Connect with us

Location

ದನಗಾಹಿ ಮೇಲೆ ಹುಲಿ ದಾಳಿ

Published

on

ದನಗಾಹಿ ಮೇಲೆ ಹುಲಿ ದಾಳಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹತ್ತಿರ ರಿಸರ್ವ್ ಫಾರೆಸ್ಟ್​ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ವ್ಯಕ್ತಿ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹನಗೋಡು ವ್ಯಾಪ್ತಿಯ ಅಯ್ಯನಕೆರೆ ಹಾಡಿಯ ಬಳಿಯ ಉಡುವೆಪುರದ ರೈತ ಗಣೇಶ್ (58) ಎಂದು ಗುರುತಿಸಲಾಗಿದೆ.

ಸೋಮವಾರ ಗ್ರಾಮದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಅಂಚಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದು, ಸಂಜೆ ಜಾನುವಾರುಗಳು ಮನೆಗೆ ಬಂದರೂ ಗಣೇಶ್ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡು ಕುಟುಂಬಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಗಣೇಶ್​ ಅವರ ಮೃತದೇಹ ಮುದ್ದೇನಹಳ್ಳಿಯ ಬಳಿಯ ಅರಣ್ಯ ಪ್ರದೇಶದ ಬಫರ್ ಏರಿಯಾದ ಪ್ರದೇಶದಲ್ಲಿ ಇರುವ ಕೆರೆ ಬಳಿ ಸಂಜೆ ದೊರಕಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಮಹಿಳಾ ಸಹಾಯವಾಣಿ (ಪಿಂಕ್ ಗಸ್ತು ವಾಹನ )ಕ್ಕೆ ದಂಡ ವಿಧಿಸಿದ ಮಡಿಕೇರಿ ಸಂಚಾರಿ ಪೊಲೀಸರು

Published

on

ಮಡಿಕೇರಿ ನಗರದ ಕಾಲೇಜು ರಸ್ತೆಯ ಏಕಮುಖ ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಮಹಿಳಾ ಸಹಾಯವಾಣಿ (ಪಿಂಕ್ ಗಸ್ತು ವಾಹನ )ಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ವಾಹನ ಸಂಖ್ಯೆ KA02 G 1815 ವಾಹನ ಚಾಲಕ ಜಯಶಂಕರ್ ರಿಗೆ 500ರೂ ದಂಡ ವಿಧಿಸಲಾಗಿದೆ. ಸಂಚಾರಿ ಪೊಲೀಸ್ ರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ಸ್ಥಳೀಯರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

Chikmagalur

ಕಾಡಾನೆ ದಾಳಿ. ರೈತ ಸಾವು.

Published

on

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ರಾತ್ರಿ ಆನೆ ದಾಳಿಯಿಂದ ಕೊಪ್ಪದ ರೈತ ಶಿವಪ್ಪ (72) ಮೃತಪಟ್ಟಿರುತ್ತಾರೆ.

ಸುದ್ದಿ ತಿಳಿದೊಡನೆ ಶಾಸಕರ ಸೂಚನೆ ಮೇರೆಗೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಧಾವಿಸಿ, ಶವವನ್ನು ಇರಿಸಿದ ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು.
ಸ್ಥಳೀಯರೊಂದಿಗೆ ಮಾತನಾಡಿದ ಬಳಿಕ, ವಿಷಯವನ್ನು ಶಾಸಕರಿಗೆ ತಿಳಿಸಿ ಕೂಡಲೇ ಆ ಭಾಗದಲ್ಲಿ ಇರುವ ಒಂದು ಪುಂಡಾನೆಯನ್ನು ಸೆರೆ ಹಿಡಿಯಲು ಬೇಕಾದ ಇಲಾಖೆ ಕಾನೂನುಗಳನ್ನು ಈಡೇರಿಸಿ, ಶೀಘ್ರದಲ್ಲಿ ಆನೆ ಹಿಡಿಯಲು ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು

ಈ ಕೂಡಲೇ ಆನೆ ಓಡಿಸುವ ಕಾರ್ಯಾಚರಣೆ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದರಲ್ಲದೆ, ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ನೀಡಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರಾದ ಆದಮ್ ಕುಂಹಿ, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ವಿನಯ ಮಾಣಿಕಲ್ಲು, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು, ವೈದ್ಯರು ಇದ್ದರು.

Continue Reading

Mandya

ವಿದ್ಯಾರ್ಥಿಗಳು ಸೋಲು ಗೆಲುವು ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಭಾಗವಹಿಸಬೇಕು: ಧನಂಜಯ

Published

on

ಮದ್ದೂರು: ವಿದ್ಯಾರ್ಥಿಗಳು ಸೋಲು ಗೆಲುವು ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಪನಕುಪ್ಪೆ ವತಿಯಿಂದ ಬುಧವಾರ ಆಯೋಜಿಸಿದ್ದ 2025-26 ನೇ ಸಾಲಿನ ಆತಗೂರು ವೃತ್ತ ಹಾಗೂ ಹೋಬಳಿ ಮಟ್ಟದ 14 ವರ್ಷ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಬೇಕು. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.

ಕ್ರೀಡಾಕೂಟದಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು ಗೆದ್ದವರು ಬಹುಮಾನ ಪಡೆದರೆ, ಸೋತವರು ಕ್ರೀಡಾ ಸ್ಪೂರ್ತಿ ಮೆರೆದರು.

ಗ್ರಾ.ಪಂ. ಅಧ್ಯಕ್ಷ ಗಿರಿಯಯ್ಯ, ಉಪಾಧ್ಯಕ್ಷ ವಾಸುದೇವ್, ಮಾಜಿ ಅಧ್ಯಕ್ಷರಾದ ಇಂದ್ರಮ್ಮ, ಡಿ.ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಡಿ.ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕಿ ರಾಜೇಶ್ವರಿ, ಮುಖ್ಯ ಶಿಕ್ಷಕ ನಾಗರಾಜು ಇದ್ದರು.

Continue Reading

Trending

error: Content is protected !!