Connect with us

Hassan

ಏ.೧೮ಕ್ಕೆ ಸಿಎಂ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ನಿಶ್ಚಿತ ಶ್ರೇಯಸ್ ಪಟೇಲ್

Published

on

ಹಾಸನ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಏಪ್ರಿಲ್ ೧೮ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಬದಲಾವಣೆ ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ವಿಶ್ವಾಸವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಅವರಿಂದ ಜಿಲ್ಲೆಯಲ್ಲಿ ಮತಯಾಚನೆಗೆ ಆಗಮಿಸಿದ್ದು, ಜಿಲ್ಲಾ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬದಲಾವಣೆ ತನ್ನಿ ಎಂದು ಎಲ್ಲರಲ್ಲಿ ಮನವಿ ಮಾಡಿದ್ದೇನೆ. ಒಮ್ಮೆ ನನಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ನಾವು ಗೆಲ್ಲುತ್ತೇವೆ. ಏಪ್ರಿಲ್ ೧೫ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೂರಿಗೆ ಬರುತ್ತಿದ್ದು, ಏಪ್ರಿಲ್ ೧೮ ರಂದು ಸಿಎಂ, ಡಿಎಸಿಎಂ ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು ಸೇರಿದಂತೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದು, ಒಂದೊಂದೆಡೆ ರೋಡ್ ಶೋ, ಮತ್ತೊಂದೆಡೆ ಬಹಿರಂಗ ಸಭೆ ಇದ್ದು, ಒಂದೇ ದಿನದಲ್ಲಿ ಏಳು ವಿಧಾನಸಭಾ ಕ್ಷೇತ್ರದ ಪ್ರಚಾರ ಮುಗಿಸಲಿದ್ದಾರೆ ಎಂದರು. ನಮಗೆ ಒಂದು ದಿನ ಚುನಾವಣೆ ಪ್ರಚಾರಕ್ಕೆ ಬಂದರೆ ಸಾಕು. ಇದಕ್ಕಿಂತ ಮುಂಚೆ ಹತ್ತಾರು ಬಾರಿ ಬಂದಿದ್ದಾರೆ.

ಬಿಜೆಪಿ ಕಾರ್ಯಕರ್ತರು ಭೇಟಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪ್ರತಿ ತಿಂಗಳು ಅಮವಾಸ್ಯೆ ಪೂಜೆಗೆ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಹೋಗುತ್ತೇನೆ. ಈ ವೇಳೆ ಪಕ್ಷಾತೀತವಾಗಿ ಎರಡು, ಮೂರು ಸಾವಿರ ಜನ ಇದ್ದರು. ಅವತ್ತು ಬೆಳಿಗ್ಗೆ ಹೋದಾಗ ಕೊಇನ್ಸಿಡೆನ್ಸ್ ಅವರು ಬಂದರು. ನಾನು ಸಹಾಯ ಮಾಡಿ ಎಂದು ಮತಯಾಚಿಸಿದೆ. ಅವರು ನಗತ್ತಲೇ ಹೋದರು. ಗುಂಪಿನಲ್ಲಿದ್ದಾಗ ಒಂದು ಫೋಟೋ ತೆಗೆದುಕೊಂಡರು.

ಅದು ಬಿಟ್ಟರೆ ನಾನು ಹೋಗಿದ್ದು, ಅವರು ಅಲ್ಲಿ ಇದ್ದದ್ದು ನೂರಕ್ಕೆ ನೂರು ಪರ್ಸೆಂಟ್ ಕೊನ್ಸಿಡೆನ್ಸ್. ನಾನು ಬಿಜೆಪಿಯ ಯಾರನ್ನು ಭೇಟಿ ಮಾಡಿಲ್ಲ. ಅದೆಲ್ಲಾ ಸುಳ್ಳು. ನಾನು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದವರನ್ನು ಭೇಟಿ ಮಾಡಿದ್ದೀನಿ. ಸುಮ್ನೆ ವೈಯುಕ್ತಿಕವಾಗಿ ಯಾರ ಮೇಲೂ ಮಾತನಾಡಬಾರದು, ಆ ರೀತಿ ಏನು ಇಲ್ಲ ಎಂದು ಉತ್ತರಿಸಿದರು. ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಬಹುಮತದೊಂದಿಗೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಮತದಾರರ ಮೇಲೆ ವಿಶ್ವಾಸದ ಮಾತನ್ನು ಹೇಳಿದರು.

ಇದೆ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ವಿನಯ್ ಗಾಂಧಿ, ಮುನಿಸ್ವಾಮಿ, ಪ್ರಸನ್ನ ಕುಮಾರ್, ಗಿರೀಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಕಾಂಗ್ರೆಸ್ ಸರಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಪ್ರವೀಣ್ ಗೌಡ

Published

on

ಹಾಸನ: ಮೂಡ ಹಗರಣ ಮುಂದಿಟ್ಟುಕೊಂಡು ವಿಪಕ್ಷಗಳು ತಮ್ಮ ಕುತಂತ್ರದಿಂದ ಅಧಿಕಾರ ಹಿಡಿಯಲು ಮುಂದಾಗಿದ್ದು, ಆದರೇ ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರವೀಣ್ ಗೌಡ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನಾತ್ಮಕವಾಗಿ ಬಹುಮತದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ, ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಖಂಡನೀಯ. ಮೂಡ ಹಗರಣ ತನಿಖಾ ಹಂತದಲ್ಲಿ ಇದ್ದರೂ ಇದೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ನಾಯಕರು ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಈ ಪ್ರಕರಣಕ್ಕೆ ಎಳೆತಂದು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಈ ಹಿಂದಿನಿಂದಲೂ ಹಿಂಬಾಗಿಲ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅದರಲ್ಲೂ ಮೈತ್ರಿ ಕೇಂದ್ರ ಸಚಿವರಾಗಿರುವ ಎಚ್. ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರನ್ನು ಸಭೆಯಲ್ಲಿ ಕೂರಲು ಅವನ್ಯಾರು ಎಂಬ ಮಾತನ್ನು ಆಡುವ ಮೂಲಕ ತಮ್ಮ ಮೈತ್ರಿಯ ಒಡಕನ್ನು ಪ್ರದರ್ಶನ ಮಾಡಿದ್ದಾರೆ. ಒಂದು ಪಕ್ಷದ ರಾಜ್ಯ ಪ್ರಧಾನ

ಕಾರ್ಯದರ್ಶಿ ಯಾಗಿರುವ ಪ್ರೀತಂ ಗೌಡ ಅವರಿಗೆ ಗೌರವ ಕೊಡದೆ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು. ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಬದಲು ಜೆಡಿಎಸ್, ಬಿಜೆಪಿ ನಾಯಕರು ತಮ್ಮನ್ನೇ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಇದೆ, ಅವರ ತಟ್ಟೆಯಲ್ಲೇ ಹೆಗ್ಗಣ ಸತ್ತು ಬಿದ್ದಿರುವಾಗ ಮತ್ತೊಬ್ಬರ ತಟ್ಟೆ ನೀಡುವ ರೀತಿ ಬದಲಾಯಿಸಿಕೊಳ್ಳಬೇಕು. ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ಕುತಂತ್ರ ನಡೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Continue Reading

Hassan

ಅಕ್ರಮ ಗಣಿಗಾರಿಕೆ, ಜಾಗ ಒತ್ತುವರಿ, ಮಾಡು ನಾಶ ನಿಲ್ಲಿಸದಿದ್ರೆ ಅರಣ್ಯ ಉಳಿಸಲು ನ್ಯಾಯಾಲಯದ ಮೊರೆ : ವಕೀಲರಾದ ಎನ್.ಪಿ. ಅಮೃತೇಶ್

Published

on

ಹಾಸನ : ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೇರಳವಾದ ಅರಣ್ಯ ಸಂಪತ್ತಿದ್ದು, ಹಲವಾರು ಪ್ರಭಾವೀ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಕಾಡು ಒತ್ತುವರಿ, ಕಾಡು ನಾಶ ನಿರಂತರವಾಗಿ ನಡೆದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೇ ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು ಎಂದು ವಾಯ್ಸ್ ಆಫ್ ಪಬ್ಲಿಕ್ ನ ಸಂಸ್ಥಾಪಕ ಮತ್ತು ವಕೀಲರಾದ ಎನ್.ಪಿ. ಅಮೃತೇಶ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಹೇರಳವಾದ ಅರಣ್ಯ ಸಂಪತ್ತು ಇದ್ದು, ಇಡೀ ಭಾರತ ದೇಶದಲ್ಲಿ ನಾವು ೧೫-೧೬ನೇ ಸ್ಥಾನದಲ್ಲಿ ಇದ್ದೇವೆ. ಪ್ರತಿಶತ ೩೩% ಅರಣ್ಯ ಪ್ರದೇಶ ಇರಬೇಕೆಂಬುದು ಸಾಮಾನ್ಯ ನೀತಿಯಾಗಿದೆ. ಆದರೆ, ಹಲವಾರು ಪ್ರಭಾವೀ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಒತ್ತುವರಿ, ಅಕ್ರಮ ಕಾಡು ನಾಶ ನಿರಂತರವಾಗಿ ನಡೆದಿದ್ದು, ಕರ್ನಾಟಕದಲ್ಲಿ ಕೇವಲ ೨೧.೦೧% ಅರಣ್ಯವಿದೆ. ಈ ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಂಡರೆ ಬಳ್ಳಾರಿ, ತುಮಕೂರು, ಚಿತ್ರದುರ್ಗ, ಕನಕಪುರಗಳಲ್ಲಿ ನಡೆದಂತಹ ಅಕ್ರಮ ಗಣಿಗಾರಿಕೆಯ ಚಿತ್ರಣ ನಮ್ಮ ಕಣ್ಣು ಮುಂದೆ ಬಂದು ಅಪಾರವಾದ ಅರಣ್ಯ ನಾಶವಾಗಿರುವುದು ಕಂಡು ಬರುತ್ತದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಹೆಚ್ಚಿನ ಅರಣ್ಯ ನಾಶ, ಅಕ್ರಮ ಗಣಿಗಾರಿಕೆ ತಪ್ಪಿರುತ್ತದೆ ಎಂದರು. ೧೦ – ೧೫ ವರ್ಷಗಳ ಹಿಂದೆ ನಿಂತಿದ್ದಂತಹ ಅಕ್ರಮ ಗಣಿಗಾರಿಕೆಯು ಮತ್ತೊಂದು ಸ್ವರೂಪದಲ್ಲಿ ರಾಜ್ಯದಲ್ಲಿ ತಲೆಯೆತ್ತುತ್ತಿದೆ. ಇದಕ್ಕೆ ರಾಜ್ಯ, ಜಿಲ್ಲೆ, ತಾಲ್ಲೂಕಿನ ಪ್ರಭಾವಿ ರಾಜಕಾರಣಿಗಳು, ನೇರವಾಗಿ ಅರಣ್ಯ ಮಂತ್ರಿಗಳು, ಉಸ್ತುವಾರಿ ಮಂತ್ರಿಗಳು ಪ್ರಭಾವಿ ಮಠದ ಸ್ವಾಮಿಗಳ ಮತ್ತು ಅರಣ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಬೆಂಬಲದಿಂದ ಹಾಸನ ಜಿಲ್ಲೆಯ ಅರಕಲಗೂಡು,

ಚನ್ನರಾಯಪಟ್ಟಣಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ / ಕ್ರಷರ್ ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಸ್ಥಗಿತಗೊಂಡಿಂದ ಕಲ್ಲುಗಣಿ ಮತ್ತು ಕ್ರಷರ್ ಚಟುವಟಿಕೆಯನ್ನು ನಿರಾಂತಕವಾಗಿ ಪರೋಕ್ಷವಾಗಿ ನಡೆಸುತ್ತಿದ್ದಾರೆ ಎಂದು ದೂರಿದರು. ಅರಕಲಗೂಡು ತಾಲ್ಲೂಕು, ಮುದಗನೂರು ಕಾವಲು, ಅರಸೀಕಟ್ಟೆ ಕಾವಲಿಗೆ ಸೇರಿದ ಸರ್ಕಾರದ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ, ಕ್ರಷರ್ ಚಟುವಟಿಕೆಯು ಸರಿ ಸುಮಾರು ೨೦ – ೨೫ ಎಕರೆ ಪ್ರದೇಶದಲ್ಲಿ ನಡೆದಿದ್ದು, ಈ ಅರಣ್ಯ ಪ್ರದೇಶವನ್ನು ತಮ್ಮ ಇಚ್ಛೆಗೆ ಬಂದಂತೆ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿರುತ್ತದೆ ಎಂದು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ೧೫೮.೩೨ ಎಕರೆ ಇರುವ ಅರಣ್ಯ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರೂ ಸಹ, ಸಾಮಾನ್ಯ ವ್ಯಕ್ತಿಯಿಂದ ಒಂದು ಅರ್ಜಿಯನ್ನು ಪಡೆದು, ೯೬.೧೮ ಎಕರೆಗೆ ಅರಣ್ಯ ಪ್ರದೇಶ ಎಂದು ಕಡಿಮೆ ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳೊಡನೆ ಶಾಮೀಲಾಗಿ, ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅನುವು ಮಾಡಿ ಕೊಟ್ಟಿರುತ್ತಾರೆ ಎಂದರು.

ದಿನಾಂಕ ೧೫-೦೨-೨೦೨೪ ರಲ್ಲಿ ನಡೆದ ಹಾಸನ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿಯಲ್ಲಿ ನಡೆದ ೨೦೨೪ ಜನವರಿ ೨೪ರ ಸಭೆಯ ನಡವಳಿಯಂತೆ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳ ಅಡಿಪಾಯದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಮುದಗನೂರು ಕಾವಲು ಗ್ರಾಮ ಸರ್ವೆ ನಂ. ೦೧, ಅರಸೀಕಟ್ಟೆ ಕಾವಲು ಗ್ರಾಮದ ಸ.ನಂ. ೧೧೬ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲುಗಣಿ ಗುತ್ತಿಗೆ ಹಾಗೂ ಕ್ರಷರ್ ಘಟಕಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಿದೆ ಎಂದು ಹೇಳಿದರು. ಕಲ್ಲುಗಣಿ ಮತ್ತು ಕ್ರಷರ್ ಚಟುವಟಿಕೆಗಳಿಗಾಗಿ, ಬೃಹತ್ ಯಂತ್ರೋಪಕರಣಗಳನ್ನು ಕಾನೂನು ಬಾಹಿರವಾಗಿ ಸ್ಥಾಪಿಸಿ, ಅದರಲ್ಲೂ ಈ ಯಂತ್ರಗಳನ್ನು ಯಾವುದೇ ರೀತಿಯ ಪರವಾನಗಿಗಳನ್ನು ಪಡೆಯದೆ, ಸ್ಥಾಪಿಸಿರುವಂತಹ ಸ್ಥಳಗಳೂ ಸಹ ಬೇರೊಬ್ಬರ

ಜಮೀನಿನಲ್ಲಿ ಕಾರ್ಯ ನಿರ್ವಹಿಸಿರುತ್ತದೆ. ಈ ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಮತ್ತು ಗಣಿಗಾರಿಕೆಯಿಂದ ಆದಂತಹ ದೊಡ್ಡ ದೊಡ್ಡ ಕಂದಕ ಹಳ್ಳಗಳು ನಿರ್ಮಾಣವಾಗಿದ್ದು, ಆ ಹಳ್ಳಗಳಲ್ಲಿ ಹಲವಾರು ಅರಣ್ಯ ಪ್ರಾಣಿಗಳು, ದನಕರುಗಳು ಬಿದ್ದು ಸಾಯುತ್ತಿರುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲವೇ? ಇದಲ್ಲದೆ, ಅರಣ್ಯ ಸುತ್ತ ಮುತ್ತಲೂ ಇರುವ ವ್ಯವಸಾಯ ಮಾಡುವ ಜಮೀನಿನ ಮೇಲೆ ಕ್ರಷರ್‌ನಿಂದ ಹೊರಸೂಸುವ ಧೂಳು ಶಬ್ದ ದಿಂದ ಸಾರ್ವಜನಿಕರ ಮೇಲೆ ಆಗುವ ಪರಿಣಾಮದ ಬಗ್ಗೆ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಏಕೆ? ಎಂದು ಪ್ರಶ್ನಿಸಿದರು. ಪುನರ್ ಪ್ರಾರಂಭಿಸಿರುವ ಕಲ್ಲುಗಣಿ, ಕ್ರಷರ್ ಚಟುವಟಿಕೆಗಳಿಗೆ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪ್ರಭಾವಿ ರಾಜಕಾರಣಿಗಳು ಬೆಂಬಲಕ್ಕೆ

ನಿಂತಿರುತ್ತಾರೆ. ವಿಶೇಶವಾಗಿ ಈ ಮೇಲಿನ ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚೆ ಆಗಿದ್ದು, ವಿಷಯವನ್ನು ಸದನ ಸಮಿತಿಗೆ ವಿಚಾರಣೆಗೆ ವಹಿಸಲಾಗಿರುತ್ತದೆ. ಹೀಗಿದ್ದೂ, ಅಕ್ರಮ ಕಲ್ಲುಗಣಿ, ಕ್ರಷರ್ ಚಟುವಟಿಕೆ ಮುಂದುವರೆಯುತ್ತಿರುವುದನ್ನು ನಮ್ಮ ವೇದಿಕೆ ಬಲವಾಗಿ ಖಂಡಿಸುತ್ತದೆ. ತಕ್ಷಣ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು. ತಕ್ಷಣ ಕಾನೂನು ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ, ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ಮಾನ್ಯ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಬೇಕೆಂದು ತೀರ್ಮಾನಿಸಿರುತ್ತೇವೆ ಎಂದು ತಮ್ಮ ಉದ್ದೇಶ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್ ನ ಸಂಚಾಲಕಿ ದೀಕ್ಷಾ ಅಮೃತೇಶ್, ಹೀನಾ ಕೌಶರ್, ವಕೀಲರಾದ ಗಿರೀಶ್ ಗೌಡ, ಆನಂದ್ ಇತರರು ಉಪಸ್ಥಿತರಿದ್ದರು.

Continue Reading

Hassan

ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ

Published

on

ಹಾಸನ: ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವ್ಯಸನ ಮುಕ್ತ ಜಾಗೃತಿ

ಜಾಥಕ್ಕೆ ಅಪರ ಜಿಲ್ಲಾಧಿಕಾರಿ ಕೆ,ಟಿ. ಶಾಂತಲಾ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮೆರವಣಿಗೆಗೆ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಉದ್ದೇಶಿಸಿ ಶಾಂತಲಾ ಅವರು ಮಾತನಾಡಿ, ಶ್ರೀ ಮಹಾಂತ ಶಿವಯೋಗಿ ರವರ ಜಯಂತಿಯನ್ನು ನಾವು ಆಚರಿಸುತ್ತಿದ್ದು, ಇವರು ಜಮಖಂಡಿ ತಾಲೂಕು ಇಪ್ಪರ್ಗಿ ಗ್ರಾಮದಲ್ಲಿ ಜನಿಸಿದವರು. ಅವರ ಮಹಂತ ಜೋಳಿಗೆ ಕಾರ್ಯಕ್ರಮಕ್ಕೆ ತುಂಬ ಪ್ರಸಿದ್ಧಿ ಆದವರು. ಈ ಜೋಳಿಗೆಯಲ್ಲಿ ಎಲ್ಲಾರೂ ತಮ್ಮ ದುಶ್ಚಟಗಳನ್ನು ತೊಡೆದು ಹಾಕಿ ಸ್ವಚ್ಛವಾದ ಜೀವನ ನಡೆಸಲಿ ಎಂಬುದು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದರು. ಅವರ ಆದರ್ಶದಂತೆ ನಾವುಗಳೆಲ್ಲರೂ ಅವರು ಕೊಟ್ಟಿರುವ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಹೋಗಬೇಕು ಎಂದರು. ಅವರು ತಿಳಿಸಿರುವ ಎಲ್ಲಾ ಪಾಠಗಳನ್ನು ಕಲಿತು ಸ್ವಚ್ಛವಾದ ಜೀವನವನ್ನು ನಡೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.

ಇದೆ ವೇಳೆ ಬೆಳ್ಳಿ ರಥದಲ್ಲಿ ಶ್ರೀ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರವನ್ನಿಟ್ಟು ವಿವಿಧ ಶಾಲಾ- ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ವಿವಿಧ ಕಲಾತಂಡಗಳು ಮೆರಗು ನೀಡಿತು. ಇದೆ ವೇಳೆ ಮದ್ಯಪಾನದಿಂದ ಆಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮೆರವಣಿಗೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಪದವಿಪೂರ್ವ ಕಾಲೇಜು ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಟಿ.ಪಿ. ನಾಗರಾಜು, ಸ್ವಾತಂತ್ರ ಹೋರಾಟಗಾರ ಹೆಚ್.ಎಂ. ಶಿವಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕೆ.ಎಸ್.ಆರ್.ಟಿ.ಸಿ. ಮಾಜಿ ಉಪಾಧ್ಯಕ್ಷ ಈಶ್ವರ್, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ಕುಮರಸ್ವಾಮಿ, ಹೇಮೇಶ್, ರುದ್ರಕುಮಾರ್, ಮಯೂರಿ ಲೋಕೇಶ್, ಟಿ.ಪಿ. ನಾಗರಾಜು, ಅವಿನಾಶ್, ಅಜಿತ್, ಅಡಗೂರು ಬಸವರಾಜು, ದರ್ಶನ್, ಹೇಮಂತ್, ಧರ್ಮ, ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!