Chamarajanagar
ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ಮದು, ನಿಮ್ಮ ರಕ್ಷಣೆಯ ಅಭಿವೃದ್ಧಿ ಕೆಲಸ ನಮ್ದು, ಇದು ನಮ್ಮ ನಿಮ್ಮ ನಡುವಿನ ಅಗ್ರಿಮೆಂಟ್ :ಎಚ್ ಸಿ ಎಮ್.

ಕೊಳ್ಳೇಗಾಲ ತಾಲ್ಲೂಕು ಹನೂರು ಕ್ಷೇತ್ರದ ಮದುವನಹಳ್ಳಿ, ದುಡ್ಡಿಂದವಾಡಿ ಗ್ರಾಮಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ದಲ್ಲಿ ಲೋಕಸಭೆ ಅಭ್ಯರ್ಥಿ ಸುನೀಲ್ ಬೋಸ್, ಸಮಾಜ ಕಲ್ಯಾಣ ಸಚಿವರಾದ ಮಹದೇವಪ್ಪ ಬಾಗಿ ಯಾಗಿ ಮತ ಯಾಚನೆ ಮಾಡಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಸುನೀಲ್ ಬೋಸ್ ರವರು ನಿಮ್ಮ ಸೇವೆ ಮಾಡಲು ನನಗೆ ನಿಮ್ಮ ಅತೀ ಅಮೂಲ್ಯ ವಾದ ಮತ ಹಸ್ತದ ಗುರುತಿಗೆ ಕ್ರಮ ಸಂಖ್ಯೆ 3 ಕ್ಕೆ ಮತ ಚಲಾಯಿಸುವುದರ ಮುಖಾಂತರ ನನ್ನನು ಆಶೀರ್ವಾದಿಸ ಬೇಕೆಂದು ಕೇಳಿಕೊಂಡರು.
ಸಚಿವರಾದ ಮಹದೇವಪ್ಪ ರವರು ಮಾತನಾಡಿ ಹನೂರು ತಾಲ್ಲೂಕಿನಲ್ಲಿ ಅತ್ಯಂತ ಬಡ ಜನರು ವಾಸಿಸುವ ಗ್ರಾಮಗಳಿದು ಅವರಿಗೆ ಎಷ್ಟು ಅನುದಾನ ನೀಡಿದರು ಸಾಲದು, ಹೀಗಾಗಿ ಹಿಂದೆ ನಾನು ಅರೋಗ್ಯ ಸಚಿವನಗಿದಾಗ ಈ ಗ್ರಾಮಕ್ಕೆ ಒಂದು ಆಸ್ಪತ್ರೆ ಯನ್ನು ನೀಡಿದೆ, ಹಾಗೂ ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಅನುಕೂಲ ಆಗುವಂತೆ ಮಹಿಳೆಯರಿಗೆ 2000 ರೂ ಗಳು ಮತ್ತು ಕುಟುಂಬ ಒಂದಕ್ಕೆ 10 ಕೆಜಿ ಅಕ್ಕಿ, ಮತ್ತು ಇನ್ನು ಜನರ ವರೆ ಯನ್ನು ಕಡಿಮೆ ಮಾಡಲು ಉಚಿತ ವಿದ್ಯುತ್ ನೀಡಿದ್ರು, ಇನ್ನು ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡಿದರು ಹಾಗೂ ನಿರುದ್ಯೋಗ ಯುವಕ ಯುವತಿ ಯಾರಿಗೆ ಮಾಸಿಕ 3 ಸಾವಿರ ನೀಡಿ ಬಡ ಜನರ ಕಷ್ಟ ಕಾಲದಲ್ಲಿ ಆಸರೆ ಆಗಿದ್ದರೆ, ಹೀಗಾಗಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ದ್, ನಿಮ್ಮ ರಕ್ಷಣೆಯ ಅಭಿವೃದ್ಧಿ ಕೆಲಸ ನಮ್ದು, ಇದು ನಮ್ಮ ನಿಮ್ಮ ನಡುವಿನ ಅಗ್ರಿಮೆಂಟ್ ಎಂದರು.
ಮತೆ ಹನೂರು ಮಾಜಿ ಶಾಸಕರಾದ ನರೇಂದ್ರ ರವರು ಮಾತನಾಡಿ ಈ ಇಂದೇ ಚಾಮರಾಜನಗರ ಲೋಕಸಭಾ ಸಂಸದರು ಆಗಿಧಾ ದ್ರುವ ನಾರಾಯಣ ರವರು ಹೇಗೆ ಜನರಿಗೆ ಸ್ಪಂದಿಸು ದಿದರು ಹಾಗೂ ಕ್ಷೆತ್ರ ವನ್ನು ಅಭಿರುದ್ದಿ ಮಾಡುದಿದ್ದರು ಹಾಗೇ ಸುನೀಲ್ ಬೋಸ್ ರವನು ಬರುವ 26 ರಂದು ನೊಗ ಕಟ್ಟಿ ನಮ್ಮ ಕ್ಷೆತ್ರ ದಲ್ಲಿ ಉಳುಮೆ ಮಾಡೋಣ ಎಂದರು.
Chamarajanagar
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ

ಚಾಮರಾಜನಗರ: ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಾನ ಮನಸ್ಕರ ಮಾಧ್ಯಮ ಮಿತ್ರರ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿ ಹನುಮೇಶ್ ಕೆ ಯಾವಗಲ್ ತಿಳಿಸಿದ್ದಾರೆ.
ಹಾಸನ ತಾಲೂಕಿನ ಬೇಲೂರಿನಲ್ಲಿ ಸಂಸ್ಕಾರ ಸಂಸ್ಕೃತಿ ಸಂಘಟನೆಗಾಗಿ ವಿಕಾಸ ಸಾರಥ್ಯದಲ್ಲಿ ಬೇಲೂರು ಹಬ್ಬ ಕಾರ್ಯಕ್ರಮವು ಜು.20 ರಂದು ಭಾನುವಾರ ಬೇಲೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಭಾರತಿ ತೀರ್ಥ ಸಭಾ ಭವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿಪ್ರ ವಿಕಾಸ ಪ್ರಶಸ್ತಿ ಸ್ವೀಕರಿಸಲ್ಲಿರುವ ಸುರೇಶ್ ಎನ್ ಋಗ್ವೇದಿ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ರಾಷ್ಟ್ರೀಯ ಚಿಂತನೆ, ಸ್ವದೇಶಿ, ಯುವ ಸಂಘಟನೆ, ಪರಿಸರ ಸಂರಕ್ಷಣೆ, ಸಂಸ್ಕೃತಿ, ಪರಂಪರೆ, ರಾಷ್ಟ್ರೀಯ ಮೌಲ್ಯಗಳ ಪ್ರಸಾರ, ಶಿಕ್ಷಣ, ಕನ್ನಡ ನಾಡು ನುಡಿ ಹಾಗೂ ಸಮಾಜದ ಸಮಗ್ರ ವಿಕಾಸದ ಬೆಳವಣಿಗೆಯಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದು ಇವರಿಗೆ ವಿಕಾಸ ಬೇಲೂರು ಹಬ್ಬ 2025 ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ದಿ.ಗರುಡನಗಿರಿ ನಾಗರಾಜ್ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಸುರೇಶ್ ಎನ್ ಋಗ್ವೇದಿಯವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ , ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಋಗ್ವೇದಿ ಯೂತ್ ಕ್ಲಬ್ ಗೌರವಾಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ, ಕಾರ್ಯನಿರ್ವಹಿಸಿದ್ದು, ಇತಿಹಾಸ ಉಪನ್ಯಾಸಕರಾಗಿ ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
Chamarajanagar
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

ಚಾಮರಾಜನಗರ: ಒಂದು ವಾರದ ಹಿಂದೆ ಜನಿಸಿರುವ ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಸಂಭವಿಸಿದೆ.
ತಾಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಗ್ರಾಮಗಳ ನಡುವಿನ ರಸ್ತೆಯ ಬದಿಯಲ್ಲಿ ಹೆಣ್ಣು ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದು, ಸಾಗಡೆ ಗ್ರಾಮದ ಪರಮೇಶ್ ಎಂಬುವವರು ಅದೇ ರಸ್ತೆಯಲ್ಲಿ ನಗರ ಕಡೆ ಸಂಚಾರ ಮಾಡುತ್ತಿದ್ದಾಗ ಹಸುಗೂಸು ಅಳುವ ಶಬ್ಧ ಕೇಳಿಬಂದಿದೆ.
ಸ್ಥಳಕ್ಕೆ ಬಂದು ನೋಡಿದಾಗ ಹೆಣ್ಣು ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು ತಿಳಿದು, ಬಳಿಕ ಸಾಗಡೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮಗುವನ್ನು ಆಂಬುಲೆನ್ಸ್ ಮೂಲಕ ಚಾ.ನಗರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಮಗುವಿನ ಪೋಷಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.
Chamarajanagar
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು

ಚಾಮರಾಜನಗರ: ಗುಂಡ್ಲುಪೇಟೆ – ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಮಸಮುದ್ರದ ನಿವಾಸಿ ಸಂತೋಷ್ (25) ಮೃತ ದುರ್ದೈವಿ. ಈತ ತೆರಕಣಾಂಬಿಯ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೃತ ಸಂತೋಷ್ ಬೈಕ್ ನಲ್ಲಿ ಗುಂಡ್ಲುಪೇಟೆ- ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಬರುವಾಗ ಕೆ.ಕೆ ಹುಂಡಿ ಗ್ರಾಮದ ಬಳಿ ವಾಹನವೊಂದು ಹೊಡೆದುಕೊಂಡು ಹೋಗಿರುವ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ದೇಹವನ್ನು ನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya10 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar16 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar10 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore11 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu10 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
State9 hours ago
ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು: ಸುರೇಶ್ ಬಾಬು