Connect with us

Crime

ತಂದೆಯಿಂದಲೇ ಹಸುಗೂಸು ಕೊಲೆಯಾಗಿರುವ ಘಟನೆ

Published

on

ಮೈಸೂರು : ತಂದೆಯಿಂದಲೇ ಹಸುಗೂಸು ಕೊಲೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಮಾಕೊಡು ಗ್ರಾಮದಲ್ಲಿ ನಡೆದಿದೆ.

ಕೆರೆಗೆ ಎಸೆದು ಮಗು ಕೊಂದ ಪಾಪಿ ತಂದೆ ಗಣೇಶ್. ಮೂರು ಮಕ್ಕಳಿರುವ ಗಣೇಶ್ ಪತ್ನಿ ಸಾವನ್ನಪ್ಪಿದ್ದರು.
ಎರಡು ಹೆಣ್ಣು ಮಕ್ಕಳನ್ನು ಪತ್ನಿ ಲಕ್ಷ್ಮಿ ತಾಯಿ ಅಂಜನಮ್ಮ ನೋಡಿಕೊಳ್ಳುತ್ತಿದ್ದರು.ಗಂಡು ಮಗುವನ್ನು ನಾನು ಕೊಡುವುದಿಲ್ಲ ಅಂತ ಹೇಳಿ ಕರೆತಂದಿದ್ದ ಗಣೇಶ್.
ಹೆರಿಗೆ ವೇಳೆ ಮಗುವಿನ ತಾಯಿ ಮೃತಪಟ್ಟಿದ್ದರು.
ಬೆಂಗಳೂರಿನ ದೊಡ್ಡಸನ್ನೆ ಗ್ರಾಮದಲ್ಲಿ ವಾಸವಿದ್ದ ಗಣೇಶ್- ಲಕ್ಷ್ಮಿ.ಲಕ್ಷ್ಮಿ ಮೃತಳಾದ ಬಳಿಕ ಮಗುವಿನ ಜತೆ ಊರಿಗೆ ಬಂದು ವಾಸವಾಗಿದ್ದ.ತನ್ನ ತಾಯಿ ಜತೆ ವಾಸವಾಗಿದ್ದ ಗಣೇಶ್.

ಮಗುವಿನ ಹಾರೈಕೆಯನ್ನು ತಾಯಿ ಹೆಗಲಿಗೆ ಹೊರಿಸಿದ್ದ. ನಾಲ್ಕು ದಿನಗಳ ಹಿಂದೆ ತಾಯಿ ಜತೆ ಜಗಳವಾಡಿಕೊಂಡು‌ ಮಗು ತೆಗೆದುಕೊಂಡು ಹೋಗಿದ್ದ.ಬಳಿಕ ಕೆರೆಯಲ್ಲಿ ಬಿಸಾಡಿ ಕೊಲೆಗೈದಿದ್ದ.ಈ ಸಂಬಂಧ ಗಣೇಶ್ ಅತ್ತೆ ಅಂಜನಮ್ಮ ಅವರಿಂದ ದೂರು, ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Continue Reading
Click to comment

Leave a Reply

Your email address will not be published. Required fields are marked *

Crime

ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ವ್ಯಕ್ತಿ ಬಂಧನ

Published

on

ವಿರಾಜಪೇಟೆ : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಅಸ್ಸಾಂ ರಾಜ್ಯದ ಅಬ್ದುಲ್ ಮಜೀದ್ (31) ಬಂಧಿತ ಆರೋಪಿ. ಆರೋಪಿಯನ್ನು 300 ಗ್ರಾಂ ಗಾಂಜಾದೊAದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುವ ಹಿನ್ನೆಲೆ ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್ ಮೋಹನ್ ಕುಮಾರ್ ಹಾಗೂ ಇತರ ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಡಿ. 4 ರಂದು ಕಡಂಗಮರೂರು-ಬೆಳ್ಳುಮಾಡು ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

Chikmagalur

ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

Published

on

ಚಿಕ್ಕಮಗಳೂರು : ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

ನಾಯಿ ಮಾಲೀಕರ ಮೇಲೆ ಆಸಿಡ್ ದಾಳಿ ಮಾಡಿದ ಪಕ್ಕದ ಮನೆಯವರು

ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರನಿಂದ ನಾಯಿಗೆ ಬೈಗುಳ

ನಮಗೆ ಬೈಯುತ್ತಿದ್ದಾನೆ ಎಂದು ತಿಳಿದು ಆಸಿಡ್ ದಾಳಿ

ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ

ಸುಂದರ್ ರಾಜ್ ಎಂಬುವರ ಮೇಲೆ ಆಸಿಡ್ ದಾಳಿ

ಆಸಿಡ್ ದಾಳಿಗೊಳಗಾದ ಬಳಿಕ ಸುಂದರರಾಜ್ ಪರಿಸ್ಥಿತಿ ಗಂಭೀರ

ಎಡಗಣ್ಣಿಗೆ ಗಂಭೀರ ಗಾಯ, ಕಣ್ಣಿನ ಪದರ ಬದಲಿಸುವಂತೆ ವೈದ್ಯರ ಸೂಚನೆ

ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲು

ಜೇಮ್ಸ್, ಸುಂದರ್ ರಾಜ್ ಮೇಲೆ ಆಸಿಡ್ ದಾಳಿದ ವ್ಯಕ್ತಿ

ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಬೈಯುತ್ತಿರುವ ಆರೋಪ

ಸುಂದರಾಜ್ ಮೇಲಿನ ಸಿಟ್ಟಿನಿಂದ ಆಸಿಡ್ ನಿಂದ ದಾಳಿ ಮಾಡಿದ ಜೇಮ್ಸ್

ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Continue Reading

Crime

ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆ; ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

Published

on

ನಂಜನಗೂಡು: ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 39 ವರ್ಷದ ಮಹದೇವಸ್ವಾಮಿ ಮೃತ ದುರ್ಧೈವಿಯಾಗಿದ್ದಾನೆ. 40 ವರ್ಷದ ಸೋಮಯ್ಯ ಎಂಬುವವರ ಪತ್ನಿ ಜೊತೆ ಮಹದೇವಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದ ಎಂದು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಮಲಗಿದ್ದ ಮಹದೇವಸ್ವಾಮಿಯನ್ನು ಸೋಮಯ್ಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಸೋಮಯ್ಯ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿವೈಎಸ್ ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending