Chikmagalur
ಪಟಾಕಿ ಸಿಡಿದು ಓರ್ವ ಯುವಕ ಸಾವು, ಇಬ್ಬರಿಗೆ ಗಾಯ
ಚಿಕ್ಕಮಗಳೂರು : ಪಟಾಕಿ ಸಿಡಿದು ಓರ್ವ ಯುವಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರದೀಪ್ (30) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಪಟಾಕಿ ಸಿಡಿದ ರಭಸಕ್ಕೆ ಮೃತ ಯುವಕ ಪ್ರದೀಪ್ ನೆಲದಿಂದ 5 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಚೇರ್ ಕೆಳಗೆ ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿ ಇಟ್ಟುಕೊಂಡು ಕೂತಿದ್ದ ಎಂಬುದಾಗಿ ತಿಳಿದು ಬಂದಿದೆ.
ಪಟಾಕಿ ಕಿಡಿ ಸಿಡಿದು, ಚೀಲದಲ್ಲಿದ್ದ ಅಡಿಕೆಗೋಟು ಪಟಾಕಿ ಬ್ಲಾಸ್ಟ್ ಆಗಿ, ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರ ಪೆಟ್ಟು ಬಿದ್ದು, ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳಿಗೂ ಗಾಯವಾಗಿದ್ದು, ಓರ್ವ ಗಾಯಾಳುವನ್ನು ಮೃತ ಪ್ರದೀಪನ ಅಣ್ಣನ ಮಗ 6ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಆತನ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
Chikmagalur
ಲಾರಿ-ಬೈಕ್‌ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು : ಬೈಕಿಗೆ ತರಕಾರಿ ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ನಡೆದಿದೆ.
ಬಿದರಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 173ರ ಮೂಲಕ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಬೈಕಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮಂಜುನಾಥ್ (30) ಸ್ಥಳದಲ್ಲೇ ಹಸುನೀಗಿದ್ದಾನೆ. ಮೃತ ಮಂಜುನಾಥ್ ತನ್ನ ತಂದೆ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಬವಿಸಿದೆ. ಮೃತ ಯುವಕ ಮಂಜುನಾಥ್ ನನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಸಮೀಪದ ಬಾಳೆಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಿಂದ ಮೃತದೇಹವನ್ನು ಲಾರಿ ಸುಮಾರು 1 ಕಿ.ಮೀ. ದೂರದವರೆಗೂ ಎಳೆದೊಯ್ದ ಹಾಕಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Chikmagalur
ಧಾರಾಕಾರ ಮಳೆಗೆ ಗೋಡೆ ಕುಸಿದು ವ್ಯಕ್ತಿ ಸಾವು
ಚಿಕ್ಕಮಗಳೂರು : ಧಾರಾಕಾರ ಮಳೆಗೆ ಗೋಡೆ ಕುಸಿದುಬಿದ್ದು, ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಚ್ಚೇರಿ ಕೋಡಿಹಳ್ಳಿಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಲಚ್ಚಾನಾಯ್ಕ(80) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ಅನಾಹುತ ಸಂಭವಿಸಿದೆ. ಮಂಗಳವಾರ ಬೆಳಗ್ಗೆ ಲಚ್ಚಾನಾಯ್ಕ ಮನೆಯ ಹಿಂದಿನ ಶೌಚಾಲಯದಲ್ಲಿ ಇಟ್ಟಿದ್ದ ಕೋಲು ತೆಗೆದುಕೊಳ್ಳಲು ಹೋದ ಸಮಯದಲ್ಲಿ ಗೋಡೆ ಅವರ ಮೇಲೆ ಬಿದ್ದಿದೆ. ಗೋಡೆಯ ಕೆಳಗೆ ಸಿಲುಕಿದ್ದನ್ನು ಕಂಡು ಅವರ ಹೆಂಡತಿ ಕಾಳಿಬಾಯಿ ಕೂಗಿಕೊಂಡಿದ್ದಾರೆ. ತಕ್ಷಣ ನೆರೆಹೊರೆಯವರೆಲ್ಲ ಸೇರಿ ಗೋಡೆಯಡಿ ಸಿಲುಕಿದ್ದ ಲಚ್ಚಾನಾಯ್ಕ ಅವರನ್ನು ಹೊರತೆಗೆದರಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Chikmagalur
ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ನಿದನ
ಚಿಕ್ಕಮಗಳೂರು : ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು(87 ವರ್ಷ) ಇಂದು ಮುಂಜಾನೆ 12.20 ಕ್ಕೆ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ..
- Hassan3 weeks ago
ಮಲಗಿದಲ್ಲಿಯೇ ವ್ಯಕ್ತಿ ಸಾವು
- Mysore3 weeks ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
- Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
- Mysore4 weeks ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
- Crime3 weeks ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
- State4 weeks ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ
- Crime2 months ago
ಚಾಮಲಾಪುರದ ಹುಂಡಿಯಲ್ಲಿಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿ!
- Hassan5 days ago
ಹಾಸನ ಹಾಸನಾಂಬೆ ದರ್ಶನದ ವೇಳೆ ಭಕ್ತರಿಗೆ ಕರೆಂಟ್ ಶಾಕ್ ಆಗಿ ನೂಕು ನುಗ್ಗಲು ಪ್ರಕರಣ