Connect with us

Chikmagalur

ನಿಯಂತ್ರಣ ತಪ್ಪಿ ಸೇತುವೆಗೆ ಗುದ್ದಿದ ಕಾರು, ಅಮ್ಮ ಮಗ ಸಾವು

Published

on

ನಿಯಂತ್ರಣ ತಪ್ಪಿ ಸೇತುವೆಗೆ ಗುದ್ದಿದ ಕಾರು, ಅಮ್ಮ ಮಗ ಸಾವು
ಚಿಕ್ಕಮಗಳೂರು: ನಿಯಂತ್ರಣ ತಪ್ಪಿ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಣಿವೆ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಚೆನ್ನಮ್ಮ (67) ಮತ್ತು ಅವರ ಮಗ ನಿರಂಜನ್‌ (42) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಮತ್ತೋರ್ವ ಮಹಿಳೆಗೆ ಗಂಭೀರ ಗಾಯಗಳಾಗಿವೆ.

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ನಿವಾಸಿ ನಿರಂಜನ್‌ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಸೇತುವೆಗೆ ಡಿಕ್ಕಿ ಹೊಡೆದು ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಡಿಕ್ಕಿಯ ಹೊಡೆತಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ತಾಯಿ ಸ್ಥಳದಲ್ಲೇ ಹಸುನೀಗಿದ್ದಾರೆ.
ಇನ್ನೂ ಕಾರಿನಲ್ಲಿ ಸಿಲುಕಿದ್ದ ನಿರಂಜನ್ ಅವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ನಿರಂಜನ್ ಅವರನ್ನು ಕಾರಿನಿಂದ ಹೊರತೆಗೆದ ಬಳಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಸ್ವಲ್ಪ ದೂರ ಹೋಗುವಷ್ಟರಲ್ಲೇ ನೊರಂಜ‌ನ್ ಅವರ ಪ್ರಾಣಪಕ್ಷಿಯೂ ಹಾರಿಹೋಗಿದೆ.

ಮೃತ ನಿರಂಜನ್‌ ಅವರು, ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮನ ಜೊತೆಗೆ ಹೋಗುವಾಗಲೇ ದುರಂತ ಸಂಭವಿಸಿದ್ದನ್ನು ನೋಡಿ ಮನೆಯವರು ಕಣ್ಣೀರು ಹಾಕುತ್ತಿದ್ದಾರೆ.
ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

Published

on

ಚಿಕ್ಕಮಗಳೂರು ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ಸಂಭವಿಸಿದೆ.

ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಜಮೀನಿನಲ್ಲಿ ಕೆಳಕ್ಕೆ ಜಗ್ಗಿದ್ದ ಮೈನ್ಸ್ ವಯರ್ ಸರಿಪಡಿಸಲು ಹೋಗಿ‍, ವಿದ್ಯುತ್ ಪ್ರವಹಿಸಿ ಗಂಜಲಗೂಡು ಗ್ರಾಮದ 23 ವರ್ಷದ ಯುವಕ ಜೀವಿತ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ‌.

ಕಳೆದ ಎರಡು ವರ್ಷಗಳ ಹಿಂದೆ ಜೀವಿತ್ ತಂದೆ ಶೇಖರಪ್ಪ ಸಾವನ್ನಪ್ಪಿದ ಬಳಿಕ ಜೀವಿತ್ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇಂದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಜೀವಿತ್ ಮೃತಪಟ್ಟಿದ್ದು ಮೃತ ಜೀವಿತ್ ತಾಯಿ ರೇಣುಕ ಅನಾಥರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ‌.

Continue Reading

Chikmagalur

ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಬಂಧನ

Published

on

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡಿರುವ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮುಹಮ್ಮದ್ ಅಸ್ಗರ್(26), ಅಬ್ದುಲ್ ನಿಸಾರ್.ಕೆ(29) ಬಂಧಿತರು.

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡು ಯಾವುದೋ ದುಷ್ಕೃತ್ಯವನ್ನು ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪಿಸ್ತೂಲ್, ಎರಡು ಸಜೀವ ಮದ್ದುಗುಂಡುಗಳು, ಎರಡು ಮೊಬೈಲ್ ಫೋನುಗಳು, ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪೈಕಿ ಮುಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Agriculture

ಗಾಳಿಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Published

on

ದಾವಣಗೆರೆ. ಮೇ.೧೯; ಮಳೆಗಾಳಿಗೆ ದಾವಣಗೆರೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ.ಫಸಲಿಗೆ ಬಂದಿದ್ದ ಭತ್ತ ಕಟಾವಿಗೆ ಮುನ್ನವೇ

ನೀರುಪಾಲಾಗಿದೆ.ಕಳೆದ ಸಂಜೆ ಬೀಸಿದ ಗಾಳಿಮಳೆಗೆ ಭತ್ತದ ಬೆಳೆ‌ಗೆ ಹಾನಿಯಾಗಿದೆ.ಬರದ ನಡುವೆಯೂ ಕೊಳವೆಬಾವಿಯ ಮೂಲಕ ಭತ್ತ ಬೆಳೆದಿದ್ದ ರೈತರಿಗೆ ಮಳೆಯಾಗಿದ್ದು ಒಂದುಕಡೆ ಸಂತಸ ತಂದರೆ ಮತ್ತೊಂದೆಡೆ ಬೆಳೆದ ಭತ್ತ ನೀರುಪಾಗಿದೆ ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ದೊಡ್ಡಬಾತಿ ಗ್ರಾಮದ ರೈತ ಉಮೇಶ್ ಮಾತನಾಡಿ ಸಾಲಮಾಡಿ ನನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದೆ ಆದರೆ ಇದೀಗ ಬೆಳೆಯೆಲ್ಲಾ

ನೆಲಕಚ್ಚಿದೆ.ಐವತ್ತು ಸಾವಿರ ಲಾಭ ತೆಗೆಯುವ ಕನಸು ಕಂಡಿದ್ದೆ.ಮಳೆಯಿಲ್ಲದೇ ಬರ ಆವರಿಸಿದ್ದರು ಕೊಳವೆಬಾವಿ ಮೂಲಕ ನೀರು ಹರಿಸಿ ಭತ್ತ ನಾಟಿ ಮಾಡಿದ್ದೆ ಹಗಲು ರಾತ್ರಿ ಕರೆಂಟ್ ಗೆ ನೀರು ಹಾಯಿಸಿದ್ದೇಲ್ಲಾ ನೀರಿನಲ್ಲಿ

ಹೋಮ‌ಮಾಡಿದಂತಾಗಿದೆ.ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ‌ನೀಡಿ ನಮಗಾದ ನಷ್ಟ. ಭರಿಸಿಕೊಡಬೇಕು ಎಂದು ಅಳಲು ತೊಡಿಕೊಂಡರು.ದೊಡ್ಡಬಾತಿ ಗ್ರಾಮದ ಹಲವೆಡೆ ಬೆಳೆದ ಭತ್ತ ನೀರುಪಾಲಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

Continue Reading

Trending

error: Content is protected !!