Connect with us

Mysore

ಬಾಡಿಗೆದಾರರಿಂದಲೇ ಮನೆ ಕಳ್ಳತನ: ಪಿರಿಯಾಪಟ್ಟಣದಲ್ಲಿ ಜೋಡಿ ಖದೀಮರ ಬಂಧನ

Published

on

ಪಿರಿಯಾಪಟ್ಟಣ : ಮನೆಯ ಮಾಲೀಕರು ಊರಲ್ಲಿಲ್ಲದ ಸಮಯ ಸಾಧಿಸಿ ಬಾಡಿಗೆದಾರರೇ ದರೋಡೆ ಮಾಡಿರುವ ಆಘಾತಕಾರಿ ಘಟನೆಯೊಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಫೈನಾನ್ಸ್‌ನಲ್ಲಿ ಮಾರಿ ಹಣ ಬಚ್ಚಿಟ್ಟಿದ್ದ ಕಿಲಾಡಿ ದಂಪತಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಘಟನೆಯ ವಿವರ:

ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ನಿವೃತ್ತ ಶಿಕ್ಷಕ ನಾಗಯ್ಯ ಮತ್ತು ಮಂಜುಳಾ ದಂಪತಿಯ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಜೂನ್ 13 ರಂದು ಶಿಕ್ಷಕ ದಂಪತಿಗಳು ತಮ್ಮ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಇವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದ ಮಂಜುನಾಥ್ ಮತ್ತು ನಯನ ಎಂಬ ದಂಪತಿಗಳು ಜೋಡಿಯಾಗಿ ಕೈಚಳಕ ಪ್ರದರ್ಶಿಸಿದ್ದಾರೆ.

ಮನೆಯ ಬೀಗ ಮುರಿದು ಒಳನುಗ್ಗಿದ ಬಾಡಿಗೆದಾರರು, ಬೀರುವಿನಲ್ಲಿ ಇಟ್ಟಿದ್ದ 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಚಿನ್ನ ಮಾರಿ ಹಣ ಬಚ್ಚಿಟ್ಟಿದ್ದ ಖದೀಮರು:

ಮನೆಯಿಂದ ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ‘ಅರ್ಟಿಕ್ ಗೋಲ್ಡ್ ಫೈನಾನ್ಸ್’ನಲ್ಲಿ 6.8 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಬಂದ ಹಣವನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ನಗದನ್ನಾಗಿ ಮಾಡಿಕೊಂಡಿದ್ದರು.

ಪೊಲೀಸರ ಕಾರ್ಯಾಚರಣೆ, ಆರೋಪಿಗಳ ಬಂಧನ:

ಮನೆಗೆ ಮರಳಿದ ಶಿಕ್ಷಕ ದಂಪತಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದ ತಕ್ಷಣ, ಅವರು ಜೂನ್ 21 ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಬೈಲುಕೊಪ್ಪ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಾಡಿಗೆದಾರರಾದ ಮಂಜುನಾಥ್ ಮತ್ತು ನಯನ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Mysore

5.38 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ದೇವೀರಮ್ಮನಹಳ್ಳಿ ಬಡಾವಣೆಯನ್ನು ನಗರಸಭೆಗೆ ನಗರಸಭೆ ವ್ಯಾಪ್ತಿಗೆ ಹಸ್ತಾಂತರಿಸಿದ ಹಾಗಿದೆ, ನಗರಸಭೆ ವ್ಯಾಪ್ತಿಯ ಕೆಲವು ಲೇಔಟ್ ಗಳಲ್ಲಿ, ಚರಂಡಿ, ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕೆಲವೊಂದು ಬಡಾವಣೆಗಳಲ್ಲಿ ವಿಳಂಬ ಆಗಿದೆ. ಇದು ಬೇಸರದ ಸಂಗತಿಯಾಗಿದ್ದು. ಇವುಗಳ ಅಭಿವೃದ್ಧಿಗೆ ಸಹಕಾರ ಸಮಯ ಕೊಡಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ಇಂದು ಸೋಮವಾರ ನಂಜನಗೂಡು ನಗರದಲ್ಲಿ ರಾಮಶೆಟ್ಟಿ ಲೇಔಟ್ ನಲ್ಲಿ ಟಿ ಎಸ್ ಪಿ ಯೋಜನೆಯಲ್ಲಿ ₹ 25 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ಚನ್ನಪ್ಪ ಲೇಔಟ್ ನಗರ ಪ್ರದೇಶದಲ್ಲಿ ರಸ್ತೆ ಸಮತಟ್ಟು ಮತ್ತು ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ 1. 99 ಕೋಟಿ ರೂ ವೆಚ್ಚದಲ್ಲಿ ,PNT ಲೇಔಟ್ ನಗರ ಪ್ರದೇಶದಲ್ಲಿ ರಸ್ತೆ ಸಮತಟ್ಟು ಮತ್ತು ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ₹ 98 ಲಕ್ಷ ರೂ ವೆಚ್ಚದಲ್ಲಿ,ರಾಮಸ್ವಾಮಿ ಲೇಔಟ್ ನಲ್ಲಿ ರಸ್ತೆ ಸಮತಟ್ಟು ಮತ್ತು ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ 1. 51 ಕೋಟಿ ರೂ ವೆಚ್ಚದಲ್ಲಿ, ವಿಶ್ವಜ್ಯೋತಿ ಪ್ರದೇಶದಲ್ಲಿ ರಸ್ತೆ ಸಮತಟ್ಟು ಮತ್ತು ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ₹ 90 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 50 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ನಂಜನಗೂಡು ನಗರ ಪ್ರದೇಶಕ್ಕೆ 10 ಕೋಟಿ ಮೀಸಲಿಡಲಾಗಿತ್ತು.ನಗರ ಪಟ್ಟಣ ವ್ಯಾಪ್ತಿಯ ಮೂಲಸೌಕರ್ಯಕ್ಕೆ 1.99 ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಮಾಡಲಾಗಿದೆ. ಒಟ್ಟಾರೆ ಪಟ್ಟಣ ಪ್ರದೇಶ ವ್ಯಾಪ್ತಿಗೆ 5 ಕೋಟಿ 38 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತದೆ.

ನಗರದ ಹಲವು ಬಡಾವಣೆಗಳು ರೆವಿನ್ಯೂ ಬಡಾವನೆಗಳಾಗಿದ್ದವು. ನೂತನ ಬಡಾವಣೆಗಳಿಗೂ ಮೂಲಸೌಕರ್ಯಗಳನ್ನು ಒದಗಿಸಿಕೊಡಲಾಗುವುದು.

ಈಗಾಗಲೇ ನಗರಸಭೆ ವ್ಯಾಪ್ತಿ ಗೆ ಸೇರಿರುವ 31 ವಾರ್ಡುಗಳಲ್ಲಿ ಕ್ಯೂಆರ್ ಕೋಡ್ ಆಯೋಜಿಸಲಾಗಿದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಅದರ ಮೂಲಕ ಆದ್ರೂ ತಿಳಿಸಬಹುದು ಅಥವಾ ತಾಲೂಕು ಪಂಚಾಯಿತಿಯಲ್ಲಿ ಪ್ರತಿ ಸೋಮವಾರ ಭೇಟಿ ನೀಡುತ್ತೇನೆ ಅಲ್ಲಿಗೆ ಬಂದು ನಿಮ್ಮ ಸಮಸ್ಯೆಯನ್ನು ಬಗೆರಿಸಿಕೊಳ್ಳಬಹುದು, ಮತ್ತು ನನಗೆ ಫೋನ್ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಹೊಸ ಬಡಾವಣೆಗಳಲ್ಲಿ ಲೈಟ್ ಇಲ್ಲ ಎಂದು ಹೇಳಿದ್ದೀರಾ ಬಡಾವಣೆಗಳ ಸರ್ವೆ ಮಾಡಿಸಿ ಡಿಸಿ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಪಟ್ಟಣದ ಭರವಸೆಗಳು ನೀಡಿದರು. ನಗರಾಭಿವೃದ್ದಿ ಸಚಿವರಾಗಿದ್ದ ಅವತ್ತು ಈಶ್ವರ್ ಖಂಡ್ರೆ ಸಹಾಯ ಕೂಡ ಈ ಸಂದರ್ಭದಲ್ಲಿ ನೆನೆಯುವುದು ಆಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ನಗರಸಭಾ ಪೌರಯುಕ್ತರಾದ ಎಂ. ಬಸವರಾಜು, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ , ನಗರಸಭಾ ಮಾಜಿ ಸದಸ್ಯರುಗಳಾದ , ಗಾಯತ್ರಿ ಮೋಹನ್, ವಕೀಲರು ಮಹೇಶ್, ಗಂಗಾಧರ್, ರವಿ, ಬಸವರಾಜ್,ಯೋಗೀಶ್ , ಚಂದನಗೌಡ , ವಿಜಯ್ ಕುಮಾರ್ , ನಗರಸಭಾ ಮಾಜಿ ಉಪಾಧ್ಯಕ್ಷ ಮಂಜುನಾಥ್, ಹಗಿನವಾಳು ಬಸವಣ್ಣ, ಶ್ರೀರಾಂಪುರ ಕಮಲೇಶ್,ಮಹದೇವು, ದೇವೀರಮ್ಮಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು,ಇಂಜಿನಿಯರ್ ಯಶ್ವಂತ್ , ಶರಣ್, ಸೇರಿದಂತೆ ಮುಖಂಡರು ಅಧಿಕಾರಿಗಳು ಹಾಜರಿದ್ದರು.

Continue Reading

Mysore

ಬನ್ನೂರು ಈಶ್ವರ ದೇವಾಲಯ ಅಭಿವೃದ್ಧಿಗೆ ₹1 ಕೋಟಿ ಅನುದಾನ: ಸಂಸದ ಸುನೀಲ್ ಬೋಸ್

Published

on

ತಿ.ನರಸೀಪುರ:-ಶಿಥಿಲವಸ್ಥೆಯಲ್ಲಿರುವ ಈಶ್ವರ ದೇವಾಲಯದ ಗೋಪುರ ನಿರ್ಮಾಣ ಹಾಗೂ ಗಿರಿಜಾ ಕಲ್ಯಾಣ ಮಂಟಪವನ್ನು ಕೆಡವಿ ನೂತನವಾಗಿ ಕಲ್ಲಿನಿಂದ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 1 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.ತಾಲ್ಲೂಕಿನ ಬನ್ನೂರಿನ ದೇವಾಲಯದ ನಿರ್ಮಾಣ ಹಾಗೂ ಕಲ್ಯಾಣ ಮಂಟಪದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದರು.

ನಂತರ ಮಾತನಾಡಿ ಇತಿಹಾಸ ಪ್ರಸಿದ್ದ ಸ್ಥಳದ ಈ ಕ್ಷೇತ್ರವು ಎರಡು ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ಈಶ್ವರ ದೇವಾಲಯವು ಪ್ರಸಿದ್ದಿ ಪಡೆದ ದೇವಾಲಯವಾಗಿರುವುದರಿಂದ ಪುರಾತತ್ವ ಇಲಾಖೆಗೆ ಸೇರಿದೆ ಆದ್ದರಿಂದ ಇಲಾಖೆವತಿಯಿಂದ ಈಶ್ವರ ದೇವಾಲಯ ಗೋಪುರ ಶಿಥಿಲವಸ್ಥೆಯಲ್ಲಿರುವುದರಿಂದ ಇಟ್ಟಿಗೆ ಹಾಗೂ ಸುಣ್ಣದಿಂದ ಹಾಗೂ ಟೈಲ್ಸ್ ನಿಂದ ಗೋಪುರ ನಿರ್ಮಾಣ ಮಾಡಲಾಗುವುದು ಅಲ್ಲದೆ ಗಿರಿಜಾ ಕಲ್ಯಾಣ ಮಂಟಪವನ್ನು ನೂತನವಾಗಿ ಕಲ್ಲುಗಳಿಂದ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 1 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ,ಕೃಷ್ಣೆಗೌಡ, ಮುನವರ್ ಪಾಷಾ,ಎ.ಎನ್. ಸ್ವಾಮಿ,ಡಾ.ಜ್ಞಾನ ಪ್ರಕಾಶ್,ಬನ್ನೂರು ಶಿವು, ಪುರಾತತ್ವ ಇಲಾಖೆ ಸಿಬ್ಬಂದಿ,ಅಧಿಕಾರಿಗಳು,ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Continue Reading

Mysore

ನಂಜನಗೂಡು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಎ. ಪುಟ್ಟರಾಜು ಅಧಿಕಾರ ಸ್ವೀಕಾರ

Published

on

ವರದಿ:  ಮಹದೇವಸ್ವಾಮಿ ಪಟೇಲ್

ನಂಜನಗೂಡು : ರೋಟರಿ ಸಂಸ್ಥೆ ಹಲವಾರು ಸಮಾಜ ಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೈಜೋಡಿಸಿದೆ ಸಮಾಜದ ಎಲ್ಲಾ ಸ್ಧರಗಳಲ್ಲೂ ಧನಾತ್ಮಕ ಬದಲಾವಣೆ ಮಾಡಬೇಕೆಂಬ ಹಂಬಲದೊಂದಿಗೆ ಎರಡನೇ ಬಾರಿ ಹೆಜ್ಜೆ ಹಾಕಿದ್ದೇನೆ ಎಂದು ನೂತನ ಅಧ್ಯಕ್ಷ ಎ.ಪುಟ್ಟರಾಜು ತಿಳಿಸಿದರು.

ನಂಜನಗೂಡು ನಗರದ ಮಹದೇಶ್ವರ ಪ್ಯಾಲೇಸ್ ಭಾನುವಾರ ಸಂಜೆ ಆಯೋಜಿಸಲಾಗಿದ್ದ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನಿಯೋಜಿತ ಗೌರ್ನರ್ ಎಸ್. ಸೋಮಶೇಖರ್ ರವರು ನೂತನ ಅಧ್ಯಕ್ಷರಿಗೆ ಕಾಲರ್ ಅರ್ಪಿಸುವ ಮೂಲಕ ಪದಗ್ರಹಣ ನೆರವೇರಿಸಿದರು.

ನಂಜನಗೂಡು ರೋಟರಿ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ ಅವರು, ಈ ಬಾರಿ ರೋಟರಿ ಜಿಲ್ಲೆಯ 3181ರ ಎಲ್ಲಾ ದೂರದೃಷ್ಟಿಯ ಯೋಜನೆಗಳು ನಮ್ಮ ಕ್ಲಬ್ ನ ಮೂಲ ಯೋಜನೆಗಳ ದಿಕ್ಸೂಚಿಯಾಗಿದ್ದು ಅವುಗಳ ಯಶಸ್ಸು ನನ್ನ ಪ್ರಮುಖ ಕರ್ತವ್ಯವೆಂದು ಗುರಿ ಪಡಿಸುತ್ತೇನೆ.

2019-20 ನೇ ಸಾಲಿನಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿತ್ತು, ಆದರೆ ಮತ್ತೆ 2026-27 ಸಾಲಿನ ಸೇವೆ ಮಾಡಲು ಅವಕಾಶ ಕೊಟ್ಟಿದೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ.

ಸಂಧ್ಯಾ ಸುರಕ್ಷಾ ಹಿರಿಯ ನಾಗರೀಕರ ಶ್ರೇಯೋಭಿವೃದ್ಧಿಯ ನಿಟ್ಟಿನ ಹೆಜ್ಜೆ ಆಗಿರುತ್ತದೆ. ಸವ೯ರ ಆರೋಗ್ಯದ ಸುಧಾರಣೆಗೆ ರೋಟರಿ ಯೋಜನೆಗಳು ಮೂಲಕ ಕೊಡುಗೆಗಳಾಗಿರುತ್ತವೆ ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಿಯೋಜಿತ ಗೌರ್ನರ್ ಎಸ್. ಸೋಮಶೇಖರ್ ರವರು ನೂತನ ತಂಡಕ್ಕೆ ಶುಭ ಹಾರೈಸಿ ಮಾತನಾಡಿ ಕಳೆದ ಬಾರಿ ಅನಿಲ್ ಕುಮಾರ್ ಮತ್ತು ರಾಜಶೇಖರ್ ಮೂರ್ತಿ ತಂಡ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅದೇ ರೀತಿ ನೂತನ ಅಧ್ಯಕ್ಷರು ಎಲ್ಲರ ಸದಸ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು.

ಸಹಾಯಕ ಗೌರ್ನರ್ ಸುರೇಶ್, ಶ್ರೀಕಂಠ ಪ್ರಸಾದ್, ನೂತನ ಕಾರ್ಯದರ್ಶಿಗಳಾದ ಎನ್. ಶಿವಾನಂದ ಇವರುಗಳು ಮಾತನಾಡಿದರು. ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಚ್.ವಿ.ಮುರಳೀಧರ್, ನಿಕಟ ಪೂರ್ವ ಅಧ್ಯಕ್ಷ ಅನಿಲ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ರಾಜಶೇಖರ್ ಮೂರ್ತಿ, ರೋಟರಿ ಪಬ್ಲಿಕ್ ಇಮೇಜ್ ಡೈರೆಕ್ಟರ್ ಗಳು ಮುಂತಾದವರು ಉಪಸ್ಥಿತರಿದ್ದರು.

Continue Reading

Trending

error: Content is protected !!