Connect with us

Hassan

ನಾವು ಮಾಡಿದ ಅಭಿವೃದ್ಧಿ ಕೆಲಸಕ್ಕೆ ಸಿಎಂ ಉದ್ಘಾಟನೆ ಮಾಡ್ತಾರೆ ಇಡೀ ದೇಶದಲ್ಲೆ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜನ್ನ ನಂ.೧ ಸ್ಥಾನಕೆ ತರುವೆ: ಹೆಚ್.ಡಿ. ರೇವಣ್ಣ

Published

on

ಹಾಸನ: ಯಾವುದೋ ಗ್ಯಾರಂಟಿ ಯೋಜನೆ ಇಟ್ಟುಕೊಂಡು ಉಳಿದ ಎಲ್ಲಾ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಇನ್ನು ನಾವು ಮಾಡಿದ ಅಭಿವೃದ್ಧಿ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಟೇಪ್ ಕತ್ತರಿಸಿ ಉದ್ಘಾಟನೆ ಮಾಡ್ತಾರೆ. ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಈ ಸರಕಾರ ತಂದಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಓದಿದ ಶ್ರೀಮತಿ ಎಲ್.ವಿ. ಸರಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ರಾಜ್ಯ ಮತ್ತು ದೇಶದಲ್ಲೆ ನಂಬರ್ ಒನ್ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭರವಸೆ ನೀಡಿದರು.

ನಗರದ ಡೈರಿ ವೃತ್ತದಲ್ಲಿರುವ ಶ್ರೀಮತಿ ಎಲ್ ವಿ. (ಸರ್ಕಾರಿ) ಪಾಲಿಟೆಕ್ನಿಕ್ ೭೫ನೇ ವರ್ಷದ ಅಮೃತಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ ನಗರದ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸ್ತೂತ ೧೨೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅರಸೀಕೆರೆಯ ವೆಂಕಟಸ್ವಾಮಿ ಅವರ ಕುಟುಂಬವನ್ನು ನೆನಯಬೇಕಾಗುತ್ತದೆ. ೪೦ ಎಕರೆ ಭೂಮಿಯನ್ನು ದಾನವಾಗಿ ಕೊಟ್ಟು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಲು ಅನುಕೂಲ ಮಾಡಿಕೊಟ್ಟಿದ್ದು, ಅವರ ಕುಟುಂಬಕ್ಕೆ ಧನ್ಯವಾದವನ್ನು ಸಲ್ಲಿಸುತ್ತೇವೆ.ಈ ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳಾದರೂ ಉತ್ತಮವಾದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಕೊಡುವಲ್ಲಿ ಸಂಪೂರ್ಣ ಶಿಕ್ಷಣ ಕೊಡುವಲ್ಲಿ ಸಂಪೂರ್ಣ ಸರಕಾರವು ವಿಫಲವಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಹೆಚ್.ಡಿ. ಕುಮಾರಸ್ವಾಮಿ ಅವರು ೨೦೦೭ ರಲ್ಲಿ ಸಿಎಂ ಆಗಿದ್ದ ಕಾಲದಲ್ಲಿ ಸಭೆ ಮಾಡಿ ಒಂದು ಉತ್ತಮ ನಿರ್ದಾರ ತೆಗೆದುಕೊಂಡರು. ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ವರ್ಷ ಆದರೂ ಅನೇಕ ತಾಲೂಕು ಕೇಂದ್ರದಲ್ಲಿ ಇನ್ನು ಪಿಯು ಕಾಲೇಜು ಇಲ್ಲ. ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಅನೇಕ ಕಾಲೇಜು ಕೊಡಲಾಯಿತು. ನಾನು ಇಂಧನ ಮಂತ್ರಿ ಆಗಿದ್ದಾಗ ಹಾಸನಕ್ಕೆ ಐನೂರು ಕಂಪ್ಯೂಟರ್ ಕೊಡಿಸಲಾಯಿತು. ಕುಮಾರ್ ಸ್ವಾಮಿ ಅವರ ಆಡಳಿತದಲ್ಲಿ ಶೈಕ್ಷಣಕ್ಕೆ ಹೆಚ್ಚಿನ ಪ್ರೋತ್ಸಹ ಕೊಡಲಾಯಿತು. ಈಗಿನ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ ಆಗಬೇಕು. ಒಬ್ಬ ಟೀಚರ್ ನೇಮಕ ಮಾಡಲು ಇನ್ನು ಆಗಿಲ್ಲ. ನಮ್ಮವಧಿಯಲ್ಲಿ ಖಾಸಗೀ ಕಾಲೇಜುಗಳಲ್ಲಿ ಸಿಗದ ಸೌಲಭ್ಯವನ್ನು ಹಾಸನದ ಸರಕಾರಿ ಇಂಜಿನಿಯರ್ ಕಾಲೇಜಿನಲ್ಲಿ ತರಿಸಲಾಗಿದೆ. ಮೊಸಳೆ ಹೊಸಳ್ಳಿ ಮತ್ತು ಹಾಸನದ ಕಾಲೇಜು ಮುಚ್ಚಲು ಬಾರಿ ಪ್ರಯತ್ನ ನಡೆದು ಹೆಚ್.ಡಿ. ಕುಮಾರಸ್ವಾಮಿ ಉಳಿಸಿ, ೨೨೪ ಕ್ಷೇತ್ರದಲ್ಲೂ ಕಾಲೇಜು ಇರಲೇಬೇಕು. ಅದಕ್ಕೆ ಮೂಲಭೂತ ಸೌಕರ್ಯ ಇರಲೇಬೇಕು ಎಂದು ಸೂಚಿಸಿದರು. ಯಾವುದೋ ಗ್ಯಾರಂಟಿ ಯೋಜನೆ ಕೊಟ್ಟು ಉಳಿದ ಯಾವ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಹೆಚ್.ಡಿ. ರೇವಣ್ಣನವರು ಗುಡುಗಿದಲ್ಲದೇ ಇಂತಹ ದುಸ್ತಿತಿ ರಾಜ್ಯಕ್ಕೆ ಬಂದಿದೆ ಎಂದು ಮರುಗಿದರು. ನಮ್ಮ ಆಡಳಿತದಲ್ಲಿ ಈ ಜಿಲ್ಲೆಯಲ್ಲಿ ಇಪ್ಪತ್ತು ಕಾಲೇಜು ಮಾಡಿಕೊಡಲಾಯಿತು. ಪ್ರಸ್ತೂತದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ರಾಜ್ಯ ಸರಕಾರಕ್ಕೆ ನನ್ನ ಒತ್ತಾಯವಾಗಿದೆ ಎಂದರು. ಯಾವ ಅಪರಾಧ ಮಾಡದಿದ್ದರೂ ನನ್ನ ಮೇಲೆ ಮೂರು ತರಹದ ತನಿಖೆ ಮಾಡಿದರು. ರಾಜ್ಯ ಸರಕಾರವು ಆರೋಗ್ಯಕರ ಚಿಂತನೆ ಮಾಡದೇ ಹೋದರೇ ಈಗಿರುವ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಹಾಸನ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ನಾನೆ ೧೪ ಕೋಟಿ ಕೊಡಿಸಿದೆ. ನಾನು ಕೆಲಸ ಮಾಡೊಸೋದು ಇವರು ಉದ್ಘಾಟನೆ ಮಾಡುವುದು ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ದೇವೇಗೌಡರ ಆಶೀರ್ವಾದ ೪೦೦ ಕೋಟಿ ರೂಗಳ ರಸ್ತೆ ಆಗುತ್ತಿದೆ. ನಾವು ಮಾಡಿದ ಅಭಿವೃದ್ಧಿ ಕೆಲಸಕ್ಕೆ ಸಿಎಂ ಬಂದು ಟೇಪ್ ಕಟ್ಟು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಬೇಲೂರು, ಹಾಸನದಿಂದ ಬಿಳಿಕೆರೆಗೆ ನಾಲ್ಕು ವಿಭಾಗದ ರಸ್ತೆ ಆಗಲಿದೆ. ಮತ್ತೊಂದು ರಿಂಗ್ ರಸ್ತೆ ಆಗಲಿದೆ. ಹಾಸನಕ್ಕೆ ಏರ್ಪೋರ್ಟ್ ಕೊಟ್ಟೆ. ಹಾಸನ್ ಟೂ ಬೆಂಗಳೂರು ರೈಲು ದೇವೇಗೌಡರಿಂದ ಓಡುತ್ತಿದೆ ಎಂದು ಹಿಂದಿನ ಅಭಿವೃದ್ಧಿಯ ಕಾಮಗಾರಿ ಬಗ್ಗೆ ಇದೆ ವೇಳೆ ಮೆಲುಕು ಹಾಕಿದರು. ಈ ಸಂಸ್ಥೆಯಲ್ಲಿ ಓದಿದ ವ್ಯಕ್ತಿ ಹೆಚ್.ಡಿ. ದೇವೇಗೌಡರು. ಇಲ್ಲಿ ಜನ್ಮ ತಾಳಿದ ನಾವು ಎಂದು ಮರೆಯುವುದಿಲ್ಲ. ದೇವೇಗೌಡರಿಗೆ ಪ್ರಧಾನಿ ಹುದ್ದೆ ಸಿಗಲು ಈ ಜಿಲ್ಲೆ ಕಾರಣ. ಈ ಸಂಸ್ಥೆಯ ವಿದ್ಯಾರ್ಥಿ. ದೇವೇಗೌಡರು ಈ ಕಾರ್ಯಮಕ್ಕೆ ಬರುತ್ತಿನಿ ಎಂದಿದ್ದರು. ಆರೋಗ್ಯದ ಸಮಸ್ಯೆಯಿಂದ ನಾನೇ ಬೇಡ ಎಂದು ಹೇಳಿ ಅವರ ಪರವಾಗಿ ಬಂದಿದ್ದೇನೆ ಎಂದು ಹೇಳಿದರು. ಇಡೀ ರಾಜ್ಯ, ಭಾರತದಲ್ಲಿ ಈ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತೇನೆ. ಸರಕಾರಿ ಶಿಕ್ಷಣ ಸಂಸ್ಥೆ ಇಂದು ಖಾಸಗಿ ಹಿಡಿತದಲ್ಲಿ ಇದೆ. ಈ ಕಾಲೇಜನ್ನು ಮಾದರಿ ಕಾಲೇಜು ಆಗಿ ಮಾಡೆ ಮಾಡುತ್ತೇನೆ ಎಂದು ಪಣತೊಟ್ಟರು. ಈ ಕಾಲೇಜಿಗೆ ಐವತ್ತು ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗುವುದು. ನಾಲ್ಕು ಪಥದ ರಸ್ತೆ ರೆಡಿ ಇದ್ದು, ಹೊಸ ಬಸ್ ನಿಲ್ದಾಣ ದಿಂದ ಹೊಸಕೊಪ್ಪಲುವರೆಗೆ ಮಾಡಲಾಗುವುದು. ದೇವೇಗೌಡರು ಇನ್ನ ಎಂಟತ್ತು ವರ್ಷ ಬದುಕುತ್ತಾರೆ. ಈ ಕಾಲೇಜು ಅಭಿವೃದ್ಧಿ ಪಡಿಸಿದ ನಂತರ ಅವರಿಂದಲೇ ಉದ್ಘಾಟನೆ ಮಾಡಿಸುತ್ತೇನೆ ಎಂದು ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು.

ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಶ್ರೀಮತಿ ಎಲ್ ವಿ. (ಸರ್ಕಾರಿ) ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಎಸ್.ಬಿ. ವೀಣಾ, ರಿಜಿಸ್ಟರ್ ಎಸ್. ವಿಜಯಶ್ರೀ, ಸ್ಮೃತಿ ಮಂದಾರ ಅಲ್ಯುಮ್ನಿ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಎಸ್. ಜಗದೀಶ್, ಸಂಸ್ಥಾಪಕ ಅಧ್ಯಕ್ಷ ಮೇಜರ್ ವೆಂಕಟೇಶ್, ಸಿವಿಲ್ ವಿಭಾಗಧಿಕಾರಿ ಡಿ .ಕುಮಾರ್, ಉಪನ್ಯಾಸಕರಾದ ಲೋಕೇಶ್, ಡಾ. ಬಿ.ವಿ. ಮಧು, ಹೆಚ್.ಪಿ. ಚಂದನ್, ನಟರಾಜು, ಪಾಂಡುರಂಗ, ಜವರಪ್ಪ, ಸತ್ಯನಾರಾಯಣ್, ಅರುಣ್ ದಾಸ್, ಸಿ,ಜೆ. ಪ್ರಕಾಶ್, ನಾಗರಾಜು, ಹನುಮಂತರಾಯ್, ಕಾಳೇಗೌಡ, ಆನಂದ್ ಪೂಜಾರ್ ಇತರರು ಉಪಸ್ಥಿತರಿದ್ದರು. ಸುಧಾಮಣಿ ಸ್ವಾಗತಿಸಿದರು. ಕಾಲೇಜು ಸಿಬ್ಬಂದಿ ರೇಖಾ ಪ್ರಾರ್ಥಿಸಿದರು. ಸಮಾಜಸೇವಕ ಂiiದೀಶ್ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾ*ವು

Published

on

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಟೌನ್ ಶೆಟ್ಟಿಹಳ್ಳಿ ಬಳಿ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಘಟನೆ ಇಂದು ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಸಂಭವಿಸಿದೆ.

ಇನ್ನೂ ಈ ದುರಂತದಿಂದ ಇಬ್ಬರು ಮೃತಪಟ್ಟಿದ್ದರೆ, ಮತ್ತಿಬ್ಬರಿಗೆ ಗಂಭೀರ ಗಾಯಾಗಳಾಗಿವೆ.

ಸದ್ಯ ಇವರಿಬ್ಬರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Continue Reading

Hassan

ಅರ್ಹರಿಗೆ ಸರ್ಕಾರಿ ಸೌಲಭ್ಯವನ್ನು ಒದಗಿಸಿ : ಡಿಸಿ ಲತಾ ಕುಮಾರಿ

Published

on

ಹಾಸನ: ಪೌತಿ ಖಾತೆ ಆಂದೋಲನದ ಜೊತೆಗೆ ಪಿಂಚಣಿ ಆಂದೋಲನ ಕೂಡಾ ನಡೆಸಿ ಕೈಬಿಟ್ಟು ಹೋಗಿರುವವರನ್ನು ಗುರುತಿಸಿ ಅರ್ಹರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು  ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು ಕೆರೆ, ಗೋಮಾಳ ಮತ್ತು ಸ್ಮಶಾನ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಕ್ರಮವಹಿಸುವಂತೆ ಉಪ ವಿಭಾಗಾಧಿಕಾರಿಗೆ ಸೂಚಿಸಿದರು.
ದುರಸ್ತಿಗಾಗಿ ಸ್ವೀಕೃತವಾದ ಅರ್ಜಿಗಳಲ್ಲಿ ಅಗತ್ಯ ದಾಖಲೆಗಳು ಇಲ್ಲದಿದ್ದಲ್ಲಿ ಅಂತಹವುಗಳನ್ನು ಮಿಸ್ಸಿಂಗ್ ಕಮಿಟಿಯಲ್ಲಿಡಲು ತಿಳಿಸಿದರಲ್ಲದೆ, ಆಲೂರು ತಾಲ್ಲೂಕಿನ ಬಂಡಿ ತಿಮ್ಮನಹಳ್ಳಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊಳವೆ ಬಾವಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಲು ತಿಳಿಸಿದರು.
ಇಂದು ಸ್ವೀಕೃತವಾಗಿರುವ ಒಟ್ಟು 140 ಅರ್ಜಿಗಳನ್ನು ಆದಷ್ಟೂ ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು ಪ್ರತಿ ಮಾಹೆಯ ಮೊದಲ ಶನಿವಾರ ಕಡ್ಡಾಯವಾಗಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಿಗಧಿತ ಅವಧಿಯೊಳಗೆ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಕುರಿತು ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವಂತೆ ಸೂಚಿಸಿದರಲ್ಲದೆ, ಯಾವುದೇ ದೂರುಗಳು ಬಂದಂತಹ ಸಂದರ್ಭದಲ್ಲಿ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಸುರಕ್ಷತವಾಗಿರುವಂತೆ ನೋಡಿಕೊಳ್ಳಿ, ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶಾಲಾ ಕಟ್ಟಡಗಳ ದುರಸ್ಥಿಗೆ ಹೆಚ್ಚು ಒತ್ತು ನೀಡಿ, ಸರ್ಕಾರಿ ಆಸ್ತಿಗಳನ್ನು ಸಂರಕ್ಷಣೆಗೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಪದಾರ್ಥಗಳ ವಿತರಣೆಯಲ್ಲಿ ಮಾಹೆಗೆ ಪ್ರತಿ ವ್ಯಕ್ತಿಗೆ 10 ಕೆ.ಜಿ.ಅಕ್ಕಿ ನೀಡಲಾಗುತ್ತದೆ ಅದರ ಬದಲಾಗಿ 5 ಕೆ.ಜಿ.ಅಕ್ಕಿ ಹಾಗೂ ಇತರೆ ಆಹಾರ ಪದಾರ್ಥಗಳನ್ನು ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಒಂದು ತಂಡ ರಚನೆ ಮಾಡಿ ಪ್ರತಿ ತಾಲೂಕಿನ ಒಂದೊಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡು ಖುದ್ದು ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅರ್ಹ ಬಡ ಕುಟುಂಬಗಳಿಗೆ ಪಡಿತರ ಪದಾರ್ಥಗಳು ದೊರಕಬೇಕು ಈ ನಿಟ್ಟಿನಲ್ಲಿ ತಹಸೀಲ್ದಾರ್ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿ ಸವಲತ್ತುಗಳನ್ನು ಕಲ್ಪಿಸುವಂತೆ ಸೂಚಿಸಿದರು. ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಂತೆ ನಿಗಧಿತ ಅವಧಿಯೊಳಗೆ ಸವಲತ್ತುಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆ ರೆಂಬೆಗಳು ಬಿದ್ದು, ಅವಘಡಗಳು  ಸಂಭವಿಸದಂತೆ ಎಚ್ಚರವಹಿಸಿ, ಅಂತಹವುಗಳನ್ನು ಕಡಿಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಒಂದು ತಂಡವಾಗಿ ಕೆಲಸ ಮಾಡಿದರೆ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು 944899422 ಕರೆ ಮಾಡಬಹುದಾಗಿದೆ. ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಕಂಬದಲ್ಲಿ ನಮೂದಿಸಿರುವ ಸಂಖ್ಯೆಯನ್ನು ದೂರು ನೀಡುವ ಸಂದರ್ಭದಲ್ಲಿ ತಿಳಿಸಿದರೆ ತಕ್ಷಣ ಬಂದು ಚೆಸ್ಕಾಂ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ದುರಸ್ತಿ, ಹಕ್ಕು ಪತ್ರ, ಸಾಗುವಳಿ ಚೀಟಿ, ಆರ್.ಟಿ.ಸಿ.ತಿದ್ದುಪಡಿ, ಜಮೀನಿಗೆ ಓಡಾಡಲು ರಸ್ತೆ, ರೈಲ್ವೆ ಯೋಜನೆಗೆ ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ನೀಡಲು ಮನವಿ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಉಪ ವಿಭಾಗಾಧಿಕಾರಿಗಳಾದ ಶೃತಿ, ಮಾರುತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
Continue Reading

Hassan

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಪ್ರಾರಂಭಿಸಲು ಆಗ್ರಹಿಸಿ: ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ  ಪ್ರತಿಭಟನೆ

Published

on

ಹಾಸನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಜಿಲ್ಲೆಯ ಜನಾರೋಗ್ಯವನ್ನು ಖಾತ್ರಿಪಡಿಸುವಂತೆ ಆಗ್ರಹಿಸಿ ಇನ್ನು ಸಾರ್ವಜನಿಕರಿಗೆ ಸೇವೆ ಸಿಗದ ಹಾಸನದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ ನಡೆಸಿದರು.

ಈ ವೇಳೆ ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿ ರೂಪ ಹಾಸನ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ  ಮಾತನಾಡಿ,ಕಳೆದ ತಿಂಗಳಿನಿಂದೀಚೆಗೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿವೆ. ಜಿಲ್ಲೆಯ ಹೃಧಯಾಘಾತದ ಸಾವುಗಳು ದೇಶದಾದ್ಯಂತ ಸುದ್ದಿಯಾದವು. ಅದರಲ್ಲೂ ಎಳೆಯರ ಮತ್ತು ಯುವಜನರ ಹಠಾತ್ ಸಾವು ತೀವ್ರ ಆತಂಕವನ್ನು ಸೃಷ್ಟಿಮಾಡಿದೆ ಎಂದರು.

ಸರ್ಕಾರ ಈಗಾಗಲೇ ಈ ಹಠಾತ್ ಸಾವುಗಳ ಕುರಿತು ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸಿ ವರದಿ ತರಿಸಿಕೊಂಡಿದೆ. ಹಾಗೂ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ತಜ್ಞರ ಸಮಿತಿಯ ವರದಿಯು ಹಠಾತ್ ಸಾವುಗಳಿಗೆ ಜೀವನ ಶೈಲಿ, ಆಹಾರ ಪದ್ದತಿ, ಪರಿಸರ ಮಾಲಿನ್ಯ ಮತ್ತು ಕೋವಿಡೋತ್ತರ ಪರಿಸ್ಥಿತಿಯ ಕಾರಣಗಳತ್ತ ಬೊಟ್ಟು ಮಾಡಿದೆ. ಈ ಸ್ಪರ್ಧಾತ್ಮಕ ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ತಾರತಮ್ಯಗಳು ಮತ್ತು ಕೌಟುಂಬಿಕ ಒತ್ತಡಗಳು, ಇಂತಹ ಗಂಭೀರವಾದ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಈ ಎಲ್ಲಾ ಪರಿಣಾಮಗಳಿಗೆ ಕೇವಲ ಜನರ ವಯಕ್ತಿಕ ಮಟ್ಟದ ಕಾರಣಗಳು ಮಾತ್ರವೇ ಆಗಿರದೆ ಪ್ರಮುಖವಾಗಿ ಅವುಗಳು ಸಾಮಾಜಿಕ ಆರ್ಥಿಕ ಕಾರಣಗಳಾಗಿವೆ. ಈ ಸಾಮಾಜಿಕ ಆರ್ಥಿಕ ಕಾರಣಗಳಿಗೆ ಮೊದಲು ಪರಿಹಾರ ದೊರಕಿಸಿಕೊಡುವ ಕೆಲಸ ಯಾವುದೇ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ದೂರಿದರು.

ಶಸ್ತ್ರಚಿಕಿತ್ಸಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞ ಮತ್ತು ಅರಿವಳಿಕೆ ತಜ್ಞರು ಇರಬೇಕು. ಆದರೆ, ಹಾಸನ ಜಿಲ್ಲೆಯ ಹಲವು ಸಿ.ಹೆಚ್.ಸಿ.ಗಳಲ್ಲಿ ಈ ಬಹುತೇಕ ತಜ್ಞರ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸಿ-ಸೆಕ್ಷನ್ ಹೆರಿಗೆ ಅಥವಾ ಇತರ ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ವೈದ್ಯಾಧಿಕಾರಿಗಳು ಇಬ್ಬರು ವೈದ್ಯಾಧಿಕಾರಿಗಳ ಬದಲು ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸಿಬ್ಬಂದಿಯ ಕೊರತೆಯೂ ಸಾಮಾನ್ಯವಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದ್ದರೂ, ಖಾಯಂ ಹುದ್ದೆಗಳು ಖಾಲಿ ಇರುವುದು ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ, ಎಲ್ಲಾ ಪಿ.ಹೆಚ್.ಸಿ. ಗಳಲ್ಲಿ 24×7 ತುರ್ತು ಮತ್ತು ಹೆರಿಗೆ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವುದು ಸವಾಲಾಗಿದೆ. ಕೆಲವು ಸಿ.ಹೆಚ್.ಸಿ.ಗಳಲ್ಲಿ ಎಕ್ಸ್-ರೇ ಯಂತ್ರಗಳು ಇದ್ದರೂ, ಅವುಗಳನ್ನು ನಿರ್ವಹಿಸಲು ರೇಡಿಯೋಗ್ರಾಫರ್ ಇಲ್ಲದಿರುವುದು ಅಥವಾ ಯಂತ್ರಗಳು ಕೆಟ್ಟಿರುವುದು ವರದಿಯಾಗಿದೆ ಎಂದು ದೂರಿದರು.

ಇದೇ ರೀತಿ, ಎಲ್ಲಾ ಕೇಂದ್ರಗಳಲ್ಲಿ ಸಂಪೂರ್ಣ ಸುಸಜ್ಜಿತ ಪ್ರಯೋಗಾಲಯಗಳು ಲಭ್ಯವಿಲ್ಲ. ಐ.ಪಿ.ಹೆಚ್.ಎಸ್. ಪ್ರಕಾರ ಸಿ.ಹೆಚ್.ಸಿ. ಗಳು ಪ್ರಥಮ ರೆಫರಲ್ ಘಟಕವಾಗಿ ಕಾರ್ಯನಿರ್ವಹಿಸಲು ರಕ್ತ ಸಂಗ್ರಹಣಾ ಘಟಕವನ್ನು ಹೊಂದಿರಬೇಕು. ಮಾನದಂಡಗಳ ಪ್ರಕಾರ ಅಗತ್ಯ ತಜ್ಞ ವೈದ್ಯರ ಕೊರತೆ, ಅಗತ್ಯ ಕಟ್ಟಡ, ಲ್ಯಾಬೊರೇಟರಿ, ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಅಗತ್ಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ಕೊರತೆಗಳನ್ನು ಎದುರಿಸುತ್ತಿವೆ ಎಂದು ಹೇಳಿದರು.

ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಟ್ಟು ಮಂಜೂರಾದ 340 ವೈದ್ಯರ ಹುದ್ದೆಗಳಲ್ಲಿ 117 ವೈದ್ಯರ ಹುದ್ದೆಗಳು ಖಾಲಿಯಿವೆ. ಅವುಗಳಲ್ಲಿ 36 ತಜ್ಞ ವೈದ್ಯರು, 22 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಮತ್ತು 52 ಕರ್ತವ್ಯನಿರತ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 1856 ವೈದ್ಯಕೀಯ ಸಿಬ್ಬಂದಿ ಹುದ್ದೆಗಳಲ್ಲಿ 815 ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 824 ವೈದ್ಯಕೀಯೇತರ ಸಿಬ್ಬಂದಿಗಳ ಹುದ್ದೆಗಳಲ್ಲಿ 664 ವೈದ್ಯಕೀಯೇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಹಾಗೂ ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಇಡೀ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಳಗೆ ಕೇವಲ ಒಬ್ಬರ ಮಾತ್ರ ಹೃದ್ರೋಗ ತಜ್ಞರು (ಕಾರ್ಡಿಯಾಲಜಿಸ್ಟ್) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಜಿಲ್ಲೆಯ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಸುತ್ತದೆ ಎಂದರು.

ಹಾಸನ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾ ಆಸ್ಪತ್ರೆ ಸಾಕಷ್ಟು ಉತ್ತಮ ಗುಣಮಟ್ಟದ ವೈಧ್ಯಕೀಯ ಸೇವೆಯನ್ನು ಉಚಿತ ಮತ್ತು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತಿದ್ದರೂ ಕೂಡ ಜಿಲ್ಲೆಯ ಜನರಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಆರೋಗ್ಯದ ಸಮಸ್ಯೆಗಳು ಹಾಗೂ ಪಕ್ಕದ ಹೊರ ಜಿಲ್ಲೆಗಳಿಂದ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಸ್ಪತ್ರೆಯ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತಿದೆ. ಅಗತ್ಯ ವೈದ್ಯಕೀಯ ತಜ್ಞರು ಮತ್ತು ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬದಿಗಳ ಕೊರತೆ ತೀವ್ರವಾಗಿದೆ ಎಂದು ತಿಳಿಸಿದರು.

ಮಾರಣಾಂತಿಕ ಖಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ, ಮೆದುಳು ಮತ್ತು ನರರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸೂಕ್ತವಾಗುವ ತಜ್ಞ ವೈದ್ಯರುಗಳು, ಸಿಬ್ಬಂದಿಗಳು ಮತ್ತು ವೈದ್ಯಕೀಯ ವ್ಯವಸ್ಥೆಯ ಕೊರತೆಯಿದೆ. ಇತ್ತೀಚೆಗಷ್ಟೇ ಹಿಮ್ಸ್‌ನಲ್ಲಿ ಒಬ್ಬರು ಹೃದ್ರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಇಡೀ ಜಿಲ್ಲೆಗೆ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುವಂತಾಗಿದೆ. ಹಿಮ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಮತ್ತಷ್ಟು ಉನ್ನತೀಕರಿಸಿ ಹಲವು ಬಗೆಯ ವೈದ್ಯಕೀಯ ವಿಭಾಗಗಳು ಆರಂಭವಾಗುವುದು ತುರ್ತು ಅಗತ್ಯವಿದೆ ಎಂದರು.

ಹೃದ್ರೋಗ, ನರರೋಗ ಸೇರಿದಂತೆ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯುವ ಹಿಮ್ಸ್‌ನ ಸೂಪರ್ ಸ್ಪೆಶಾಲಿಟಿ ಆತ್ಪತ್ರೆಯು ಆರಂಭವಾಗದೇ ಹಾಗೇ ನಿಂತಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಅಂದಾಜಿನ ಪ್ರಕಾರ ಕನಿಷ್ಟ ೫೦ ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಕೂಡಲೇ ಕರ್ನಾಟಕ ಸರ್ಕಾರಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆಮಾಡಿ ಹಾಗೂ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಮತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಹಕ್ಕೋತ್ತಾಯಗಳೆಂದರೇ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಬೇಕಾದ ಕನಿಷ್ಟ 50 ಕೋಟಿ ರೂ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಕಾರ್ಯಾರಂಭ ಮಾಡಬೇಕು. ಹೃದ್ರೋಗ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈಧ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸ್‌ರೇ, ತುರ್ತು ಚಿಕಿತ್ಸಾ ಘಟಕ ಮತ್ತು ಆಂಬುಲೆನ್ಸ್ ಹಾಗೂ ತಜ್ಞ ವೈಧ್ಯರು ಮತ್ತು ಸಿಬ್ಬಂಧಿಗಳನ್ನು ಒದಗಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು  ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಖಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಆರೋಗ್ಯ ತಪಾಸಣೆಗಾಗಿ ಮತ್ತು ಅವಶ್ಯಕ ಪರೀಕ್ಷೆಗಳಿಗಾಗಿ ಸಂಚಾರಿ ವೈದ್ಯಕೀಯ ವಾಹನ ವ್ಯವಸ್ಥೆಯನ್ನು ಏರ್ಪಡಿಸಿ, ಅದು ನಿಯಮಿತವಾಗಿ ಎಲ್ಲ ಹಳ್ಳಿಗಳನ್ನು ತಲುಪುವಂತೆ ಕ್ರಮ ಕೈಗೊಳ್ಳಿ. ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚುಗೊಳಿಸಿ ಮತ್ತು ನಿಯಮಿತಗೊಳಿಸಿ. ಆಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದವರನ್ನು ಗುರ್ತಿಸಲು ಸಾಧ್ಯವಾಗುತ್ತದೆ. ಆರೋಗ್ಯ ಸಹಾಯವಾಣಿ ಸಮರ್ಪಕವಾದ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ. ಇದನ್ನು ತುರ್ತಾಗಿ ಚುರುಕುಗೊಳಿಸಿ. ಹಾಗೂ ತುರ್ತು ಸೇವೆಗಾಗಿ ಅಂಬುಲೆನ್ಸ್ ಗಳ ಸಂಖ್ಯೆಯನ್ನು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿ ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಥೂಲಕಾಯ ಮತ್ತಿತರೆ ಪ್ರಾಥಮಿಕ ವೈಧ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಡಿಸಬೇಕು. ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಮತ್ತು ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈಗಾಗಲೇ ನಿಷೇಧಿಸಲ್ಪಟ್ಟ ಅಪಾಯಕಾರಿ ಕೀಟ ನಾಶಕಗಳನ್ನು ಶುಂಠಿ ಸೇರಿದಂತೆ ವಿವಿದ ಬೆಳೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು ಇದರಿಂದಾಗುವ ದೂರಗಾಮಿ ಕೆಟ್ಟ ಪರಿಣಾಮಗಳನ್ನು ತಡೆಯಲು ಕೃಷಿಯಲ್ಲಿ ಅಪಾಯಕಾರಿ ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆಗಳು ಈಡೇರುವವರೆಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, .ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ವಕೀಲ ಅನ್ಷಾದ್ ಪಾಳ್ಯ, ಎಫ಼್.ಐ ಜಿಲ್ಲಾ ಕಾರ್ಯದರ್ಶಿ ಎಸ್. ರಮೇಶ್, ಸಾಮಾಜಿಕ ಕಾರ್ಯಕರ್ತ ಮಲ್ನಾಡ್ ಮೆಹಬೂಬ್, ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಭಾರತೀಯ ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್, ಮಹಿಳಾ ಪರ ಚಿಂತಕರಾದ ಗೀತಾ, ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಪುಷ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!