Uncategorized
ಅವಳಿ ಮಕ್ಕಳ ಸಾವಿಗೆ ತಾಯಿಯೇ ಹಂತಕಿ..!
ಶ್ರೀರಂಗಪಟ್ಟಣ: ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಮೃತಪಟ್ಟು, 3ವರ್ಷದ ಹೆಣ್ಣು ಮಗಳು ಹಾಗೂ ತಾಯಿ ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ತಾಯಿಯೇ ಐಸ್‌ಕ್ರೀಂ ನಲ್ಲಿ ವಿಷ ಪ್ರಾಶಾಣ ಬೆರಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪೂಜಾ ಮತ್ತು ಪ್ರಸನ್ನ ದಂಪತಿ ನಡುವೆ ಜಗಳ ಏರ್ಪಟ್ಟು ತಾಯಿಯೇ ಮಕ್ಕಳಿಗೆ ಐಸ್‌ಕ್ರೀಂನಲ್ಲಿ ಲಕ್ಷಣ ರೇಖೆ ಬೆರಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿ ತಿಳಿಸಿದ್ದಾರೆ.
ಬುಧವಾರ ಸಂಜೆ ಗ್ರಾಮಕ್ಕೆ ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಆರೋಪಿ ಪೂಜಾ ಖರೀದಿ ಮಾಡಿ, ಒಂದೂವರೆ ವರ್ಷದ ಅವಳಿ ಮಕ್ಕಳಾದ ತ್ರಿಶೂಲ್, ತ್ರಿಶಾ ಹಾಗೂ 3 ವರ್ಷದ ಮತ್ತೊಂದು ಹೆಣ್ಣು ಮಗುವಿಗೂ ನೀಡಿ ತಾನು ಸಹ ತಿಂದಿದ್ದಾಳೆ. ಐಸ್ ಕ್ರೀಂ ತಿಂದು ಅಸ್ವಸ್ಥರಾಗಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯ ಸಾವನ್ನಿಪ್ಪಿದ್ದು, ಪೂಜಾ ಹಾಗೂ ಶಿವರ್ಷದ ಹೆಣ್ಣುಮಗು ಅಸ್ವಸ್ಥಗೊಂಡು ಮಂಡ್ಯ ಜಿಲ್ಲಾಸತೆಗೆ ದಾಖಲಾಗಿದ್ದರು.
ಗ್ರಾಮದ ಇನ್ನೂ ಹಲವರು ಇದೇ ವಾಹನದಲ್ಲಿ ತಂದಿದ್ದ ಐಸ್ ಕ್ರೀಂ ಖರಿದಿಸಿ ತಿಂದಿದ್ದು, ಬೇರೆ ಯಾರಿಗೂ ಸಹ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ತಾಯಿ ಪೂಜಾ ಐಸ್ ಕ್ರೀಂ ಜೊತೆ ಮನೆಯಲ್ಲಿದ್ದ ಲಕ್ಷ್ಮಣ ರೇಖೆ ಪುಡಿ ಮಾಡಿ ಬೆರಸಿ ನೀಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Uncategorized
ನಾಗೇಶ್ ಆತ್ಮಹತ್ಯೆ ಪ್ರಕರಣ: ಪೊಲೀಸ್ ಪೇದೆ ಸಿದ್ದೇಶ್ ಅರೆಸ್ಟ್
ಚಿಕ್ಕಮಗಳೂರು: ಆಗಸ್ಟ್. 13 ರಂದು ನಡೆದ ಸಂಸೆ ಯುವಕ ನಾಗೇಶ್ ಆತ್ಮಹತ್ಯೆಗೆ ಘಟನೆಗೆ ಸಂಬಂಧಿಸಿದಂತೆ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ನನ್ನು ಅರೆಸ್ಟ್ ಮಾಡಲಾಗಿದೆ.

ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ನನ್ನು ಚಿಕ್ಕಮಗಳೂರು ಎಸ್ ಪಿ ರವರು ನೇಮಿಸಿದ್ದ ವಿಶೇಷ ತಂಡ ಗೋವಾದಲ್ಲಿ ಅರೆಸ್ಟ್ ಮಾಡಿದೆ ಎನ್ನಲಾಗಿದೆ.
Uncategorized
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: ಐವರ ಬಂಧನ
ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದವರ ಮೇಲೆ ಪೊಲೀಸರು ದಾಳಿ ನಡೆಸಿ, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮಾದಾಪುರ ಗ್ರಾಮದ ಕೂಸಣ್ಣ ಎಂಬುವವರ ಜಮೀನಿನ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಸಿದ್ದೇಶ್, ಮಹದೇವಪ್ರಸಾದ್, ಪ್ರಭುಸ್ವಾಮಿ, ಮಹದೇವಪ್ಪ, ಕೃಷ್ಣ ಎಂಬುವವರು ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿಯ ಮೇರಗೆ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಅವರು ದಾಳಿ ನಡೆಸಿ, ಸ್ಥಳದಲ್ಲಿದ್ದ 1,200 ರೂ, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಮೇಲೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
State
ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಇನ್ನಿಲ್ಲ*
ಬೆಂಗಳೂರು : ಆಗಸ್ಟ್ 14ರಂದು ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪಾಜಿಯವರು ಇಹಲೋಕ ತ್ಯಜಿಸಿದ್ದರು. ಇದೀಗ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಕೂಡ ಇದೀಗ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ತಾನೆ ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರು ಕಲ್ಬುರ್ಗಿಯಲ್ಲಿ ಶರಣಬಸವಪ್ಪ ಅಪ್ಪಾಜಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಇದೀಗ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈಗ ಅವರು ಇಂದು ಇಹಲೋಕಾ ತ್ಯಜಿಸಿದ್ದಾರೆ. ವಕ್ಸ್ ಬೋರ್ಡ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, “ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು” ಎಂದು ಹೇಳಿದ್ದರು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಇರುವ ವೇದಿಕೆಯಲ್ಲಿ, “ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಸಿಎಂ ಕುರ್ಚಿ ಬಿಟ್ಟುಕೊಡಬೇಕು” ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು.
-
Manglore13 hours agoತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಣ್ಣನೂ ಹೃದಯಾಘಾತಕ್ಕೆ ಬಲಿ
-
Hassan9 hours agoಹಾಸನ : ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿ :ಇಬ್ಬರು ಯುವಕರ ಧಾರುಣ ಸಾ*ವು
-
Mandya2 hours agoಮಹಿಳೆಯರಿಗೆ ಬಾಗಿನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ : ಮಾಜಿ ಸಚಿವ ಶ್ರೀರಾಮುಲು
-
Chamarajanagar12 hours ago*ಪ್ರೀತಿ ನಿರಾಕರಣೆ: ಚಾಕುವಿನಿಂದ ಇರಿದುಕೊಂಡ ಯುವಕ*
-
Hassan4 hours agoಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ
-
Manglore12 hours agoಬೆಳ್ತಂಗಡಿ: ವಿಜಯೇಂದ್ರ ನೇತೃತ್ವದಲ್ಲಿ ‘ಬಿಜೆಪಿ’ ಧರ್ಮಸ್ಥಳಕ್ಕೆ ಭೇಟಿ
-
Mysore6 hours agoಖಾಸಗಿ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿದ ಸೆಸ್ಕ್ ಎಂಡಿ
-
Kodagu8 hours agoಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ : ತಾಯಿ ಮಗು ಸುರಕ್ಷಿತ
