Connect with us

National - International

೧ ವಾರ ಮುಂದೂಡಿಕೆ

Published

on

ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಪ್ರಮಾಣ ಪತ್ರದಲ್ಲಿ ಸಂಸದ
ಪ್ರಜ್ವಲ್ ರೇವಣ್ಣ ಅವರು ಆಸ್ತಿ ವಿವರ ಮುಚ್ಚಿಟ್ಟ ಆರೋಪ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಫೆ.೨೦(ಮಂಗಳವಾರ)ಕ್ಕೆ ಮುಂದೂಡಿದೆ.
ಇದೇ ದೂರಿನ ಬಗ್ಗೆ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಪ್ರಜ್ವಲ್ ಅವರ ಸಂಸತ್‌ಸ್ಥಾನ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು.
ಈ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಜ.೧೯ ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಇಂದು ಅಂತಿಮ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು.


ಹಾಗಾಗಿ ಇಂದಿನ ತೀರ್ಪು ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಹೇಳಿ ಕೇಳಿ ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ತೀರ್ಪು ಏನಾಗಲಿದೆ ಎಂದು ಬಹುತೇಕರು ಕಾಯುತ್ತಿದ್ದರು. ಆದರೆ ವಾರದ ನಂತರ ತೀರ್ಪು ಪ್ರಕಟಿಸುವುದಾಗಿ ಹೇಳಿ ಮುಂದೂಡಲಾಗಿದೆ.
ಒಂದು ವೇಳೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧೆ ಮಾಡಲು ಪ್ರಜ್ವಲ್‌ಗೆ ಅವಕಾಶ ಸಿಗುವುದಿಲ್ಲ.
ಹೀಗಾಗಿ ದೊಡ್ಡಗೌಡರ ಕುಟುಂಬದ ಪಾಲಿಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಮಹತ್ವ ಪಡೆದುಕೊಂಡಿದ್ದು, ಮತ್ತೊಂದು ವಾರ ಕುತೂಹಲ ಕಾಯ್ದಿರಿಸಿದೆ.

Continue Reading
Click to comment

Leave a Reply

Your email address will not be published. Required fields are marked *

National - International

ಹೆಲಿಕಾಪ್ಟರ್ ಪತನ: ಇರಾನ್ ಅಧ್ಯಕ್ಷ ಇಬ್ರಾಹಿಂ, ಸಚಿವ ಹುಸೇನ್ ಸೇರಿ ಹಲವರ ಸಾವು

Published

on

ಟೆಹ್ರಾನ್(ಇರಾನ್): ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವ ದಹನವಾಗಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ‌ ಮಾಡಿವೆ.
ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi), ಸಚಿವ ಹುಸೇನ್ ಅಮಿರ್ ಸೇರಿ ಎಂಟಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳ ವರದಿಗಳು ಹೇಳಿವೆ.
ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರೈಸಿ ನೆರೆಯ ರಾಷ್ಟ್ರವಾದ ಅಝರ್ಬೈಜಾನ್ನಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯಎವ್ ಜತೆ ಅಣೆಕಟ್ಟು ಉದ್ಘಾಟಿಸಿದ್ದರು. ಉಭಯ ರಾಷ್ಟ್ರಗಳು ಅರಾಸ್ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟು ಇದಾಗಿದೆ.
ರೈಸಿ ಅವರಿದ್ದ ಹೆಲಿಕಾಪ್ಟರ್‌ನೊಂದಿಗೆ ಪ್ರಯಾಣಿಸುತ್ತಿದ್ದ ಇತರ ಎರಡು ಬೆಂಗಾವಲು ಹೆಲಿಕಾಪ್ಟರ್‌ಗಳು ಸುರಕ್ಷಿತವಾಗಿ ಹಿಂದಿರುಗಿವೆ.
ಬೆಂಗಾವಲು ಹೆಲಿಕಾಪ್ಟರ್‌ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಹಲವಾರು ಇರಾನಿನ ಮಾಧ್ಯಮ ಚಾನೆಲ್‌ಗಳು, ರಕ್ಷಣಾ ತಂಡಗಳು ರೈಸಿಯ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆಮಾಡಿದ್ದವು. ಇರಾನ್ ಅಧ್ಯಕ್ಷ ಮತ್ತು ಅವರ ಸಹಚರರು ಬದುಕುಳಿದಿದ್ದಾರೆಯೇ ಎಂಬ ಮಾಹಿತಿಯನ್ನು ರೆಡ್ ಕ್ರೆಸೆಂಟ್ ನೀಡಿರಲಿಲ್ಲ. ಅಪಘಾತದ ಸ್ಥಳದಲ್ಲಿ ಯಾರೂ ಜೀವಂತವಾಗಿರುವ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇದೀಗ ಇಬ್ರಾಹಿಂ ರೈಸಿ ಮೃತಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

Continue Reading

National - International

Covid-19: ಸಿಂಗಾಪುರದಲ್ಲಿ ಕೊರೋನ ಸ್ಫೋಟ, ಒಂದೇ ವಾರದಲ್ಲಿ 25,900 ಕೇಸ್ ದಾಖಲು !! ಎಲ್ಲೆಡೆ ಮಾಸ್ಕ್ ಕಡ್ಡಾಯ !!

Published

on

Covid-19: ಮೇ 5 ರಿಂದ 11 ರವರೆಗೆ ಬರೋಬ್ಬರಿ 25,900 ಪ್ರಕರಣ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ಸಿಂಗಾಪುರ ಸರ್ಕಾರ(Singapura Government) ಮತ್ತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

Covid-19: ಕೋವಿಡ್ ಮಹಾಮಾರಿಯನ್ನು ಜನ ಮರೆತು ನೆಮ್ಮದಿಯಿಂದ ಜೀವನ ನಡೆಸುವಾಗಲೇ ಈ ರೋಗ ಮತ್ತೆ ಹೊಸ ರೂಪದಲ್ಲಿ ವಕ್ಕರಿಸಿಕೊಂಡು, ಸಿಂಗಾಪುರ(Singapura) ದಲ್ಲಿ ಸ್ಪೋಟಗೊಂಡಿದೆ.

ಹೌದು, 2020 ರಲ್ಲಿ ಎಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್ – 19(Covid-19) ಅಲೆ ಸಿಂಗಾಪುರದಲ್ಲಿ ಮತ್ತೆ ಹೊಸ ರೂಪದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಮೇ 5 ರಿಂದ 11 ರವರೆಗೆ ಬರೋಬ್ಬರಿ 25,900 ಪ್ರಕರಣ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ಸಿಂಗಾಪುರ ಸರ್ಕಾರ(Singapura Government) ಮತ್ತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಸಾವಿರಗಟ್ಟಲೆ ಪ್ರಕರಣ ದಾಖಲಾದ ಬಳಿಕ ಎಚ್ಚೆತ್ತು ಸಿಂಗಾಪುರ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ನೀಡಿದೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಜಸಂದಣಿಯಿಂದ ದೂರವಿರುವುದು, ಅನಾರೋಗ್ಯ, ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ವೈದ್ಯರು, ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಿದೆ.

ಇನ್ನು ಆರೋಗ್ಯ ಸಚಿವ ಓಂಗ್ ಯೆ ಕುಂಗಾ ಅವರು ‘ನಾವು ಹೊಸ ಅಲೆಯ ಆರಂಭಿಕ ಹಂತದಲ್ಲಿದ್ದೇವೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಅಲೆಯು ಉತ್ತುಂಗಕ್ಕೇರುತ್ತದೆ ಎಂದು ಊಹಿಸಲಾಗಿದೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ

ಇತ್ತ ಲಸಿಕೆಯಿಂದ ಅಡ್ಡಪರಿಣಾಮ ಕುರಿತು ವರದಿ ಬಹಿರಂಗವಾದ ಬಳಿಕ ಆತಂಕ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಕೋವಿಡ್ ಅಲೆ ಕಾಣಿಸಿಕೊಂಡಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

Continue Reading

National - International

ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಲು ಇಲ್ಲಿದೆ ಕ್ಷಣಾರ್ಧದ ಉಪಾಯ

Published

on

ಸಾಮಾನ್ಯವಾಗಿ ನಾವು ಪ್ರವಾಸವನ್ನು ಮಾಡುತ್ತೇವೆ. ದೂರದ ಸ್ಥಳಗಳಿಗೆ ಪ್ರಯಾಣಿಸಲು ಟ್ರೈನ್ ಟಿಕೇಟ್ ಗಳನ್ನು, ಅಥವಾ ಬಸ್ ಟಿಕೇಟ್ ಗಳನ್ನು ಬುಕ್ ಮಾಡುತ್ತೇವೆ. ಆದರೆ ಈಗ ನೀವು ತತ್ಕಾಲ್ ನಲ್ಲಿ ವೇಗವಾಗಿ ಹಾಗೂ ಸುಲಭವಾಗಿ ರೈಲು ಟಿಕೇಟ್ ಗಳನ್ನು ಬುಕ್ ಮಾಡಬಹುದು. ಕೆಳಗಿನಂತೆ ಟಿಕೇಟ್ ಬುಕ್ ಮಾಡಬಹುದಾಗಿದೆ.

ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ಮೂಲಕವೇ ಆನ್‌ಲೈನ್‌ನಲ್ಲಿ ರೈಲು ಟಿಕೇಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದಾಗಿದೆ.

ಕೆಲವೆ ಕೆಲವು ನಿಮಿಷಗಳಲ್ಲಿ ತತ್ಕಾಲ್ ನಲ್ಲಿ ಟಿಕೆಟ್ ಅನ್ನು ಬುಕಿಂಗ್ ಮಾಡಬಹುದು.

ಪ್ರಯಾಣಕ್ಕೆ ಒಂದು ದಿನ ಮೊದಲೇ ತತ್ಕಾಲ್ ವೆಬ್ ಸೈಟ್ ಓಪನ್ ಇರುತ್ತದೆ.

ಕಡಿಮೆ ಖರ್ಚಿನ ಪ್ರಯಾಣಕ್ಕೆ ರೈಲು ಹೆಸರುವಾಸಿಯಾಗಿದೆ. ನೀವು ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ನ ಮೂಲಕ. ಯಾವಾಗ ಬೇಕಾದರೂ ಯಾವ ರೈಲನ್ನು ಬೇಕಾದರೂ ಬುಕ್ ಮಾಡಬಹುದು. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಬೇಕಾದ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಮಗೆ ಬಹಳಷ್ಟು ಉಪಯೋಗವಾಗಲಿದೆ.

ಬುಕಿಂಗ್ ವ್ಯವಸ್ಥೆ

ನಾವು ಪ್ರಯಾಣಿಸುವ ಒಂದು ದಿನದ ಮೊದಲೇ ಟಿಕೇಟ್ ಬುಕ್ ಮಾಡಿಕೊಂಡು ನಮ್ಮ ಸೀಟ್ ಅನ್ನು ದೃಢೀಕರಿಸಿ ಕೊಳ್ಳಬಹುದು. ಆದರೆ ಕೆಲವರು ಐಆರ್‌ಸಿಟಿಸಿಯ ತತ್ಕಾಲ್ ನಲ್ಲಿಯೂ ಸಹ ಟಿಕೇಟ್ ಬುಕ್ ಆಗುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವು ಟಿಕೇಟ್ ಬುಕ್ ಮಾಡುವಾಗ ಮಾಡುವ ತಪ್ಪುಗಳು ಇರಬಹುದು ಎನ್ನುತ್ತಾರೆ.

ನೀವು ತತ್ಕಾಲ್ ನಲ್ಲಿ ಟಿಕೇಟ್ ಬುಕ್ ಮಾಡುವಾಗ ಈ ಅಂಶಗಳನ್ನು ಗಮನಿಸಬೇಕು.

ನೀವು ಪ್ರಯಾಣಿಸುವ ಮಾಡಬೇಕಿರುವ ಸ್ಥಳಕ್ಕೆ ಒಂದು ದಿನದ ಮುಂಚೆಯೇ ಟಿಕೇಟ್ ಬುಕ್ ಮಾಡಿಕೊಳ್ಳಬೇಕು.

ಮುಖ್ಯವಾಗಿ ಬೆಳಗ್ಗೆ 10 ಗಂಟೆಗೆ ತತ್ಕಾಲ್‌ನ ಎಸಿ ಕೋಚ್ಗಳ ಬುಕಿಂಗ್ ಆರಂಭವಾಗುತ್ತದೆ.

ಸಾಮಾನ್ಯ ಕೋಚ್ ಗಳ ಟಿಕೇಟ್ ಗಳು ಬೆಳಗ್ಗೆ 11 ಗಂಟೆಗೆ ಓಪನ್ ಆಗುತ್ತೇವೆ.

ಆನ್ಲೈನ್ ಅಲ್ಲಿ ಟಿಕೇಟ್ ಬುಕ್ ಮಾಡುವ ವಿಧಾನ ಇಲ್ಲಿದೆ.

ನಿಮ್ಮ ಮೊಬೈಲ್ ನಲ್ಲಿ ಐ‌ಆರ್‌ಸಿ‌ಟಿ‌ಸಿ ಯನ್ನು ಓಪನ್ ಮಾಡಿಕೊಳ್ಳಿ, ನಂತರ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿ. ನಿಮ್ಮ ಐ‌ಆರ್‌ಸಿ‌ಟಿ‌ಸಿ ಖಾತೆ ಇಲ್ಲದಿದ್ದರೆ, ಸೈನ್ ಅಪ್ ಮಾಡಿ ಲಾಗಿನ್ ಆಗಿ. ನಿಮಗೆ ಬುಕಿಂಗ್ ಶೋ ಆಗುತ್ತದೆ. ಪ್ರಯಾಣದ ದಿನಾಂಕ, ನೀವು ತಲುಪಬೇಕಾದ ನಿಲ್ದಾಣ, ರೈಲು ಮತ್ತು ವರ್ಗವನ್ನು ಸರಿಯಾಗಿ ಭರ್ತಿ ಮಾಡಿ. ನಂತರ ಪೇಮೆಂಟ್ ಮಾಡಿ. ಹಣ ಪಾವತಿಯ ಕೂಡಲೇ ಟಿಕೇಟ್ ಬುಕ್ ಆಗುತ್ತದೆ. ನಂತರ ನೀವು ಟಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

Continue Reading

Trending

error: Content is protected !!