Connect with us

State

ಖೋ-ಖೋ ವಿಶ್ವಕಪ್‌ ವಿಜೇತೆ ಚೈತ್ರಾರನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ

Published

on

2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು.ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

Continue Reading

Special

ಗೃಹಲಕ್ಷ್ಮಿ ಯೋಜನೆ: 24ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ

Published

on

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಮಹಿಳಾ ಫಲಾನುಭವಿಗಳಿಗೆ 24ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಯೋಜನೆಯ ಹಿನ್ನೆಲೆ:
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುವಂತೆ ಸರ್ಕಾರ ಈ ಯೋಜನೆಯ ಮೂಲಕ ನಿರಂತರ ಹಣಕಾಸು ನೆರವು ನೀಡುತ್ತಿದೆ.

24ನೇ ಕಂತಿನ ಹಣದ ಪ್ರಮುಖ ವಿವರಗಳು:
* ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ ₹2,000
* 24ನೇ ಕಂತಿನ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ (DBT ಮೂಲಕ) ವರ್ಗಾವಣೆ
* ಯಾವುದೇ ಮಧ್ಯವರ್ತಿ ಇಲ್ಲದೆ ಪಾರದರ್ಶಕವಾಗಿ ಹಣ ಜಮಾ
* ಹಂತ ಹಂತವಾಗಿ ಎಲ್ಲಾ ಅರ್ಹರಿಗೆ ಹಣ ಬಿಡುಗಡೆ

ಇದುವರೆಗೆ ಎಷ್ಟು ಹಣ ಸಿಕ್ಕಿದೆ?
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಫಲಾನುಭವಿಗಳಿಗೆ ಒಟ್ಟು ₹29,000 ವರೆಗೆ ಹಣ ಜಮಾ ಆಗಿದೆ. ಮುಂದಿನ ದಿನಗಳಲ್ಲಿ ಮುಂದುವರಿದ ಕಂತುಗಳನ್ನೂ ಸರ್ಕಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಯಾರು ಈ ಯೋಜನೆಗೆ ಅರ್ಹರು?
* ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು
* ಕುಟುಂಬದ ಮಹಿಳಾ ಯಜಮಾನಿಯಾಗಿರಬೇಕು
* ಸರ್ಕಾರ ನಿಗದಿಪಡಿಸಿದ ಆದಾಯ ಮಿತಿಯೊಳಗೆ ಕುಟುಂಬ ಇರಬೇಕು
* ಮಾನ್ಯ ಅನ್ನಭಾಗ್ಯ (ರೇಷನ್) ಕಾರ್ಡ್ ಹೊಂದಿರಬೇಕು

ಹಣ ಜಮಾ ಆಗಿದೆಯೇ ಎಂದು ಹೇಗೆ ತಿಳಿದುಕೊಳ್ಳಬಹುದು?
* ಬ್ಯಾಂಕ್ ಪಾಸ್‌ಬುಕ್ ಪರಿಶೀಲಿಸುವ ಮೂಲಕ
* ಬ್ಯಾಂಕ್‌ನಿಂದ ಬರುವ SMS ಸಂದೇಶದ ಮೂಲಕ
* ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
* ಗ್ರಾಮ ಪಂಚಾಯತ್ ಅಥವಾ ಸೇವಾ ಕೇಂದ್ರಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು

ಹಣ ಜಮಾ ಆಗದಿದ್ದರೆ ಏನು ಮಾಡಬೇಕು?
* ಆಧಾರ್–ಬ್ಯಾಂಕ್ ಲಿಂಕ್ ಸರಿಯಾಗಿದೆಯೇ ಪರಿಶೀಲಿಸಿ
* ರೇಷನ್ ಕಾರ್ಡ್ ಮಾಹಿತಿಯಲ್ಲಿ ದೋಷಗಳಿದೆಯೇ ನೋಡಿ
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಿ
* ಗ್ರಾಮ ಪಂಚಾಯತ್ ಅಥವಾ ಸಂಬಂಧಿತ ಕಚೇರಿಯಲ್ಲಿ ದೂರು ಸಲ್ಲಿಸಬಹುದು

ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಸತತ ಆರ್ಥಿಕ ನೆರವು ದೊರೆಯುತ್ತಿದ್ದು, ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಇದು ಪ್ರಮುಖ ಸಹಕಾರ ನೀಡುತ್ತಿದೆ. ಅರ್ಹ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿ ಯೋಜನೆಯ ಸಂಪೂರ್ಣ ಲಾಭ ಪಡೆಯುವಂತೆ ಸರ್ಕಾರ ಮನವಿ ಮಾಡಿದೆ.

Continue Reading

State

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಬಗ್ಗೆ ಖಡಕ್‌ ರಿಯಾಕ್ಷನ್‌ ಕೊಟ್ಟ ನಟ ಶಿವರಾಜ್‌ ಕುಮಾರ್‌

Published

on

ಬೆಂಗಳೂರು:  ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸ್ಟಾರ್ ವಾರ್ ಮತ್ತು ಫ್ಯಾನ್ಸ್ ವಾರ್ ಗಾಳಿ ಜೋರಾಗಿ ಬೀಸುತ್ತಿದೆ. ಅದರಲ್ಲಿಯೂ ನಟ ಕಿಚ್ಚ ಸುದೀಪ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಿದ್ದಾ- ಜಿದ್ದಿಗೆ ಬಿದ್ದಿದ್ದಾರೆ.

ಈ  ಸಮಯದಲ್ಲಿ ನಟ ಶಿವರಾಜ್‌ಕುಮಾರ್ ಅಭಿನಯದ 45 ಚಲನಚಿತ್ರ ಸಹ ತೆರೆಕಂಡಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಶಿವಣ್ಣ ಮಾತನಾಡಿದ್ದು, ಫ್ಯಾನ್ಸ್ ವಾರ್ ಬಗ್ಗೆ ಖಡಕ್ ರಿಯಾಕ್ಷನ್ ನೀಡಿದ್ದಾರೆ.

ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು, ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಭಾವನೆಗಳೊಂದಿಗೆ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು, ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ, ಎಷ್ಟು ದಿನ ಇರುತ್ತೇವೆ, ಅಷ್ಟು ದಿನ ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಇಂದು (ಡಿ.25) ತಮ್ಮ 45 ಸಿನಿಮಾ ತೆರೆಕಂಡಿದೆ. ಒಂದೇ ಸಿನಿಮಾದಲ್ಲಿ ಮೂವರು ನಟರು ಅಭಿನಯಿಸಿದ್ದಾರೆ. ಈ ವೇಳೆ ಫ್ಯಾನ್ಸ್ ವಾರ್ ಬಗ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೂ ಮೆಸೇಜ್ ಪಾಸ್ ಮಾಡಿದ್ದಾರೆ . ಹೀಗಾಗಿ ಮುಂದಾದರೂ ಫ್ಯಾನ್ಸ್ ವಾರ್‌ಗೆ ತೆರೆ ಬೀಳುತ್ತಾ ಕಾದು ನೋಡಬೇಕಿದೆ.

Continue Reading

State

ಕರ್ನಾಟಕ ರಾಜ್ಯದಲ್ಲಿ SIR ಜಾರಿ ಆಗಬೇಕು: ಬಸನಗೌಡ ಪಾಟೀಲ್ ಯತ್ನಾಳ್

Published

on

ವಿಜಯಪುರ: ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳು ಬಹಳ ಜನರಿದ್ದಾರೆ. ಅವರೆನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಜಾರಿಗೆ ಬಂದ ಬಳಿಕ  ಈ ವಲಸಿಗರು ಹಾಗೂ ರೊಹಿಂಗ್ಯಾಗಳಿಗೆ ತೊಂದರೆ ಆಗಿದೆ. ಇವರದೊಂದಿಗೆ ಇವರಿಗೆ ಸಹಕಾರ, ಬೆಂಬಲ ನೀಡುವವರನ್ನು ದೇಶ ಬಿಟ್ಟು ಹೊರಹಾಕಬೇಕು. ನಮ್ಮ ರಾಜ್ಯದಲ್ಲೂ ಇಂತಹವರು ಬಹಳಷ್ಟು ಇದ್ದಾರೆ. ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು. ಇಲ್ಲಿಗೆ ವಲಸೆ ಬಂದು ಅವರು ಇಲ್ಲಿ ಮತದಾರರಾಗಿದ್ದಾರೆ ಎಂದು ಒತ್ತಾಯಿಸಿದ್ದಾರೆ.

ನಮ್ಮ ವಿಜಯಪುರದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನ ಈ ತರಹದ ಕಳ್ಳರಿದ್ದಾರೆ. ಈ ನಕಲಿ ಮತದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇನೆ. ಒಬ್ಬ ಸಲೀಂ ಅಂತಾ ಮೂರು ವೋಟರ್ ಐಡಿ ಮಾಡಿಕೊಂಡಿಸಿದ್ದಾನೆ. ಅವನ ಮೂರು ವೋಟರ್ ಐಡಿಯಲ್ಲಿ ಫೋಟೋ ಒಂದೇ ಇದೆ. ಆದರೆ ಒಂದೊಂದು ವೋಟರ್ ಐಡಿಯಲ್ಲಿ ಒಂದೊಂದು ಶಬ್ದಗಳ ಅಕ್ಷರಗಳಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಚಿತ್ರದುರ್ಗದ ಬಸ್ ದುರಂತ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ದುರಂತ ಬಹಳ ದುಃಖ ತಂದಿದೆ. ಈ ರೀತಿ ಅನೇಕ ಬೆಂಕಿ ದುರಂತಗಳು ಆಗ್ತಿವೆ. ಹೀಗೆ ಅಮಾಯಕರ ಸಜೀವ ದಹನ ಆಗುತ್ತಿರುವುದು ದುಃಖದ ಸಂಗತಿ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ರೀತಿ ಅವಘಡಗಳು ಯಾಕೆ ಆಗುತ್ತಿವೆ. ಬೆಂಕಿ ಅವಘಢದ ಬಗ್ಗೆ ಪತ್ತೆ ಹಚ್ಚಬೇಕು. ವಾಹನಗಳ ಕಂಪನಿಗಳು ಇದರ ಬಗ್ಗೆ ಮುಂಜಾಗೃತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ದುರಂತದಲ್ಲಿ ಸಾವಿಗೀಡಾದ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಿಲಿ ಸಂತಾಪ ಸೂಚಿಸಿದ್ದಾರೆ.

Continue Reading

Trending

error: Content is protected !!