Kodagu
ನಿರಂತರ ವೈದ್ಯಕೀಯ ಶಿಕ್ಷಣ ಅರಿವು ಕಾರ್ಯಕ್ರಮ
ಮಡಿಕೇರಿ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ಕಿವಿ–ಮೂಗು–ಗಂಟಲು ವಿಭಾಗವು “ಅಂಡ್ವಾನ್ಸ್ ಇ.ಎನ್.ಟಿ. 2026”ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮಟ್ಟದ ವಿವಿಧ ವೈದ್ಯಕೀಯ ಸಂಸ್ಥೆಗಳ ಕಿವಿ–ಮೂಗು–ಗಂಟಲು ತಜ್ಞರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.
ಈ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವು ಕಿವಿ–ಮೂಗು–ಗಂಟಲು ವೈದ್ಯಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಬೆಳೆಯುತ್ತಿರುವ ಪರಿಕಲ್ಪನೆಗಳ ಮೇಲೆ, ಸಾಕ್ಷ್ಯಾಧಾರಿತ ಚಿಕಿತ್ಸಾ ವಿಧಾನಗಳು ಹಾಗೂ ತಾಂತ್ರಿಕ ನವೀನತೆಗಳಿಗೆ ವಿಶೇಷ ಒತ್ತಡ ನೀಡಿತು.

ಶೈಕ್ಷಣಿಕ ಅಧಿವೇಶನಗಳಲ್ಲಿ ಆಂಟೀರಿಯರ್ ಸ್ಕಲ್ಬೇಸ್ ಚಿಕಿತ್ಸೆ (ಮುಂಭಾಗದ ಕಪಾಲದ ತಳ), ಕೊಕ್ಲಿಯರ್ ಇಂಪ್ಲಾಂಟ್‍ಗಳು, ಅಲರ್ಜಿಕ್ ರೈನೈಟಿಸ್ ನಿರ್ವಹಣೆ, ಎಂಡೋಸ್ಕೋಪಿಕ್ ಸೈನಸ್ ಶಸ್ತ್ರಚಿಕಿತ್ಸೆಯ ಹೊಸ ಆಯಾಮಗಳು, ತಲೆ ಮತ್ತು ಕಂಠ ಕ್ಯಾನ್ಸರ್‌ಗಳ ನಿರ್ವಹಣೆ ಹಾಗೂ ಓಟಾಲಜಿ ಮತ್ತು ರೈನಾಲಜಿ ಕ್ಷೇತ್ರದ ಸಮಕಾಲೀನ ದೃಷ್ಟಿಕೋನಗಳು ಕುರಿತು ವಿವರವಾಗಿ ಚರ್ಚಿಸಲಾಯಿತು. ಮೂಗಿನ ಮೂಲಕ ಮೆದುಳಿಗೆ ಮಾಡುವ ಕನಿಷ್ಠ ಭೇದಿಸುವ ಸ್ಕಲ್ಬೇಸ್ ಶಸ್ತ್ರಚಿಕಿತ್ಸೆಗಳ ಪ್ರದರ್ಶನಗಳು ಪ್ರತಿನಿಧಿಗಳಲ್ಲಿ ವಿಶೇಷ ಆಸಕ್ತಿಯನ್ನು ಹುಟ್ಟಿಸಿತು.
ಫ್ರೋರ್ಟೀಸ್ ಆಸ್ಪತ್ರೆ, ಬನ್ನರುಘಟ್ಟ ರಸ್ತೆ, ಬೆಂಗಳೂರಿನಿಂದ ಆಗಮಿಸಿದ ಖ್ಯಾತ ತಜ್ಞರಾದ ಡಾ. ಹೆಚ್.ಕೆ.ಸುಶೀನ್ ದತ್ತ್, ಡಾ. ಆಶೀಶ್ ರಾವ್ ಮತ್ತು ಡಾ.ಅಭಿಷೇಕ್ ಶುಭೋದಯ್ ಅವರು ಸೂಚನೆಗಳು, ಶಸ್ತ್ರಚಿಕಿತ್ಸಾತಂತ್ರಗಳು, ಫಲಿತಾಂಶಗಳು ಮತ್ತು ಸಂಭವನೀಯ ತೊಡಕುಗಳ ಕುರಿತು ಆಳವಾದ ಉಪನ್ಯಾಸಗಳನ್ನು ನೀಡಿ, ಪ್ರಕರಣಾಧಾರಿತ ಚರ್ಚೆಗಳು ಹಾಗೂ ಅಧಿವೇಶನಗಳ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು.
ಕೊಕ್ಲಿಯರ್ ಇಂಪ್ಲಾಂಟ್‍ಗೆ ಅರ್ಹತೆ, ಶಸ್ತ್ರಚಿಕಿತ್ಸೆಯ ಸೂಕ್ಷ್ಮಾಂಶಗಳು, ಇಂಪ್ಲಾಂಟ್ ನಂತರದ ಪುನಶ್ಚೇತನ ಹಾಗೂ ಅಲರ್ಜಿಕ್ರೈನೈಟಿಸ್ ನಿರ್ವಹಣೆಯ ಇತ್ತೀಚಿನ ಮಾರ್ಗಸೂಚಿಗಳು ವಿಶೇಷ ಗಮನಾರ್ಹ ವಿಷಯಗಳಾಗಿದ್ದವು. ಸ್ಕಲ್ಬೇಸ್ ಶಸ್ತ್ರಚಿಕಿತ್ಸೆ ಮತ್ತು ತಲೆ–ಕಂಠ ಕಾನ್ಸರ್ ಗಳಲ್ಲಿ ಬಹು ಶಾಖಾಸಹಕಾರ, ವಿವರವಾದ ಶರೀರ ರಚನಾ ಅರಿವು ಹಾಗೂ ಕನಿಷ್ಠ ಭೇದಿಸುವ ಶಸ್ತ್ರಚಿಕಿತ್ಸಾ ತಂತ್ರಗಳ ಪ್ರಗತಿ ಕುರಿತು ಚರ್ಚಿಸಲಾಯಿತು.

ಈ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (ಕೆ.ಎಂ.ಸಿ) ಮಾರ್ಗಸೂಚಿಗಳ ಪ್ರಕಾರ ನಡೆಸಲಾಗಿದ್ದು, ಭಾಗವಹಿಸಿದ ಪ್ರತಿನಿಧಿಗಳಿಗೆ 2 ನಿರಂತರ ವೈದ್ಯಕೀಯ ಶಿಕ್ಷಣ ಕ್ರೆಡಿಟ್ ಅಂಕಗಳನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ದೊರೆತ ಭರ್ಜರಿ ಪ್ರತಿಕ್ರಿಯೆ, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಿವಿ–ಮೂಗು–ಗಂಟಲು ಕ್ಷೇತ್ರದಲ್ಲಿ ನಿರಂತರ ಶೈಕ್ಷಣಿಕ ನವೀಕರಣದ ಅಗತ್ಯವನ್ನು ಸ್ಪಷ್ಟಪಡಿಸಿತು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಲೋಕೇಶ್ ಎ.ಜೆ. ಡೀನ್ ಹಾಗೂ ನಿರ್ದೇಶಕರು, ಡಾ. ವಿಶಾಲ್ ಕುಮಾರ್ ಪ್ರಾಂಶುಪಾಲರು, ಡಾ.ಸೋಮಶೇಖರ್ ಹೆಚ್.ಕೆ. ವೈದ್ಯಕೀಯ ಅಧೀಕ್ಷಕರು, ಡಾ.ನಂಜುಡಯ್ಯ ಎನ್. ಜಿಲ್ಲಾ ಶಸ್ತ್ರಚಿಕಿತ್ಸಾಕರು, ಕೆ.ಎಂ.ರೋಹಿಣಿ ಬಸವರಾಜ್ ಮುಖ್ಯ ಆಡಳಿತಾಧಿಕಾರಿಗಳು, ಡಾ.ಅಭಿನಂದನ್ ಬಿ.ವಿ.ಸ್ಥಾನೀಯ ವೈದ್ಯಾಧಿಕಾರಿಗಳು ಮತ್ತು ಡಾ.ಧನಂಜಯ್ ಕುಮಾರ್ ಎಸ್.ಎಂ, ಸ್ಥಾನೀಯ ವೈದ್ಯಾಧಿಕಾರಿಗಳು ಇವರಿಗೆ ಆಯೋಜನಾ ಸಮಿತಿಯು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿತು. ಜೊತೆಗೆ, ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಸಹಕರಿಸಿದ ಕಿವಿ, ಮೂಗು, ಗಂಟಲು ವಿಭಾಗದ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಮೂಲ್ಯ ಸೇವೆಯನ್ನು ವಿಶೇಷವಾಗಿ ಸ್ಮರಿಸಲಾಯಿತು.
ಈ ನಿರಂತರ ವೈದ್ಯಕೀಯ ಶಿಕ್ಷಣವನ್ನು ಕಿವಿ, ಮೂಗು, ಗಂಟಲು ವಿಭಾಗದ ಆಯೋಜನಾ ಸಮಿತಿ ಅತ್ಯಂತ ಸಮರ್ಪಣೆ ಮತ್ತು ವ್ಯವಸ್ಥಿತ ಯೋಜನೆಯೊಂದಿಗೆ ಆಯೋಜಿಸಿತು. ಡಾ. ಶ್ವೇತ ಸಮಿತಿಯ ಅಧ್ಯಕ್ಷಕರು, ಡಾ.ನಳಿನ ಪಿ.ಎ. ಕಾರ್ಯದರ್ಶಿ, ಡಾ. ಸತ್ಯಾಕಿ ಡಿ.ಸಿ.ಖಜಾಂಚಿ ಮತ್ತು ಡಾ.ರಾಜಶ್ರೀ ಕೆ.ಟಿ., ಜಂಟಿ ಕಾರ್ಯದರ್ಶಿ, ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶೈಕ್ಷಣಿಕ ಕಾರ್ಯಕ್ರಮ ಡಾ. ಮೋನಿಶ್ ಡಿ.ಯು, ವೈಜ್ಞಾನಿಕ ಸಂಶೋಜಕರು, ಸಮರ್ಥವಾಗಿ ಸಂಯೋಜಿಸಿದ್ದು, ಡಾ.ರಮಶ್ರೀ ಅವರು ನೋಂದಣಿ ಮತ್ತು ಸ್ವಾಗತ ಕಾರ್ಯಗಳನ್ನು ನಿರ್ವಹಿಸಿದರು. ಆಯೋಜನಾ ಸಮಿತಿಯ ಸಮನ್ವಯಿತ ತಂಡ ಕಾರ್ಯ ಮತ್ತು ಅಚಲ ಶ್ರಮ ಈ ನಿರಂತರ ವೈದ್ಯಕೀಯ ಶಿಕ್ಷಣದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ವೈದ್ಯಕೀಯ ಕೌಶಲ್ಯವೃದ್ಧಿ, ಶೈಕ್ಷಣಿಕ ಶ್ರೇಷ್ಠತೆ ಹಾಗೂ ರೋಗಿ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ, ಜೊತೆಗೆ ವೈದ್ಯರು ಮತ್ತು ವಿದ್ಯಾರ್ಥಿಗಳ ನಡುವೆ ವೃತ್ತಿಪರ ಸಂವಾದ ಮತ್ತು ಆಲೋಚನೆಗಳ ವಿನಿಮಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತವೆ ಎಂದು ಆಯೋಜನಾ ಸಮಿತಿ ಅಭಿಪ್ರಾಯಪಟ್ಟಿತು. ಕಾರ್ಯಕ್ರಮವು ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
Kodagu
ವಾಹನದ ಮೂಲ ಸ್ವರೂಪವನ್ನು ಬದಲು – ತನಿಖೆ
ಮಡಿಕೇರಿ : ನಗರದಲ್ಲಿ ಜಿಪ್ಸಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 ತನಿಖೆ ಕೈಗೊಳ್ಳಲಾಗಿದೆ.

ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಾಯಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿಕೊಂಡು ವಾಹನಗಳು ಸಂಚರಿಸುತ್ತಿರುವುದಾಗಿ ಹಾಗೂ ಸಂಖ್ಯೆ ಕೆಎ01ಎನ್ಜಿ2730ರ ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ರೇಸಿಂಗ್ ಸ್ಪೀಡ್‌ನಲ್ಲಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಅದರಂತೆ ಪಿ.ಎಸ್.ಐ. ಮಡಿಕೇರಿ ಸಂಚಾರಿ ಠಾಣೆಯವರು ಇಂದು ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿಯವರಾದ ಬಾಬು ಎಲ್ ಹಾಗೂ ಸುನಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪಿನಲ್ಲಿ ಮಡಿಕೇರಿ ನಗರದಲ್ಲಿ ರೌಂಡ್ಸ್ ಮಾಡಿಕೊಂಡು ವಾಪಾಸ್ಸು ಠಾಣೆಯ ಕಡೆಗೆ ಬರುತ್ತಿರುವಾಗ್ಗೆ ಮೈತ್ರಿ ಜಂಕ್ಷನ್ ಬಳಿ ತಲುಪುವಾಗ್ಗೆ ಸಮಯ 9:00 ಗಂಟೆಗೆ ಎಫ್.ಎಂ.ಸಿ. ಕಾಲೇಜು ಕಡೆಯಿಂದ ನಗರದ ಕಡೆಗೆ ಕೆಎ01ಎನ್ಜಿ 2730 ರ ಜಿಪ್ಸಿ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಸೈಲೆಸರ್‌ನಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಅಪಾಯಕರ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದು, ಕೂಡಲೇ ನಾವುಗಳು ಜೀಪನ್ನು ಬದಿಗೆ ನಿಲ್ಲಿಸಿ ಸದರಿ ವಾಹನವನ್ನು ತಡೆದು ಪರಿಶೀಲಿಸಿದಾಗ ಸದರಿ ಜಿಪ್ಪಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಸದರಿ ಜಿಪ್ಪಿ ಚಾಲಕ ಜಿಪ್ಪಿ ವಾಹನದ ಮೂಲ ಸ್ವರೂಪವನ್ನು ಬದಲಾಯಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಂಡಿರುತ್ತೀರಾ ಎಂದು ಕೇಳಿದಾಗ ಯಾವುದೇ ಅನುಮತಿಯನ್ನು ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಮುಂದಿನ ಕ್ರಮದ ಬಗ್ಗೆ ಸದರಿ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 . ತನಿಖೆ ಕೈಗೊಳ್ಳಲಾಗಿರುತ್ತದೆ.
ಯಾವುದೇ ವಾಹನಗಳ ಆರ್.ಸಿ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡುವುದು ಅಥವಾ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್, ಹಾರ್ನ್ ಗಳನ್ನು ಅಳವಡಿಸಿಕೊಳ್ಳುವುದು, ವೀಲಿಂಗ್ ಮಾಡಿಕೊಂಡು ಚಾಲನೆ ಮಾಡುವವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
Kodagu
ಗುಡುಗಳಲೆ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಿದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ
ಶನಿವಾರಸಂತೆ: ಜಾತ್ರೆಗಳು ಸಮೂದಾಯ, ಆಚರಣೆ, ಪರಂಪರೆಯನ್ನು ಸಮ್ಮೀಲನಗೊಳಿಸುವ ವೇದಿಕೆಯಾಗುತ್ತದೆ ಎಂದು ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಸಮಿಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಗುಡುಗಳಲೆಯ 82ನೇ ವರ್ಷದ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಆಶೀವ್ರರ್ಚಿಸುತ್ತಿದ್ದರು.

ರೈತರು ಜಾನುವಾರುಗಳನ್ನು ಕೊಂಡುಕೊಳ್ಳಲು ಮತ್ತು ಮಾರಾಟ ಮಾಡುವ ಸಲುವಾಗಿ ಈ ಭಾಗದಲ್ಲಿ 82 ವರ್ಷಗಳ ಹಿಂದೆ ಹಿರಿಯರು ಜಾನುವಾರುಗಳ ಜಾತ್ರೆಯನ್ನು ಸ್ಥಾಪಿಸಿದರು. ಜೊತೆಗೆ ಜನರಿಗೆ ಮನೋರಂಜನೆಯನ್ನು ಒದಗಿಸಿಕೊಡುವ ಸಲುವಾಗಿ ಜಾತ್ರೆಯನ್ನು ವೈಭವದಿಂದ ನಡೆಸಲಾಗುತ್ತಿತ್ತು. ಆದರೆ ಈಗಿನ ವೈಜ್ಞಾನಿಕ ಮತ್ತು ಆಧುನಿಕ ಭರಾಟೆಯಲ್ಲಿ ರೈತರು ವ್ಯವಸಹಾಯಕ್ಕೆ ಯಂತ್ರೋಪಕರಣಗಳ ಮೊರೆ ಹೋಗುತ್ತಿರುವುದ್ದರಿಂದ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗುತ್ತಿದ್ದು ಈ ಜಾತ್ರೆಯ ಹಿಂದಿನ ವೈಭವ ಮರೆಯಾಗುತ್ತಿರುವುದು ಬೇಸರದ ವಿಷಯವಾಗಿದೆ ಎಂದರು.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಾಂಧವ್ಯಗಳನ್ನು ಬೆಸೆಯುವ ಸಮೂದಾಯದ ಸಮ್ಮೀಲನಗಳ ಕೊರತೆಯಿಂದಾಗಿ ಆಚರಣೆ, ಪರಂಪರೆ, ಜಾತ್ರೋತ್ಸವಗಳು ಕಮ್ಮಿಯಾಗುತ್ತಿರುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯವರು ಆಚರಣೆ, ಪರಂಪರೆಯನ್ನು ರೂಢಿಸಿಕೊಂಡು ಜಾತ್ರೋತ್ಸವಗಳನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ-ಜಾತ್ರೆಯು ಮನೋರಂಜನೆಗೆ ಸೀಮಿತವಾಗಿಲ್ಲ ರೈತರ ಉಪಯೋಗಕ್ಕಾಗಿ ಸ್ಥಾಪಿಸಿದ್ದ ಜಾನುವರುಗಳ ಜಾತ್ರೆಯನ್ನು ಉಳಿಸಿಕೊಳ್ಳಲು ರೈತರು ಜಾನುವಾರುಗಳ ಸಾಕಾಣಿಕೆಯನ್ನು ಮಾಡುವುದರ ಮೂಲಕ ಈ ಜಾತ್ರೆಯ ಹಿಂದಿನ ವೈಭವವನ್ನು ಮತ್ತೆ ಮರುಕಳುಹಿಸುವಂತೆ ಮಾಡಬೇಕು ಎಂದು ಹೇಳಿದರು. ಜಾತ್ರೋತ್ಸವಗಳು ಧಾರ್ಮಿಕ, ಆದ್ಯಾತ್ಮಿಕ ಚಿಂತನೆಗೂ ಮತ್ತು ಜನರು ಸುಖ-ದುಖ:ಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗುತ್ತದೆ ಎಂದರು.

ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಚಂದ್ರು ಚಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಜಾತ್ರೋತ್ಸವಗಳು ಸಾರ್ವಜನಿಕವಾಗಿ ನಡೆಯುವುದ್ದರಿಂದ ಇಂತಹ ಉತ್ಸವಗಳು ಸಾಂಗವಾಗಿ ನಡೆಯಬೇಕಾಗುತ್ತದೆ ಜಾತ್ರೆ ಯಶಸ್ವಿಗೊಳ್ಳಬೇಕಾದರೆ ಪೊಲೀಸ್ ರಕ್ಷಣೆಯೂ ಬೇಕಾಗುತ್ತದೆ ಸಾರ್ವಜನಿಕರು, ಪೊಲೀಸ್‌ರಿಗೆ ಸಹಕಾರ ನೀಡಿದರೆ ಜಾತ್ರೋತ್ಸವವು ಯಶಸ್ವಿಗೊಳ್ಳುತ್ತದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಹಿರಿಯ ಮುಖಂಡ ಎಸ್.ಕೆ.ವೀರಪ್ಪ ಹಿಂದಿನ ಜಾತ್ರೆಯ ವೈಭವದ ಬಗ್ಗೆ ಮಾತನಾಡಿದರು. ಜಾತ್ರಾ ಸಮೀತಿ ಅಧ್ಯಕ್ಷೆ ಚೈತ್ರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಸಮಾರಂಭದಲ್ಲಿ ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು, ಪ್ರಮುಖರಾದ ಮಾಜಿ ತಾ.ಪಂ.ಸದಸ್ಯ ಕುಶಾಲಪ್ಪ, ಕೆ.ಬಿ.ಹಾಲಪ್ಪ, ಡಿ.ಬಿ.ಧರ್ಮಪ್ಪ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಪ್ರಮುಖರಾದ ಎಸ್.ಎಂ.ಉಮಾಶಂಕರ್, ಜಾತ್ರಾ ಸಮೀತಿ ಕಾರ್ಯದರ್ಶಿ ಎಚ್.ಎಂ.ವಿನಯ್, ಎಚ್.ಎನ್.ಸಂದೀಪ್ ಜಾತ್ರಾ ಸಮೀತಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ಗುಡುಗಳಲೆ ಜಂಕ್ಸನ್‌ನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿ ಮೆರವಣಿಯು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಜಾತ್ರಾ ಮೈದಾನವನ್ನು ತಲುಪಿತು.
Kodagu
ಕುಡಿಯ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಎಲ್ಲೆಡೆ ಪಸರಿಸಿ: ಮಹೇಶ್ ನಾಚಯ್ಯ


-
Cinema20 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan1 hour agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan1 hour agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State4 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Mandya5 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Manglore15 minutes agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
National3 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Hassan23 hours agoವಿಜೃಂಭಣೆಯಿಂದ ಜರುಗಿದ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ
