Connect with us

Chikmagalur

apk file ಅನ್ನು ಡೌನ್ಲೋಡ್ ಮಾಡುವ ಮೊದಲು ಇರಲಿ ಎಚ್ಚರ..!!

Published

on

ಚಿಕ್ಕಮಗಳೂರು : ವ್ಯಕ್ತಿಯೊಬ್ಬರು ಅನುಮಾನಾಸ್ಪದ ಲಿಂಕ್ .apk file ನ್ನು ಕ್ಲಿಕ್ ಮಾಡಿ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ಪರಿಣಾಮವಾಗಿ ಸೈಬರ್ ಖದೀಮರು Remote Access ಪಡೆದು ಅವರ ಬ್ಯಾಂಕ್ ಖಾತೆಗಳಿಂದ 10,65,899/- ರೂ ಹಣವನ್ನು ಲಪಟಾಯಿಸಿರುವ ಕುರಿತು ಪ್ರಕರಣ ದಾಖಲಿಸಿರುವ ಬಗ್ಗೆ

ಚಿಕ್ಕಮಗಳೂರು ನಗರದಲ್ಲಿ ಮಹಿಳೆಯೋರ್ವರು 02 ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್ ನ್ನು ಚೆಕ್ ಮಾಡಿದಾಗ ಎರಡೂ ಖಾತೆಗಳಲ್ಲಿಯೂ ಗಮನಕ್ಕೆ ಬಾರದ ರೀತಿಯಲ್ಲಿ ಹಣ ಕಡಿತ ಗೊಂಡಿರುವುದು ಕಂಡುಬಂದಿರುತ್ತದೆ.
ಸದರಿ ವಿಷಯವಾಗಿ ಸಂಬಂಧಪಟ್ಟ ಬ್ಯಾಂಕ್ ನಲ್ಲಿ ವಿಚಾರಿಸಿದ್ದು ಪೇಟಿಯಂ ಆಪ್ ಮುಖಾಂತರ ಯಾವುದೋ ಮೊಬೈಲ್ ಗೇಮಿಂಗ್ ಆಪ್ ಗಳಿಗೆ ಹಣ ಕಟಾವು ಆಗಿರುವ ಬಗ್ಗೆ ಬ್ಯಾಂಕ್ ನವರು ಮಾಹಿತಿ ನೀಡಿರುತ್ತಾರೆ.
ಆದರೆ ಪೇಟಿಯಂ ಆಪ್ ಯಾಗಲಿ ಅಥವಾ ಯಾವುದೇ ಗೇಮ್ ಆಪ್ ಆಗಲಿ ಮಹಿಳೆಯು ತನ್ನ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿರುವುದಿಲ್ಲ ಆದರೆ ಸೈಬರ್ ವಂಚಕರು ಮಹಿಳೆಯ ಮೊಬೈಲ್ ಗೆ .APK FILE ಅನ್ನು ಕಳುಹಿಸಿ ಅವರ ಮೊಬೈಲ್ ನ ಸಂಪೂರ್ಣ Access ನ್ನು ಪಡೆದುಕೊಂಡು ಪೆಟಿಎಂ ಆಪ್ ನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ 02 ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ದಿ:24-06-2025 ರಿಂದ ದಿ:10/08/2025 ರವರೆಗೆ ಒಟ್ಟು 10,65,899/- ರೂ ಗಳನ್ನು ಸೈಬರ್ ವಂಚಕರು ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಮಹಿಳೆಗೆ ವಂಚನೆ ಮಾಡಿರುತ್ತಾರೆ.
ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ದಿ:15/08/2025 ರಂದು ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಆದ್ದರಿಂದ ಮೊಬೈಲ್ ಗಳಿಗೆ ಬರುವಂತಹ ಯಾವುದೇ ರೀತಿಯ ಅಪರಿಚಿತ, ಅನುಮಾನಾಸ್ಪದ .APK FILE ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೇ ಇನ್ಸ್ಟಾಲ್ ಮಾಡಿಕೊಳ್ಳಬಾರದಾಗಿ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವತಿಯಿಂದ ವಿನಂತಿಸಿದೆ.

ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗಿದ್ದಲ್ಲಿ ಕೂಡಲೇ ತಡಮಾಡದೇ ಅಗತ್ಯ ಮಾಹಿತಿಯೊಂದಿಗೆ
ಟೋಲ್ ಫ್ರೀ ಸಂಖ್ಯೆ 1930 ಗೆ ಕರೆಮಾಡಿ ದೂರು ದಾಖಲಿಸುವಂತೆ ಕೋರಲಾಗಿದೆ.

Continue Reading

Chikmagalur

ಮೂಡಿಗೆರೆಯಲ್ಲಿ ಐವರು ಬಾಂಗ್ಲಾದೇಶ ಮೂಲದವರನ್ನು ವಶಕ್ಕೆ ಪಡೆದು ವಿಚಾರಣೆ

Published

on

ಚಿಕ್ಕಮಗಳೂರು/ಮೂಡಿಗೆರೆ : ಕಾಫಿ ತೋಟಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ನೆಲೆಸಿದ್ದ ಐವರು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆಯ (IB) ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್‌ ಹಸೀಬುಲ್ ಎಂಬುವವರನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಇವರನ್ನು ಚಿಕ್ಕಮಗಳೂರಿನ ಡಿ.ಆ‌ರ್. ಪೊಲೀಸ್‌ ಠಾಣೆಯಲ್ಲಿಟ್ಟು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ.

ವಶಕ್ಕೆ ಪಡೆದಿರುವ ಐವರಿಂದ ಬಾಂಗ್ಲಾದೇಶದ ಅಧಿಕೃತ ಗುರುತಿನ ಚೀಟಿಗಳು ಪತ್ತೆಯಾಗಿವೆ. ಇವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಾಲ್ಮಾ ಅವರು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಮಲೆನಾಡಿನ ಕಾಫಿ ತೋಟಗಳಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳು ಆಶ್ರಯ ಪಡೆದಿದ್ದಾರೆ ಎಂದು ಬಿಜೆಪಿ, ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮಾಡುತ್ತಿದ್ದ ಆರೋಪಗಳಿಗೆ ಈ ಬಂಧನದಿಂದಾಗಿ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಈ ಭಾಗದಲ್ಲಿ ಇನ್ನೂ ಹಲವು ಅಕ್ರಮ ವಲಸಿಗರು ತಂಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿ ಎಲ್ಲರನ್ನೂ ಗಡಿಪಾರು ಮಾಡಬೇಕೆಂಬ ಸಾರ್ವಜನಿಕ ಒತ್ತಾಯ ತೀವ್ರಗೊಂಡಿದೆ.

Continue Reading

Chikmagalur

ಅಪಘಾತದಲ್ಲಿ ಸಾ*ವು: ಚಾಲಕನಿಗೆ 9 ತಿಂಗಳು ಸಜೆ

Published

on

ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಂ.ಸಿ. ನ್ಯಾಯಾಲಯವು ೯ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಬೇಲೂರು ತಾಲ್ಲೂಕು ಬಿಳುಗುಲಿ ಗ್ರಾಮದ ಬಿ.ಎಸ್.ಮೋಹಿತ್ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ೨೦೨೩ರ ಮಾರ್ಚ್ ೨೩ರ ರಾತ್ರಿ ವಿವೇಕ್ ಮುನ್ಸಿ, ದರ್ಶನ್ ಆರಾಧ್ಯ ಹಾಗೂ ಕಾರ್ತಿಕ್ ಎಂಬುವವರೊಂದಿಗೆ ನಗರದ ಹೌಸಿಂಗ್ ಬೋರ್ಡ್‌ನ ಟೀಚರ್‍ಸ್ ಕಾಲೋನಿಯಿಂದ ಕಣಿವೆದಾಸರಹಳ್ಳಿಗೆ ತೆರಳಿ ಮರಳುತ್ತಿದ್ದಾಗ ರಸ್ತೆಯ ಇಳಿಜಾರಿನಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಕಾರು ಫಾರೆಸ್ಟ್ ಗೇಟ್ ಸಮೀಪ ಮಗುಚಿ ಬಿದ್ದಿತೆನ್ನಲಾಗಿದೆ.


ಘಟನೆಯಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಿವೇಕ್ ಮುನ್ಸಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾದರೆ, ಹಿಂದಿನ ಸೀಟಿನಲ್ಲಿದ್ದ ದರ್ಶನ್ ಆರಾಧ್ಯ ಮತ್ತು ಕಾರ್ತಿಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ಒಂದನೇ ಅಧಿಕ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಂ.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ದ್ಯಾವಪ್ಪ ಅವರು ವಿಚಾರಣೆ ನಡೆಸಿದ ಸಂದರ್ಭ ಮೋಹಿತ್ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆಗಸ್ಟ್ ೧ ರಂದು ತೀರ್ಪು ನೀಡಿದ್ದು, ಆರೋಪಿಗೆ ೯ ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ೪ ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ೬೦ ದಿನಗಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕವಿತಾ ಎಚ್.ಡಿ. ಅವರು ವಾದ ಮಂಡಿಸಿದ್ದರು. ಗ್ರಾಮಾಂತರ ಪೊಲೀಸರು ಸಾಕ್ಷಿದಾರರನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದರು.

Continue Reading

Chikmagalur

ಕಾಫಿನಾಡಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳ ಬಂಧನ: ಬಣಕಲ್‌ನಲ್ಲಿ ಐವರು ವಶಕ್ಕೆ

Published

on

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಕಾಫಿ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಗುಪ್ತಚರ ಮಾಹಿತಿ ಇಲಾಖೆ ನೀಡಿದ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಣಕಲ್ ವ್ಯಾಪ್ತಿಯಲ್ಲಿ ವಾಸವಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಅವರನ್ನು ಡಿ.ಆರ್. ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ.

ಬಂಧಿತರೊಂದಿಗೆ ಇನ್ನಷ್ಟು ಮಂದಿ ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮಲೆನಾಡಿನ ಕಾಫಿ ತೋಟಗಳಲ್ಲಿ ಅಕ್ರಮವಾಗಿ ವಾಸಿಸುವವರ ಸಂಖ್ಯೆ ಹೆಚ್ಚಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಎಚ್ಚರಿಕೆ ವಹಿಸುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದ ಈ ಬೆಳವಣಿಗೆ ಇದೀಗ ಗಮನ ಸೆಳೆದಿದೆ.

Continue Reading

Trending

error: Content is protected !!