Connect with us

Mandya

ಸಂವಿಧಾನ ಬದಲಿಸುವ ಶಕ್ತಿಯನ್ನ ದೂರ ಇಡಿ: ಎಲ್‌.ಸಂದೇಶ್‌

Published

on

ಮಂಡ್ಯ: ದಲಿತರಿಗೆ ಮಾತ್ರ ಮೀಸಲಾತಿ ಸವಲತ್ತಿದೆ ಎಂಬ ಭಾವನೆ ಹೋಗಬೇಕು, ಸಂವಿಧಾನ ಬದಲಾಯಿಸುವ ದುಷ್ಟಶಕ್ತಿಗಳನ್ನು ಅಧಿಕಾರದಿಂದಲೇ ದೂರ ಇಡಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದುಳಿದವರ ರಾಜಕೀಯ ಸಮಾಲೋಚನೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದೊರೆಯುತ್ತಿರುವ ಮೀಸಲಾತಿ ಮುಂದುವರಿಯ ಬೇಕಾದರೆ ಸಂವಿಧಾನದ ಸಂರಕ್ಷಣೆ ಅಗತ್ಯವಾಗಿದೆ, ದಲಿತರಿಗೆ ಮಾತ್ರವೇ ಮೀಸಲಾತಿ ಸವಲತ್ತಿದೆ ಎಂಬ ಭಾವನೆ ಹೋಗಬೇಕು. ಸಂವಿಧಾನ ವಿರೋಧಿಶಕ್ತಿಗಳ ವಿರುದ್ಧದ ರಾಜಕೀಯ ಹೋರಾಟದಲ್ಲಿ ಹಿಂದುಳಿದವರು ಮುಖ್ಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮತ್ತು ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳು ಒಗ್ಗೂಡಬೇಕು. ರಾಜಕೀಯ ಸೂಕ್ಷ್ಮತೆಗಳನ್ನು ಗ್ರಹಿಸಿ ಚುನಾವಣಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂವಿಧಾನ ಬದಲಾಯಿಸುವ ದುಷ್ಟಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ರಾಜ್ಯದಲ್ಲಿ 2.20 ಕೋಟಿ ಜನಸಂಖ್ಯೆ ಇದ್ದರೂ ಹಿಂದುಳಿದವರನ್ನು ಪ್ರತಿನಿಧಿಸುವ ಒಬ್ಬರು ಸಂಸದರಿಲ್ಲ ಎಂದು ವಿಷಾದಿಸಿದರು.

ರಾಷ್ಟ್ರೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುಳಿದವರ ಮೀಸಲಾತಿಯನ್ನು ಘೋಷಿಸಬೇಕು. ಜಾತಿವಾರು ಸಂಘಟನೆ ಮತ್ತು ನಾಯಕತ್ವಕ್ಕೆ ನೀಡಿದಷ್ಟೇ ಆದ್ಯತೆಯನ್ನು ವರ್ಗಗಳ ಬಲವರ್ಧನೆಗೂ ನೀಡಬೇಕು. ಹಿಂದುಳಿದವರು ಹಿಂಜರಿಕೆ ಬಿಟ್ಟು ಚುನಾವಣಾ ನಾಯಕತ್ವ ವಹಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ವಿಶ್ವಕರ್ಮ ಸೇವಾ ಟ್ರಸ್ಟ್‌ ಎಚ್.ವಿ.ಸತೀಶ್,
ಮಳವಳ್ಳಿ ಪ್ರಕಾಶ್, ಸವಿತಾ ಸಮಾಜದ ಪ್ರತಾಪ್, ಎಂ.ಎನ್.ರಾಜಣ್ಣ, ಗಾಣಿಗ ಸಂಘದ ಪುಟ್ಟಸ್ವಾಮಿ, ಮಡಿವಾಳ ಸಮಾಜದ
ಡಿ.ರಮೇಶ್, ಸಿ.ಸಿದ್ದಶೆಟ್ಟಿ, ದೊಂಬಿದಾಸ ಕ್ಷೇಮಾಭಿವೃದ್ಧಿ ಸಂಘದ ಶಂಕರಯ್ಯ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಎಚ್ಡಿಕೆ ಮಂಡ್ಯದಲ್ಲಿ ಅಬ್ಬರದ ಪ್ರಚಾರ

Published

on

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ – ಜೆಡಿಎಸ್ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಪ್ರಚಾರದ ಕೊನೆಯ ದಿನ ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿಪ್ರದರ್ಶಿಸಿದರು.

ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ನಡೆಸಿದ ಹೆಚ್‍.ಡಿ ಕುಮಾರಸ್ವಾಮಿಗೆ ಅಪಾರ ಜನಸ್ತೋಮ ಬೆಂಬಲ ಸೂಚಿಸಿತು.

ಮಂಡ್ಯ ವಿಶ್ವವಿದ್ಯಾನಿಲಯ ಆವರಣದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆಗೂಡಿ ರೋಡ್ ಶೋ ಮೂಲಕ ಮತಯಾಚನೆಗೆ ಹೊರಟ ಮೈತ್ರಿ ಪಕ್ಷದ ಅಭ್ಯರ್ಥಿಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಜಯ ಘೋಷ ಮೊಳಗಿಸಿ ಹರ್ಷೋದ್ಗಾರದ ನಡುವೆ ಪುಷ್ಪಾರ್ಚನೆ ಮೂಲಕ ಹೆಜ್ಜೆ ಹಾಕಿದರು. ಅಪಾರ ಜನಸ್ತೋಮದ ನಡುವೆ ತೆರೆದ ವಾಹನದಲ್ಲಿ ಕೈ ಮುಗಿದು ನನ್ನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.


ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಹಿರಂಗ ಪ್ರಚಾರದ ಕೊನೆಯ ದಿನ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ಶಕ್ತಿಪ್ರದರ್ಶಿಸುವ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿಗೆ ಅಣಿಯಾಗಿದ್ದಾರೆ.

Continue Reading

Mandya

ಕಾಂಗ್ರೆಸ್ ಪಕ್ಷದಿಂದ ಬೈಕ್ ರ್‍ಯಾಲಿ

Published

on

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಎರು ಮಂಡ್ಯದಲ್ಲಿ ಬೈಕ್ ರ್‍ಯಾಲಿ ಮೂಲಕ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಜೊತೆಗೂಡಿ ಕೊನೆಯ ದಿನದ ಪ್ರಚಾರ ಮಾಡಿದರು.

ನಗರದ ಕಾರಿಮನೆ ಗೇಟ್ ನಿಂದ ಬೈಕ್ ರ್‍ಯಾಲಿ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ನಾಯಕರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಯ ಚಾಮರಾಜೇಂದ್ರ ಒಡೆಯರ್ ವೃತ್ತ, ಆರ್ ಪಿ ರಸ್ತೆ, ಅಂಬೇಡ್ಕರ್ ರಸ್ತೆ ಯಲ್ಲಿ ಮತಯಾಚಿಸಿ ಹೊಸಹಳ್ಳಿಯಲ್ಲಿ ಪ್ರಚಾರ ಮಾಡಿದರು.

ಕಾಂಗ್ರೆಸ್ ಪಕ್ಷ ಜನರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನತೆಗೆ ಸವಲತ್ತು ದೊರಕಿಸಿಕೊಟ್ಟಿದೆ, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Continue Reading

Mandya

ಕುಮಾರಸ್ವಾಮಿ ಪರ ಮತ ಪ್ರಚಾರ

Published

on

ಭಾರತೀನಗರ :ಕೆ.ಎಂ.ದೊಡ್ಡಿಯಲ್ಲಿನ 1 ಮತ್ತು 2ನೇ ಬ್ಲಾಕ್ನಲ್ಲಿ ಜಾ.ದಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಎನ್.ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಪ್ರತೀ ಮನೆಯಲ್ಲಿ ಮತದಾರರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳ ಹಾಗೂ ಅಭಿವೃದಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ರೈತರ ಉದ್ಧಾರಕ್ಕೋಸ್ಕರ ಸಾಲ ಮನ್ನಾ ಮಾಡಿದ್ದರು. ಹಾಗಾಗಿ ಕುಮಾರಸ್ವಾಮಿ ಅವರ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಜನತೆಯ ಹಿತಕಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ರೈತರ ಶ್ರೇಯೋಬಿವೃದ್ಧಿ ಹಿನ್ನೆಯಲ್ಲಿಯೂ ಕೂಡ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಮತದಾರರಿಗೆ ತಿಳಿಸಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಪ್ರದಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್, ಮುಖಂಡರಾದ ಮೊಬೈ ವೆಂಕಟೇಶ್, ಕುಮಾರ್ , ರವಿ, ವಿಶ್ವ ಶ್ರೀನಿವಾಸ್, ಪುನೀತ್, ವಿಕಾಸ್ (ಬೋರ), ಪ್ರಶಾಂತ್, ಲಕ್ಷ್ಮಮ್ಮ, ರಂಗಮ್ಮ ಮುಂತಾದವರುಗಳು ಭಾಗವಹಿಸಿದ್ದರು

Continue Reading

Trending

error: Content is protected !!