Connect with us

Special

ದಂತ ಭಾಗ್ಯ ಯೋಜನೆ, ಹಿರಿಯರ ಆರೋಗ್ಯಕ್ಕೆ ಸರ್ಕಾರದ ಭರವಸೆ.

Published

on

ಹಿರಿಯ ನಾಗರಿಕರು ಇಳಿವಯಸ್ಸಿನಲ್ಲಿ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದಾಗಿದೆ. ಈ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಹಿರಿಯ ನಾಗರಿಕರಿಗೆ ಗುಣಮಟ್ಟದ ದಂತ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿದೆ.

ಯೋಜನೆಯಡಿ ದೊರೆಯುವ ಸೌಲಭ್ಯಗಳು:
ದಂತ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಗಳ ಜೋಡಣೆ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಬಳಸುವ ಉಪಕರಣಗಳು ಉನ್ನತ ಗುಣಮಟ್ಟದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ದೀರ್ಘಕಾಲ ಬಳಕೆಗೆ ಬರುತ್ತವೆ.

ಅರ್ಹತಾ ಮಾನದಂಡಗಳು:
ಈ ಯೋಜನೆಯ ಲಾಭ ಪಡೆಯಲು 45 ವರ್ಷ ಮೇಲ್ಪಟ್ಟವರು ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಅರ್ಹರಾಗಿರುತ್ತಾರೆ. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.

ಸೇವೆ ಲಭ್ಯವಿರುವ ಸ್ಥಳಗಳು:
ರಾಜ್ಯಾದ್ಯಂತ ಇರುವ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರದಿಂದ ಗುರುತಿಸಲ್ಪಟ್ಟ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

ಯೋಜನೆಯ ಸಾಧನೆ:
ಈವರೆಗೆ 41,218ಕ್ಕೂ ಹೆಚ್ಚು ಹಿರಿಯ ನಾಗರಿಕರು ದಂತ ಭಾಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಯೋಜನೆಯ ಯಶಸ್ಸು ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ.

ದಂತ ಭಾಗ್ಯ ಯೋಜನೆ ಹಿರಿಯರ ಆರೋಗ್ಯವನ್ನು ಕಾಪಾಡುವ ಜೊತೆಗೆ ಅವರ ಜೀವನಕ್ಕೆ ಹೊಸ ಸಂತೋಷವನ್ನು ತರುವ ಅತ್ಯುತ್ತಮ ಯೋಜನೆಯಗಿದ್ದು, ಹಿರಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು.

Special

ಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!

Published

on

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಗೃಹವ್ಯವಸ್ಥೆ ಕಾರ್ಯಕ್ರಮವಾಗಿದ್ದು, ಲಕ್ಷಾಂತರ ಭಾರತೀಯ ನಾಗರಿಕರ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡುವ ಉದ್ದೇಶ ಹೊಂದಿರುವ ಪ್ರಮುಖ ಯೋಜನಯಾಗಿದೆ.

ಯೋಜನೆಯ ರೂಪುರೆಷೆ:
PMAY ಯೋಜನೆ ಎರಡು ಮುಖ್ಯ ವಿಭಾಗಗಳಾದ
PMAY-Urban (ನಗರ ಪ್ರದೇಶದವರಿಗೆ)
PMAY-Gramin / Rural (ಗ್ರಾಮೀಣ ಪ್ರದೇಶದವರಿಗೆ) ಹೊಂದಿದ್ದು, ಇದರಲ್ಲಿ ಮನೆ ನಿರ್ಮಾಣಕ್ಕೆ ಸಾಲದೊಡನೆ ಸರ್ಕಾರದಿಂದ ಸಬ್ಸಿಡಿ ಸಹ ನೀಡಲಾಗುತ್ತದೆ, ಇದರಿಂದ ಕಡಿಮೆ ಆದಾಯ ಇರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಮನೆ ಕಟ್ಟಲು ಸಹಾಯ ಪಡೆಯಬಹುದು.

ಯೋಗ್ಯತೆಯ ಆಧಾರದಲ್ಲಿ ಸಬ್ಸಿಡಿ ವಿವರ:
* EWS – ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ಅಥವಾ ಕಡಿಮೆಯಾಗಿರಬೇಕು. ಇವರಿಗೆ ಗರಿಷ್ಠ ₹6 ಲಕ್ಷ ಮನೆ ಸಾಲ ನೀಡಲಾಗುತ್ತಿದ್ದು, ಇದರಲ್ಲಿ ಸರ್ಕಾರದಿಂದ ₹2.67 ಲಕ್ಷದವರೆಗೆ ಸಬ್ಸಿಡಿ ಇರುತ್ತದೆ.

* LIG – ಕಡಿಮೆ ಆದಾಯ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ದಿಂದ ₹6 ಲಕ್ಷದವರೆಗಿರಬೇಕು.ಇವರಿಗೆ ₹2.67 ಲಕ್ಷ ಸಹಾಯ ನೀಡಲಾಗುತ್ತದೆ.

* MIG-I – ಮಧ್ಯಮ ಆದಾಯ ವರ್ಗ 1 ದವರಿಗೆ ಆದಾಯ ₹6 ಲಕ್ಷ – ₹12 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.

* MIG-II – ಮಧ್ಯಮ ಆದಾಯ ವರ್ಗ ll ದವರಿಗೆ ಆದಾಯ ₹12 ಲಕ್ಷ – ₹18 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಹಾಯಧನ ನೀಡಲಾಗುತ್ತದೆ.

ಸಬ್ಸಿಡಿಯ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ ಮತ್ತು ಸಾಲದ ಬಡ್ಡಿದರವನ್ನು ಹೆಚ್ಚಾಗಿ ಕಡಿಮೆ ಮಾಡಲಾಗುತ್ತದೆ.

ಯಾರು ಅರ್ಹರು?
• ದೇಶದ ನಾಗರಿಕರಾಗಿರಬೇಕು.
• ಯಾವುದೇ ಸ್ಥಳದಲ್ಲಿ ಈಗಾಗಲೇ “ಪಕ್ಕಾ ಮನೆ ” ಹೊಂದಿರಬಾರದು.
• ಸರ್ಕಾರದ ಇತರ ಗೃಹ ಸಹಾಯ ಯೋಜನೆಗಳ ಪ್ರಯೋಜನ ಪಡೆದಿರಬಾರದು.

ಅಗತ್ಯ ದಾಖಲೆಗಳು:
* ಆದಾಯ ಪ್ರಮಾಣ ಪತ್ರ
* ಐಡಿ ಪ್ರೂಫ್ (Aadhaar)
* ಬ್ಯಾಂಕ್ ಪುಸ್ತಕ
ಅರ್ಜಿಯನ್ನು ಸಲ್ಲಿಸಿದ ನಂತರ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.

PM Awas Yojana ಒಂದು ಮಹತ್ವದ ಸಾರ್ವಜನಿಕ ಯೋಜನೆಯಾಗಿದ್ದು, ಇದು ಮನೆ ಕಟ್ಟುವ ಕನಸು ಹೊಂದಿರುವ ಬಡ ಮತ್ತು ಮಾಧ್ಯಮ ವರ್ಗದವರಿಗೆ ಸರ್ಕಾರ ಸಾಲ ಮತ್ತು ಸಬ್ಸಿಡಿ ಮೂಲಕ ಅವರ ಜೀವನಕ್ಕೆ ದಾರಿದೀಪವಾಗಿದೆ.

Continue Reading

ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ:ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿ.

Published

on

ಕರ್ನಾಟಕ ರಾಜ್ಯದಲ್ಲಿ ಆದರ್ಶ ವಿದ್ಯಾಲಯಗಳು ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಹಾಗೂ ವಸತಿ-ಭೋಜನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದ್ದು, ಈಗ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ ಮಾಡಿವೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
* ಪ್ರಾರಂಭ ದಿನಾಂಕ:23 ಜನವರಿ 2026
• ಕೊನೆಯ ದಿನಾಂಕ: 25 ಫೆಬ್ರವರಿ 2026
• ಪ್ರವೇಶ ಪರೀಕ್ಷೆ: 15 ಮಾರ್ಚ್ 2026 (ಭಾನುವಾರ)
• ಪರೀಕ್ಷೆಯ ಅವಧಿ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 (2.5 ಗಂಟೆ)

ಯಾರು ಅರ್ಹರು?
* ಕರ್ನಾಟಕ ರಾಜ್ಯದ ನಿಗದಿತ ನಿವಾಸಿಯಾಗಿರಬೇಕು.
* 5ನೇ ತರಗತಿ ಪೂರ್ಣವಾಗಿ ಪಾಸಾಗಿರಬೇಕು.
* ಪ್ರಾಥಮಿಕ ಶಿಕ್ಷಣ ಗ್ರಾಮೀಣ ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಪಡೆದಿದ್ದವರಿಗೆ ಹೆಚ್ಚಿನ ಆದ್ಯತೆ.
* ಸರ್ಕಾರದ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.

ಬೇಕಾಗುವ ದಾಖಲೆಗಳು:
* ವಿದ್ಯಾರ್ಥಿಯ ಆದಾರ್ ಕಾರ್ಡ್
* ಜನನ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಡಿಸೇಬಿಲಿಟಿ ಪ್ರಮಾಣ ಪತ್ರ (ಅನ್ವಯಿಸಿದರೆ)

ಅರ್ಜಿ ಸಲ್ಲಿಸುವ ವಿಧಾನ:
ಪ್ರವೇಶಕ್ಕೆ ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು.

ಪ್ರವೇಶ ಪರೀಕ್ಷೆ ಮತ್ತು ಆಯ್ಕೆ:
ಅಧಿಕೃತ ಪ್ರವೇಶ ಪರೀಕ್ಷೆಯು ಮಕ್ಕಳ ಸಾಮರ್ಥ್ಯ, ಪಠ್ಯಪುಸ್ತಕದ ಮೇಲೆ ಆಧಾರಿತ ಪ್ರಶ್ನೆಗಳನ್ನು ಪರೀಕ್ಷಿಸಲಾಗುತ್ತದೆ. ಆಯ್ಕೆ ಪಡೆದ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿಯಲ್ಲಿ ಪ್ರವೇಶ ನೀಡಲಾಗುತ್ತದೆ.

ಈ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿ 2026-27 ಕಾರ್ಯಕ್ರಮವು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ದಾರಿ ತೋರುವ ಮಹತ್ವದ ಅವಕಾಶವಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು.

Continue Reading

Trending

error: Content is protected !!