Connect with us

State

ಸಿಎಂ ಬದಲಾವಣೆ ವಿಚಾರ: ಹೈಕಮಾಂಡ್‌ಗೆ ನಿರ್ಧಾರವೇ ಅಂತಿಮ ಎಂದ ಸಿದ್ದರಾಮಯ್ಯ

Published

on

ಬೆಂಗಳೂರು: ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿ ಬರುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಮುಖ್ಯಮಂತ್ರಿಯಾಗುವಂತೆ ಆಶಿಸುತ್ತಿದ್ದಾರೆ.

ನಿನ್ನೆಯಷ್ಟೇ ಡಿಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿದ ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರು, ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಈ ಬಗ್ಗೆ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ ಎಂದರು.

ಇನ್ನು ನಿಗಮ ಹಾಗೂ ಮಂಡಳಿಗಳ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಬಿಜೆಪಿಗರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

Continue Reading

State

ಈ ಕೆಲಸ ಮಾಡದಿದ್ದರೆ 7 ವರ್ಷ ತುಂಬಿದ ಮಕ್ಕಳ ಆಧಾರ್ ಕಾರ್ಡ್ ರದ್ದು : ಈಗಲೇ ಉಚಿತವಾಗಿ ಮಾಡಿಸಿ

Published

on

Biometric Update for Adhar : ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 7 ವರ್ಷ ಮೀರಿದ ಮಕ್ಕಳ ಬಯೋಮೆಟ್ರಿಕ್ ಮಾಡದಿದ್ದರೆ ಅಂತಹ ಮಕ್ಕಳ ಆಧಾರ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಹೇಳಿದೆ.

7 ವರ್ಷ ಮೀರಿದ ಮಕ್ಕಳ ಬಯೋಮೆಟ್ರಿಕ್ ನೀಡದಿದ್ದರೆ ‘ಆಧಾ‌ರ್’ ರದ್ದು: ಎಚ್ಚರಿಕೆ

ಹೌದು, ಯಾವುದೇ ಮಕ್ಕಳ ಆಧಾರ್ ಕಾರ್ಡ್ ಅನ್ನು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಮಾಡಿಸಿದ್ದರೆ, ಏಳು ವರ್ಷ ಮುಗಿಯುತ್ತಿದ್ದಂತೆಯೇ ಅಂತವರ ಬಯೋಮೆಟ್ರಿಕ್ ಗಳನ್ನು ಶೀಘ್ರದಲ್ಲಿಯೇ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕೆಂದು ಪ್ರಾಧಿಕಾರವು ತಿಳಿಸಿದೆ.

ಇಲ್ಲದಿದ್ದರೆ ಅಂತವರ ಆಧಾರ್ ಕಾರ್ಡನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದಕ್ಕಾಗಿ ಪ್ರಾಧಿಕಾರವು ರಿಮೈಂಡರ್ ಮೆಸೇಜ್ ಗಳನ್ನು ಕೂಡ ಕಳುಹಿಸುತ್ತಿದ್ದು, ಕೂಡಲೇ ನಿಮ್ಮ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿ.

ಬಯೋಮೆಟ್ರಿಕ್ ಅಪ್ಡೇಟ್ ಏಕೆ ಮಾಡಿಸಬೇಕು?

ಮಕ್ಕಳ ಆಧಾರ್ ಕಾರ್ಡ್ ಅನ್ನು 5 ವರ್ಷದ ಒಳಗಿನವರಾಗಿದ್ದಾಗ ಮಾಡಿಸಿದ್ದರೆ, 7 ವರ್ಷ ವಯಸ್ಸು ತುಂಬಿದ ನಂತರ ಅವರ ಬೆರಳಚ್ಚು, ಫೋಟೋ ಸೇರಿದಂತೆ ಇತರೆ ಬಯೋಮೆಟ್ರಿಕ್‌ಗಳನ್ನು ಅಪ್‌ಡೇಟ್ ಮಾಡಿಸುವುದರಿಂದ ಡೇಟಾ ನಿಖರತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

ಅಪ್ಡೇಟ್ ಮಾಡಿಸಲು ಶುಲ್ಕ ಎಷ್ಟು?

5 ರಿಂದ 7 ವರ್ಷದ ಒಳಗಿನ ಮಕ್ಕಳ ಬಯೋಮೆಟ್ರಿಕ್ ಅನ್ನು ಅಪ್ಡೇಟ್ ಮಾಡಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ, ಉಚಿತವಾಗಿ ಮಾಡಿಸಬಹುದು. 7 ವರ್ಷ ಮೇಲ್ಪಟ್ಟ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು 100 ರು. ಶುಲ್ಕ ವಿಧಿಸಲಾಗುವುದು.

ನಿಮ್ಮ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಆಧಾರ್ ಸೆಂಟರ್ ಗೆ ಭೇಟಿ ನೀಡಿ.

Continue Reading

State

ಬೈರತಿ ಬಸವರಾಜ್ ವಿರುದ್ಧ FIR ದಾಖಲು: ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

Published

on

ಬೆಂಗಳೂರು: ಬೈರತಿ ಬಸವರಾಜ್ ವಿರುದ್ಧ ಹತ್ಯೆ ಪ್ರಕರಣ, ಎಫ್‌ಐಆರ್ ದಾಖಲಾಗಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ  ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿ , ಬೈರತಿ ಬಸವರಾಜ್ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅವರು ಆ ತರಹದ ಅವಿವೇಕದ ಕೆಲಸ ಮಾಡೋರಲ್ಲ. ಅಷ್ಟು ಕೀಳುತನಕ್ಕೆ ಇಳಿಯಲ್ಲ. ಇದು ಸುಳ್ಳು ಕೇಸ್, ಅವರು ನಿರ್ದೋಷಿಯಾಗಿ ಹೊರಗೆ ಬರುತ್ತಾರೆಂಬ ವಿಶ್ವಾಸ ಇದೆ. ಕಾನೂನು ಮೀರಿ ಒಬ್ಬ ಜನಪ್ರತಿನಿಧಿಗೆ ಸರ್ಕಾರ ತೊಂದರೆ ನೀಡಬಾರದು ಅಥವಾ ಹೊಟ್ಟೆಕಿಚ್ಚಿಗೋಸ್ಕರ ಬೈರತಿ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಬೈರತಿ ಬಸವರಾಜ್ ಅವರನ್ನು ಉದ್ದೇಶಪೂರ್ಕವಾಗಿ ಸಿಲುಕಿಸಲು ಎರಡೆರಡು ಎಫ್‌ಐಆರ್ ಹಾಕಿದ್ದಾರೆ. ಇದು ಸರ್ಕಾರದ ಮಸಲತ್ತು. ಮೊದಲ ಕಾಪಿಯಲ್ಲಿ ಬೈರತಿ ಬಸವರಾಜ್ ಹೆಸರಿಲ್ಲ. ಎರಡನೇ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ಅವರು ಬೈರತಿ ಬಸವರಾಜ್ ಹೆಸರು ಹೇಳಿದ್ದಾರೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ಒಂದೇ ಠಾಣೆಯಲ್ಲಿ ಎರಡೆರಡು ಎಫ್‌ಐಆರ್ ಹೇಗೆ ದಾಖಲಾದವು? ಯಾಕೆ ದಾಖಲಾಯಿತು? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಇನ್ನೂ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ನಿಂದ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ಪೊಲೀಸರು ಗುಲಾಮಗಿರಿ ಮಾಡುತ್ತಿದ್ದಾರೆ. ಹತ್ಯೆ ಆದವನ ತಾಯಿಯೇ ಶಾಸಕರ ಪಾತ್ರ ಇಲ್ಲ ಎಂದಿದ್ದಾರೆ. ಹೀಗಿರುವಾಗ ಈ ಎಫ್‌ಐಆರ್ ಯಾಕೆ? ಅಲ್ಲದೇ ಆರೋಪಿಗಳ ಪೋಟೋ ಇದೆ ಮಾತ್ರಕ್ಕೆ ಅವರು ಆಪ್ತರಾ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಲಬುರಗಿಯ ಡ್ರಗ್ಸ್ ಕೇಸ್ ಆರೋಪಿಯೋರ್ವ  ಸಚಿವ ಪ್ರಿಯಾಂಕ್ ಖರ್ಗೆಯೊಂದಿಗೆ  ಪೋಟೋ ತೆಗೆಸಿಕೊಂಡಿದ್ದಾನೆ. ಅಲ್ಲಿ ಎಫ್‌ಐಆರ್ ಆಗಿದ್ಯಾ? ಯಾಕೆ ಹೀಗೆ? ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ನಾವೂ ಅನೇಕ  ಬದಲಾವಣೆಗಳನ್ನು ನೋಡಿದ್ದೇವೆ. ಇಂದು ನೀವು, ನಾಳೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಾಗ್ದಾಳಿ ನಡೆಸಿದರು.

Continue Reading

State

ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು: ಸುರೇಶ್‌ ಬಾಬು

Published

on

ಬೆಂಗಳೂರು: ರಾಜ್ಯ ಸರ್ಕಾರ, ಜೆಡಿಎಸ್  ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯ ಮಾಡುತ್ತಿದೆ. ಹಾಗಾಗಿ ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು, ಇಲ್ಲವಾದರೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ

ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಣಿಸುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಹಣ ನೀಡುತ್ತಿಲ್ಲ. ಈ ಸರ್ಕಾರ ಅಭಿವೃದ್ಧಿ ಪರ ಇಲ್ಲ. ಈ ಸರ್ಕಾರದಲ್ಲಿ ಸುರ್ಜೇವಾಲ ಸೂಪರ್ ಸಿಎಂ ಆಗಿದ್ದಾರೆ. ಜನರು ಸುರ್ಜೇವಾಲಗೆ ಓಟ್ ಹಾಕಿದ್ದರಾ? ಸುರ್ಜೇವಾಲ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ. ಸುರ್ಜೇವಾಲ ಹೇಳಿದ ಮೇಲೆ ಸಿಎಂ 50 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ವಿಶೇಷ ಅಧಿಕಾರಿಗಳಿಗೆ ಪಟ್ಟಿ ನೀಡಿ ಎಂದು ಶಾಸಕರಿಗೆ ಸಿಎಂ ಪತ್ರ ಬರೆದಿದ್ದಾರೆ. ದುಡ್ಡು ಇದ್ದರೆ ಇವರು ಯಾಕೆ ಹಣ ನೀಡುತ್ತಿಲ್ಲ? ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡೋಕೆ ಈ ಸರ್ಕಾರ ಮುಂದಾಗಿದೆ. ವಿಶೇಷ ಅನುದಾನವೆಂದು ಬಿಡುಗಡೆ ಮಾಡಿ ಅದನ್ನು ಹೈಕಮಾಂಡ್‌ಗೆ ಕಪ್ಪ-ಕಾಣಿಕೆ ಕೊಡುತ್ತಿದ್ದಾರೆ ಅನ್ನಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಸಂಸತ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ., ಬಿಜೆಪಿ ಅವರಿಗೆ 25 ಕೋಟಿ ರೂ. ಕೊಡೋಣವೆಂದು ಚರ್ಚೆ ಆಗಿದೆ. ಜೆಡಿಎಸ್ ಶಾಸಕರಿಗೆ ಈಗಲೇ ಅನುದಾನ ಕೊಡೋದು ಬೇಡವೆಂದು ಇವರು ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ 224 ಶಾಸಕರು ಒಂದೇ. ಇವರೇನು ಕೆಪಿಸಿಸಿಯಿಂದ ನಮಗೆ ಹಣ ನೀಡುತ್ತಿಲ್ಲ. ಶಾಸಕರ ನಿಧಿಯಲ್ಲಿ ಹಣ ನೀಡಬೇಕು. ಯಾವುದೇ ತಾರತಮ್ಯ ಮಾಡದೇ ಎಲ್ಲಾ ಶಾಸಕರಿಗೆ ಅನುದಾನ ನೀಡಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಶಾಸಕರಿಗೆ ಅನುದಾನ ನೀಡಿಲ್ಲ. ಈಗ ಮಾಡಿರೋ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಅವರ ಪಕ್ಷದವರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಅವರಿಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಶಾಸಕರನ್ನು ಒಂದಾಗಿ ನೋಡಿ. ತಾರತಮ್ಯ ಮಾಡೋದು ಸರಿಯಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಶಾಸಕರಿಗೂ ಅನುದಾನ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸೂಪರ್ ಸಿಎಂ ಸಿದ್ದರಾಮಯ್ಯ ಹೇಳಿದ ಮೇಲೆ ಕಾಂಗ್ರೆಸ್ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು. ಇಲ್ಲದೆ ಹೋದರೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

Continue Reading

Trending

error: Content is protected !!