Mysore
ತಾಲೂಕಿನ ವಿವಿದೆಡೆಯ ಪಟಾಕಿ ಮಾರಾಟ ಅಂಗಡಿಗಳ ಮಾಲೀಕರ ಸಭೆ
ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಕುಂ ಇ ಅಹಮದ್ ನೇತೃತ್ವ ವಿವಿಧ ಇಲಾಖೆಗಳ ಸಮ್ಮುಖ ತಾಲೂಕಿನ ವಿವಿದೆಡೆಯ ಪಟಾಕಿ ಮಾರಾಟ ಅಂಗಡಿಗಳ ಮಾಲೀಕರ ಸಭೆ ನಡೆಯಿತು.
ಸಭೆಯಲ್ಲಿ ತಹಶೀಲ್ದಾರ್ ಕುಂ ಇ ಅಹಮದ್ ಅವರು ಮಾತನಾಡಿ ಸರ್ಕಾರ ಪಟಾಕಿ ಅಂಗಡಿಗಳಲ್ಲಿ ಕೇವಲ ಹಸಿರು ಪಟಾಕಿ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡದಂತಹ ಮತ್ತು ಶಬ್ದ ಮಾಲಿನ್ಯವಾಗದಂತಹ ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದು ಪಟಾಕಿ ಅಂಗಡಿಗಳ ಮಾಲೀಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪಟಾಕಿ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿರಿಯಾಪಟ್ಟಣ ಆರಕ್ಷಕ ಠಾಣೆ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಅವರು ಮಾತನಾಡಿ ಪಟಾಕಿ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಸಂಬಂಧಿಸಿದ ಇಲಾಖೆಗಳ ಮುಖಾಂತರ ಅನುಮತಿ ಪಡೆದಿರಬೇಕು ಹಾಗೂ ನಿರ್ಜನ ಪ್ರದೇಶಗಳಲ್ಲಿ ಅಗತ್ಯಕ್ಕನುಗುಣವಾಗಿ ಪಟಾಕಿ ದಾಸ್ತಾನು ಮಾಡಿಕೊಂಡು ತುರ್ತು ಅವಘಡ ಸಂದರ್ಭ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಕ್ತ ಕ್ರಮ ಅನುಸರಿಸುವಂತೆ ತಿಳಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಈ ಸಂದರ್ಭ ಶಿರಸ್ತೆದಾರ್ ಶಕೀಲಾ ಬಾನು, ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ, ಅಗ್ನಿಶಾಮಕ ಠಾಣೆ ಅಧಿಕಾರಿ ಹಾಗು ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಶೇಖರ್ ಮತ್ತು ತಾಲೂಕಿನ ವಿವಿದೆಡೆಯ ಪಟಾಕಿ ಮಾರಾಟ ಅಂಗಡಿಗಳ ಮಾಲೀಕರು ಇದ್ದರು.

ಬೆಕ್ಕರೆ ಸತೀಶ್ ಆರಾಧ್ಯ
Mysore
ಮಹಾರಾಜ ಕಾಲೇಜಿನಲ್ಲಿ ನೆಬೆ 40 ಸಮ್ಮಿಲನ
ಮೈಸೂರು: ನಗರದ ಮಹಾರಾಜ ಕಾಲೇಜಿನಲ್ಲಿ ೧೯೮೬ ರಲ್ಲಿ ಆಗ ಅಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ನೆಳಲು ಬೆಳಕು ತಂಡ ರಚಿಸಿಕೊಂಡಿದ್ದು, ಅವರು ಈಗ ರಾಜ್ಯ ಮಾತ್ರವಲ್ಲದೆ, ದೇಶ ವಿದೇಶಗಳಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ನೆಬೆ ೪೦ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸುಮಾರು ೫೦ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಅಂದಿನ ದಿನಗಳಲ್ಲಿ ತಾವು ಕಂಡ ಮಹಾರಾಜ ಕಾಲೇಜು, ಸ್ವಪ್ರೇರಿತರಾಗಿ ನೇಬೆ ತಂಡ ರಚಿಸಿಕೊಂಡು ನಾಟಕ, ಸಾಹಿತ್ಯ, ಕಲೆ, ಜಾನಪದ ಮೊದಲಾದ ಕ್ಷೇತ್ರಗಳಲ್ಲಿ ವಿವಿಧ ಚಟುವಟಕೆಗಳಲ್ಲಿ ತೊಡಗಿಕೊಂಡಿದ್ದುದು, ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಈ ತಂಡ ಹೇಗೆ ನೆರವಾಯಿತು, ಶತಮಾನೋತ್ಸವ ಭವನದ ಎದುರಿನ ಪಾರ್ಕ್ನಲ್ಲಿ ಇದಕ್ಕಾಗಿಯೇ ಕುಳಿತು ಚರ್ಚಿಸುತ್ತಿದ್ದ ಸುಮಧುರ ನೆನಪುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಕೇವಲ ತಮ್ಮ ಸಡಗರ ಸಂಭ್ರಮಕ್ಕೆ ಮಾತ್ರ ಮೀಸಲಿಡದೇ ಮಹಾರಾಜ ಕಾಲೇಜಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಕ, ರಂಗಭೂಮಿ ಮೊದಲಾದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ, ತರಬೇತಿ ನೀಡುವ ಮೂಲಕ ಕಾಲೇಜು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರುವಂತೆ ನೆರವಾಗುವ ಉದ್ದೇಶದಿಂದ ಕಾಲೇಜಿನ ಆಡಳಿತಾಧಿಕಾರಿ ಡಾ.ಎಚ್.ಟಿ. ರಾಮಚಂದ್ರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ. ವಿಜಯಲಕ್ಷ್ಮಿ ಹಾಗೂ ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಹಲವಾರು ವಿದ್ಯಾರ್ಥಿಗಳನ್ನೂ ಆಹ್ವಾನಿಸಿ, ಸಲಹೆ ಪಡೆಯಲಾಯಿತು.
ತಂಡದ ಹಿರಿಯ ಸದಸ್ಯ ಡಾ.ಎನ್.ವಿ. ವಾಸುದೇವ ಶರ್ಮ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜತೆಗೂಡಿ ಸಾಂಸ್ಕೃತಿಕ ಕಲೆಗಳ ಕುರಿತು ವಿವಿಧ ಕಾರ್ಯಕ್ರಮ ಆಯೋಜನೆ, ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಿರ್ದಿಷ್ಟ ವಿಷಯ, ವಿಚಾರಗಳ ಕುರಿತು ಕಾರ್ಯಾಗಾರ, ಸ್ಪರ್ಧೆಗಳ ಆಯೋಜನೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸಿರುವುದು ಸಂತಸ ತಂದಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದೆಂದರು.
ಮತ್ತೋರ್ವ ಹಿರಿಯ ಸದಸ್ಯ, ಹಿರಿಯ ರಂಗಕರ್ಮಿ ಶಶಿಧರ ಭಾರೀಘಾಟ್ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹ ತೋರಿದರೆ ಮಾರ್ಗದರ್ಶನಕ್ಕೆ ನಾವು ಸಿದ್ಧ, ನೆಬೆ ತಂಡದ ಅನೇಕರು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಹಲವರು ಮೈಸೂರಿನಲ್ಲಿ, ಇನ್ನಿತರೆಡೆ ಇದ್ದಾರೆ. ಇವರು ವಿದ್ಯಾರ್ಥಿಗಳಿಗೆ ಸೂಕ್ತವಾದ ದಿನ ಆಗಮಿಸಿ ತರಬೇತಿಯಂತಹ ನೆರವು ನೀಡಲಿದ್ದಾರೆಂದರು.
ಈ ವೇಳೆ ಹಿರಿಯ ರಂಗಕಮಿ ಎಚ್.ಎಸ್. ಉಮೇಶ್ ಮಾತನಾಡಿ, ನಮ್ಮನ್ನು ಹೊಸ ಹುರುಪಿಗೆ ಒಡ್ಡಿಕೊಳ್ಳಲು ರಂಗಭೂಮಿ ಚಟುವಟಿಕೆ ಅತ್ಯಗತ್ಯ, ಈ ರೀತಿಯ ಚಟುವಟಿಕೆಯಲ್ಲಿ ಒಂದೊಮ್ಮೆ ತೊಡಗಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದಿನ ತಲೆಮಾರಿನೊಡನೆ ಅನುಭವ ಹಂಚಿಕೊಂಡು ನೆರವಾಗಬಹುದಾಗಿದೆ. ನಂತರವೂ ಸಿಹಿ ಅನುಭವ ಮೆಲುಕು ಹಾಕುವುದು ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು.
ವಿಶ್ರಾಂತ ಪ್ರೊ.ಎ.ಎಂ. ಶಿವಸ್ವಾಮಿ, ಎಂ.ಟಿ. ಮಹಾದೇವ್, ಆನಂದರಾಜೇ ಅರಸ್, ಡಿ.ಜಿ. ಸುಮತಿ, ಬಿಂದು ಪಟೇಲ್, ಅಶ್ವತ ನಾರಾಯಣ, ಡಾ. ಸುಜಾತಾ ಭಾಸ್ಕರ್, ಹನ್ಸಾ ಜೈನ್, ಬಿ. ಮಹೇಶ್ ಹರವೆ ಸೇರಿದಂತೆ ಅನೇಕರು ಹಾಜರಿದ್ದರು.
Mysore
ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ
ಮೈಸೂರು: ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಗೆ ಕೇಂದ್ರ ಬಜೆಟ್ ಬಗ್ಗೆ ಸಂಕುಚಿತ ಭಾವನೆ ತೋರಿದರು.
ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ, ಕೇಂದ್ರದ ಬಜೆಟ್ ಬಗ್ಗೆ ಸಿಎಂ ಬಹಳ ಲಘುವಾಗಿ ಮಾತಾಡಿದ್ದಾರೆ.
ಖಾಲಿ ಚೆಂಬಿನ ಕ್ರೇಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ರಾಜ್ಯ ಸರ್ಕಾರ ಖಾಲಿ ಚೆಂಬನ್ನು ಎರಡು ವರ್ಷದಿಂದ ಜನರಿಗೆ ಕೊಡುತ್ತಿದೆ.
ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡಿದರು.

ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದರು ? ಅಂತ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಉತ್ತರವಿದೆ. ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆಯ ಘಟಕ ತೆರೆಯಲು 100 ಏಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂ ಗೆ ನಾನೇ ಪತ್ರ ಬರೆದಿದ್ದೇನೆ.
ನಾನು ನಾಟಕವಾಡಲು ಪತ್ರ ಬರೆದಿಲ್ಲ, ನಾಟಕವಾಡಲು ಪ್ರಧಾನಿಗಳು ನಂಗೆ ಈ ಸ್ಥಾನ ಕೊಟ್ಟಿಲ್ಲ, ರಾಜ್ಯದ ಕೈಗಾರಿಕಾ ಅಭಿವೃದ್ಧಿ ಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ, ಖಾಲಿ ಚೆಂಬು ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ, 16 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು 50 ಸಾವಿರ ಕೋಟಿ ರೂ. ಈಗ ಅದನ್ನು 63 ಸಾವಿರ ಕೋಟಿ ರೂ ಗೆ ಏರಿಸಲಾಗಿದೆ.
ವಿಶ್ವೇಶ್ವರಯ್ಯ ಸ್ಟಿಲ್ ಫ್ಯಾಕ್ಟರಿ ಪುನಶ್ಚೇತನಕ್ಕೆ 4 ರಿಂದ 5 ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ. ಎಚ್.ಎಂ.ಟಿ. ಕಂಪನಿ ಪುನರ್ ಆರಂಭಕ್ಕೆ ನಾನು ಬದ್ಧವಾಗಿದ್ದೇನೆ. ಅರಣ್ಯ ಇಲಾಖೆಯವರು ಎಚ್.ಎಂ.ಟಿ. ಕಂಪನಿ ಜಾಗ ನಮ್ಮದು ಎಂದು ತಕರಾರು ತೆಗೆದು ಕೊಂಡು ಕೂತಿದ್ದಾರೆ. ನಾನು ಏನೂ ಮಾಡಲಿ, ರಾಜ್ಯಕ್ಕೆ ಏನೂ ತರಬೇಕು ಎಂಬುದನ್ನು ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿ ಕೊಳ್ಳುವ ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿ ಕೊಡಿ ಎಂದು ಕೇಳಿದ್ದಿರಾ?
ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ.

ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ, ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಧಾನ ಮಂತ್ರಿಗಳನ್ನು ಬೀದಿಗೆ ಬಾಯಿಗೆ ಬಂದಂತೆ ಬೈಯ್ಯೋದು, ಅಮೇಲೆ ಪತ್ರ ಕಳಿಸೋದು. ಈ ವರ್ತನೆಯನ್ನು ರಾಜ್ಯ ಸರ್ಕಾರ ಬದಲಿಸಿ ಕೊಳ್ಳಬೇಕು. ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
Mysore
ರಾಜ್ಯ ಸರ್ಕಾರಕ್ಕೆ ನನ್ನ ಮೇಲೆ ಅಸೂಯೆ: ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
ಮೈಸೂರು: ನನ್ನ ಜೊತೆ ರಾಜ್ಯ ಸರ್ಕಾರಕ್ಕೆ ಮಾತಾಡಲು ಇಗೋ ಸಮಸ್ಯೆ ಇರಬಹುದು ಅಥವಾ ಅಸೂಯೆ ಭಾವನೆ ಇರಬಹುದು. ಜೆಡಿಎಸ್ ಮುಳುಗಿ ಹೋಯಿತು ಎಂದು ಕೊಂಡವರಿಗೆ ಜೆಡಿಎಸ್ ಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿದೆ. ಈ ಕಾರಣಕ್ಕೆ ಅಸೂಯೆ ಇರಬಹುದು ಎಂದರು,.
ಈ ಸಿಎಂಗೆ ಜಾಣ ಕಿವುಡು ಇದೆ. ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಎಬ್ಬಿಸಲು ಅಧಿಕಾರಕ್ಕೆ ಬಂದಿದೆ. ದಾಖಲೆ ಬಜೆಟ್ ಮಂಡಿಸಿ ರಾಜ್ಯವನ್ನು ಸಿಎಂ ದಿವಾಳಿ ಮಾಡುತ್ತಾರೆ. ಇವತ್ತಿನ ರಾಜ್ಯದ ಪರಿಸ್ಥಿತಿ ಗಮನಿಸಿದರೆ ನಾನು ಇಲ್ಲೇ ಇರಬೇಕಿತ್ತು ಅನ್ನಿಸುತ್ತಿದೆ.

ನಾನು ವಾಪಾಸ್ ಇಲ್ಲಿಗೆ ಬರುವ ಟೈಂ ಬಂದಾಗ ಬರ್ತಿನಿ, ಕುಟುಂಬ ರಾಜಕಾರಣದ ವಿಚಾರದಲ್ಲಿ ನನ್ನ ಕುಟುಂಬಕ್ಕೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಗಲಿಲ್ಲ. ಜೆಡಿಎಸ್ ನಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರು ಬೇಕಾದರೂ ಅಧ್ಯಕ್ಷರಾಗಲಿ ಎಂದು ಹೇಳಿದ್ದೇನೆ.
ಆದರೆ ಯಾರೂ ಸಿದ್ಧರಿಲ್ಲ, ನಾನು ಏನೂ ಮಾಡಲಿ,ಜೆಡಿಎಸ್ ಅನ್ನು ಸಿಎಂ ಟಾರ್ಗೆಟ್ ಮಾಡಿದ್ದಾರೆ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರನ್ನು ಯಾವ ರೀತಿ ಮುಗಿಸಬೇಕು. ಯಾವ ರೀತಿ ಇವರ ಚಾರಿತ್ತ್ಯ ಹರಣ ಮಾಡಬೇಕು ಎಂದು ಸಿಎಂ ಬಹಳ ಪ್ರಯತ್ನ ಮಾಡುತ್ತಿದ್ದಾರೆ.

ಕುಟುಂಬದ ಒಳಗೆ ನಡೆದ ಒಂದು ಪ್ರಕರಣ ವಿಚಾರದಲ್ಲಿ ಎಚ್.ಡಿ. ದೇವೇಗೌಡರನ್ನು ಮಾನಸಿಕವಾಗಿ ಕುಗ್ಗಿಸುವ ಬಹಳ ಪ್ರಯತ್ನ ಆಗಿದೆ. ದೇವೇಗೌಡರ ಗರಡಿಯಲ್ಲೆ ಬೆಳೆದ ಸಿದ್ದರಾಮಯ್ಯ ಈಗ ದೇವೇಗೌಡ ಕುಟುಂಬಕ್ಕೆ ಕೊಡುತ್ತಿರುವ ಕೊಡುಗೆ ಒಂದಾ ಎರಡಾ?
ವೀರಪ್ಪನ್ ಪ್ರಕರಣದಲ್ಲಿ ಪೊಲೀಸರಿಗೆ ಬಹುಮಾನ ರೂಪದಲ್ಲಿ ಹಣ ನೀಡಲಾಗಿತ್ತು. ಅದು ಬಿಟ್ಟರೆ ಹಾಸನದ ಕೇಸ್ ವಿಚಾರದಲ್ಲೇ ಸರ್ಕಾರ ಪೊಲೀಸರಿಗೆ 30 ಲಕ್ಷ ರೂ. ಬಹುಮಾನವಾಗಿ ಕೊಟ್ಟಿದೆಎಂದು ಹೇಳಿದರು.
-
Chamarajanagar16 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan14 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu14 hours agoಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
-
Uncategorized7 hours agoದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
-
Kodagu7 hours agoಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
-
Kodagu7 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Uncategorized7 hours agoಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
-
State8 hours agoಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
