Kodagu
ಕಾಂಗ್ರೆಸ್ ನೀಡಿದಂಥ ಗ್ಯಾರಂಟಿಗಳು ಮನೆಮಾತಾಗಿದೆ -* *ಎ. ಎಸ್ ಪೊನ್ನಣ್ಣ ಶ್ಲಾಘನೆ**
*ಕಾಂಗ್ರೆಸ್ ನೀಡಿದಂಥ ಗ್ಯಾರಂಟಿಗಳು ಮನೆಮಾತಾಗಿದೆ -*
*ಎ. ಎಸ್ ಪೊನ್ನಣ್ಣ ಶ್ಲಾಘನೆ**
ಮಡಿಕೇರಿ ಗಾಂಧಿ ಮೈದಾನದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕರ ಹೇಳಿಕೆ –
ಕಕ್ಕಬ್ಬೆಯಂಥ ಗಿರಿಶ್ರೇಣಿಯಲ್ಲಿನ ಮನೆಗೂ ಗ್ಯಾರಂಟಿ ಯೋಜನೆ ತಲುಪಿದೆ
ಮಹಿಳೆಯರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗ್ಯಾರಂಟಿ ಯೋಜನೆಯ ಪ್ರಯೋಜನ ಲಭಿಸಿದೆ
ಇಂಥ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಅಭಾರಿ
58 ಗ್ರಾಮಪಂಚಾಯತ್ ಗೂ ನಾನು ಭೇಟಿ ನೀಡಿದ್ದಾಗ ಕಾಂಗ್ರೆಸ್ ಸಕಾ೯ರದ ಬಗ್ಗೆ ಅಪಾಪ ಪ್ರಶಂಸೆ ವ್ಯಕ್ತವಾಗಿದೆ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೂ ತಲುಪಿಸುವ ಕೆಲಸ ಕಾಂಗ್ರೆಸ್ ಕಾಯ೯ಕತ೯ರಿಂದ ಆಗಬೇಕು
10 ತಿಂಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ – ಪೊನ್ನಣ್ಣ ಶ್ಲಾಘನೆ
ಚುನಾವಣಾ ಭರವಸೆ ಈಡೇರಿಸಿರುವ ಹಿನ್ನಲೆಯಲ್ಲಿ ಮನೆಮನೆಗೂ ತೆರಳಿ ಇದನ್ನು ಮತದಾರರಿಗೆ ಮನವರಿಕೆ ಮಾಡಿ – ಪೊನ್ನಣ್ಣ ಕರೆ
ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ – ಹೀಗಾಗಿ ಅತೀ ಹೆಚ್ಚು ಸಂಸತ್ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು
ಕೊಡಗಿನಲ್ಲಿ ಕಾಂಗ್ರೆಸ್ ಸಕಾ೯ರದಿಂದ ಅನೇಕ ಯೋಜನೆ ಜಾರಿಯಾಗಿದೆ
ಬಿಜೆಪಿ ಸುಳ್ಳು ಹೇಳುತ್ತಾ ಬಂದಿದೆ – ಜನರಿಗೆ ಈ ಬಗ್ಗೆ ಮನವರಿಕೆಯಾಗಿದೆ – ಪೊನ್ನಣ್ಣ ನುಡಿ
ಬಿಜೆಪಿ ಹೇಳಿದ್ದ 15 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದ ಭರವಸೆ ಎಲ್ಲಿ ಜಾರಿಯಾಗಿದೆ – ಶಾಸಕರ ಪ್ರಶ್ನೆ
ರಾಜ್ಯ ಸಕಾ೯ರದ ಇಬ್ಬರು ಶಕ್ತಿಶಾಲಿ ಸ್ತಂಭಗಳು – ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್
ಶಾಸಕ ಎ.ಎಸ್ ಪೊನ್ನಣ್ಣ ಬಣ್ಣನೆ
ಮಾಜಿ ಶಾಸಕರು ಕಾಂಗ್ರೆಸ್ ಯೋಜನೆಯನ್ನು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ – ಭೂತದ ಕೈಯಲ್ಲಿ ಭಗವದ್ಗೀತೆ ನೀಡಿದಂತಿದೆ ಬಿಜೆಪಿಯವರು ದ್ವೇಷ ರಾಜಕೀಯದ ಬಗ್ಗೆ ಮಾತನಾಡುತ್ತಿರುವುದು
ದ್ವೇಷದ ರಾಜಕೀಯ ಬಿಜೆಪಿಯ ಕೊಡುಗೆಯಾಗಿದೆ – ಇವರಿಂದ ಕಲಿಯುವುದೇನೂ ಇಲ್ಲ
ಬಿಜೆಪಿಯು ಪಾಠ ಮಾಡಿದ್ದೇ ಸುಳ್ಳು ಹೇಳಲಿಕ್ಕೆ – ಸುಳ್ಳುಗಾರರನ್ನು ತಿದ್ದುವ ಕೆಲಸ ಮಾಡಬೇಕಾಗಿದೆ
ಕಾಂಗ್ರೆಸ್ ಸದಾ ಪ್ರೀತಿಯ ರಾಜಕೀಯ ಮಾಡುತ್ತಿದೆ – ಕಾಂಗ್ರೆಸ್ ಕಾಯ೯ಕತ೯ರು ಮಾನವ ಪ್ರೇಮಿಯಾಗಿದ್ದಾರೆ – ಪೊನ್ನಣ್ಣ ಹೇಳಿಕೆ
ಮಾನವೀಯತೆಯಿಂದ ಕಾಂಗ್ರೆಸ್ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತದೆ
ಕಾಂಗ್ರೆಸ್ ನ ಇಬ್ಬರೂ ಶಾಸಕರೂ ಜನಪರ ಕೆಲಸ ಮಾಡುತ್ತಿದ್ದೇವೆ – ಪೊನ್ನಣ್ಣ ಹೇಳಿಕೆ
ಮತದಾರರ ಮನೆಗಳಿಗೆ ತೆರಳಿ ಕಾಂಗ್ರೆಸ್ ಕಾಯ೯ಕ್ರಮಗಳನ್ನು ತಲುಪಿಸುವ ಕೆಲಸವನ್ನು ಕಾಯ೯ಕತ೯ರು ಮಾಡುವಂತೆ ಪೊನ್ನಣ್ಣ ಕರೆ
ಜಾತಿ – ಧಮ೯ದಲ್ಲಿ ತಾರತಮ್ಯ ಮಾಡದೇ ಎಲ್ಲರನ್ನೂ ಒಂದಾಗಿ ನೋಡಿ ಕಾಂಗ್ರೆಸ್ ಪರ ಕೆಲಸ ಮಾಡಿ
ಇನ್ನೂ 4 ವಷ೯ 2 ತಿಂಗಳು ಕಾಂಗ್ರೆಸ್ ಜನಪರ ಕೆಲಸ ಮಾಡುತ್ತದೆ – ನಮ್ಮಲ್ಲಿ ಭರವಸೆ ಇಡಿ
ಕೊಡಗಿನ ಜನತೆಯ ಎಲ್ಲಾ ಭರವಸೆ ಈಡೇರಿಸುತ್ತೇವೆ – ಇದು ನಮ್ಮ ಕೆಲಸ – ಮತ ಹಾಕುವುದು ನಿಮ್ಮ ಕೆಲಸ
ಯಾಕೆ ಕಾಂಗ್ರೆಸ್ ಗೆ ಅತ್ಯಧಿತ ಮತ ಬರೋದಿಲ್ಲ ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿಯೂ ಸವಾಲಾಗಿ ಸ್ವೀಕರಿಸಿ ಅತ್ಯಧಿಕ ಲೀಡ್ ಕೊಡುತ್ತೇವೆ
– ಶಾಸಕ ಪೊನ್ನಣ್ಣ ಹೇಳಿಕೆ
Kodagu
ಕುಟ್ಟ ಪಟ್ಟಣದ ಉದ್ಯಮಿ ಕೇರಳದಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ: ಪತ್ನಿ, ಮಕ್ಕಳು ಪಾರು
ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು, ಕೇರಳದ ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಿದ್ದು, ಇವರ ಪೈಕಿ ಉದ್ಯಮಿ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.
ಈ ದುರಂತದಲ್ಲಿ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಉದ್ಯಮಿ ಸಜೀರ್, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.
Kodagu
ಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
ಮಡಿಕೇರಿ: ಗ್ರಾ.ಪಂ. ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ರಾಜಕೀಯ ರಹಿತವಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದ್ದಾರೆ.
ಕುಂದಚೇರಿ ಗ್ರಾ.ಪಂ. ಚೆಟ್ಟಿಮಾನಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರ, ಅಂಚೆ ಕಚೇರಿ ಮತ್ತು ಸಂಜೀವಿನಿ ಒಕ್ಕೂಟದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾ.ಪಂ ಪ್ರತಿನಿಧಿಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.

ಕ್ಷೇತ್ರದಾದ್ಯಂತ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ, ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲು ಸರಕಾರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತಿದೆ. ಇದನ್ನು ಪಂಚಾಯಿತಿ ಪ್ರತಿನಿಧಿಗಳು ಸದುಪಯೋಗಪಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ತಾವು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಗುರಿ ಹೊಂದಿದ್ದು, ಸರ್ವರೂ ಕೈಜೋಡಿಸಬೇಕೆಂದು ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಚೇರಿ ಗ್ರಾ.ಪಂ. ಯ ಹಿರಿಯ ಸದಸ್ಯ ಹ್ಯಾರಿಸ್ ಅವರು 1982 ರಲ್ಲಿ ಪಂಚಾಯಿತಿಯ ಹಳೆಯ ಕಟ್ಟಡ ನಿರ್ಮಾಣಗೊಂಡಿತು, ಅಂದಿನಿಂದ ಇಂದಿನವರೆಗೆ ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿರುವ ಹಾಲಿ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕರು, ಗ್ರಾ.ಪಂ ನ ಉಪಾಧ್ಯಕ್ಷರು, ಆಡಳಿತ ಮಂಡಳಿ, ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಮಾಜಿ ಪ್ರತಿನಿಧಿಗಳು, ಈಗಿನ ಮತ್ತು ಹಿಂದಿನ ಜಿಲ್ಲಾಧಿಕಾರಿಗಳು, ದಾನಿಗಳು, ಜಿ.ಪಂ., ತಾ.ಪಂ., 1994ರಿಂದ ರಚನೆಗೊಂಡ ಆರು ಆಡಳಿತ ಮಂಡಳಿ ಸೇರಿದಂತೆ ಸರ್ವರ ಆಸಕ್ತಿಯಿಂದ ನೂತನ ಕಟ್ಟಡ ನಿರ್ಮಾಣಗೊಂಡು ಇಂದು ಉದ್ಘಾಟನೆಗೊಂಡಿದೆ ಎಂದರು.
ಕುಂದಚೇರಿ ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ
ಶಾಸಕ ಎ.ಎಸ್.ಪೊನ್ನಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್, ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ಉಪಾಧ್ಯಕ್ಷೆ ಬೇಬಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ.ಎಸ್.ಗಂಗಮ್ಮ, ತಾಲೂಕು ಎ.ಡಿ ಹೇಮಂತ್ ಹಾಗೂ ಗುತ್ತಿಗೆದಾರ ಇಸ್ಮಾಯಿಲ್ ಕಾನಾವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಂಚಾಯಿತಿ ಸದಸ್ಯರಾದ ವಿಶ್ವ ಪ್ರವೀಣ್ ಕುಮಾರ್, ಬಸಪ್ಪ, ಸವಿತ, ನಮಿತ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪುಷ್ಪಾ, ನೇತ್ರಾವತಿ, ರೂಪ, ಲಕ್ಷ್ಮಿ, ಹೇಮಲತ, ಅನುಜ, ನಯನ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ ನಿರೂಪಿಸಿ, ವಂದಿಸಿದರು. ಚೆಟ್ಟಿಮಾನಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆಯನ್ನು ಹಾಡಿದರು.
Kodagu
ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕೃಷಿ ರತ್ನ ಪ್ರಶಸ್ತಿ
ಕುಶಾಲನಗರ: ಕೃಷಿ ಆವಿಷ್ಕಾರಗಳಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯ ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಮತ್ತು ಸೋಶಿಯಲ್ ಸೈನ್ಸಸ್‌ನಿಂದ “ಕೃಷಿ ರತ್ನ ಪ್ರಶಸ್ತಿ-2026″ಯನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಸ್ವೀಕರಿಸಿದರು.
ಇಂಡಿಯನ್ ಇಂಡಿಜಿನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್, SS ಜಸ್ವಾಲ್ ಕಾಲೇಜ್ ನಾಗ್ಪುರದ ಅಡಿಯಲ್ಲಿ, ವಿಶ್ವವಿದ್ಯಾಲಯ ನಾಗ್ಪುರದಿಂದ ಆಯೋಜಿಸಲಾಗಿದ್ದ “ಫ್ರಾಂಟಿಯರ್ಸ್ ಎಕ್ಸ್‌ಪ್ಲೋರಿಂಗ್: ಇಂಟರ್‌ಡಿಸಿಪ್ಲಿನರಿ ಅಡ್ವಾನ್ಸ್ ಇನ್ ಬಯೋಲಾಜಿಕಲ್ ಮತ್ತು ಮೆಟೀರಿಯಲ್ ಸೈನ್ಸಸ್” ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್‌ನ ಅಧ್ಯಕ್ಷರಾದ ಡಾ. ದಯಾನಂದ ಗೋಗಲೆ ಮತ್ತು ಪದಾಧಿಕಾರಿಗಳು, ಉಜಬಿಕಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಜೆನಿಟಿಕ್ಸ್ ಅಂಡ್ ಪ್ಲಾಂಟ್ ಎಕ್ಸ್‌ಪಿರಿಮೆಂಟಲ್ ಬಯಾಲಾಜಿಯ ಮುಖ್ಯಸ್ಥೆ ಡಾ.ಡಿಲ್ಫುಜ಼ಾ ಜಬ್ಬಾರ್ವ, ಎಸ್‌ಬಿಎಸ್‌ಎಸ್ ನ ಅಧ್ಯಕ್ಷರಾದ ಪ್ರೊ. ಪ್ರಮೋದ್ ರಾಮ್ ಟೆಕೆ, ಇತರೆ ವಿಜ್ಞಾನಿಗಳು ಮತ್ತು ಅತಿಥಿ ಗಣ್ಯರು ಉಪಸ್ಥಿತರಿದ್ದರು.
-
Chikmagalur15 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan11 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Special21 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Hassan12 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar17 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Kodagu11 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State15 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Hassan12 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
