Crime
ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ
ಮೈಸೂರು : ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಪತಿಯೇ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕು ದೊಡ್ಡಹೊಮ್ಮ ಗ್ರಾಮದಲ್ಲಿ ನಡೆದಿದೆ.
ರೂಪ 35 ಮೃತ ದುರ್ದೈವಿ ಪತಿ ಪುರುಷೋತ್ತಮ್ 40 ಕೊಲೆ ಆರೋಪಿ. ಮೂಲತಃ ಯಳಂದೂರು ಕೆಸ್ತೂರು ಗ್ರಾಮದ ಪುರುಷೋತ್ತಮ್. ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜೊತೆ ವಿವಾಹವಾಗಿತ್ತು.
ಗಂಡ ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಆಗಾಗ ಗಲಾಟೆ
ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ
Crime
ಬೋಟಿಕ್ ತರಬೇತಿ ನೆಪದಲ್ಲಿ 12 ಲಕ್ಷ ರೂ. ವಂಚನೆ
ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ನೀಡಿ ವಿದೇಶಗಳ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ.
ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದ ಮಾಲಾ ಹಾಗೂ ಬಾಲಬೊಮ್ಮ ಆರೋಪಿಗಳು.
ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಸೇರಿದಂತೆ 8 ಮಂದಿ ವಂಚನೆಗೆ ಒಳಗಾಗಿದ್ದಾರೆ.

ಇವರಿಂದ ಆರೋಪಿಗಳು ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ ನಂಬಿಸಿ ತಲಾ 1 ಲಕ್ಷ ರೂ. ಹಣ ಪಡೆದು ಬಿಲ್ ನೀಡಿಲ್ಲ. ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime
ನನ್ನನ್ನೇ ಲವ್ ಮಾಡು ಚಿನ್ನ, ಇಲ್ಲಾಂದ್ರೆ ಇಡ್ತೀನಿ ಗುನ್ನ – ಇನ್ಸ್ಪೆಕ್ಟರ್ ಗೆ ಕಾಂಗ್ರೆಸ್ ಕಾರ್ಯಕರ್ತೆಯ ಚಿತ್ರಹಿಂಸೆ!
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ಇನ್ಸ್‌ಪೆಕ್ಟರ್ ಒಬ್ಬರ ಹಿಂದೆ ಬಿದ್ದು
ತನ್ನನ್ನೇ ಪ್ರೀತಿಸುವಂತೆ ಚಿತ್ರಹಿಂಸೆ ನೀಡಿ, ಆತ್ಮಹತ್ಯೆ ಬೆದರಿಕೆಯನ್ನೂ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ, ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ್ ಸತೀಶ್ ಕಿರುಕುಳಕೊಳಗಾದ ನೊಂದ ಪುರುಷರಾಗಿದ್ದು, ಅವರಿಗೆ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಸಂಜನಾ ಅಲಿಯಾಸ್ ವನಜಾ ವಿರುದ್ಧ ದೂರು ದಾಖಲಾಗಿದೆ. ನನ್ನ ಲವ್ ಮಾಡಬೇಕು ಇಲ್ಲ, ಅಂದರೆ ಆತ್ಮಹತ್ಯೆ ಮಾಡ್ಕೊತಿನಿ ಅಂತ ಕಿರುಕುಳ ನೀಡುತ್ತಿದ ಸಂಜನಾ ಪ್ರತಿದಿನ ವಿವಿಧ ಫೋನ್ ನಂಬರ್ ಗಳಿಂದ ಇನ್ಸ್ ಪೆಕ್ಟರ್ ಗೆ ಮಸೇಜ್
ಮಾಡುತ್ತಿದ್ದಳು, ಈಕೆಯ ಮೆಸೇಜ್ ನಿಂದ ಬೇಸತ್ತಿದ್ದ ಇನ್ಸ್‌ಕ್ಷ್ಯರ್ ಸತೀಶ್, ಸಂಜನಾ ಕರೆ ಮಾಡಲು ಬಳಸಿದ್ದ ಸುಮಾರು 11 ಫೋನ್ ನಂಬರ್ ಬಾಕ್ ಮಾಡಿದ್ದರು, ಮೊಬೈಲ್ ನಂಬರ್ ಬ್ಲ್ಯಾಕ್ ಮಾಡಿದ್ದರೆ, ಠಾಣೆಗೆ ಬಂದಿದ್ದ ವನಜಾ ಲವ್ ಲೆಟರ್ ನೀಡಿ, ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡ್ಕೊಂಡು ಸಾಯ್ತಿನಿ ಎಂದು ಬೆದರಿಕೆಯನೊಡಿದ್ದಳು,
ನಾನು ಕಾಂಗ್ರೆಸ್ ಕಾರ್ಯಕರ್ತನನಗೆ ಸಿಎಂ ಡಿಸಿಎಂ ಗೊತ್ತು ಎಂದು ಧಮಿ ಹಾಕಿದ ವನಜಾ, ಅಷ್ಟೂ ಸಾಲದೆಂಬಂತೆ ಮೋಟಮ್ಮ, ಲಕ್ಷ್ಮಿ ಹೆಬ್ಬಾರ್ ಜೊತೆಗಿನ ಫೋಟೊ ಕಳಿಸಿ
ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಳು, ಈಕೆಯ ಪ್ರಭಾವದಿಂದ ಗೃಹ ಸಚಿವರ
ಕಚೇರಿಯಿಂದಲೂ ಮಹಿಳೆ ದೂರು ತೆಗೆದುಕೊಳ್ಳುವಂತೆ ಕರೆ ಬಂದಿತ್ತು. ಆದರೆ ಅವರು
ಯಾವುದೇ ದೂರು ಕೊಟ್ಟಿಲ್ಲ ಎಂದು ಸತೀಶ್ ಉತ್ತರಿಸಿದ್ದರು.
ಇನ್ಸ್‌ಕ ಇಲ್ಲದಾಗ ಕಜ್ಜಾಯದ ಡಬ್ಬಿ ಬೊಕ್ಕೆ ತಂದು ಠಾಣೆಯಲ್ಲಿಟ್ಟಿದ, ವನಜಾ, ಲವ್ ಲೆಟರ್ ನೊಂದಿಗೆ Nexito plus ಎಂಬ ಮಾತ್ರೆಯನ್ನು ಸಹ ಇಟ್ಟಿದ್ದಳು, ನನ್ನ ಪ್ರೀತಿಯನ್ನು ನೀವು ಒಪ್ಪಲ ನಿಮಗೆ ತೊಂದರೆ ಕೊಡಲು ಇಷ್ಟ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,ನನ್ನ ಸಾವಿಗೆ ನೀವೆ ಕಾರಣ ಎಂದು ಬರೆದು ಜೊತೆಗೆ ಹಾರ್ಟ್ ಚಿತ್ರ
ಬರೆದು Chinni love u,u love me ಎಂದು ರಕ್ತದಲ್ಲಿ, ಪತ್ರ ಬರೆದಿದ್ದಳು,
ಈಕೆಯ ಕಾಟ ತಡೆಯಲಾರದೆ ಕೊನೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ , ಸ್ವತಃ ಪೊಲೀಸ್
ಠಾಣೆಯಲ್ಲಿ, ದೂರು ದಾಖಲಿಸಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಮತ್ತು ಕರ್ತವ್ಯ ಅಡ್ಡಿ ಮಾಡಿದ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime
ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲಿ ಸಾ**ವು
ಅರಕಲಗೂಡು :ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೆರೆಕೋಡಿ ಗ್ರಾಮದ ಅನಿಲ್ (28) ಹಾಗೂ ಹೊನ್ನೇಗೌಡ (30) ಎಂಬವರು ಮೃತ ದುರ್ದೈವಿಗಳು. ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ KA-13-F-2164 ನಂ.ದ ಸರ್ಕಾರಿ ಸಾರಿಗೆ ಬಸ್ ಮತ್ತು KA-13-HE-4883 ನೋಂದಣಿ ಸಂಖ್ಯೆಯ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

ಡಿಕ್ಕಿಯ ರಭಸಕ್ಕೆ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ ಹೊನ್ನೇಗೌಡ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಪ್ರಾಣಬಿಟ್ಟಿದ್ದಾರೆ. ರವಾನಿಸಲಾಯಿತಾದರೂ, ಅಷ್ಟರಲ್ಲೇ
ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
-
National23 hours agoದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್ಗೆ ಸುಪ್ರೀಂ ಎಚ್ಚರಿಕೆ
-
Hassan17 hours agoಎಸ್ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್ಡಿಪಿಐ ಮುಖಂಡ
-
Special17 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
State18 hours agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
-
Kodagu19 hours agoಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
-
Manglore23 hours agoಬೆಳ್ತಂಗಡಿ ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಉಜಿರೆಯ ಎಸ್ಡಿಎಂ ಆಸ್ಪತ್ರೆಗೆ ಭೇಟಿ
-
Hassan19 hours agoಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ಹೋಗಲಾಡಿಸಬೇಕು: ಕೆ. ಟಿ. ಮೇಘನಾ
-
Hassan19 hours agoಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆ: ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ
