Hassan
ಹಾಸನಾಂಬ ಭಕ್ತರಿಗೆ ಕರೆಂಟ್ ಶಾಕ್ : ಕಾರಣ ಹೇಳಿದ ಅಧಿಕಾರಿಗಳು !
ಹಾಸನ: ಹಾಸನಾಂಬ ದೇವಾಲಯದ ಧರ್ಮದರ್ಶನದ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿದ್ಯುತ್ ಶಾಕ್ ಉಂಟಾಗಲು ಕಾರಣವೇನು? ಎನ್ನುವ ಬಗ್ಗೆ ಸೆಸ್ಕ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿನ ತನಿಖೆ ವೇಳೆ ಅತಿಯಾದ ಭಕ್ತರ ಒತ್ತಡದಿಂದ ಶಾಮೀಯಾನಾ ಕಿತ್ತು ಬಂದಿರುವುದು ಪತ್ತೆಯಾಗಿದೆ. ಶಾಮೀಯಾನಾ ಕಂಬಕ್ಕೆ ಅಳವಡಿಸಿದ್ದ ಫೋಕಸ್ ಲೈಟ್ ನ ವೈರ್ ಶಾಮೀಯಾನದೊಂದಿಗೆ ಸೇರಿ ತುಂಡಾಗಿದೆ. ಆಗ ಅದರಲ್ಲಿನ ವೈರ್ ಬ್ಯಾರಿಕೇಡ್ ಸಂಪರ್ಕಕ್ಕೆ ಬಂದು ಕೆಲ ಭಕ್ತರಿಗೆ ವಿದ್ಯುತ್ ಆಘಾತವಾಗಿದೆ ಎನ್ನುವ ಕಾರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕಾಲ್ತುಳಿತದಿಂದ ಗಾಯ:
ಕರೆಂಟ್ ಶಾಕ್ ತಗುಲಿದ ಭಕ್ತರು ಹೆದರಿ ಚೀರಿದ್ದರಿಂದ ಗಾಬರಿಯಾದ ಸುತ್ತಮುತ್ತ ಸಾಲಿನಲ್ಲಿ ನಿಂತಿದ್ದವರು ಭೀತಿಯಿಂದ ಸಿಕ್ಕೆಡೆಗೆ ಓಡಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಯ ಗಾಯಾಳುಗಳ ಗಾಯಕ್ಕೆ ಕಾಲ್ತುಳಿತವೇ ಕಾರಣವಾಗಿದೆ. ಅಲ್ಲದೆ ವಿದ್ಯುತ್ ಶಾಕ್ ಆಗಿದೆ ಎನ್ನುವ ವಿಷಯ ತಿಳಿದ ತಕ್ಷಣ ಆ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಮುಂಜಾಗ್ರತೆ ಹೆಚ್ಚಿನ ಅನಾಹುತ ತಪ್ಪಿಸಿದೆ ಎನ್ನಲಾಗುತ್ತಿದೆ.
Hassan
ಹಾಸನಾಂಬೆ ದೇವಿ ಸಾರ್ವಜನಿಕರ ದರ್ಶನದ ಹತ್ತನೇ ದಿನ
ಹಾಸನ : ಹಾಸನಾಂಬೆ ದೇವಿ ಸಾರ್ವಜನಿಕರ ದರ್ಶನದ ಹತ್ತನೇ ದಿನ
ಇಂದೂ ಕೂಡ ಹರಿದು ಬಂದ ಭಕ್ತರ ಪ್ರವಾಹ
ಮುಂಜಾನೆ ಮೂರು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವ ಭಕ್ತರು
ಬಾರಿ ಭಕ್ತರು ಬಂದ ಕಾರಣ ಕಿಲೋಮೀಟರ್‌ಗಟ್ಟಲೆ ಇರುವ ಸರತಿ ಸಾಲು
ಸರತಿ ಸಾಲಿನಲ್ಲಿ ನಿಲ್ಲಲಾಗದೆ ಕುಳಿತ ವಯೋವೃದ್ದರು
ಧರ್ಮ ದರ್ಶನದ ಸಾಲಿನಲ್ಲಿ ಕುಳಿತ ಮಹಿಳೆಯರು ಹಾಗೂ ಪುರುಷರು
ದೀಪಾವಳಿ ಹಬ್ಬದ ದಿನವೇ ಶಕ್ತಿ ದೇವತೆ ದರ್ಶನಕ್ಕೆ ಭಕ್ತರ ದಂಡು
ಎರಡು ದಿನಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಮುಗಿ ಬಿದ್ದಿಧ್ದ ಭಕ್ತರು
ನಿನ್ನೆ ಭಾರೀ ಜನ ಸಂದಣಿಯಿಂದ ನೂಕು ನುಗ್ಗಲು ಸೃಷ್ಟಿಯಾಗಿ ಅವಾಂತರ
ದರ್ಶನಕ್ಕೆ ಅಧಿಕಾರಿಗಳ ಜೊತೆಯೇ ಜಟಾಪಟಿ ನಡೆಸಿದ್ದ ಭಕ್ತರು
ಇಂದು ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಲಿರುವ ಭಕ್ತರ ದಂಡು
ಇನ್ನು ಮೂರು ದಿನ ಹಾಸನಾಂಬೆ ದರ್ಶನಕ್ಕೆ ಅವಕಾಶ
ನ.14 ರ ತಡರಾತ್ರಿಗೆ ಕೊನೆಯಾಗಲಿರುವ ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನ
ನ.15 ಕ್ಕೆ ಮುಚ್ಚಲಿರುವ ಹಾಸನಾಂಬೆ ಗರ್ಭಗುಡಿ ಬಾಗಿಲು
ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬರ್ತಿರುವ ಭಕ್ತರ ದಂಡು
Hassan
ಹಾಸನ ಹಾಸನಾಂಬೆ ದರ್ಶನದ ವೇಳೆ ಭಕ್ತರಿಗೆ ಕರೆಂಟ್ ಶಾಕ್ ಆಗಿ ನೂಕು ನುಗ್ಗಲು ಪ್ರಕರಣ
ಹಾಸನ ಹಾಸನಾಂಬೆ ದರ್ಶನದ ವೇಳೆ ಭಕ್ತರಿಗೆ ಕರೆಂಟ್ ಶಾಕ್ ಆಗಿ ನೂಕು ನುಗ್ಗಲು ಪ್ರಕರಣ
ಘಟನೆ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಹಾಗು ದೇವಾಲಯ ಆಡಳಿತ ಮಂಡಳಿ
ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಶಿಷ್ಟಾಚಾರ ದರ್ಶನ ಅಂತ್ಯ ಗೊಲಿಸಿದ ದೇವಾಲಯ ಆಡಳಿತ ಮಂಡಳಿ
ಅರ್ಚಕರ ಹೊರತಪಡಿಸಿ ಗರ್ಭಗುಡಿಗೆ ಅನ್ಯ ವ್ಯಕ್ತಿಗಳ ಪ್ರವೇಶ ಸಂಪೂರ್ಣ ನಿಷೇಧ
ಶಿಷ್ಟಾಚಾರ ದರ್ಶನ ಅಂತ್ಯಹಾಗು ಗರ್ಭಗುಡಿ ಪ್ರವೇಶ ನಿರ್ಬಂಧ ಮಾಡಿ ಆಡಳಿತಾದಿಕಾರಿ ಆದೇಶ
ಹಾಸನಾಂಬೆ ದೇವಾಲಯ ಆಡಳಿತಾದಿಕಾರಿ ಹಾಗು ಹಾಸನ ಉಪ ವಿಭಾಗ ಅದಿಕಾರಿ ಮಾರುತಿ ಆದೇಶ
ಹಾಸನಾಂಬೆ ದರ್ಶನ ಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡ ಜಿಲ್ಲಾಡಳಿತ
ಶಿಷ್ಟಾಚಾರ ದರ್ಶನದಿಂದ ಸಾಮಾನ್ಯ ಭಕ್ತರ ದರ್ಶನ ವಿಳಂಬದ ಬಗ್ಗೆ ಆರೋಪ
ಗರ್ಭಗುಡಿ ದರ್ಶನದಿಂದ ಸರತಿ ಸಾಲಿನಲ್ಲಿ ನಿಲ್ಲೊ ಭಕ್ತರ ದರ್ಶನಕ್ಕೆ ಸಮಸ್ಯೆ ಹಿನ್ನೆಲೆಯಲ್ಲಿ ಖಡಕ್ ನಿರ್ದಾರ ಕೈಕೊಂಡ ಆಡಳಿತಾದಿಕಾರಿ
ಡಿಸಿ ಎಸ್ಪಿ, ಹಾಗು ಉಸ್ತುವಾರಿ ಸಚಿವರ ಸಭೆ ಬಳಿಕ ಆದೇಶ ಮಾಡಿದ ಆಡಳಿತಾದಿಕಾರಿ ಆದೇಶ
ಇಂದು ಸಾರ್ವಜನಿಕ ಭಕ್ತರ ದರ್ಶನದ ವೇಳೆ ವಿದ್ಯುತ್ ಶಾಕ್ ನಿಂದ ಅವಘಡ
ಅವಘಡದಿಂದ 17_ ಜನರು ಅಸ್ವಸ್ಥ ಹಿನ್ನೆಲೆಯಲ್ಲಿ ಹಲವು ಕ್ರಮ ಕೈಕೊಂಡ ಅದಿಕಾರಿಗಳು
ಇನ್ನೂ ನಾಲ್ಕು ದಿನ ಬಾಕಿ ಇರೋ ಹಾಸನಾಂಬೆ ದರ್ಶನೋತ್ಸವ
ದೀಪಾವಳಿ ರಜೆ ದಿನಗಳು ಆರಂಬ ಹಿನ್ನೆಲೆಯಲ್ಲಿ ಮತ್ತಷ್ಟು ಭಕ್ತರ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಆಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಕ್ರಮ
Hassan
ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ
ಹಾಸನ : ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ
ಫಣೀಂದ್ರ.ಎನ್.ಎಸ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಾಯಿಮಟ್ಟೆ ಶೇಖರಣಾ ಘಟಕ ಮಾಡಲು 1 ಲಕ್ಷ 77 ಸಾವಿರ ಸಬ್ಸಿಡಿ ನೀಡಲು ರೈತನ ಬಳಿ ಲಂಚ ಕೇಳಿದ್ದ ಫಣೀಂದ್ರ
ರೈತನಿಂದ ಆರು ಸಾವಿರ ಲಂಚ ಕೇಳಿದ್ದ ಫಣೀಂದ್ರ ಎನ್.ಎಸ್.
ಆರು ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು
ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ದಾಳಿ
ಚನ್ನರಾಯಪಟ್ಟಣ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಫಣೀಂದ್ರ.ಎನ್.ಎಸ್.
- Hassan3 weeks ago
ಮಲಗಿದಲ್ಲಿಯೇ ವ್ಯಕ್ತಿ ಸಾವು
- Mysore3 weeks ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
- Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
- Mysore4 weeks ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
- Crime3 weeks ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
- State4 weeks ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ
- Crime2 months ago
ಚಾಮಲಾಪುರದ ಹುಂಡಿಯಲ್ಲಿಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿ!
- Hassan5 days ago
ಹಾಸನ ಹಾಸನಾಂಬೆ ದರ್ಶನದ ವೇಳೆ ಭಕ್ತರಿಗೆ ಕರೆಂಟ್ ಶಾಕ್ ಆಗಿ ನೂಕು ನುಗ್ಗಲು ಪ್ರಕರಣ