Location
ಪಶು ಸಖಿ ಯೋಜನೆಗೆ ಸಿಎಂ ಚಾಲನೆ

ಮೈಸೂರು: ಪಶು ಸಖಿ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ.
ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಪಶುಸಖಿಯರಿಗೆ A-HELP ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟನೆ. NADCP ಯೋಜನೆಯಡಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ. ಜೊತೆಗೆ ಉತ್ತನಹಳ್ಳಿ ಗ್ರಾಮದಲ್ಲಿ ನೂತನ ಪಶುಚಿಕಿತ್ಸಾಲಯ ಪ್ರಾರಂಭೋತ್ಸವ. ಈ ಎಲ್ಲಾ ಕಾರ್ಯಕ್ರಮಗಳನ್ನು
ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮುಯ್ಯ.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ.
ಸಚಿವರಾದ ಡಾ ಎಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಶಾಸಕರಾದ ಎ ಆರ್ ಕೃಷ್ಣಮೂರ್ತಿ, ಡಿ ರವಿಶಂಕರ್, ಕೆ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಎಂಎಲ್ಸಿ ಡಾ ಡಿ ತಿಮ್ಮಯ್ಯ ಸೇರಿದಂತೆ ಇತರ ಪ್ರಮುಖರು ಉಪಸ್ಥಿತಿ.
Hassan
ಕೆಐಎಡಿಬಿಯಿಂದ ಭೂಮಿ ಸ್ವಾಧೀನ, ರೈತರಿಗೆ ಯಾವ ಅನುಕೂಲವಿಲ್ಲ

ಹಾಸನ: ತಾಲ್ಲೂಕಿನ ೧೧ ಗ್ರಾಮಗಳ ರೈತರ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಇವರು ಸ್ವಾಧೀನಪಡಿಸಿಕೊಂಡಿದ್ದರಿಂದ ಈಗ ನಮಗೆ ಜಮೀನಿಲ್ಲ. ಪ್ರಸ್ತುತ ರೈತ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ರೈತರಾದ ನಮಗೆ ಯಾವ ಅನುಕೂಲ ಸಿಕ್ಕಿರುವುದಿಲ್ಲ. ರೈತರಿಗೆ ಕನಿಷ್ಠ ಒಂದು ಗುರುತಿನ ಚೀಟಿಯನ್ನಾದರೂ ನೀಡಬೇಕೆಂದು ತಾಲೂಕು ಭೂಸಂತ್ರಸ್ತರ ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಶ್ರೀನಿವಾಸ ಮೂರ್ತಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರೈತರ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊಳೆನರಸೀಪುರ ರಸ್ತೆ ಹಾಸನ ರವರು ಸ್ವಾಧೀನಪಡಿಸಿಕೊಂಡರೂ ಈಗ ನಮಗೆ ಜಮೀನಿಲ್ಲ. ರೈತರಿಗೆ ಯಾವ ಅನುಕೂಲ ಸಿಗಲಿಲ್ಲ. ಹಾಸನ ತಾಲ್ಲೂಕು ಕಸಬಾ ಮತ್ತು ಶಾಂತಿಗ್ರಾಮ ಹೋಬಳಿಗೆ ಸೇರಿದ ಬೊಮ್ಮನಾಯ್ಕನಹಳ್ಳಿ, ಚನ್ನಪಟ್ಟಣ, ಚಿಕ್ಕಬಸವನಹಳ್ಳಿ, ದೊಡ್ಡಬಸವನಹಳ್ಳಿ, ಕೌಶಿಕ, ಸಮುದ್ರವಳ್ಳಿ, ಸಂಕಲಾಪುರ, ಪಿರುಮೇನಹಳ್ಳಿ, ನಾಗತವಳ್ಳಿ, ಕೊಕ್ಕನಘಟ್ಟ, ಹನುಮಂತಪುರ ಸೇರಿ ಒಟ್ಟು ೧೧ ಗ್ರಾಮಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ನೀಡಿರುವ ಜಮೀನಾಗಿದೆ. ಉದ್ಯಮಗಳು ಸ್ಥಾಪಿತವಾಗಿ ಕಾರ್ಯ ಆರಂಭಿಸದೆ ಖಾಲಿ ಜಮೀನಿನಲ್ಲಿ ರೈತರು ನೀಡಿರುವ ಜಮೀನಿನ ಬದಲಾಗಿ ಪ್ರೊರೇಟಾ ದರದಲ್ಲಿ ಅಭಿವೃದ್ಧಿಪಡಿಸಿದ ಜಮೀನನ್ನು ಮಂಜೂರು ಮಾಡುವುದಾಗಿದೆ. ಕೈಗಾರಿಕಾ ಅಭಿವೃದ್ಧಿಗಾಗಿ ಮತ್ತು ಜಮೀನು ನೀಡುವ ಪ್ರತಿ ಮನೆಗೊಬ್ಬ ವ್ಯಕ್ತಿಗೆ ಸ್ಥಾಪಿತವಾಗುವ ಉದ್ಯಮದಲ್ಲಿ ಕೆಲಸ ದೊರಕುತ್ತದೆಂಬ ಆಶ್ವಾಸನೆಗಳ ಮೇರೆಗೆ ನಮ್ಮ ಫಲವತ್ತಾದ ಜಮೀನನ್ನು ಅತ್ಯಂತ ಕಡಿಮೆ ಭೂ ಪರಿಹಾರ ಅಂದರೆ ಎಕರೆ ಒಂದಕ್ಕೆ ರೂ. ೫೦,೦೦೦ ರೂಗಳಿಂದ ರೂ. ೬೦,೦೦೦ ಪಡೆದು ಜಮೀನುಗಳನ್ನು ಭೂಸ್ವಾಧೀನಾಧಿಕಾರಿಗಳ ಮೂಲಕ ಕೈಗಾರಿಕಾ ಅಭಿವೃದ್ದಿ ಪ್ರದೇಶ ಮಂಡಳಿ (ಕೆ.ಐ.ಎ.ಡಿ.ಬಿ) ಇವರಿಗೆ ೧೯೯೦ ರಿಂದ ೧೯೯೩ರ ಅವಧಿಯಲ್ಲಿ ವಹಿಸಿಕೊಟ್ಟಿದ್ದು, ಈರಿ ಸ್ಥಳಗಳಲ್ಲಿ ೧೯೯೩ ರಿಂದ ೨೦೦೮ ಇಸವಿಯವರೆಗೂ ಯಾವುದೇ ಕಾರ್ಖಾನೆಗಳು ಸ್ಥಾಪನೆಯಾಗಿ ಕಾರ್ಯ ಪ್ರಾರಂಭಿಸಿರುವುದಿಲದಿಲ್ಲ. ಕೈಗಾರಿಕೆಯಲ್ಲಿ ರೈತರಿಗೆ ಕೆಲಸ ದೊರಕದೆ ಇದ್ದುದರಿಂದಲೂ ಸ್ಥಳೀಯ ಶಾಸಕರು ರೈತ ಸಂಘಗಳು, ಜನಪ್ರತಿನಿಧಿಗಳ ಮುಖಾಂತರ ಹೋರಾಟ ನಡೆಸಿ ಅದಕ್ಕೆ ಸರ್ಕಾರದಿಂದ ಅನುಕೂಲಕರ ಸ್ಪಂದನೆ ಸಿಗದೆ ಅನಿವಾರ್ಯವಾಗಿ ಕಾನೂನು ರೀತಿ ಹೋರಾಟ ಮುಖಾಂತರ ನಾವು ನೀಡಿದ್ದ ಜಮೀನುಗಳನ್ನು ಹಿಂದಿರುಗಿಸುವಂತೆ ಕಳೆದ ೧೭ ವರ್ಷಗಳಿಂದ ನ್ಯಾಯಾಲಯದಲ್ಲಿ ಮುಂದುವರಿದಿದ್ದೇವೆ. ಹೋರಾಟಕ್ಕೆ ಒಂದು ತಾರ್ತಿಕ ಮತ್ತು ತಾತ್ವಿಕ ಅಂತ್ಯವನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಹೋರಾಟ ಮಾಡುತ್ತಿರುವರವರ ಪರವಾಗಿ ಪರಿಷ್ಕೃತ ಮನವಿಯಂತೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಕೈಗಾರಿಕಾ ಸಚಿವರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು, ಕೈಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಕಾರ್ಯದರ್ಶಿರವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಗೌರವಾನ್ವಿತ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮತ್ತು ಮಾಜಿ ಪ್ರಧಾನಿ ರವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ. ರೇವಣ್ಣ ಮತ್ತು ಜಿಲ್ಲಾಧಿಕಾರಿಯವರು ರವರಿಗೆ ೨೦೧೮ ರಲ್ಲಿ ಮನವಿ ಸಲ್ಲಿಸಲಾಗಿತ್ತು. ನಮ್ಮಗಳ ಕಾನೂನು ಹೋರಾಟ ೨೦೦೮ ಕಂದ ಈವರೆಗೆ ಅಂದರೆ ೧೭ ವರ್ಷ ಆಗಿರುವುದರಿಂದ ಒಂದು ತಾರ್ತಿಕ ಮತ್ತು ತಾತ್ವಿಕ ಅಂತ್ಯವನ್ನು ಕಂಡಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಅಭಿವೃದ್ಧಿಪಡಿಸುವ ಮತ್ತು ತಮ್ಮ ಸ್ವಾಧೀನದಲ್ಲೇ ಖಾಲಿ ಇರುವ ಜಮೀನಿನಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ಬದಲು ಅದರ ಶೇ.೨೫ ರಷ್ಟು ಅಭಿವೃದ್ಧಿಪಡಿಸಿದ ಜಮೀನನ್ನು ಪ್ರೊರೇಟಾ ದರದಲ್ಲಿ ಮಂಜೂರು ಮಾಡಬೇಕೆಂತಲೂ ಹಾಗೂ ನಮಗೆ ಮಂಜೂರು ಮಾಡುವ ಜಮೀನಿನ ಕ್ಷೇತ್ರಕ್ಕೆ ಈ ಹಿಂದೆ ನೀಡಿದ ಪರಿಹಾರವನ್ನು ಪ್ರೊರೇಟಾ ದರದಲ್ಲಿ ಹಿಂತಿರುಗಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಾಸನದ ಮೇಲೆ ತಿಳಿಸಿದ ಗ್ರಾಮಗಳಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ವ್ಯಕ್ತಿವಾರು ದಾಖಲೆಗಳನ್ನು ಪ್ರಕಟಿಸಿ ಭೂಮಿ ನೀಡಿದ ರೈತರಿಗೆ ಕನಿಷ್ಠ ಒಂದು ಗುರುತಿನ ಚೀಟಿಯನ್ನಾದರೂ ನೀಡಿದರೆ ಸರ್ಕಾರದಲ್ಲಿ ರೈತರು ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವುದರಿಂದ ಗುರುತಿನ ಚೀಟಿ ನೀಡಲು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಭೂಸಂತ್ರಸ್ತರ ರೈತ ಹೋರಾಟ ಸಮಿತಿಯ ಸುರೇಶ್, ಕಮಲಮ್ಮ, ಪುಟ್ಟಸ್ವಾಮಿಗೌಡ ಇತರರು ಉಪಸ್ಥಿತರಿದ್ದರು.
Mandya
ಯುವಜನತೆಯ ಜೀವನೋಪಾಯಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿಗಳು ಅತಿ ಮುಖ್ಯ: ಡಾ.ಕುಮಾರ

ಮಂಡ್ಯ : ಯುವಜನತೆ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗಗಳಿಸಿ ಉತ್ತಮ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ 128 ಬ್ಯಾಚ್ ಗಳಲ್ಲಿ 3917 ಜನರಿಗೆ ವೃತ್ತಿಪರ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು
ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೈಗಾರಿಕೆಗಳ ಆವರಣದಲ್ಲಿಯೇ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗವನ್ನು ಕಲ್ಪಿಸಿ ಕೊಡುವ ವಿನೂತನ ಕಾರ್ಯಕ್ರಮವಾದ “ಇಂಡಸ್ಟ್ರೀಸ್ ಲಿಂಕೇಜ್ ಸೆಲ್ಸ್” ಅನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಜಾರಿಗೊಳಿಸಿ, ಪ್ರಸ್ತುತ ಈ ಯೋಜನೆ ಅಡಿ ಗೆಜ್ಜಲಗೆರೆ ಕೈಗಾರಿಕಾ ವಲಯದಲ್ಲಿ ಸ್ಥಾಪಿತವಾಗಿರುವ ಶ್ರೀ ಬಾಲಾಜಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅಪೆರಲ್ಸ್ ನಲ್ಲಿ ಸ್ಯಾಂಪಿಂಗ್ ಟೈಲರ್ ಮತ್ತು ಸಿವಿಂಗ್ ಮಷೀನ್ ಆಪರೇಟರ್ ವೃತ್ತಿಗೆ 60 ಜನ ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ.
ನಲ್ ಜಲ್ ಯೋಜನೆಯು NRLM ಅಡಿ ರೂಪಿಸಿರುವ ಮಹಿಳಾ ಸ್ವ ಸಹಾಯ ಗುಂಪುಗಳ ಆಯ್ದ ಸದಸ್ಯರಿಗೆ ಬಹು ಕೌಶಲ್ಯ ತರಬೇತಿಯಡಿ ಪ್ಲಂಬಿಂಗ್, ವಿದ್ಯುತ್ ಕೆಲಸ, ಕಲ್ಲು ಮಟ್ಟು ಕೆಲಸ, ಉಪಕರಣ ಮತ್ತು ಯಂತ್ರೋಪಕರಣಗಳ ರಿಪೇರಿ ಕೆಲಸಗಳ ಬಗ್ಗೆ ಬಹು ಕೌಶಲ್ಯ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು ಈ ಯೋಜನೆಯಲ್ಲಿ 49 ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
“ನನ್ನ ವೃತ್ತಿ ನನ್ನ ಆಯ್ಕೆ” ಕಾರ್ಯಕ್ರಮವನ್ನು ರಾಜ್ಯದಾದ್ಯಂತ 500 ಶಾಲೆ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ, ಈ ಯೋಜನೆಯಲ್ಲಿ 8 ರಿಂದ 12ನೇ ತರಗತಿಯ ಮಕ್ಕಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಮಾರ್ಗದರ್ಶನ ನೀಡಲಾಗುವುದು, ಮಂಡ್ಯ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಂದೊಂದು ಶಾಲೆಯನ್ನು ಆಯ್ದುಕೊಂಡು ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯವರ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು.
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ 4.0 ಅಡಿ ಆಧುನಿಕ ಕೋಷ್ಟಕದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬ್ಲಾಕ್ ಚೈನ್ 3 ಡಿ ಪ್ರಿಂಟಿಂಗ್, ಡ್ರೋನ್ ಬಳಸುವಿಕೆ ಇತ್ಯಾದಿ ವೃತ್ತಿಗಳಿಗೆ ತರಬೇತಿ ನೀಡಲಾಗುವುದು, ಈ ಕಾರ್ಯಕ್ರಮದಲ್ಲಿ 210 ಗಂಟೆಗಳ ಕಾಲ ತರಬೇತಿ ನೀಡಲಾಗುವುದು, ಜಿಲ್ಲೆಯ ಜಿ ಮಾದೇಗೌಡ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು. ಈಗಾಗಲೇ 308 ಫಲಾನುಭವಿಗಳು ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.
ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ 222 ಜನರಿಗೆ ಅವಕಾಶ ಕಲ್ಪಿಸಲಾಗಿದೆ, ಈ ಯೋಜನೆಯ ಮೂಲ ಉದ್ದೇಶ ನಗರ ಪ್ರದೇಶದ ಬಿಪಿಎಲ್ ಕುಟುಂಬಗಳ ಸಮುದಾಯಕ್ಕೆ ಸವಲತ್ತುಗಳನ್ನು ದೊರಕಿಸಿ ಬಡತನದ ರೇಖೆಯಿಂದ ಮೇಲೆ ತರುವುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Hassan
ಸತ್ಯಮಂಗಲದಲ್ಲಿ ನಮ್ಮ ಕ್ಲಿನಿಕ್ ಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ

ಹಾಸನ: ಹಾಸನ ನಗರದ ಹೋರ ವಲಯದ ಸತ್ಯ ಮಂಗಲ ಬಡಾವಣೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು.
ಅದಕ್ಕೂ ಮುನ್ನ ಕ್ಲಿನಿಕ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಸಭೆ ನಗರಪಾಲಿಕೆಯಾಗಿ ಬೆಳೆಯುತ್ತಿವ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಸನಕ್ಕೆ ತರಲಾಗುತ್ತಿದೆ ಎಂದರು.
ಅದರಂತೆ ಸತ್ಯಮಂಗಲಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕೆಲಸಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಅಲ್ಲದೆ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಬಹಳ ಮುಖ್ಯ ಇದನ್ನು ಮನಗಂಡು ಅವರ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಬಡಾವಣೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು .
ಈ ವೇಳೆ ನಗರಸಭೆ ಅಧ್ಯಕ್ಷರು ಸದಸ್ಯರುಗಳು, ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಮುಖಂಡರು, ಕಾರ್ಯಕರ್ತರು, ಯುವಕರು,ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು…
-
Hassan22 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Chamarajanagar21 hours ago
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ
-
Kodagu22 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan22 hours ago
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ
-
Mysore21 hours ago
ಜಿಡಿ ಹರೀಶ್ಗೌಡ ಸಹಕಾರ ಸಂಘದ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ: ಎಚ್.ಪಿ.ಮಂಜುನಾಥ್
-
Mysore21 hours ago
ನಂಜನಗೂಡು ದೊಡ್ಡ ಜಾತ್ರೆ: ಭಕ್ತರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ದರ್ಶನ್ ಧ್ರುವ ಸೂಚನೆ
-
State18 hours ago
ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಸ್ಟ್ 4ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಹೇಗೆ ಅರ್ಜಿ ಸಲ್ಲಿಸುವುದು?
-
State23 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?