Chamarajanagar
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಯಳಂದೂರು ವತಿಯಿಂದ ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎ ಎಸ್ ಐ ಮಹಾದೇವಪ್ಪ ಮಾತನಾಡಿದರು.
ವ್ಯಕ್ತಿಯ ಜೀವನವಿಡೀ ಮಾದಕ ವಸ್ತುವಿನ ಸುತ್ತವೇ ತಿರುಗಲಾರಂಭಿಸುತ್ತದೆ. ಸಮಯ ಕಳೆದಂತೆ ವ್ಯಕ್ತಿಯ ದಿನಚರಿ ಕೇವಲ ಮಾದಕ ವಸ್ತುವಿನಲ್ಲಿಯೇ ಮುಳುಗಿರುತ್ತದೆಯಲ್ಲದೆ ಆತನ ಎಲ್ಲ ಚಟುವಟಿಕೆಗಳು ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಮಾರ್ಪಾಟಾಗುತ್ತವೆ. ಆತನ ಆಲೋಚನೆಗಳೆಲ್ಲವುಗಳೂ ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಇರುತ್ತವೆ. ಉದಾ: ಮಾದಕ ವಸ್ತು ಖರೀದಿಸುವ ಬಗ್ಗೆ, ಅದಕ್ಕಾಗಿ ಹಣ ಹೊಂದಿಸುವ ಬಗ್ಗೆ ಇತ್ಯಾದಿ. ಕ್ರಮೇಣವಾಗಿ ವ್ಯಕ್ತಿಯು ತನ್ನ ಜೀವನದ ಎಲ್ಲ ಸಂತೋಷ ನೀಡುವ ಸನ್ನಿವೇಶಗಳನ್ನು,ಸಮಯವನ್ನು, ವ್ಯಕ್ತಿಗಳನ್ನು, ಕುಟುಂಬದವರನ್ನು,ಸ್ನೇಹಿತರನ್ನು, ಆಟೋಟಗಳನ್ನು, ದಿನಚರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾನೆ.
ಮಾದಕ ವಸ್ತುವಿನಿಂದ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆಯೆಂದು ಗೊತ್ತಿದ್ದರೂ ಆ ಹಾನಿಯನ್ನು ಅನುಭವಿಸುತ್ತಿದ್ದರೂ ಅದರ ಬಳಕೆ ಮುಂದುವರಿಸುತ್ತಾರೆ. ಮದ್ಯಪಾನದಿಂದ ಲಿವರ್ ಹಾಳಾಗಿ ಜಾಂಡೀಸ್ (ಕಾಮಾಲೆ ರೋಗ) ಆಗಿದ್ದರೂ ಮದ್ಯಪಾನವನ್ನು ಮುಂದುವರಿಸುವುದು; ಒಂದು ಸಲ ಗಾಂಜಾ ಸೇವನೆಯಿಂದ ಚಿತ್ತಭ್ರಮೆಯಾಗಿ ಏನೇನೋ ವಿಚಿತ್ರ ಅನುಭವಗಳಾಗಿ ಚಿಕಿತ್ಸೆಗಾಗಿ ವಾರಗಟ್ಟಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅನಂತರವೂ ಪುನಃ ಗಾಂಜಾ ಸೇದುವುದು, ಸಿಗರೇಟ್ ಸೇದುವುದರಿಂದ ಹಾರ್ಟ್ ಅಟ್ಯಾಕ್ (ಹೃದಯಾಘಾತ) ಆಗಿದ್ದರೂ ಸಿಗರೇಟ್ ಸೇದುವುದನ್ನು ತಮ್ಮ ಮನೆಗಳಲ್ಲಿ ಹಿರಿಯರು ಅಣ್ಣ ತಮ್ಮಂದಿರು ಮಾಡುವುದನ್ನು ನಿಲ್ಲಿಸಬೇಕೆಂದು ಕಾಲೇಜು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕಿನ ಯೋಜನಾಧಿಕಾರಿಗಳಾದ ಆನಂದ ಗೌಡ ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಿಕೊಂಡಿದ್ದರು. ವಲಯ ಮೇಲ್ವಿಚಾರಕರಾದ ಶಿವಶಂಕರ್ ,ಕೃಷಿ ಮೇಲ್ವಿಚಾರಕರಾದ ಶಿವಕುಮಾರ ಕಾಲೇಜಿನ ಉಪನ್ಯಾಸಕರು ,ಸೇವಾ ಪ್ರತಿನಿಧಿಗಳಾದ ರಜನಿ, ಪದ್ಮ ,ಕಾಲೇಜು ವಿದ್ಯಾರ್ಥಿನಿಯರು, ಸಂಘದ ಸದಸ್ಯರು ಹಾಜರಿದ್ದರು.
Chamarajanagar
ಬೇಗೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ರೈತ ಸಂಘಟನೆಯಿಂದ ಪ್ರತಿಭಟನೆ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ರೈತರಿಗೆ ಸಾಲ ವಸೂಲಿಗೆ ಬಗ್ಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಮುಂಭಾಗ ರೈತ ಸಂಘ ಗಳಿಂದ ಪ್ರತಿಭಟನೆ
ಬೇಗೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಸಾಲ ಪಡೆದ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿ ಗಳು ಬೇಗೂರಿನ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು. ಬೇಗೂರಿನ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ರೈತರಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿ ಕಿರುಕುಳ
ಈ ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ವೀರನಪುರ ನಾಗಪ್ಪ, ಬೇಗೂರು ಸಮೀಪದ ಬೆಳಚಲವಾಡಿ ಗ್ರಾಮದ ನಂಜುಂಡಸ್ವಾಮಿ ಎಂಬ ರೈತ ಬೇಗೂರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಬೆಳೆ ಸಾಲ ಪಡೆದಿದ್ದಾರೆ. ಇವರಿಗೆ ಹೆಚ್ಚು ಪ್ರಮಾಣದಲ್ಲಿ ಬಡ್ಡಿ ವಿಧಿಸಿ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಸಕಾಲಕ್ಕೆ ಮಳೆ ಬೀಳದೆ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿದೆ. ಜೊತೆಗೆ ಇದೆ ಸಮಯಕ್ಕೆ ಈ ಬ್ಯಾಂಕಿನವರು ಸಾಲ ವಸೂಲಿಗೆ ನೋಟಿಸ್ ನೀಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬೆಳೆದ ಬೆಳೆಗೆ ಬೆಲೆ ಸಿಗದೆ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನವರು ನೋಟಿಸ್ ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ನಂತರ ಬೇಗೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್.ವ್ಯವಸ್ಥಾಪಕರು ಈ ವಿಚಾರವಾಗಿ ಮುಖ್ಯ ಕಚೇರಿಯ ಗಮನಕ್ಕೆ ತಂದು ಬಡ್ಡಿ ಕಡಿಮೆ ಮಾಡಿಸಲು ಪ್ರಯತ್ನ ಪಡಲಾಗುವುದು ಎಂದು ಭರವಸೆ ನೀಡಿದರು.
ರೈತರ ನೆರವಿಗೆ ನಿಲ್ಲದ ಸರ್ಕಾರಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈ ಕಟ್ಟಿ ಕುಳಿತು ಅಧಿಕಾರಿಗಳ ಮೂಲಕ ಸಾಲ ವಸೂಲಿಗೆ ಕುಮ್ಮಕ್ಕು ನೀಡುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನೊಂದ ರೈತರ ನೆರವಿಗೆ ನಿಲ್ಲಬೇಕು ಹಾಗೂ ಸಾಲದ ಬಡ್ಡಿ ಮನ್ನಾ ಮಾಡಿ ಕೇವಲ ಸಾಲದ ಹಣವನ್ನು ಮಾತ್ರ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಮನ ವಲಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ
ಈ ಸಮಸ್ಯೆ ಬಗ್ಗೆ ಮುಖ್ಯ ಕಚೇರಿಗೆ ಗಮನಕ್ಕೆ ತಂದು ಬಡ್ಡಿಕಡಿಮೆ ಮಾಡಲುಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನ ಮಾಡುತಿದ್ದ ರೈತರು ಪ್ರತಿಭಟನೆ ಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ,ಸಂಘದ ಜಿಲ್ಲಾ ಉಪಾಧ್ಯಕ್ಷ ಮಲಯ್ಯನಪುರ ಪುಟ್ಟೇಗೌಡ, ಹಸಿರು ಸೇನೆ ಅಧ್ಯಕ್ಷ ಕಮರಹಳ್ಳಿ ಪ್ರಸಾದ್, ಕಾರ್ಯದರ್ಶಿ ಯತವನ ಹಳ್ಳಿ ಸಿದ್ದರಾಜು, ಸೋಮಹಳ್ಳಿ ನವೀನ್, ಶಿವಕುಮಾರ್, ಹಕ್ಕಲಪುರ ಸ್ವಾಮಿ, ಪಡಗೂರು ಮಹದೇವ ಸ್ವಾಮಿ ಸೇರಿದಂತೆ ಹಲವು ಮಂದಿ ರೈತರು ಹಾಜರಿದ್ದರು
Chamarajanagar
ಎಸ್ಎಸ್ಎಲ್ ಸಿ ಪತ್ರಿಕೆ-2 ಫಲಿತಾಂಶದಲ್ಲಿ ಕಬ್ಬಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ

ಗುಂಡ್ಲುಪೇಟೆ: ಎಸ್ಎಸ್ಎಲ್ ಸಿ ಪತ್ರಿಕೆ-2 ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆಗಳ ಪೈಕಿ ಕಬ್ಬಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.
ಕಬ್ಬಹಳ್ಳಿ ಶಾಲೆಯಲ್ಲಿ ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.6 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದು,
ರಜತ್ 587 ಅಂಕಗಳನ್ನು ಗಳಿಸಿ ಶಾಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ
ಒಟ್ಟು 87%ಫಲಿತಾಂಶ ಈ ಶಾಲೆಗೆ ಬಂದಿದ್ದು, ಈ ಫಲಿತಾಂಶ ಉತ್ತಮವಾಗಿ ಮೂಡಿ ಬರಲು ಶಿಕ್ಷಕರ ಕಾರ್ಯ ಹೆಚ್ಚಿನದ್ದಾಗಿದೆ. ಪ್ರತಿ ದಿನ ಸಂಜೆ ತರಗತಿಗಳನ್ನು ತೆಗೆದುಕೊಂಡು ಉತ್ತಮ ರೀತಿಯ ಬೋಧನೆ ಮಾಡಿ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮ ಬಹುಮುಖ್ಯವಾಗಿದೆ. ಶಾಲೆಯ ಮುಖ್ಯ ಶಿಕ್ಷಕರಾದ ಉಮೇಶ್ ಸಹ ಶಿಕ್ಷಕರಾದ ಪ್ರಶಾಂತ್, ವಿಜಯ್ ಕುಮಾರ್, ನಾಗೇಶ್, ಚೈತನ್ಯ, ಕವಿತಾ, ಶೃತಿ ಈ ಎಲ್ಲಾ ಶಿಕ್ಷಕರ ಶ್ರಮ ಸಾರ್ಥಕವಾಗಿದೆ. ಗ್ರಾಮಸ್ಥರು ಮತ್ತು ಪೋಷಕರ ಸಹಕಾರವೂ ಕಾರಣವಾಗಿದೆ.
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಬ್ಬಹಳ್ಳಿಯಲ್ಲಿನ ವಿಧ್ಯಾರ್ಥಿಗಳ ಫಲಿತಾಂಶದಲ್ಲಿ 87%. ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ 87% ಲಭಿಸಿದೆ.15 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು .3 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್, ಮೇಲ್ವಿಚಾರಕರಾದ ಪೃಥ್ವಿರಾಜ್ ಎಚ್ ಎಮ್.ಹಾಗೂ ಸಿಬ್ಬಂದಿ ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
Chamarajanagar
ಎಸ್‌ಡಿವಿಎಸ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಣೆ

ಯಳಂದೂರು: ತಾಲೂಕು ಕಾನೂನುಗಳ ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನ ಸೊಸೈಟಿ ಚಾಮರಾಜನಗರ ವತಿಯಿಂದ ಪಟ್ಟಣದ ಎಸ್ ಡಿ ವಿ ಎಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಯಳಂದೂರಿನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುಜಾತಾ ರವರು ಉದ್ಘಾಟಿಸಿ ಮಾತನಾಡಿದರು.
ಮಹೇಶ್ ರವರು ಯೋಜನಾ ನಿರ್ದೇಶಕರು ಬಾಲಕಾರ್ಮಿಕ ಯೋಜನಾ ಸೊಸೈಟಿ ಚಾಮರಾಜನಗರ, ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಸಾದ್ , ಸಿದ್ದಶೆಟ್ಟಿ ಮಕ್ಕಳ ರಕ್ಷಣಾ ಘಟಕ ಚಾಮರಾಜನಗರ, ಮುಖ್ಯ ಶಿಕ್ಷಕ ವೀರಭದ್ರ ಸ್ವಾಮಿ, ಶಿಕ್ಷಕರಾದ ಶಿವಮೂರ್ತಿ ಗುಂಬಳ್ಳಿ ಬಸವರಾಜು ಮಹದೇವ ಸೇರಿದಂತೆ ಇತರರು ಇದ್ದರು.
-
Mandya23 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Kodagu23 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan23 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
State20 hours ago
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
-
State21 hours ago
ಕೇರಳದಲ್ಲಿ ಜೂ.17ರವರೆಗೂ ವ್ಯಾಪಕ ಮಳೆ: ರಾಜ್ಯದ ಮೀನುಗಾರರಿಗೆ ಐಎಂಡಿ ಎಚ್ಚರಿಕೆ
-
Kodagu23 hours ago
ಕೊಡಗು ಪತ್ರಕತ೯ರ ಸಂಘದಿಂದ ಪ್ರಶಸ್ತಿಗಳಿಗೆ ಅಜಿ೯ ಆಹ್ವಾನ