Connect with us

Cinema

ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Published

on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖ್ಯಾತ ನಟ ಶಿವರಾಜ್ ಕುಮಾರ್ ಅವರ ಬೆಂಗಳೂರಿನ ನಾಗವಾರದಲ್ಲಿನ ನಿವಾಸಕ್ಕೆಸೋಮವಾರ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗಿ ಬಂದ ಮೇಲೆ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆಯಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದರು.

ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

Continue Reading

Cinema

ಡಾಲಿ ಧನಂಜಯ್‌ ವಿವಾಹ ಮಹೋತ್ಸವ: ಶುಭ ಕೋರಿದ ರಾಜ್ಯಪಾಲ ಗೆಹ್ಲೋಟ್‌

Published

on

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್‌ ಅವರು ವೈದ್ಯೆ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

ಈ ಕ್ಯೂಟ್‌ ಕಪಲ್‌ನ ವಿವಾಹ ಇದೇ ಫೆ.15 ಮತ್ತು 16 ರಂದು ನಡೆಯುತ್ತಿದೆ. ಈ ಅದ್ದೂರಿ ವಿವಾಹ ಮಹೋತ್ಸವ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಪಾರ್ಕಿಂಗ್‌ ಯಾರ್ಡ್‌ನಲ್ಲಿ ಆಯೋಜಿಸಲಾಗಿದೆ.

ಈ ಹಿನ್ನೆಯಲ್ಲಿ ಶನಿವಾರ ನಡೆದ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಆಗಮಿಸಿ, ನವ ದಂಪತಿಗಳಿಗೆ ಶುಭ ಕೋರಿದರು.

ಇದಲ್ಲದೇ ಕನ್ನಡದ ಖ್ಯಾತ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ರೋರಿಂಗ್‌ ಸ್ಟಾರ್‌ ಶ್ರೀಮುರುಳಿ, ದಿವಂಗತ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಅರುಣ್‌ ಸಾಗರ್‌ ಸೇರಿದಂತೆ ಹಲವರು ಭಾಗವಹಿಸಿ ನವ ಜೋಡಿಗೆ ಶುಭ ಕೋರುತ್ತಿದ್ದಾರೆ.

Continue Reading

Cinema

ದುನಿಯಾ ವಿಜಯ್‌ ನಟನೆಯ ʼʼಮಾರುತʼ ಸಿನಿಮಾದ ಡಬ್ಬಿಂಗ್‌ ಪೂರ್ಣ

Published

on

ದುನಿಯಾ ವಿಜಯ್‌ ನಟನೆಯ ʼಮಾರುತʼ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಡಬ್ಬಿಂಗ್‌ ಕೂಡ ಮುಗಿಸಿದೆ.

ಎಸ್‌. ನಾರಾಯಣ್‌ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ಹಾಗೂ ಶ್ರೇಯಸ್‌ ಮಂಜು ಮುಖ್ಯಭೂಮಿಕೆಯಲ್ಲಿದ್ದು, ವಿಜಯ್‌ಗೆ ನಾಯಕಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ʼಮಾರುತʼ ಚಿತ್ರವನ್ನು ಈಶಾ ಪ್ರೊಡಕ್ಸನ್‌ ಲಾಂಛನದಲ್ಲಿ ಕೆ.ಮಂಜು ಹಾಗೂ ರಮೇಶ್‌ ಯಾದವ್‌ ನಿರ್ಮಾಣ ಮಾಡಿದ್ದಾರೆ.

ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್‌ ಲೋಹಿತಾಶ್ವ, ಪ್ರಮೋದ್ದ್‌ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ರವಿಂಚದ್ರನ್‌ ನಟಿಸಿದ್ದಾರೆ.

Continue Reading

Cinema

ಮುತ್ತುರಾಜ್‌ ಅಭಿಮಾನಿ ಮನೆಗೆ ಯುವರಾಜ್ ಕುಮಾರ್ ಭೇಟಿ

Published

on

ಶ್ರೀರಂಗಪಟ್ಟಣ: ಗಂಜಾಮ್ ನಲ್ಲಿರುವ ಡಾ.ರಾಜ್ ಕುಮಾರ್ ಅಭಿಮಾನಿ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜು ರವರ ನೂತನ ಮನೆಗೆ ಯುವ ನಾಯಕನಟ ಯುವರಾಜ್ ಕುಮಾರ್ ಭೇಟಿ ನೀಡಿ ಶುಭ ಹಾರೈಸಿದರು.

ವರನಟರಾದ ನಮ್ಮ ತಾತನ ಅಭಿಮಾನಿಯ ಕುಟುಂಬದ ಕರೆಗೆ ಓಗೊಟ್ಟು ಅವರ ಮನೆಗೆ ಬಂದಿದ್ದು, ತಮ್ಮ ಕುಟುಂಬದ ಮೇಲೆ ಇಟ್ಟಿರೋ ಅಭಿಮಾನಕ್ಕೆ ಚಿರ ಋಣಿಯಾಗಿರುವುದಾಗಿ ತಿಳಿಸುದ್ದಾರೆ.

ಇದೇ ವೇಳೆ ಅಭಿಮಾನಿ ಕುಟುಂಬವು ಯುವರಾಜ್ ಕುಮಾರ್ ರನ್ನು ಆತ್ಮೀಯವಾಗಿ ಸನ್ಮಾನಿಸಿ ತಮ್ಮ ನೂತನ ಮನೆಯ ಗೋಡೆಯ ಮೇಲೆ ಯುವರಾಜ್ ಕುಮಾರ್ ರಿಂದ ಹಸ್ತಾಕ್ಷರ ಪಡೆದು ಸಂತಸ ವ್ಯಕ್ತಪಡಿಸಿದರು.

 

Continue Reading

Trending

error: Content is protected !!