ಷ ೮೦ಸಾವಿರ ಕೋಟಿ ರೂ. ಖರ್ಚಾಗಿದ್ದರೂ ಜನಾಂಗದವರು ಅವಾಗ ಎಲ್ಲಿದ್ದಾರೋ, ಹೇಗಿದ್ದಾರೋ ಹಾಗೇಯೇ ಇದ್ದಾರೆ ಎಂದು ಅವರು ಎಚ್ಚರಿಸಿದರು.

ಈ ಸಮುದಾಯಗಳು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಆಳುವ ಸಮುದಾಯ ಸಂವಿಧಾನವನ್ನು ಅರ್ಥಮಾಡಿಕೊಂಡು ಹಿಡಿತ ಸಾಧಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಆಶಯಗಳು ಜನರಿಗೆ ತಲುಪಬೇಕಿದೆ ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ಕರ್ನಾಟಕ ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಬಹುಜನ ಚಳುವಳಿಯಿಂದ ಸಾಕಷ್ಟು ಹೊಸ ಬದಲಾವಣೆ ಸಾಧ್ಯವಾಗುತ್ತಿದೆ. ಹೋರಾಟದ ಫಲದಿಂದ ಮನೆ ಮನೆ ಊರೂರಿಗೆ ಸಂವಿಧಾನ ಪ್ರಸ್ಥಾವನೆ, ಸಂವಿಧಾನ ದಿನಾಚರಣೆ, ನಾಲ್ವಡಿ ಸೇರಿದಂತೆ ಪೂರ್ವಿಕರ ಮಾಹಿತಿಗಳು ಲಭ್ಯವಾಗಿವೆ ಎಂದರು.
ಮೌಡ್ಯತೆಯ ವಿದ್ಯಾವಂತ ಸಮುದಾಯವನ್ನು ವಿದ್ಯಾವಂತರೇ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ, ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜ್ಞೆಯನ್ನು ಹೆಚ್ಚಿಸಬೇಕಿದೆ. ಶೇ.೨ರಷ್ಟಿರುವ ಜನತೆ ಶೇ.೯೮ರ ಜನತೆಯನ್ನು ಆಳಿ ಗುಲಾಮಗಿರಿಗೆ ನೂಕುತ್ತಿರುವುದನ್ನು ತಡೆಯಲು ಅರಿವು ಮುಖ್ಯವಾಗಿದೆ ಎಂದರು.
ನಂತರ ಮಾತನಾಡಿದ ವಾಗ್ಮಿ, ಮೈಸೂರಿನ ಉರಿಲಿಂಗಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ, ಭಾರತದೇಶಲ್ಲಿ ಸಂವಿಧಾನ ಜಾರಿಯಲ್ಲಿದ್ದರೂ ಮನುಸ್ಮೃತಿಯ ಆಡಳಿತ ವ್ಯವಸ್ಥೆ ತೊಲಗಿಲ್ಲ. ಸಂವಿಧಾನವನ್ನೇ ಸುಟ್ಟ ಸಂಘವಿದೆ. ಸಂವಿಧಾವನ್ನೇ ಒಪ್ಪದ ಜನತೆ-ಸಂಘವಿದೆ ಎಂದು ಎಚ್ಚರಿಸಿದರು.
ಭಾರತ ದೇಶದ ಮತದಾರಿಗೆ ಓಟಿ ಮೌಲ್ಯ, ರಾಜ್ಯಾಧಿಕಾರ ಮಹತ್ವ ಎಲ್ಲಿಯರೆಗೆ ಮತದಾರರಿಗೆ ತಿಳಿಯುವುದಿಲ್ಲವೋ ಅಲ್ಲಿಯ ಅವರೆಗೆ ಬೇಡುವ ಜನತೆ ಇರುತ್ತಾರೆ. ಎಲ್ಲಾ ಸಮಸ್ಯೆಗಳಿಗೆ ಅಂಬೇಡ್ಕರ್-ಬಸವಣ್ಣ ಅವರ ವಿಚಾರಗಳಲ್ಲಿ ಪರಿಹಾರವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು. ಕೃತಿ ಲೋಕಾರ್ಪಣೆ ಗೊಂಡಿತು. ಸಾಧಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮದ್ದೂರು, ಡಿವೈಎಸ್‌ಪಿ ಗಂಗಾಧರ್, ದ್ರಾವಿಡ ಕನ್ನಡ ಚಳುವಳಿಯ ಮುಖಂಡ ಅಭಿ ಒಕ್ಕಲಿಗ, ಬಿಎಸ್‌ಪಿ ಹಿರಿಯ ಮುಖಂಡ ಎಸ್.ಸಿದ್ದಯ್ಯ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಕೆಎಸ್‌ಎಸ್ ಜಿಲ್ಲಾಧ್ಯಕ್ಷ ಕುಮಾರ್ ಗಂಗವಾಡಿ, ಟಿ.ಡಿ.ನಾಗರಾಜು, ಪ್ರದೀಪ್ ಮತ್ತಿತರರಿದ್ದರು.
Mandya
ಕನ್ನಡ ಭವನ ನಿರ್ಮಾಣಕ್ಕೆ ನೀಲ ನಕಾಶೆ ತಯಾರಿ: ಜಿಲ್ಲಾಧಿಕಾರಿ ಡಾ.ಕುಮಾರ
ಮಂಡ್ಯ : ಕನ್ನಡದ ಐಕ್ಯತೆಯ ಪ್ರತೀಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಮತ್ತು ನಾಡು–ನುಡಿಯ ಮೇಲಿನ ಅಭಿಮಾನವನ್ನು ಜನಮನದಲ್ಲಿ ಮೂಡಿಸುವ ಉದ್ದೇಶದಿಂದ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2024ರ ಡಿಸೆಂಬರ್ 20, 21 ಹಾಗೂ 22ರಂದು ಅತ್ಯಂತ ಅರ್ಥಪೂರ್ಣವಾಗಿ, ವೈಭವಯುತವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಮ್ಮೇಳನವು ಅಭೂತಪೂರ್ವ ಯಶಸ್ಸು ಕಂಡಿದ್ದು, ನಾಡಿನ ಸಮಸ್ತರಿಂದ ಪ್ರಶಂಸೆಗೆ ಪಾತ್ರವಾಗಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಭವನವನ್ನು ನಿರ್ಮಿಸಬೇಕು ಎಂಬ ಅಭಿಲಾಷೆಯನ್ನು ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ಹಾಗೂ ಮಂಡ್ಯ ಜಿಲ್ಲೆಯ ಜನತೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಿದ ಸವಿನೆನಪಿಗಾಗಿ, ಸಮ್ಮೇಳನದಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹಣದ ಉಳಿತಾಯ ರೂ.2.50 ಕೋಟಿ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.3.00 ಕೋಟಿ, ಒಟ್ಟು ರೂ.5.50 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಅಂಗವಾಗಿ, ಕಟ್ಟಡ ಕಾಮಗಾರಿಗೆ ಜನವರಿ 30ರಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಇದೇ ಸಂದರ್ಭದಲ್ಲಿ ದಿನಾಂಕ 07.02.2026ರಂದು ಸಭೆ ನಡೆಸಲಾಗಿದ್ದು, ಕನ್ನಡ ಭವನ ಕಟ್ಟಡದ ನೀಲ ನಕಾಶೆ, ರೂಪರೇಷೆ ಹಾಗೂ ಇತರೆ ಸಂಬಂಧಿತ ವಿಚಾರಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ, ಕನ್ನಡ ಭವನ ಕಟ್ಟಡವನ್ನು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡು–ನುಡಿಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚಿಸಿದರು.
Mandya
1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸುವ ಯೋಜನೆಗೆ ರಮೇಶ್ ಬಂಡಿಸಿದ್ದೇಗೌಡ ಚಾಲನೆ
ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ ಉರಮಾರ ಕಸಲಗೆರೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವ ಯೋಜನೆಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರೈತರು ಆರ್ ಆರ್ ನಂಬರ್ ಗೆ ದುಡ್ಡು ಕಟ್ಟಿದರೆ ರೈತರ ಎರಡು ಬೋರ್ ವೆಲ್ ಗಳಿಗೆ ಒಂದು ಟಿಸಿ ಹಾಕುವುದಕ್ಕೂ ಚಾಲನೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಕೊಡಲು ಕೆಲಸ ಮಾಡಿದ್ದೇವೆ.ರೈತರು ಜಮೀನುಗಳಲ್ಲಿ ಬಿಳಿ ವೈರುಗಳು ನೇತಾಡುತ್ತಿ ರುವುದನ್ನು ತೆರವುಗೊಳಿಸಿ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದ್ದು, ತಕ್ಷಣ ತೆರವುಗೊಳಿಸಿ ಎಂದು ತಿಳಿಸಿದರು.

ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಸಣ್ಣ-ಪುಟ್ಟ ಕೆಲಸಗಳು ಇದ್ದರೆ ಹೇಳಿ ರೈತರಿಗೆ ತೊಂದರೆ ಆಗದ ರೀತಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಉರಮಾರ ಕಸಲಗೆರೆಗೆ ಸಪರೇಟ್ ಪೀಡರ್ ಮಾಡಿಕೊಡುತ್ತಿದ್ದೇವೆ. ತಕ್ಷಣ ರೈತರು ದುಡ್ಡು ಕಟ್ಟಿ ತಮ್ಮ ಬೋರ್ವೆಲ್ ಗಳನ್ನು ಆರ್ ಆರ್ ಮಾಡಿಸಿಕೊಳ್ಳಿ.ಈ ಭಾಗದಲ್ಲಿ ಕೆರೆಗಳಿಗೆ ನೀರು ಕೊಟ್ಟ ಮೇಲೆ ರೈತರು ಬೋರ್ವೆಲ್ ಗಳ ಮೂಲಕ ತಮ್ಮ ಕೃಷಿ ಚಟುವಟಿಕೆ ಹಮ್ಮಿಕೊಂಡು ಜೀವನ ರೂಪಿಸುತ್ತಿದ್ದಾರೆ.ರೈತರ ಪಂಪ್ ಸೆಟ್ ಗಳಿಗೆ ಸಮಸ್ಯೆಯಾದಾಗ ಟಿಸಿ ಬದಲಾವಣೆ ಮಾಡಲು ತಡ ಆಗುತ್ತಿತ್ತು. ಅದಕ್ಕಾಗಿ ಉರಮಾರ ಕಸಲಗೆರೆ ಗ್ರಾಮ ವ್ಯಾಪ್ತಿಯ ರೈತರ ಪಂಪ್ಸೆಟ್ಟುಗಳಿಗೆ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸಿ ಉತ್ತಮ ಗುಣಮಟ್ಟದ ವಿದ್ಯುತ್ ಕೊಡ ಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚೆಸ್ಕಾಂ ಎಇಇ ಚಂದ್ರಮೌಳಿ, ಜೆಇ ಲೋಕೇಶ್ ಚವ್ಹಾಣ್, ಗುತ್ತಿಗೆದಾರ ಸತೀಶ್ ರೆಡ್ಡಿ, ಮುಖಂಡರಾದ ನಾಗರಾಜು, ಕಾಳೇನಹಳ್ಳಿ ಮಂಜುನಾಥ್, ಎಂ.ಯಶಸ್, ಚಿಕ್ಕೇಗೌಡ, ಸಿದ್ದೇಗೌಡ, ರಾಜೇಗೌಡ, ನಿಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-
Hassan21 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Kodagu20 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Hassan22 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar5 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan4 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Mandya22 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
Hassan22 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
-
Manglore6 hours agoಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್
