Kodagu
ಮನೆಗೆ ನುಗ್ಗಿದ ರಾಕೇಟ್ ಪಟಾಕಿ ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ

ದೀಪಾವಳಿ ಹಬ್ಬಕ್ಕೆ ಹಚ್ಚಿದ ರಾಕೇಟ್ ಪಟಾಕಿ ಮನೆಯೊಳಗೆ ನುಸುಳಿದ ಪರಿಣಾಮ ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳು ಸುಟ್ಟು ನಷ್ಟಉಂಟಾಗಿರುವ ಘಟನೆ ವರದಿಯಾಗಿದೆ. ಮಡಿಕೇರಿಯ ಮಹದೇವಪೇಟೆ ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಾಲಯ ಮುಂಭಾಗದಲ್ಲಿ ಬಶೀರ್ ಎಂಬುವವರಿಗೆ ಸೇರಿದ ಕಟ್ಟಡವಿದ್ದು ಈ ಮನೆಯಲ್ಲಿ ನಯಾಜ್ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ. ರಾತ್ರಿ ಯಾರೋ ಬೆಂಕಿ ಹೊತ್ತಿಸಿ ಹಾರಿ ಬಿಟ್ಟ ರಾಕೇಟ್ ಪಟಾಕಿ ಮನೆಯ ಕಿಟಕಿ ಮೂಲಕ ಹಾದು ಬಂದು ಸಿಡಿದಿದೆ. ಇದರಿಂದ ಬಟ್ಟೆ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಂದಾಜು ರೂ. 15000 ನಷ್ಟ ಸಂಭವಿಸಿದೆ. ಮಾಹಿತಿ ಅರಿತು ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಸಂಭವನೀಯ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kodagu
ನಾಪೋಕ್ಲುವಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ನಗರದಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಶಾಸಕರ 15 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಪಶು ವೈದ್ಯಕೀಯ ಕಟ್ಟಡ ನಿರ್ಮಾಣಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ಸದಸ್ಯರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಕಂಗಾಂಡ ಶಶಿ ಮಂದಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟ್ಟಿರ ಕುಶು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ಕೆ.ವೈ.ಅಶ್ರಫ್, ಇಸ್ಮಾಯಿಲ್, ಕುಲ್ಲೇಟಿರ ಹೇಮಾವತಿ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ, ಸಹಾಯಕ ನಿರ್ದೇಶಕ ಕೆ.ಎ. ಪ್ರಸನ್ನ, ಪಶುವೈದ್ಯಾಧಿಕಾರಿ ಡಾ. ಶಿಲ್ಪ ಶ್ರೀ, ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಮಕ್ಕಿದಿವಾಕರ್ ನೆರವೇರಿಸಿದರು.
Kodagu
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ಪೂರ್ಣ


Kodagu
ಬಂದೂಕು ವಿನಾಯಿತಿ ಪ್ರಮಾಣ ಪತ್ರ : ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಿಎನ್‌ಸಿ ಸಲಹೆ

ಮಡಿಕೇರಿ: ಕೊಡವರು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಪಡೆಯಲು ಜಮ್ಮಾ ಪ್ರಮಾಣ ಪತ್ರಗಳನ್ನು ಅವಲಂಬಿಸುವ ಬದಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಲಹೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವ ಕೊಡವ ಸಮುದಾಯದ ಹಕ್ಕನ್ನು ಧಾರ್ಮಿಕ ಸಂಸ್ಕಾರವಾಗಿ ಸಂರಕ್ಷಿಸಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವ ಕ್ರಮ ಸಹಕಾರಿಯಾಗಲಿದೆ. ಕೊಡವ ಸಮುದಾಯದ ಸಂಪ್ರದಾಯ ಮತ್ತು ಹಕ್ಕುಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕೊಡವ ಜನಾಂಗ ಪ್ರಮಾಣ ಪತ್ರದ ಅಗತ್ಯವಿದೆ. ಕೊಡವ ಪ್ರಮಾಣ ಪತ್ರವು ಜಮ್ಮಾ ಹೊಂದಿರುವವರ ಪ್ರಮಾಣ ಪತ್ರಗಳನ್ನು ಅವಲಂಬಿಸದೆ ಬಂದೂಕು ವಿನಾಯಿತಿಯ ಹಕ್ಕನ್ನು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಜಮ್ಮಾ ಭೂಮಿಯನ್ನು ಖರೀದಿಸುವ ಮೂಲಕ ಅಥವಾ ಈ ಉದ್ದೇಶಕ್ಕಾಗಿ ಮಾತ್ರ ಕೊಡವ ಮಹಿಳೆಯರೊಂದಿಗೆ ವಿವಾಹವಾಗುವ ಮೂಲಕ ಕೊಡವರಲ್ಲದ ಹೊರಗಿನವರು ಬಂದೂಕು ವಿನಾಯಿತಿ ಸವಲತ್ತನ್ನು ಬಳಸಿಕೊಳ್ಳುವುದನ್ನು ತಡೆಯಬೇಕು. ಕೊಡವ ಸಮುದಾಯದ ಜಾನಪದ ಕಾನೂನು ವ್ಯವಸ್ಥೆಗಳು ಮತ್ತು ಆದಿಮಸಂಜಾತ ಏಕ-ಜನಾಂಗೀಯ ಗುರುತನ್ನು ಬಲಪಡಿಸಬೇಕು. ಕೊಡವ ಸಮುದಾಯದ ಅರ್ಹ ಸದಸ್ಯರು ಬಂದೂಕು ವಿನಾಯಿತಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ಮತ್ತು ಸುರಕ್ಷತೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನ ಹೊರಗಿನ ಕೆಲವು ವ್ಯಕ್ತಿಗಳು ಭಾಗಮಂಡಲದಲ್ಲಿ ಜಮ್ಮಾ ಭೂಮಿಯನ್ನು ಖರೀದಿಸಿ, ಜಮ್ಮಾಲ್ಯಾಂಡ್ ಒಕ್ಕಲುತನದ ನೆಪದಲ್ಲಿ ಬಂದೂಕು ಪರವಾನಗಿ ವಿನಾಯಿತಿ ಪ್ರಮಾಣಪತ್ರಗಳನ್ನು ಪಡೆದು ಬಂದೂಕುಗಳನ್ನು ಹೊಂದಿದ್ದರು. ಇದರಿಂದಾಗಿ ಆದಿಮಸಂಜಾತ ಕೊಡವರು ಮತ್ತು ಜಮ್ಮಾ ಒಕ್ಕಲುದಾರರಿಗೆ ಮಾತ್ರ ಇರುವ ಈ ಶಾಸನಬದ್ಧ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ರಾಜದ್ರೋಹ ಎಸಗಿದರು ಮತ್ತು ದುರುಪಯೋಗಪಡಿಸಿಕೊಂಡರು. ಇದನ್ನು ಇತ್ತೀಚೆಗೆ ಪೊಲೀಸ್ ಇಲಾಖೆಯೂ ಖಚಿತಪಡಿಸಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಕೊಡಗರು ಮತ್ತು ಕೊಡವ ಸರ್ಕಾರಿ ದಾಖಲೆಗಳಲ್ಲಿ ಕೊಡವ ಸಮುದಾಯದ ನಾಮಕರಣವನ್ನು ಸರಿಪಡಿಸುವಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಣಾಯಕ ಪಾತ್ರ ವಹಿಸಿದೆ. ಕೊಡಗರು ಎಂದು ತಪ್ಪಾಗಿದ್ದ ಕೊಡವ ನಾಮಕರಣದ ವಿಷಯವನ್ನು ಸಿಎನ್‌ಸಿ ಸಂಘಟನೆ 2008 ರಲ್ಲಿ ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಆಯೋಗದ (ಕೆಎಸ್‌ಬಿಸಿ) ಗಮನಕ್ಕೆ ತಂದಿತು. 2009 ರಲ್ಲಿ, ಸಿಎನ್‌ಸಿ ಸಮಾಜ ವಿಜ್ಞಾನಿ ಡಾ. ದ್ವಾರಕನಾಥ್ ನೇತೃತ್ವದ ಆಯೋಗಕ್ಕೆ, ಕೊಡವ ಜನಾಂಗೀಯ ಸಮುದಾಯದ ಜಾನಪದ ಸಂಪತ್ತನ್ನು ಅನಾವರಣಗೊಳಿಸುವ ಮೂಲಕ “ಕೊಡಗರು” ನಿಂದ “ಕೊಡವ” ಗೆ ನಾಮಕರಣವನ್ನು ಸರಿಪಡಿಸಲು ಮನವರಿಕೆ ಮಾಡಿತು. ನಮ್ಮ ಮನವಿಗೆ ಸ್ಪಂದಿಸಿದ ದ್ವಾರಕನಾಥ್ ಆಯೋಗವು ಕೊಡಗರು ಬದಲಿಗೆ ಕೊಡವರು ಎಂದು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.
ಆಯೋಗದ ಶಿಫಾರಸು ವರದಿಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ವಿಫಲವಾದಾಗ ಕೊಡವರ ಸಂವಿಧಾನಿಕ ಹಕ್ಕುಗಳನ್ನು ಅನುಷ್ಠಾನಗೊಳಿಸುವಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತು. ಹೈಕೋರ್ಟ್ ಅಂತಿಮ ಆದೇಶವನ್ನು ಕೂಡ ಪಾಲಿಸದ ಕಾರಣ ಕೊಡವ ನ್ಯಾಷನಲ್ ಕೌನ್ಸಿಲ್ ನ್ಯಾಯಾಂಗ ನಿಂಧನೆ ಪ್ರಕ್ರಿಯೆ ಮುಂದುವರಿಸಿತು. 14 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಹೈಕೋರ್ಟ್ ಮೆಟ್ಟಿಲೇರಿತು.
ಡಿಸೆಂಬರ್ 8, 2021 ರಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಹೊರಡಿಸಿದ ಹೈಕೋರ್ಟ್‌ನ ಅಂತಿಮ ತೀರ್ಪು ದ್ವಾರಕನಾಥ್ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿತ್ತು. ಸದರಿ ಹೈಕೋರ್ಟ್ ಆದೇಶವನ್ನು ಜಾತಿಗೆ ತರುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗುವುದರೊಂದಿಗೆ ಕೊಡವರ ದೀರ್ಘಕಾಲಿನ ಸಂವಿಧಾನಿಕ ಹಕ್ಕುಗಳನ್ನು ವಿಳಂಬಗೊಳಿಸುತ್ತಾ ಬಂತು. ಈ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಮುಂದುವರೆಸಿತು.
ಅಂತಿಮವಾಗಿ, ಸರ್ಕಾರವು ಡಿಸೆಂಬರ್ 2023 ರಲ್ಲಿ ಗೆಜೆಟ್ ಅಧಿಸೂಚನೆಯ ಮೂಲಕ ಬದಲಾವಣೆಯನ್ನು ಜಾರಿಗೆ ತಂದಿತು, ಸಮುದಾಯದ ಏಕ-ಜನಾಂಗೀಯ ಗುರುತನ್ನು “ಕೊಡವ” ಎಂದು ಗುರುತಿಸಿತು. ಈ ಸಾಧನೆಯು ಆದಿಮಸಂಜಾತ, ಏಕ-ಜನಾಂಗೀಯ ಕೊಡವ ಸಮುದಾಯದ ಗುರುತು, ಹಕ್ಕುಗಳು ಮತ್ತು ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಿಎನ್‌ಸಿಯ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಈ ದೀರ್ಘ ಕಾಲದ ಕಾನೂನು ಪ್ರಯಾಣದಲ್ಲಿ ಹೈಕೋರ್ಟ್ ವಕೀಲ ಬಲ್ಲಚಂಡ ಬೊಳ್ಳಿಯಪ್ಪ ಅವರು ಯಶಸ್ಸು ಸಾಧಿಸುವವರೆಗೂ ಬಂಡೆಯಂತೆ ನಿಂತರು.
ಸಾಂವಿಧಾನಿಕ ವಕೀಲರು ಮತ್ತು ಪ್ರಾದೇಶಿಕ ಸ್ವಾಯತ್ತತೆಯ ಪರಿಣಿತರಾದ ವಿಕ್ರಮ್ ಹೆಗ್ಡೆ ಅವರು ೨೦೨೨ ರ ಗನ್ ವಿನಾಯಿತಿ ಮೇಲ್ಮನವಿ ಪ್ರಕರಣ, ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 2925ರಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಪರವಾಗಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾಗುತ್ತಿದ್ದಾರೆ. ಇದರಲ್ಲಿ ತಾವು ಕೂಡ ಪ್ರತಿವಾದಿಯಾಗಿರುವುದಾಗಿ ಎನ್.ಯು.ನಾಚಪ್ಪ ವಿವರಿಸಿದ್ದಾರೆ.
-
Special10 hours ago
ಸೃಷ್ಟಿಯ ನಿಯಮವನ್ನು ಮೀರುವುದೆಂದರೆ ಇದೇ….?
-
Chamarajanagar5 hours ago
ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ
-
Chamarajanagar11 hours ago
ಮಹಿಳಾ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ
-
Hassan6 hours ago
ಮುಸುಕಿನ ಜೋಳಕ್ಕೆ ಬಿಳಿ ಸುಳಿ ರೋಗ: ರೈತರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ ಎ.ಎಸ್.ಪಾಟೀಲ್ ನಡಹಳ್ಳಿ
-
Mysore7 hours ago
ಮುಖ್ಯಮಂತ್ರಿ ಬದಲಾವಣೆ ವಿಚಾರ| ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ: ಎಚ್.ಸಿ.ಮಹದೇವಪ್ಪ
-
Mysore7 hours ago
ಸರ್ಕಾರದ ಸಾಧನೆಗಳ ಸಮಾವೇಶ, ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ ಎಚ್.ಸಿ.ಮಹದೇವಪ್ಪ
-
Kodagu4 hours ago
ಬಂದೂಕು ವಿನಾಯಿತಿ ಪ್ರಮಾಣ ಪತ್ರ : ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಿಎನ್‌ಸಿ ಸಲಹೆ
-
Hassan5 hours ago
ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವಕ್ತಿತ್ವದವರು ನಮ್ಮ ಜೊತೆ ಇರುವುದೇ ಒಂದು ಹೆಮ್ಮೆಯ ವಿಷಯ: ಕೆ.ಎಸ್. ಲತಾ ಕುಮಾರಿ