Kodagu
ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೆ ದಾಳಿ ಮಾಡಲು ಮುಂದಾದ ಕಾಡಾನೆ*

ಮಡಿಕೇರಿ : ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿರುವ ಘಟನೆ ಗುರುವಾರ ಬೆಳಗ್ಗೆ 7.20ರ ಸಮಯದಲ್ಲಿ
ವಿರಾಜಪೇಟೆ ತಾಲೂಕು, ಚಂಬೆಬೆಳ್ಳೂರು ಗ್ರಾಮದ ಪುದುಕೋಟೆ ಭದ್ರಕಾಳಿ ದೇವಾಲಯದ ಕೆಳಗಿನ ಸಿಮೆಂಟ್ ರಸ್ತೆಯಲ್ಲಿ ನಡೆದಿದೆ.

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಜಿ.ಟಿ. ಚಂಗಪ್ಪ ಎಂಬುವವರು ಕಾಲೇಜಿಗೆ ತೆರಳಲು ಬಸ್ ಗಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಎದುರಾದ ಕಾಡನೆ ಆತನನ್ನು ಬೆನ್ನಟ್ಟಿದೆ. ಚಂಗಪ್ಪ ಓಡಿ ಕಾಡಾನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಓಡುವ ಸಂದರ್ಭ ಸಿಮೆಂಟ್ ರಸ್ತೆಗೆ ಬಿದ್ದು ಗಾಯಗಳು ಉಂಟಾಗಿವೆ ಅಲ್ಲದೇ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಆತನನ್ನು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಮರಿ ಆನೆಗಳೊಂದಿಗೆ ಮೂರಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಾ ಜನರಿಗೆ ಭೀತಿಯನ್ನು ಹುಟ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.
ಎಸಿಎಫ್ ನೆಹರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕರ ತೆರಳಿ ಘಟನೆ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Kodagu
ಕಕ್ಕಬ್ಬೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ದಾನಿಗಳಿಂದ ಧನ ಸಹಾಯ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಕಕ್ಕಬ್ಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಗ್ರಾಮದ ದಾನಿಗಳು ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ

ಯುವಕಪಾಡಿ ಗ್ರಾಮದ ಕೊರಂಗಾಡುವಿನ ಮಚಾನಿ ಹಾಸ್ಪಿಟಲಿಟೀಸ್ ಎಲ್ಎಲ್ ಪಿಯ ಶಿವಾಚಾಳಿಯಂಡ ವಿಶ್ವನಾಥ್, ನೆರವಂಡ ಪೊನ್ನಣ್ಣ ಹಾಗೂ ಪ್ರೀತಿ ಮಚಾನಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ 20 ಸಾವಿರ ರೂಗಳನ್ನು ನೀಡಿದ್ದಾರೆ.
ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಪ್ರವಾಸ ಸುಖಕರವಾಗಲಿ ಎಂದು ದಾನಿಗಳು ಶುಭ ಹಾರೈಸಿದರು.
ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಕೆ.ಎಂ.ಕಾರ್ಯಪ್ಪ ಶಾಲೆಯ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ದಾನಿಗಳ ಉದಾರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Kodagu
ರಾಷ್ಟ್ರಪಿತನ ಕಡೆಗಣನೆ ಅಕ್ಷಮೀಯ: ಕೊಡಗು ಕಾಂಗ್ರೆಸ್ ಖಂಡನೆ
ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕಡೆಗಣಿಸಲು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ನಡೆ ಖಂಡನೀಯ ಹಾಗೂ ಅಕ್ಷಮೀಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾಧ್ಯಮ ಪ್ರಕಟಣೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶತಮಾನದ ಅತ್ಯಂತ ಯಶಸ್ವಿ ಯೋಜನೆಯಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಲು ಮುಂದಾಗಿರುವ ಬಿಜೆಪಿಯ ನಡೆ ದೇಶದ ಸಮಗ್ರತೆಗೆ ಮಾರಕವಾಗಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರ ಜೊತೆಗೆ ಜಗತ್ತಿಗೆ ಶಾಂತಿ ಸಂದೇಶ ನೀಡಿ ಇಡೀ ಮನುಕುಲಕ್ಕೆ ಮಾದರಿಯಾಗಿ ವಿಶ್ವದಲ್ಲೆಡೆ ಗೌರವಕ್ಕೆ ಭಾಜನರಾಗಿರುವ ಮಹಾತ್ಮ ಗಾಂಧಿ ಯವರ ಬಗ್ಗೆ ಬಿಜೆಪಿ ಯವರಿಗೆ ಇರುವ ಅಸಹನೆ, ತಾತ್ಸಾರಗಳು ದೇಶ ದ್ರೋಹಕ್ಕೆ ಸಮಾನವಾದದ್ದು ಎಂದು ತೆನ್ನಿರ ಮೈನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭವ್ಯ ಭಾರತದ ಇತಿಹಾಸದಲ್ಲಿ ಮಹಾತ್ಮ ಗಾಂಧಿಯವರ ಹೆಸರು ಪ್ರತಿಯೊಬ್ಬ ಭಾರತೀಯನ ಉಸಿರಿನಲ್ಲಿ ಹಸಿರಾಗಿ ಇದ್ದು ಇದನ್ನು ಮರೆಮಾಚಲು ಕುತಂತ್ರಿಗಳು ಪ್ರಯತ್ನಿಸುತ್ತಿದ್ದು ಅವರ ಕುತಂತ್ರ ಎಂದಿಗೂ ಫಲಿಸುವುದಿಲ್ಲಾ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kodagu
ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಅಯ್ಯಂಗೇರಿಯ ನಾಝಿಮ್ ಆಯ್ಕೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ದೆಹಲಿಯ ನೋಯ್ಡಾದಲ್ಲಿ ಡಿ.31ರಿಂದ ನಡೆಯಲಿರುವ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಯಂಗ್ ಸ್ಟಾರ್ ಕ್ರಿಕೆಟ್ ಲೀಗ್ ಕ್ಲಬ್ ತಂಡದ ಪರವಾಗಿ ಭಾಗವಹಿಸಲು ಅಯ್ಯಗೇರಿಯ ಕೆ.ನಾಝಿಮ್ ಆಯ್ಕೆಯಾಗಿದ್ದಾರೆ.
ವಿರಾಜಪೇಟೆ ಸೆಂಟ್ಆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಯಾಗಿರುವ ನಾಝಿಮ್ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಕೆ.ಇಸ್ಮಾಯಿಲ್ ಹಾಗೂ ರುಬೀನಾ ದಂಪತಿಗಳ ಪುತ್ರನಾಗಿದ್ದಾರೆ.
-
Hassan8 hours agoರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
-
Chamarajanagar24 hours agoನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
-
Mysore5 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Mandya22 hours agoSSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
-
Chikmagalur23 hours agoಡಿ.20 ರಿಂದ ಜ.6ರವರೆಗೆ ಜಿಲ್ಲೆಯಲ್ಲಿ ಹೆಲಿಟೂರಿಸಂ ಚಟುವಟಿಕೆ
-
State22 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ.ಟಿ.ರವಿ
-
Special7 hours ago994 ಪಿಡಿಒ ಹುದ್ದೆಗಳ ನೇಮಕಾತಿ 2026: ಪದವೀಧರರಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ
-
Hassan23 hours agoಡಾ. ತೃಪ್ತಿ ದಾಸ್ ಅಪರೂಪದ ಸಾಧನೆ: ಒಂದೇ ತಿಂಗಳಲ್ಲಿ 2 ಪ್ರತಿಷ್ಠಿತ ಯೂರೋಪ್ ಪದವಿ ಪಡೆದ ವೈದ್ಯೆ
