Connect with us

Mysore

ನಂಜನಗೂಡಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ರಕ್ತದಾನ ಮಾಡಿದ ವಿದ್ಯಾರ್ಥಿಗಳು

Published

on

ದೇಶದ ಆಸ್ತಿಯಾಗಿರುವ ಯುವ ಜನತೆ ಹೆಚ್ಐವಿ/ಏಡ್ಸ್ ಕುರಿತಾಗಿ ಸೂಕ್ತ ಅರಿವನ್ನು ಹೊಂದುವ ಮೂಲಕ ಹೆಚ್ಐವಿ ತಡೆಗಟ್ಟುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಹಿರಿಯ ದಂತ‌ ಆರೋಗ್ಯ ಅಧಿಕಾರಿ ಡಾ.ಅನಿತಾ ಸಲಹೆ ನೀಡಿದರು.

ನಂಜನಗೂಡು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ರೆಡ್ ಕ್ರಾಸ್ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ನಡೆದ ಏಡ್ಸ್ ಕುರಿತ ಜಾಗೃತಿ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾವಂತ ಯುವ ವಿದ್ಯಾರ್ಥಿಗಳು ಪ್ರಜ್ಞಾವಂತರಾಗಬೇಕು. ಆ ಮೂಲಕ ಹೆಚ್ಐವಿ ಕುರಿತಾದ ಸೂಕ್ತ ತಿಳುವಳಿಕೆ ಪಡೆದು ಸಮುದಾಯಕ್ಕೆ ತಲುಪಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆ ತೋರಬೇಕು. ಜನರಲ್ಲಿ ಹೆಚ್ಐವಿ ಕುರಿತಾಗಿ ತುಂಬಾ ಮೌಡ್ಯತೆ ಇದೆ .ಒಟ್ಟಿಗೆ ಕುಳಿತು ಊಟ ಮಾಡುವ, ಮಲಗುವ, ಓಡಾಡುವ, ಕೈಕುಲುಕುವ ಮೊದಲಾದವುಗಳ ಮೂಲಕವೂ ಹೆಚ್.ಐ.ವಿ ಹರಡುತ್ತದೆ ಎಂಬ ನಂಬಿಕೆಗಳಿವೆ .ಅವರಿಗೆ ಈ ಕುರಿತು ಸೂಕ್ತ ತಿಳುವಳಿಕೆಯನ್ನು ಯುವ ಸಮುದಾಯ ಒದಗಿಸಬೇಕು.
ಹೆಚ್.ಐ.ವಿ. ಸೋಂಕಿತರಿಗೆ ಆಪ್ತ ಸಮಾಲೋಚನೆಯ ಮೂಲಕ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಹೆಚ್ಐವಿ ಗೆ ಯಾವುದೇ ಲಸಿಕೆಗಳಿಲ್ಲ ಆದರೆ ಆರಂಭದ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸಿ ಜೀವನಮಟ್ಟವನ್ನು ಸುಧಾರಿಸಬಹುದು ಈ ನಿಟ್ಟಿನಲ್ಲಿ ಹೆಚ್ಐವಿ ಸೋಂಕಿತರ ಪ್ರಮಾಣವನ್ನು ಶೂನ್ಯವಾಗಿಸುವಲ್ಲಿ ನ್ಯಾಕೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ಯಾದಿ ಸಂಸ್ಥೆಗಳು ಅವಿರತವಾಗಿ ಪ್ರಯತ್ನ ಮಾಡುತ್ತಿವೆ ಎಂದರು.

ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಐಟಿಸಿಟಿ ಆಪ್ತ ಸಮಾಲೋಚಕರಾದ ರಾಜೇಶ್ ಮಾತನಾಡಿ, ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ ,ತಮಿಳುನಾಡು, ರಾಜಸ್ಥಾನ, ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚು ಹೆಚ್ಐವಿ ಪ್ರಕರಣಗಳು ದಾಖಲಾಗಿವೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲೇ ಸರಿಸುಮಾರು 2,100 ಹೆಚ್ಐವಿ ಪ್ರಕರಣಗಳಿವೆ. ಇದರಲ್ಲಿ ಶೇಕಡ 40 ರಿಂದ 50ರಷ್ಟು ಯುವಕರಿರುವುದು ಆತಂಕಕಾರಿ ಸಂಗತಿ. ಆದ್ದರಿಂದ ವಿದ್ಯಾರ್ಥಿ ಯುವ
ಜನತೆ ಸೂಕ್ತ ತಿಳುವಳಿಕೆ ಹೊಂದಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ
ಡಾ. ಬಸವನಗೌಡ ಅವರು, ವಿದ್ಯಾರ್ಥಿಗಳು ತಮ್ಮನ್ನು ತಾವು ಆಸ್ತಿ ಎಂದು ಪರಿಗಣಿಸಬೇಕು.ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಸದೃಢರಾಗಬೇಕು ಜೊತೆಗೆ ಲೈಂಗಿಕ ಶಿಕ್ಷಣ, ಶಿಕ್ಷಣದ ಭಾಗವಾಗಬೇಕು ಎಂದರು.
ಚಾಮರಾಜನಗರದ ಬಸವರಾಜೇಂದ್ರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೇಣುಕಾಬಾಯಿ, ರಾ.ಸೇ.ಯೋ.
ಕಾರ್ಯಕ್ರಮಾಧಿಕಾರಿಗಳಾದ ಡಾ. ಮಹದೇವ ಪ್ರಸಾದ್ ಎನ್. ಎಸ್.,ಡಾ.ಉಷಾ ಡಿ.ಕೆ, ರೆಡ್ ಕ್ರಾಸ್ ಸಂಚಾಲಕರಾದ ಶ್ರೀ ಶ್ರೀಧರ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Mysore

ಸಮೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್ ವಿತರಣೆ

Published

on

ಮೈಸೂರು: ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ಸಮೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಶ್ರೀನಿವಾಸ್, ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಮೃದ್ಧಿ ಟ್ರಸ್ಟ್ ಸಂಸ್ಥಾಪಕಿ ಸಹನಾ ಗೌಡ ಅವರು, “ವಿದ್ಯಾರ್ಥಿಗಳ ಶಿಕ್ಷಣೋತ್ಸಾಹ ಹೆಚ್ಚಿಸಲು ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ಇಂತಹ ಸಣ್ಣ ಪ್ರಯತ್ನಗಳು ಸಹಕಾರಿಯಾಗುತ್ತವೆ. ಮುಂದೆಯೂ ವಿದ್ಯಾರ್ಥಿಗಳ ಹಿತಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ಸಮೃದ್ಧಿ ಟ್ರಸ್ಟ್ ಸಂಸ್ಥಾಪಕಿ ಸಹನಾ ಗೌಡ ಹಾಗೂ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Continue Reading

Mysore

ಶಾಸಕರ ಸಭೆ ಬಳಿಕವು ಮತ್ತೊಂದು ದೊಡ್ಡಜಾತ್ರೆ ಪೂರ್ವಭಾವಿ ಸಭೆ : ಅಪರ ಜಿಲ್ಲಾಧಿಕಾರಿ ಶಿವರಾಜ್ ಹೊಸ ಸಂಪ್ರದಾಯ

Published

on

 ವರದಿ ಮಹದೇವಸ್ವಾಮಿ ಪಟೇಲ್

ನಂಜನಗೂಡು : ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಯಾವುದೆ ಅಡೆತಡೆ ಇಲ್ಲದೆ ಸಾಂಗವಾಗಿ ನೆರವೇರಿಸಲು ಎಲ್ಲರು ಒಮ್ಮತದಿಂದ ಕೆಲಸ ನಿರ್ವಹಿಸಿ ಎಂದು ಎಡಿಸಿ ಶಿವರಾಜ್ ಅವರು ತಿಳಿಸಿದರು.

ಇಂದು ಶ್ರೀ ನಂಜುಂಡೇಶ್ವರ ಗೌತಮ ಪಂಚ ಮಹಾ ರಥೋತ್ಸವದ ಅಂಗವಾಗಿ ನಗರದ ದಾಸೋಹ ಭವನದ ಆವರಣದಲ್ಲಿ ಶಾಸಕರ ಬಳಿಕವು ಎರಡನೇ ಬಾರಿ
ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ನಗರದ ರಸ್ತೆಗಳು,ದೇವಾಲಯದ ಆವರಣ, ಪ್ಲಾಸ್ಟಿಕ್, ಕಸ ಮುಕ್ತ ವಾಗಿರಲಿ,ಶ್ರೀ ಕಂಠೇಶ್ವರ ಸ್ವಾಮಿಯ ವರಿಗೆ ದೇಶ ವಿದೇಶಗಳ ಅಪಾರ ಭಕ್ತ ವೃಂದವಿದೆ ,ಆದರೆ ದೇವಾಲಯಕ್ಕೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲ.ದೇವಾಲಯ ದಿಂದಲೆ ನಂಜನಗೂಡಿಗೆ ಮಾನ್ಯತೆ ಆದ್ದರಿಂದ ಎಲ್ಲ ಅಧಿಕಾರಿಗಳು ಸಾರ್ವಜನಿಕ ರ ಸಹಕಾರ ಪಡೆದು,ಒಮ್ಮತ ದಿಂದ ಪ್ರಾಮಾಣಿಕ ವಾಗಿ ಕೆಲಸ ನಿರ್ವಹಿಸಿ, ಜಾತ್ರೆ ಯನ್ನು ಯಶಸ್ವಿಗೊಳಿಸಿ ,ಯಾವುದೆ ಕುಂದುಕೊರತೆಗಳಾದರೆ ಸಂಬಂಧಿಸಿದ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಗತ್ಯವಿರುವ ಕಡೆ ಸಿಸಿ ಟಿವಿ ಅಳವಡಿಸಿ, ಹಾಗು ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು, ಹಾಗು ಅರವಟ್ಟಿಗೆ ನಡೆಸುವವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ,ಪ್ಲಾಸ್ಟಿಕ್ ಬಳಸದೆ ಶುದ್ದವಾಗಿ,ಪ್ರಸಾದ ವಿತರಿಸ ಬೇಕು,
ಮತ್ತು‌ರಥೋತ್ಸವ ಸಮಯದಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಮಾಡಬೇಕು,‌ ತಾತ್ಕಾಲಿಕ ವಾಚ್ ಟವರ್ ನಿರ್ಮಿಸಿ ಎಂದು ಆದೇಶಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರವಾಗ ಬೇಕು.

ಯಾವುದೇ ವೈಯಕ್ತಿಕ ಪ್ರಚಾರದ ಪಲಕಗಳನ್ನು ಅಳವಡಿಸಬಾರದು ಕೇವಲ ಜಾತ್ರೆ ಗೆ ಸಂಬಂಧಿಸಿದ ಪ್ಲೆಕ್ಸ್ ಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದರು.

ಪೂರ್ವಭಾವಿ ಸಭೆ ಇದಕ್ಕೂ ಮುನ್ನ ಫೆ.9 ರಂದು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಮತ್ತೊಮ್ಮೆ ಎರಡನೇ ಬಾರಿಗೆ ಇಂದು ಅಪಾರ ಜಿಲ್ಲಾಧಿಕಾರಿ ಶಿವರಾಜ್ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಸಭೆಯಲ್ಲಿ ತಹಶಿಲ್ದಾರ ಸ್ಮಿತಾ ರಾಮು, ಡಿವೈಎಸ್ಪಿ ರಘು, ಎಸ್ಐ ರವೀಂದ್ರ ,
ಶ್ರೀ ಕಂಠೇಶ್ವರ ದೇವಾಲಯ ದ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ,ಪ್ರದಾನ ಅರ್ಚಕ ನಾಗಚಂದ್ರ ದೀಕ್ಷಿತ್. ನಗರಸಭಾ ಪೌರಾಯುಕ್ತಧಿಕಾರಿ ಬಸವರಾಜ್, ಆರೋಗ್ಯಧಿಕಾರಿ ಈಶ್ವರ ,ಎಇಇ ದೇವರಾಜಯ್ಯ ,ಮುಖಂಡರಾದ ಬಸವೇಗೌಡ ಹಳ್ಳದ ಕೇರಿ ಗೋವಿಂದರಾಜ್, ಕೃಷ್ಣ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Continue Reading

Mysore

ಕಾರ್ಮಿಕ ಸಂಹಿತೆಗಳು -2025ನ್ನು ರದ್ದುಗೊಗಳಿಸುವಂತೆ ಧರಣಿ

Published

on

ತಿ.ನರಸೀಪುರ:ದೇಶದ ಕಾರ್ಮಿಕ ಜೀವನವನ್ನು ದುಸ್ತರ ಮಾಡಿರುವ ಹೊಸ ಕಾರ್ಮಿಕ ಸಂಹಿತೆಗಳು -2025ನ್ನು ರದ್ದುಗೊಗಳಿಸುವಂತೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ತಾಲೂಕು ಬಿಸಿಯೂಟ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನೆಕಾರರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಭಗವಾನ್ ವೃತ್ತ ಮಾರ್ಗವಾಗಿ ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ತಾಲೂಕು ಘಟಕದ ಅಧ್ಯಕ್ಷ ಆಲಗೂಡು ಪುಟ್ಟಮಲ್ಲಯ್ಯ, ಕೇಂದ್ರ ಸರ್ಕಾರ, ಹಳೇ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಕಾರ್ಮಿಕರ ವೇತನ, ಕೆಲಸದ ಅವಧಿ, ಪಿಂಚಣಿ, ಉದ್ಯೋಗ ಭದ್ರತೆ ಮತ್ತು ರಜೆ ಸೇರಿದಂತೆ ಉದ್ಯಮದಾರರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲಾಗಿದೆ. ಇದರಿಂದ ಖಾಸಗಿ ವಲಯದಲ್ಲಿ ದುಡಿಯುವ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಹಾಗಾಗಿ ಇಂದು ದೇಶದಾದ್ಯoತ ನಮ್ಮ ಸಂಘಟನೆಯಿಂದ ಸ್ವಯಂಪ್ರೇರಿತ ಬಂದ್ ಆಚರಿಸುತ್ತಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅವೈಜ್ಞಾನಿಕ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಅವರು ಅಗ್ರಹಿಸಿದರು.


ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ,ಹಳೆಯ ಕಾರ್ಮಿಕ ಕಾಯ್ದೆಗಳಲ್ಲಿ 30ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿದ ಕಾರ್ಖಾನೆಗಳನ್ನು ಮುಚ್ಚಬೇಕಿದ್ದಲ್ಲಿ ಸರ್ಕಾರ ಪೂರ್ವ ಅನುಮತಿ ಕಡ್ಡಾಯವಾಗಿತ್ತು. ಆದರೆ ಹೊಸ ಕಾರ್ಮಿಕ ಸಂಹಿತೆಗಳಲ್ಲಿ ಈ ಮೀತಿಯನ್ನು 300ಕ್ಕೆ ಏರಿಸಲಾಗಿದೆ. ದೇಶದಲ್ಲಿ 300ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಕಾರ್ಖಾನೆಗಳು ಶೇ. 85% ಇದ್ದು, ಜಾರಿಗೊಂಡಿರುವ ಹೊಸ ಕಾರ್ಮಿಕ ಸಂಹಿತೆಗಳಿಂದ ಕೇಂದ್ರ ಸರ್ಕಾರ ಶೇ.1% ಉದ್ಯಮದಾರರಿಗೋಸ್ಕರ ಶೇ.85% ಕಾರ್ಮಿಕರನ್ನು ಬೀದಿಗೆ ದಬ್ಬಿದೆ. ಇದರಿಂದ ಕಾರ್ಮಿಕ ಜೀವನ ಅತಂತ್ರವಾಗಿದೆ. ಅಲ್ಲದೆ ಹೊಸ ಕಾರ್ಮಿಕ ಸಂಹಿತೆಗಳಲ್ಲಿ ‘ನಿಗದಿತ ಅವಧಿ ಕಾರ್ಮಿಕ ಪದ್ದತಿ'(Fixed term employment)ಯನ್ನು ಜಾರಿಯಿಂದ ಬಂಡವಾಳಶಾಹಿಗಳು ಕಾರ್ಮಿಕರನ್ನು ತಮಗಿಷ್ಟ ಬಂದ ವೇಳೆಯಲ್ಲಿ ಕಾರ್ಮಿಕರ ನೇಮಕ ಮತ್ತು ಕೆಲಸದಿಂದ ವಜಾ ಮಾಡುವ ಅಧಿಕಾರವನ್ನು ಪಡೆದಿರುವುದರಿಂದ ಕಾರ್ಮಿಕರಿಗೆ ಯಾವುದೇ ಉದ್ಯೋಗ ಭದ್ರತೆ ಇರುವುದಿಲ್ಲ. ಹಾಗಾಗಿ ಬಂಡವಾಳಶಾಹಿಗಳ ಪರವಾಗಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಒತ್ತಾಯಿಸಿದರು.
ಇದೇ ವೇಳೆ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಅವರ ಮುಖೇನ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ನೌಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಗ್ರಾಪಂ ಸ್ವಚ್ಛತಾ ವಾಹಿನಿ ಮುಖಂಡೆ ದಿವ್ಯಾ, ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ಕೃಷ್ಣ, ಡಿವೈಎಫ್ ಐ ತಾಲೂಕು ಕಾರ್ಯದರ್ಶಿ ನವೀನ್ ಕುಮಾರ್, ಸಿ. ಬಿ. ಮಲ್ಲೇಶ, ಎಂ. ಶಿವಲಿಂಗಶೆಟ್ಟಿ ಪ್ರೀಮಿಯರ್ ಕಂಪನಿಯ ಮುಖಂಡ ಗೋವಿಂದ, ಜಯರಾಮ್, ಜಿ. ಆರ್.ಮಹೇಶ್ ಇತರರು ಭಾಗವಹಿಸಿದ್ದರು

Continue Reading

Trending

error: Content is protected !!