Connect with us

Kodagu

ಸಿಎನ್‌ಸಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯ : ಸೆ.27 ರಿಂದ 2ನೇ ಹಂತ ಆರಂಭ

Published

on

ಜನಮಿತ್ರ ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ಮೊದಲ ಹಂತ ಕೆದಕಲ್ ಮೂಡಗೇರಿ ನಾಡ್ ಮಂದ್ ನಲ್ಲಿ ಪೂರ್ಣಗೊಂಡಿದೆ. 2ನೇ ಹಂತದ ಪಾದಯಾತ್ರೆ ಸೆ.27 ರಿಂದ “ಕುರುಳಿ ಅಂಬಲ” ಮಂದ್ ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಮೊದಲ ಹಂತದ ಕೊನೆಯ ದಿನದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ಪಾಲೇರಿನಾಡ್ ಮಂದ್ ಹಾಗೂ ಮೂಡಗೇರಿ ನಾಡ್ ಮಂದ್ ನಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ನಾಚಪ್ಪ ಅವರು ಮೊದಲ ಹಂತದ ಪಾದಯಾತ್ರೆ ಯಶಸ್ವಿಯಾಗಿದ್ದು, ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ ಎಂದರು.
ಕೊಡವರ ರಕ್ಷಣೆಗಾಗಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಸಂಘಟನೆ ಶಾಂತಿಯುತ ಹೋರಾಟವನ್ನು ಮುಂದುವರೆಸಲಿದೆ. ಕೊಡವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಐದು ಹಂತಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೊದಲ ಹಂತ ಈಗಾಗಲೇ ಪೂರ್ಣಗೊಂಡಿದೆ. ಉಳಿದಿರುವ ನಾಲ್ಕು ಹಂತಗಳ ಪಾದಯಾತ್ರೆಗೆ ಸರ್ವ ಕೊಡವರು ಸಹಕರಿಸುವಂತೆ ಮನವಿ ಮಾಡಿದರು.
2ನೇ ಹಂತದ ಪಾದಯಾತ್ರೆ : ಎರಡನೇ ಹಂತದ ಯಾತ್ರೆಯಲ್ಲಿ ಸೆ.27 ರಂದು ಬೆಳಗ್ಗೆ 9 ಗಂಟೆಗೆ ಮತ್ತೆ ಮಡಿಕೇರಿ ತಾಲ್ಲೂಕು “ಪೊರೆನಾಲ್‌ನಾಡ್’+’ನೂರೊಕ್ಕನಾಡ್’ “ಕುರುಳಿ ಅಂಬಲ” ಮಂದ್ ನಿಂದ ಪುನರಾರಂಭಗೊAಡು ನೆಲ್ಲಿಯಪುದಿಕೇರಿನಾಡ್ ಮಧ್ಯಾಹ್ನ 12 ಗಂಟೆಗೆ ಕಟ್ಟೆಮಾಡ್, 3.30 ಗಂಟೆಗೆ ಅರೆಕಾಡ್ ಮಂದ್‌ನಲ್ಲಿ ಕಾರ್ಯಕ್ರಮ, ಸೆ.28 ರಂದು ಬೆಳಗ್ಗೆ 10ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್-ಐಕೊಳ) (ಮಡಿಕೇರಿ ತಾಲ್ಲೂಕು) ಮಧ್ಯಾಹ್ನ 3 ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ 5.30 ಗಂಟೆಗೆ ಚೆಂಬೆಬೆಳಿಯೂರ್ (ವಿರಾಜಪೇಟೆ ತಾಲ್ಲೂಕು), ಸೆ.29 ರಂದು ಬೆಳಗ್ಗೆ 10 ಗಂಟೆಗೆ ಎಡೆನಾಲ್‌ನಾಡ್ (ಮಗ್ಗುಲ), 2 ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದ (ವಿರಾಜಪೇಟೆ ತಾಲ್ಲೂಕು)ದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಯುವ ಆಪತ್ ಮಿತ್ರ ಯೋಜನೆ : ವಿಪತ್ತು ನಿರ್ವಹಣಾ ತರಬೇತಿ ವಸತಿ ಸಹಿತ ಶಿಬಿರಕ್ಕೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಮೈ ಭಾರತ್ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ, ಭಾರತ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಆಶ್ರಯದಲ್ಲಿ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಮತ್ತು ಕೊಡಗು ಜಿಲ್ಲಾ ಯುವ ಒಕ್ಕೂಟದ ಸಹಯೋಗದಲ್ಲಿ, ಯುವ ಆಪತ್ ಮಿತ್ರ ಯೋಜನೆಯಡಿಯಲ್ಲಿ ೭ ದಿನಗಳ ವಸತಿ ಸಹಿತ ಶಿಬಿರವನ್ನು ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರವು ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ೧೮ ರಿಂದ ೪೦ ವ?ದ ಯುವ ಸ್ವಯಂಸೇವಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಂಗಳೂರಿನ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಇದೇ ಫೆ.೨೩ರಿಂದ ಮಾ.೧ ರವರೆಗೆ ಶಿಬಿರ ನಡೆಯಲಿದೆ. ಆಯ್ಕೆಯಾದ ೨೫೦ ಅಭ್ಯರ್ಥಿಗಳಿಗೆ ರೂ.೧೦ ಸಾವಿರ ಮೌಲ್ಯದ ತುರ್ತು ನೆರವು ಕಿಟ್, ೩ ವ?ಗಳ ಜೀವ ಹಾಗೂ ಆರೋಗ್ಯ ವಿಮೆ ರಕ್ಷಣೆ, ಭಾರತ ಸರಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ, ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಲು ಪ್ರಾಯೋಗಿಕ ಹಾಗೂ ತಾಂತ್ರಿಕ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಫೆ.೧೦ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ. ೯೫೯೧೧೩೭೨೭೫ ನ್ನು ಸಂಪರ್ಕಿಸಬಹುದಾಗಿದೆ ಎಂದು ಪಿ.ಪಿ.ಸುಕುಮಾರ್ ಮಾಹಿತಿ ನೀಡಿದ್ದಾರೆ.

Continue Reading

Kodagu

ಅನುಚಿತ ವ್ಯಾಪಾರ ಪದ್ಧತಿ – ಟೆಲಿಕಾಂ ಸಂಸ್ಥೆಗೆ ದಂಡ

Published

on

ಮಡಿಕೇರಿ : ಟೆಲಿಕಾಂ ಸಂಸ್ಥೆಯೊಂದು ಗ್ರಾಹಕರಿಗೆ ಪ್ರೀ-ಪೇಯ್ಡ್ ಸೌಲಭ್ಯ ಬದಲು ಪೋಸ್ಟ್-ಪೇ ಸೌಲಭ್ಯ ಒದಗಿಸಿದಕ್ಕೆ ಸಂಸ್ಥೆಗೆ ರೂ.೧೦,೦೦೦ ದಂಡವನ್ನು ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ವೀರಾಜಪೇಟೆ ತಾಲೂಕಿನ ನಿವಾಸಿ ಭರತೇಶ್ ಜಿ.ಎಂ ಎಂಬವರು ಜೂನ್-೨೦೨೫ರಲ್ಲಿ ಏರ್ಟೆಲ್ ಸರ್ವೀಸ್ ಕಚೇರಿಗೆ ಭೇಟಿ ನೀಡಿ ತಮ್ಮ ಕಾರ್ಪೋರೇಟ್ ಸಂಪರ್ಕವನ್ನು ಏರ್ಟೆಲ್ ಪ್ರಿ-ಪೇಡ್‌ಗೆ ಪೋರ್ಟ್ (ಬದಲಾಯಿಸಿ) ಮಾಡಲು ಮನವಿ ಮಾಡಿದ್ದಾರೆ. ಇದಕ್ಕೆ ಪೋರ್ಟ್ ಔಟ್ ಮಾಡಿಕೊಳ್ಳಿ, ನಂತರ ಬದಲಾಯಿಸಿಕೊಡುತ್ತೇವೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ. ಅವರ ಸಲಹೆ ಮೇರೆಗೆ ಭರತೇಶ್ ಅವರು ತಮ್ಮ ಸಂಪರ್ಕವನ್ನು ಪೋರ್ಟ್ ಔಟ್ ಮಾಡಿ ಪ್ರೀ-ಪೇಡ್ ಸಿಮ್ ಅನ್ನು ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ನಂತರ ಭರತೇಶ್ ಅವರಿಗೆ “ನಿಮ್ಮ ಪೋಸ್ಟ್ ಪೇಡ್ ಸಂಪರ್ಕವನ್ನು ನೀಡಲಾಗಿದೆ ಎಂದು ಇ-ಮೇಲ್ ಬಂದಿದೆ. ಭರತೇಶ್ ಅವರ ಅನುಮತಿ ಇಲ್ಲದೆ ಏರ್ಟೆಲ್ ಪೋಸ್ಟ್-ಪೇಡ್ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಲಾಗಿದೆ.
ಈ ವಿಷಯದ ಬಗ್ಗೆ ಏರ್ಟೆಲ್ ಕಂಪನಿಯವರಿಗೆ ಮೇಲ್ ಮಾಡಿದಾಗ ಪ್ರೀ-ಪೇಡ್ ಸಂಪರ್ಕಕ್ಕೆ ೯೦ ದಿನ ಕಾಯುವಂತೆ ತಿಳಿಸಿದ್ದಾರೆ.
ಆದರೆ ಇಲ್ಲಿಯವರೆಗೂ ಬದಲಾಯಿಸದ ಕಾರಣ ಹಾಗೂ ಪ್ರತಿ ಮಾಹೆ ಪೋಸ್ಟ್ ಪೇಡ್ ಬಿಲ್ ಕೂಡ ಬರುತ್ತಿರುವುದರಿಂದ ಭರತೇಶ್ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಕಡೆಯವರ ವಾದ-ವಿವಾದಗಳನ್ನು ಕೇಳಿ, ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಪ್ರಿ-ಪೇಡ್ ಸೌಲಭ್ಯದ ಬದಲು ಪೋಸ್ಟ್-ಪೇ ಏರ್ಟೆಲ್ ಸರ್ವೀಸ್ ಅನ್ನು ಅನುಮತಿ ಇಲ್ಲದೆ ನೀಡಿರುವುದನ್ನು ಗಮನಿಸಿದೆ.
ಸಂಸ್ಥೆಯು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿರುವುದರಿಂದ ದೂರುದಾರರು ಪೋಸ್ಟ್-ಪೇಗೆ ಪಾವತಿಸಿರುವ ಮೊತ್ತ ರೂ.೧,೪೧೮ ಜೊತೆಗೆ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೫,೦೦೦ ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳಿಗೆ ರೂ.೫,೦೦೦ ಗಳನ್ನು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ.ಸಿ.ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಆದೇಶ ನೀಡಿದ್ದಾರೆ.

Continue Reading

Kodagu

ಕರ್ತವ್ಯಕ್ಕೆ ಗೈರು ಗ್ರಾಮ ಆಡಳಿತಾಧಿಕಾರಿ ಅಮಾನತು

Published

on

ಮಡಿಕೇರಿ : ಕಚೇರಿಗೆ ಹಾಜರಾಗದೆ ಅನಧಿಕೃತ ಗೈರು ಹಾಜರಾಗಿರುವ ಕಂದಾಯ ಇಲಾಖೆಯ ಕರಿಕೆ ಗ್ರಾಮದಲ್ಲಿ ಆಡಳತಾಧಿಕಾರಿ ಜಟಪ್ಪ ರಾಮಣ್ಣ ಕಟಬರ ಅವರನ್ನು ಜಿಲ್ಲಾಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಡಿಕೇರಿ ತಾಲೂಕು, ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಜಟಪ್ಪ ರಾಮಣ್ಣ ಕಟಬರ ಅವರು ಕಳೆದ ತಾ. ೨-೬-೨೦೨೫ರಿಂದ ಇದುವರೆಗೆ(೨೪೫ ದಿವಸ) ಯಾವದೇ ಅನುಮತಿ ಪಡೆಯದೆ ನಿರಂತರವಾಗಿ ಗೈರು ಹಾಜಾರಾಗಿದ್ದಾರೆ. ಈ ಬಗ್ಗೆ ಉಪ ತಹಶೀಲ್ದಾರರು ಹಾಗೂ ಕಂದಾಯ ಪರಿವೀಕ್ಷಕರು ಕಾರಣ ಕೇಳಿ ನೋಟೀಸ್ ನೀಡಿದರೂ ಯಾವದೇ ಸಮಜಾಯಿಷಿಕೆ ನೀಡಿರುವದಿಲ್ಲ. ಅದೂ ಅಲ್ಲದೆ, ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನದಲ್ಲಿ ವಾಸವಿರದೆ ಸಾರ್ವಜನಿಕ ಹಾಗೂ ಕಚೇರಿ ಕೆಲಸದಲ್ಲಿ ಲೋಪವೆಸಗಿರುವದು ಕಂಡು ಬಂದಿರುತ್ತದೆ. ಇದರಿಂದಾಗಿ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುತ್ತಿರುವದರಿಂದ ನೌಕರರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕೋರಿ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಕೋರಿದ್ದರು.
ಈ ಬಗ್ಗೆ ಪರಿಶೀಲನೆ ಮಾಡಿರುವ ಜಿಲ್ಲಾಧಿಕಾರಿಗಳು; ಆರೋಪಿತ ನೌಕರರು ದಿನಾಂಕ:೦೨.೦೬.೨೦೨೫ ರಿಂದ ಈವರೆಗೂ ಕಛೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುತ್ತಾರೆ. ಈ ಸಂಬಂಧ ಕಾರಣ ಕೇಳಿ ನೋಟೀಸ್ ನೀಡಿದರೂ ಯಾವುದೇ ಸಮಜಾಯಿಷಿಕೆಯನ್ನು ಸಲ್ಲಿಸಿರುವುದಿಲ್ಲ ಮತ್ತು ಕಛೇರಿಯ ಕರ್ತವ್ಯಕ್ಕೆ ಹಾಜರಾಗದೇ ಕೆ.ಸಿ.ಎಸ್ (ನಡತೆ) ನಿಯಮಗಳು-೨೦೨೧ರ ನಿಯಮ-೩(೧)(೧೧)(೧೧೧)ನ್ನು ಉಲ್ಲಂಘನೆ ಮಾಡಿರುತ್ತಾರೆ. ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಲ್ಲಿ ವಾಸವಿರದೇ ಸಾರ್ವಜನಿಕ ಹಾಗೂ ಕಛೇರಿ ಕೆಲಸವನ್ನು ಲೋಪವೆಸಗಿರುವುದು ಕಂಡುಬಂದಿರುತ್ತದೆ. ಈ ಅಂಶಗಳನ್ನು ಪರಿಶೀಲಿಸಿ, ಆರೋಪಿತ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂದು ಮನಗಂಡು ಜಟಪ್ಪ ರಾಮಣ್ಣ ಕಟಬರ ಇವರನ್ನು ಕರ್ನಾಟಕ ನಾಗರೀಕ ಸೇವಾ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ ೧೦(೧)ರಂತೆ ದತ್ತವಾಗಿರುವ ಅಧಿಕಾರದನ್ವಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಕೆ.ಸಿ.ಎಸ್ ನಿಯಮ-೯೮ ರನ್ವಯ ಈ ನೌಕರರು ಅಮಾನತ್ತಿನ ಅವಧಿಯಲ್ಲಿ ಜೀವನಾಧರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ನಿಲಂಬನೆಯ ಅವಧಿಯಲ್ಲಿ ಕಛೇರಿ ಮುಖ್ಯಸ್ಥರ ಪೂರ್ವಾನುಮತಿಯನ್ನು ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲವೆಂದು ತಿಳಿಸಿ, ಅವರ ಸ್ಥಾನವನ್ನು ಪೊನ್ನಂಪೇಟೆ ತಾಲೂಕು, ಶ್ರೀಮಂಗಲ ಹೋಬಳಿ, ಟಿ.ಶೆಟ್ಟಿಗೇರಿ ವೃತ್ತದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಬದಲಾಯಿಸಿ ಆದೇಶಿಸಿದ್ದಾರೆ.

Continue Reading

Trending

error: Content is protected !!