Connect with us

Mandya

ಮಂದಗೆರೆ ಕೃಷಿ‌ ಪತ್ತಿನ‌ ಸಹಕಾರ ಸಂಘದ ಚುನಾವಣೆಗೆಯಲ್ಲಿ ಜೆ.ಡಿ.ಎಸ್ ಪಕ್ಷದ ವಷಕ್ಕೆ

Published

on

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂದಗರೆ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷದ ಅವದಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ನಿಗದಿಯಾಗಿತ್ತು

ಸಾಲಗಾರ ಕೇತ್ರಕ್ಕೆ 20 ಜನ ಸ್ಪರ್ದೆ ಮಾಡಿದ್ದು ಅದರಲ್ಲಿ ಗದ್ದೇಹೊಸೂರು ಜಿ.ಎನ್ ದೀಪಕ್, ಜಿ.ಬಿ ಮನು, ಚಿಕ್ಕಮಂದಗರೆ ಗ್ರಾಮದ ರಮೇಶ್ ಕೆ.ಎನ್, ವಸಂತ, ಆಲೇನಹಳ್ಳಿ ಗ್ರಾಮದ ಆಶೋಕ, ಸಾವಿತ್ರಮ್ಮ, ಮಂದಗರೆ ಗ್ರಾಮದ ಮಂಜುನಾಥ್, ಮೂಡನಹಳ್ಳಿ ಗ್ರಾಮದ ನಿಂಗೇಗೌಡ, ತಿಮ್ಮನಾಯಕ, ಹೊನ್ನೇನಹಳ್ಳಿ ಗ್ರಾಮದ ಮಂಜೇಗೌಡ, ಶ್ರವಣಹಳ್ಳಿ ಗ್ರಾಮದ ಬೋಜಯ್ಯ, ಗೆಲುವು ಸಾದಿಸಿದ್ರೆ ಸಾಸಲಗಾರರಲ್ಲದ ಕ್ಷೇತ್ರದಿಂದ ಅಲೇನಹಳ್ಳಿ ಮಹೇಶ್ ರವರು ಗೆಲುವು ಸಾದಿಸಿದ್ರು

ನೂತನ ನಿರ್ದೇಶಕರಿಗೆ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಗದ್ದೇಹೊಸೂರು ಜಗದೀಶ್ ಸಿಹಿ ತಿನ್ನಿಸಿ ಎಲ್ಲಾ ನಿರ್ದೇಶಕರಿಗೆ ಶುಭ ಕೋರಿ ಮಾತನಾಡಿ ಜೆ.ಡಿ.ಎಸ್ ಅಭ್ಯರ್ಥಿ 8 ಸ್ಥಾನ ಗೆಲುವು ಸಾದಿಸಿ ಅದಿಕಾರದ ಚುಕ್ಕಾಣೆ ಹಿಡಿಯಲಿದ್ದು ಎಲ್ಲಾ ನಿರ್ದೇಶಕರು ಪಕ್ಷಬೇದ ಮರೆತು ಸಂಘದ ಅಭಿವೃದ್ಧಿ ಶ್ರಮಿಸುವಂತೆ ಸಲಹೆ ನೀಡಿದ್ರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಯಶಸ್ವಿಗೊಂಡ ಪ್ರೊ.ನಂಜುಂಡಸ್ವಾಮಿಯವರ 90ನೇ ವರ್ಷದ ಜಯಂತೋತ್ಸವ

Published

on

ಮದ್ದೂರು : ಎಂಬತ್ತರ ದಶಕದಲ್ಲಿ ರೈತ ಸಂಘಟನೆ ಸ್ಥಾಪಿಸಿ ರೈತರ ಸ್ವಾಭಿಮಾನದ ಸಂಕೇತ ಹಸಿರು ಶಾಲು ಹೆಗಲ ಮೇಲೆ ಹೊರಿಸಿ ಲಕ್ಷಾಂತರ ರೈತರಿಗೆ ಹೋರಾಟದ ದೀಕ್ಷೆ ನೀಡಿ ನಮ್ಮನ್ನಾಳುವಂತಹ ಸರ್ಕಾರಗಳ ಅನ್ಯಾಯದ ವಿರುದ್ಧ ಸಿಡಿದೇಳಲು ಉತ್ತೇಜಿಸಿದ ಅಂತರಾಷ್ಟ್ರೀಯ ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರು ಎಂದು ಕಸ್ತೂರಿ ಕರ್ನಾಟಕ ಜನಪರ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ ಹೇಳಿದರು.

ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರೊ. ನಂಜುಂಡಸ್ವಾಮಿಯವರ 90 ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪ್ರೊ. ನಂಜುಂಡಸ್ವಾಮಿಯವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಹೊಸ ಕರ್ನಾಟಕ ಕಟ್ಟುವ ಎಂಬ ಘೋಷ ವಾಕ್ಯದೊಡನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬ್ರಹತ್ ರೈತ ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗಿ ಮೂವತ್ತೈದು ಸಾವಿರಕ್ಕೂ ಹೆಚ್ಚು ರೈತರು ಬಂಧನ ಕೊಳಕ್ಕಾಗಿ ನಾಡಿನ ಎಲ್ಲಾ ಜೈಲುಗಳ ಸೇರಿದರು ಇದು ಸಾವಿರದ ಒಂಬೈನೂರ ನಲವತ್ತೇರಡೆನೆ ಇಸವಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಮೀರಿಸುವಂತಹ ರೈತ ಚಳುವಳಿ ಇದಾಗಿತ್ತು ಎಂದು ಸ್ಮರಿಸಿದರು.

ಪ್ರೊಫೆಸರ್ ರವರ ರೈತ ಚಳುವಳಿ ಸಂಘಟನೆಯ ದ್ಯೆಯೋದ್ದೇಶಗಳನ್ನು ಮೆಚ್ಚಿ, ಹೊರದೇಶಗಳಾದ ಫ್ರಾನ್ಸ್ ,ಸ್ವಿಜರ್ಲ್ಯಾಂಡ್ ದೇಶಗಳಲ್ಲಿ ನಂಜುಂಡಸ್ವಾಮಿ ರವರ ನ್ನು ಕರೆಸಿ ಭಾಷಣ ಮಾಡಿಸಿದರು.

ಕೆಂಟಕಿ ಚಿಕನ್ ವಿರುದ್ಧದ ಚಳುವಳಿಯಲ್ಲಿ ಮೂವತ್ತು ದಿವಸಗಳ ಕಾಲ ಜೈಲುವಾಸ ಅನುಭವಿಸಿದರು ಆನ್ಲೈನ್ ಲಾಟರಿ ವಿರುದ್ಧ, ನೀರಾಚಳುವಳಿ ವಿದ್ಯುತ್ ಬಿಲ್ ನಿರಾಕರಣೆ ,ಕಾವೇರಿ ನದಿ ನೀರು ಹೋರಾಟ ಹೀಗೆ ನೂರಾರು ಹೋರಾಟದ ರುವಾರಿಗಳಾದ ಪ್ರೊಫೆಸರ್ ರವರು ನಮ್ಮನ್ನೆಲ್ಲ ಅಗಲಿದ್ದು, ಭೌದಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಅವರ ಆದರ್ಶ ಮತ್ತು ಹಾಕಿಕೊಟ್ಟ ಹೋರಾಟದ ಸ್ಪೂರ್ತಿ ರೈತ ಚಳುವಳಿ ಮತ್ತು ಕನ್ನಡ ಚಳುವಳಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದರು .

ಈ ವೇಳೆ ಜಿಲ್ಲಾ ರೈತ ಮುಖಂಡ ಕುದುರಗಂಡಿ ನಾಗರಾಜು , ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ .ಸಿ. ಲಿಂಗರಾಜು ಗೌರವಾಧ್ಯಕ್ಷರುಗಳಾದ ವಿ. ಎಚ್ .ಶಿವಲಿಂಗಯ್ಯ, ನಿವೃತ್ತ ಶಿಕ್ಷಕ ಆಲೂರು ಚನ್ನಪ್ಪ ,ಪ್ರಧಾನ ಕಾರ್ಯದರ್ಶಿ ಸೊಂಪುರ ಉಮೇಶ್, ಉಪಾಧ್ಯಕ್ಷ ಟೈಲರ್ ರಮೇಶ, ಸಂಘಟನಾ ಕಾರ್ಯದರ್ಶಿ ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ತೂಬಿನಕೆರೆ ರಾಜು ಎಂ. ವೀರಪ್ಪ ,ಅರುಣ, ಶ್ರೀನಿವಾಸ್ , ವರದರಾಜು, ಶಿವರಾಜು ಶಿವರಾಮು ಹಾಗೂ ಕಾರ್ಯಕರ್ತರು ಹಾಜರಿದ್ದರು.

Continue Reading

Mandya

ಬೂದನೂರು ಗ್ರಾ.ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಂದೂಡಿದ ಗ್ರಾಮಸ್ಥರು

Published

on

ಮಂಡ್ಯ: 2023-24ನೇ 15ನೇ ಹಣಕಾಸು ಯೋಜನೆ ಹಾಗೂ ಮ.ನ.ರೇ.ಗಾ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ವಿರುದ್ಧ ಕ್ರಮ ವಹಿಸದೆ ಮತ್ತೊಂದು ಗ್ರಾಮಸಭೆ ಮಾಡಲು ಮುಂದಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು ಗ್ರಾಮಸಭೆ ಮುಂದೂಡಿಸಿದ ಘಟನೆ ಜರುಗಿದೆ.

ಮಂಡ್ಯ ತಾಲೂಕಿನ ಬೂದನೂರು ಗ್ರಾಮ ಪಂಚಾಯತಿ ಆವರಣದಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಹಾಗೂ ಮನರೇಗಾ ಕುರಿತ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಆಯೋಜಿಸಲಾಗಿತ್ತು. ಸಭೆ ಅರಂಭವಾದಾಗ ಹಿಂದಿನ ಗ್ರಾಮಸಭೆಯ ಅನುಪಾಲನಾ ವರದಿ ಮಂಡಿಸಿದಾಗ, ಕಳೆದ ಸಾಲಿನ ಅಕ್ರಮ, ಅವ್ಯವಹಾರ ಕುರಿತು ತನಿಖೆ ಮಾಡದ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು.

ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ನ್ಯೂನತೆಗಳ ಕುರಿತು ಗ್ರಾಪಂ ತಿಂಗಳಲ್ಲಿ ಅನುಪಾಲನಾ ವರದಿ ನೀಡಬೇಕು. ಈ ಕುರಿತು ವರ್ಷವಾದರೂ ವರದಿ ನೀಡಿಲ್ಲ. ಈ ಬಗ್ಗೆ ಆಡಾಕ್ ಸಮಿತಿ ನಡೆಸಿ ಕ್ರಮ ವಹಿಸಬೇಕಾದ ತಾ.ಪಂ ಅಧಿಕಾರಿಗಳು ಭ್ರಷ್ಟರ ಜೊತೆ ಶಾಮೀಲಾಗಿ ಅಕ್ರಮ ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್ ದೂರಿದರು.

ಆಡಾಕ್ ಸಮಿತಿಯಲ್ಲಿ ಅಕ್ರಮಕ್ಕೆ ಸರಿಯಾದ ಕ್ರಮವಾಗುವವರೆಗೂ ಗ್ರಾಮಸಭೆ ಮುಂದೂಡುವಂತೆ ಸಭೆ ತೀರ್ಮಾನಿಸಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ನಾಗರಾಜು, ಆಡಳಿತಾಧಿಕಾರಿ ಕುಮಾರಸ್ವಾಮಿ, ಪಿಡಿಒ ಸ್ವಾಮಿ, ಮನರೇಗಾ ಇಂಜಿನಿಯರ್ ನವೀನ ಸೇರಿದಂತೆ ಇತರರು ಇದ್ದರು.

Continue Reading

Mandya

ಮೀನುಗಾರಿಕೆಗೆ ಬೇಕಿರುವ ಸವಲತ್ತುಗಳನ್ನು ಪಡೆದುಕೊಳ್ಳಿ : ಶಾಸಕ ರಮೇಶ್ ಬಂಡಿಸಿದ್ದೇಗೌಡ

Published

on

ಶ್ರೀರಂಗಪಟ್ಟಣ: ಮೀನುಗಾರರು ಸರ್ಕಾರದ ಮಟ್ಟದಲ್ಲಿ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಗಂಜಾಂ ನ ಗಂಗಾಧರೇಶ್ವರ ಮೀನುಗಾರರ ಸಹಕಾರ ಸಂಘದ ಆವರಣದಲ್ಲಿ ಮೀನುಗಾರಿಕಾ ಇಲಾಖೆಯಿಂದ ಮೀನುಗಾರರಿಗೆ ಬಲೆ, ದೋಣಿ ಸೇರಿದಂತೆ ವಿವಿಧ ಸವಲತ್ತುಗಳ ವಿತರಿಸಿ ಅವರು ಮಾತನಾಡಿದರು.

ರಾಜ್ಯವಲಯ ಹಾಗೂ ಜಿಲ್ಲಾ ಪಂಚಾಯಿತಿ, ಒಳನಾಡು ಮೀನುಗಾರಿಕೆ ಅಭಿವೃದ್ದಿ ಯೋಜನೆ ಅಡಿ ಸರ್ಕಾರ ಮೀನು ಕೃಷಿ ಮಾಡುವರಿಗೆ ಅನೇಕ ಸವಲತ್ತುಗಳನ್ನು ನೀಡಲು ಮುಂದಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆ, ನದಿ ಸೇರಿದಂತೆ ಜಮೀನುಗಳಲ್ಲಿ ಹೋಂಡ ತೆಗೆ ಮೀನು ಕೃಷಿ ಮಾಡುವ ಮೀನುಗಾರರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಬರುವ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಮೀನುಗಾರರು ಬಳಸುವ ಹರಿಗೋಲು, ಬಲೆ. ಹೊಂಡಗಳಲ್ಲಿ ಮೀನುಗಳ ಸಾಕಲು ಉಚಿತವಾಗಿ ಗಿಪ್ಟ್‍ ತಿಲಾಪಿಯ ಮಾದರಿಯ ಮೀನುಮರಿಗಳನ್ನು ನೀಡಲಾಗುತ್ತಿದೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಿ ಜೊತೆಗೆ ಗಂಜಾಂನಲ್ಲಿರುವ ಗಂಗಾಧರೇಶ್ವರ ಮೀನುಗಾರಿಕಾ ಸಹಕಾರ ಸಂಘ ತುಂಬಾ ಹಳೆಯದಾಗಿದ್ದು, ಹಲವಾರು ವರ್ಷಗಳಿಂದ ಮೀನುಗಾರರ ಸಂಘದಲ್ಲಿ ಯೋಗಕ್ಷೇಮಗಳಿಗೆ ಹೆಸರುವಾಸಿಯಾಗಿದೆ. ಇನ್ನಷ್ಟು ಉನ್ನತಮಟ್ಟದ ಮಾದರಿ ಸಂಘವನ್ನಾಗಿಸಲು ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.

 

ನಂತರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್‍ ಟಿ.ಡಿ. ಮಾತನಾಡಿ,, ಸರ್ಕಾರ ನಮ್ಮ ಮೀನುಗಾರಿಕೆ ಇಲಾಖೆಯಲ್ಲಿ ಬರುವ ಸವಲತ್ತುಗಳನ್ನು ಒಳನಾಡು ಮೀನುಗಾರಿಕೆ ಅಭಿವೃದ್ದಿ ಯೋಜನೆ ಮೀನುಗಾರರನ್ನು ಗುರುತಿಸಿ ಒಗದಿಸಲಾಗುತ್ತಿದೆ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು . ಜೊತೆಗೆ ಮೀನು ಕೃಷಿಕರು ಮೀನುಗಾರರು ಹೆಚ್ಚಿನ ಆಶಕ್ತಿ ತೋರಬೇಕು. ಮೀನುಗಾರಿಕೆ ಸಲಕರಣಾ ಕಿಟ್‍ ಹಾಗೂ ಲೈಫ್‍ ಜಾಕಿಟ್‍ಗಳನ್ನು ಪಡೆದುಕೊಳ್ಳಿ ಇದೀಗ ಸುಮಾರು 47 ಮಂದಿ ಮೀನುಗಾರರ ಫಲಾನುಭವಿಗಳಿಗೆ ತಲಾ 10 ಸಾವಿರ ರೂಗಳು ತಗಲುವ ವೆಚ್ಚದಲ್ಲಿ ಸಲಕರಣೆಗಳ ನೀಡಲಾಗಿದೆ ಎಂದರು.

ಪುರಸಭೆ ಮಾಜಿ ಪ್ರಭಾರ ಅಧ್ಯಕ್ಷ ಎಂ.ಎಲ್‍. ದಿನೇಶ್‍, ಮೀನುಗಾರರ ಸಂಘದ ಅಧ್ಯಕ್ಷ ಈ ಪ್ರಕಾಶ್‍, ಉಪಾಧ್ಯಕ್ಷ ನಾರಾಯಣ್‍, ಕಾರ್ಯದರ್ಶಿ ಜಿ.ಎಸ್‍ ಗೋವಿಂದರಾಜು, ನಿರ್ದೇಶಕರಾದ ಟಿ. ಕೃಷ್ಣ, ಮಂಜು, ಹೊನ್ನಯ್ಯ,ಪಿ. ಕುಮಾರ್‍, ಮಹದೇವು, ರಮ್ಯಾ, ವಿನಯ್‍ ಕುಮಾರ್‍, ರೇಣುಕಾ , ಪುರಸಭೆ ಮಾಜಿ ಅಧ್ಯಕ್ಷರಾದ ಎಲ್‍. ನಾಗರಾಜು, ಆರ್‍, ಕೃಷ್ಣ ಸೇರಿದಂತೆ ಇತರ ಸಂಘದ ಸದಸ್ಯರು ಹಾಗೂ ಮೀನುಗಾರರು ಉಪಸ್ಥಿತರಿದ್ದರು.

Continue Reading

Trending

error: Content is protected !!