Chamarajanagar
ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ಸೈಬರ್ ಅರಿವು ಅಪರಾಧ ಕಾರ್ಯಕ್ರ

ಶ್ರೀ ವೈ ಎಂ ಸರ್ಕಾರಿ ಪ್ರಥಮ ಹಾಗೂ ಏಳಂದೂರು ಪಟ್ಟಣ ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ದಿನಾಂಕ 4.11 20 23 ರಂದು ಕಾಲೇಜಿನಲ್ಲಿ ಸೈಬರ್ ಅರಿವು ಅಪರಾಧ ಕಾರ್ಯಕ್ರಮದ ಬಗ್ಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಲೋಕದಲ್ಲಿ ನಡೆಯುವ ಅಪರಾಧಗಳ ಬಗ್ಗೆ ಹಾಗೂ ಅದರಿಂದ ಆಗುವ ತೊಂದರೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಯ ಶ್ರೀ ಶ್ರೀನಿವಾಸಮೂರ್ತಿ ರವರು
ಅನೇಕ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಮೊಬೈಲ್ ಲ್ಯಾಪ್ಟಾಪ್ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂ ಫೇಸ್ಬುಕ್ ಈ ತರದ ಟೆಕ್ನಾಲಜಿಯನ್ನು ಬಳಸುವಂತಹ ಯುವಕ ಯುವತಿಯರು ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಿದರು. ಇಂಟರ್ನೆಟ್ ಮೂಲಕ ನಡೆಯುವ ಅಪರಾಧಿಗೆ ಚಟುವಟಿಕೆಗಳು ಹಾಗೂ ಅದರಿಂದಾಗುವ ವ್ಯಕ್ತಿಗತ ತೊಂದರೆಗಳು ಗಳ ಬಗ್ಗೆ ಕೂಡ ವಿದ್ಯಾರ್ಥಿಗಳಿಗೆ ಅರಿವನ್ನು
ಮೂಡಿಸಿದರು ಹಾಗೂ ತುರ್ತು ಸಂದರ್ಭದಲ್ಲಿ ಹಾಗೂ ಸಂಕಷ್ಟದ ಸಮಯದಲ್ಲಿ ಯಾವುದೇ ಭಯಕ್ಕೆ ಈಡಾಗದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನೆರವನ್ನು ಕೋರುವಂತೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಯಳಂದೂರು ಪಟ್ಟಣ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಧನಂಜಯ ಹಾಗೂ ಸಹಾಯಕ ಇನ್ಸ್ಪೆಕ್ಟರ್ ಆದಂತಹ ಶ್ರೀ ಮಹಾದೇವ ಸ್ವಾಮಿ ರವರು ಹಾಗೂ ಇತರೆ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲರು ಶ್ರೀ ವಿಜಯ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಹಾಂತೇಶ್ ಟಿ ರವರು ಎಲ್ಲರನ್ನು ಸ್ವಾಗತಿಸಿದರು. ಹಾಗೂ ಐಕ್ಯೂ ಏ ಸಿ ಸಂಚಾಲಕ ರೂ ಶ್ರೀ ವಿಕಾಸ್ ಎಂ ರವರು ವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Chamarajanagar
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ

ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆಗೆ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ ಈ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪರಶಿವಮೂರ್ತಿ ಅವರಿಗೆ ಡಿವೈಎಸ್ಪಿ ಆಗಿ ಮುಂಬಡ್ತಿ ಹೊಂದಿದ ಹಿನ್ನೆಲೆ ಅವರ ಜಾಗಕ್ಕೆ ಜಯಕುಮಾರ್ ಅವರನ್ನು ನೇಮಿಸಲಾಗಿದೆ.
ಅಧಿಕಾರವಹಿಸಿಕೊಂಡ ಜಯಕುಮಾರ್ ಅವರನ್ನು ಸ್ವಾಗತ ಕೋರಿದ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು
Chamarajanagar
ಗುಂಬಳ್ಳಿಯ ನೀರಿನ ಟ್ಯಾಂಗ್ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯಿತಿ

ಯಳಂದೂರು ಮಾರ್ಚ್ 27
ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇದ್ದ ನೀರಿನ ಟ್ಯಾಂಕನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೊಳಿಸಲಾಯಿತು.
ಕಳೆದ ಕೆಲವು ದಿನಗಳಿಂದ ಕುಡುಕರ ಹಾವಳಿ ಮಿತಿಮೀರಿ ಮಧ್ಯದ ಪಾಕೆಟ್ ಗಳು ಸೇರಿದಂತೆ ನೀರಿನ ತೊಂಬೆ ಸುತ್ತಮುತ್ತ ಅಶುಚಿತ್ವ ತಾಂಡವ ಆಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಡಲೇ ಪೌರಕಾರ್ಮಿಕರ ಜೊತೆಗೆ ಶುಚಿತ್ವಕ್ಕೆ ಮುಂದಾದರು. ಇದರಿಂದ ಮುಂಬರುವ ರೋಗ ರುಜಿನಗಳಿಗೆ ಸ್ವಚ್ಛ ಮಾಡಿದ ಕ್ಷಣದಿಂದಲೇ ಅಂತ್ಯ ಹಾಡಲಾಯಿತು.
ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಕೃಷ್ಣನಾಯಕ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನೀರಿನ ತೊಂಬೆಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗ ಇದ್ದ ನೀರಿನ ತೊಂಬೆ ಬಳಿ ಕುಡುಕರು ಮಧ್ಯ ಕುಡಿದು ಪಾಕೆಟ್ ಗಳನ್ನು ನೀರಿನ ತೊಂಬೆ ಸುತ್ತಮುತ್ತ ಎಸೆಯುತ್ತಿದ್ದರು. ಇಂದು ಎಲ್ಲವನ್ನು ಸ್ವಚ್ಛಗೊಳಿಸಲಾಗಿದೆ ಮುಂಬರುವ ದಿನಗಳಲ್ಲಿ ಇಂಥವರ ಮೇಲೆ ಕಠಿಣ ಕ್ರಮವನ್ನು ಪಂಚಾಯಿತಿ ವತಿಯಿಂದ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು ಸೇರಿದಂತೆ ಗುಂಬಳ್ಳಿ ಗ್ರಾಮಸ್ಥರು ಮತ್ತು ಇತರರು ಹಾಜರಿದ್ದರು
Chamarajanagar
ಹುಲಿ ದಾಳಿ: ಹಸು ಬಲಿ

ಗುಂಡ್ಲುಪೇಟೆ:-ತಾಲೂಕಿನ ಪಡಗೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದ ಘಟನೆ ನಡೆದಿದೆ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ತರಕಾರಿ ಮಹೇಶ ಎಂಬುವವರ ಜಮೀನಿನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಸುಮಾರು 60 ಸಾವಿರ ಬೆಲೆಬಾಳುವ ಹಸುವಾಗಿದ್ದು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಸ್ಥಳ ಪರಿಶೀಲನೆ ನಡೆಸಿದರು.
ಪಡಗೂರು ಗ್ರಾಮದಲ್ಲಿ ಪದೇ ಪದೇ ಸಾಕು ಪ್ರಾಣಿಗಳು ಮೇಲೆ ಹುಲಿ ದಾಳಿ ಮಾಡುತ್ತಿದ್ದರು ಅರಣ್ಯ ಇಲಾಖೆಯವರು ಯಾವುದೇ ರೀತಿಯಲ್ಲೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
-
State23 hours ago
ಅಕ್ರಮ ಮರ ಕಡಿತಲೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಈಶ್ವರ ಖಂಡ್ರೆ ಖಡಕ್ ಸೂಚನೆ
-
State24 hours ago
ಸತ್ಯವಂತರಿಗಿದು ಕಾಲವಲ್ಲ: ಉಚ್ಛಾಟನೆ ಬೆನ್ನಲ್ಲೇ ಟ್ವೀಟ್ ಮೂಲಕ ಯತ್ನಾಳ್ ಆಕ್ರೋಶ
-
Special10 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State24 hours ago
ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ ಮಾಡಿದ ಸಿಎಂ ಸಿದ್ದರಾಮಯ್ಯ
-
State6 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan7 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State7 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State5 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?