Crime
ಕಾಡುಪ್ರಾಣಿಯ ಮಾಂಸ ಮಾರಾಟಕ್ಕೆ ಮುಂದಾಗಿದ್ದ ವ್ಯಕ್ತಿಯ ಬಂಧನ

ಪಿರಿಯಾಪಟ್ಟಣ: ಪ್ರಾದೇಶಿಕ ಅರಣ್ಯ ವಲಯದ ವಿಶೇಷ ಕರ್ತವ್ಯ ಶಾಖ ವ್ಯಾಪ್ತಿಯ ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಬಿ.ಎಂ ರಸ್ತೆಯ ಸಂತೆಮಾಳ ಬಳಿ ಅಕ್ರಮವಾಗಿ ಕಾಡು ಪ್ರಾಣಿಯ ಅಂದಾಜು 1 ಕೆ.ಜಿ ಮಾಂಸವನ್ನು ಆಟೊ ಸಂಖ್ಯೆ KA – 12 A – 1812 ರಲ್ಲಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ತಾಲೂಕಿನ ಕೋಗಿಲವಾಡಿ ಗ್ರಾಮದ ಪುಟ್ಟೇಗೌಡ ಎಂಬ ವ್ಯಕ್ತಿಯನ್ನು ಬಂಧಿಸಿ ತಲೆಮರಿಸಿಕೊಂಡ ಅದೇ ಗ್ರಾಮದ ಮತ್ತೋರ್ವ ಆರೋಪಿ ರವಿ ಎಂಬಾತನ ಬಂಧನಕ್ಕೆ ವನ್ಯಜೀವಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಕಿರಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಅರಣ್ಯ ರಕ್ಷಕರಾದ ಹರೀಶ್, ಪೃಥ್ವಿ, ಪೂರ್ಣಿಮಾ ಇದ್ದರು.
– ಬೆಕ್ಕರೆ ಸತೀಶ್ ಆರಾಧ್ಯ
Crime
ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆ; ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

ನಂಜನಗೂಡು: ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 39 ವರ್ಷದ ಮಹದೇವಸ್ವಾಮಿ ಮೃತ ದುರ್ಧೈವಿಯಾಗಿದ್ದಾನೆ. 40 ವರ್ಷದ ಸೋಮಯ್ಯ ಎಂಬುವವರ ಪತ್ನಿ ಜೊತೆ ಮಹದೇವಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದ ಎಂದು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಮಲಗಿದ್ದ ಮಹದೇವಸ್ವಾಮಿಯನ್ನು ಸೋಮಯ್ಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಸೋಮಯ್ಯ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿವೈಎಸ್ ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime
ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ – ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು

ಹಾಸನ : ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ
ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು
ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಎಲ್ಲರೂ ಪೊಲೀಸರ ವಶಕ್ಕೆ
ಅರ್ಪಿತಳನ್ನು ರಕ್ಷಿಸಿ ಕಿಡ್ನಾಪ್ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಹಾಸನ ನಗರ ಪೊಲೀಸ್ ಠಾಣೆಗೆ ಕರೆತರುತ್ತಿರುವ ಪೊಲೀಸರು
ಯುವತಿ ಅಪಹರಿಸಿ ಸೋಮವಾರಪೇಟೆ ಕಡೆ ಕರೆದೊಯ್ದಿದ್ದ ಖತರ್ನಾಕ್ ಕಿಡ್ನಾಪರ್ಸ್
ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಅರ್ಪಿತಾಳನ್ನು ಕರೆದೊಯ್ಯಲು ಯತ್ನಿಸುತ್ತಿದ್ದ ರಾಮು ಮತ್ತು ತಂಡ
ಅಪರಹರಣಕ್ಕೊಳಗಾಗಿದ್ದ ಅರ್ಪಿತಾಳನ್ನು ರಕ್ಷಿಸಿ ರಾಮು ಮತ್ತು ತಂಡವನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿರುವ ಪೊಲೀಸರು
Crime
ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ CIDಗೆ – ಇಂದಿನಿಂದಲೇ CID ಡ್ರಿಲ್

ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ
ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್ ವಿಫಲ
ಪ್ರಕರಣ ಮುಚ್ಚಿ ಹೋಗಬಹುದು ಸಾಧ್ಯತೆ ಹಿನ್ನಲೆ
ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ
ತಕ್ಷಣದಿಂದ ಜಾರಿಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಹತ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಿಐಡಿಗೆ ಸಲ್ಲಿಸಲು ಸೂಚನೆ
ಕೃಷ್ಣೇಗೌಡ ಹತ್ಯೆ ನಂತರ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು
ಪ್ರಮುಖ ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ಅವರಿಬ್ಬರ ಸುಳಿವು ಪತ್ತೆಯಲ್ಲಿ ಸಂಪೂರ್ಣ ವಿಫಲ
ಈ ನಡುವೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ
ಇಡೀ ರಾಜ್ಯದ ಗಮನ ಸೆಳೆದಿದ್ದ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ
ಪ್ರಕರಣದ ಗಂಭೀರತೆಗೆ ತಕ್ಕಂತೆ ತನಿಖೆ ನಡೆಯದಿರುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಚರ್ಚೆ
ಪ್ರಕರಣ ನಡೆದಾಗ ಇದ್ದ ಎಸ್ಪಿ ಹರಿರಾಂಶಂಕರ್ ವರ್ಗಾವಣೆ
ಆ ಸ್ಥಾನಕ್ಕೆ ಬಂದ ಮೊಹಮದ್ ಸುಜೀತಾ ಅವರಿಂದಲೂ ಆರೋಪಿಗಳ ಬಂಧಿಸುವಲ್ಲಿ ವಿಫಲ
ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan4 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore2 months ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore3 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ