Connect with us

Mandya

ಫೆ.16 ರಿಂದ ‘ಲೇಡಿಸ್‌ ಬಾರ್‌’ ಸಿನಿಮಾ ಬಿಡುಗಡೆ

Published

on

ಮಂಡ್ಯ: ಸಂಸ್ಕೃತಿ ತಿಳಿಸಲು ಹೊರಟಿರುವ ನಮ್ಮ ಡಿಎಂಸಿ ಪ್ರೊಡಕ್ಷನ್ ನಿರ್ಮಾಣದ ‘ಲೇಡಿಸ್ ಬಾರ್’ ಸಿನಿಮಾ ಫೆ.16 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎ.ಎನ್.ಮುತ್ತು ಹೇಳಿದರು.

ಪ್ರಸ್ತುತ ನಡೆಯುವ ಸನ್ನಿವೇಶದೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾರ್ ಇದ್ದರೆ ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಕಥಾ ಹಂದರವನ್ನು ಎಣೆಯಲಾಗಿದೆ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಬಾರ್‌ನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ ಎಂದು ಸುದ್ದಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ನಾಲ್ಕು ಹಾಡುಗಳು ಇವೆ. ಇದರಲ್ಲಿ ನಾಯಕ ಅಥವಾ ನಾಯಕಿ ಇರುವುದಿಲ್ಲ. ಚಿತ್ರಕಥೆಯೇ ನಾಯಕ-ನಾಯಕಿಯರನ್ನು ನಿರೂಪಿಸುವ ಚಿತ್ರವಾಗಿದೆ, ಬೆಂಗಳೂರಿನಲ್ಲಿ ಶೇ.75 ರಷ್ಟು ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಮದ್ದೂರು ಮತ್ತು ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ಮದ್ದೂರಿನ ತೈಲೂರಿನವರೇ ಆದ ಟಿ.ಎಂ.ಸೋಮಶೇಖರ್ ಅವರು ಚಿತ್ರ ನಿರ್ಮಾಪಕರಾಗಿದ್ದು, ತಾರಾಗಣದಲ್ಲಿ ಹಾಸನದ ಶಿವಾನಿಗೌಡ ಹಾಗೂ ಮಂಡ್ಯದ ಪ್ರೇರಣ ಇತರರು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ವೀನಸ್ ಮೂರ್ತಿ ಚಿತ್ರೀಕರಣ ಮಾಡಿದ್ದಾರೆ ಎಂದು ವಿವರಿಸಿದರು.

ಚಿತ್ರನಿರ್ಮಾಪಕ ಟಿ.ಎಂ.ಸೋಮಶೇಖರ್ ಮಾತನಾಡಿ, ಮದ್ದೂರಿನ ತೈಲೂರಿನವನಾದ ನಾನು ರೈತ ಕುಟುಂಬದಿಂದ ಬಂದಿದ್ದು, ಚಿತ್ರೋಧ್ಯಮದಲ್ಲಿ ಕೆಲಸ ಮಾಡಿದ್ದೇನೆ. ಇದೀಗ ನಾನೇ ಚಿತ್ರ ನಿರ್ಮಾಣ ಮಾಡಬೇಕೆಂಬ ಬಯಕೆಯಿಂದ ಲೇಡಿಸ್ ಬಾರ್ ಚಿತ್ರವನ್ನು ಸಾಮಾಜಿಕ ಕಳಕಳಿ ಇಟ್ಟುಕೊಂಡು ಚಿತ್ರಮಾಡಿದ್ದೇವೆ. ಇದೊಂದು ವಿಭಿನ್ನ ಚಿತ್ರಕಥೆಯನ್ನು ಹೊಂದಿದೆ. ನಾಲ್ಕು ಕುಟುಂಬಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಫೆ.16 ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದು, ಎಲ್ಲರೂ ಆರೈಸಬೇಕು ಎಂದು ಮನವಿ ಮಾಡಿದರು.

ಚಲನಚಿತ್ರದ ಪ್ರೇರಣಾ, ಶಿವಾನಿಗೌಡ, ಛಾಯಾಗ್ರಾಹಕ ವೀನಸ್ ಮೂರ್ತಿ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ವಿದ್ಯಾರ್ಥಿಗಳು ವ್ಯಾಸಂಗದೊಂದಿಗೆ ಆರೋಗ್ಯದ ಕಡೆ ಗಮನ ಹರಿಸಬೇಕು: ವಿ.ಕೆ.ಜಗದೀಶ್

Published

on

ಮದ್ದೂರು: ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡುವ ಜತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಕಿವಿ ಮಾತು ಹೇಳಿದರು.

ತಾಲೂಕಿನ ಬೆಸಗರಹಳ್ಳಿ ಮಾನಸ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಮದ್ದೂರು ಲಯನ್ಸ್ ಸಂಸ್ಥೆ, ಲೇಡಿ ಬರ್ಡ್‌ ಲಯನ್ಸ್ ಕ್ಲಬ್ ಬೆಂಗಳೂರು, ಮದ್ದೂರು ಕದಂಬ ಲಯನ್ಸ್ ಸಂಸ್ಥೆ, ಮಾನಸ ಎಜುಕೇಷನ್ ಟ್ರಸ್ಟ್ ಬೆಸಗರಹಳ್ಳಿ, ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ ಬೆಂಗಳೂರು ಅಲೋಕ ವಿಸನ್ ಮತ್ತು ಬೆಂಗಳೂರು ವೆಸ್ಟ್ ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ವಾಕ್ ಶ್ರವಣ ದೋಷ ಹಾಗೂ ಕಣ್ಣಿನ ತಪಾಷಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣದಷ್ಟೇ ಆರೋಗ್ಯವು ಮುಖ್ಯವೆಂದು ಎಂಬುವುದನ್ನು ತಿಳಿದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಕಠಿಣ ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯ ಪಾಲ ಕೆ.ಎಲ್.ರಾಜಶೇಖರ ಮಾತನಾಡಿ, ಲಯನ್ಸ್ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜ ಮುಖಿ ಹಾಗೂ ಆರೊಗ್ಯ ಉಚಿತ ತಪಸಣಾ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನಕೂಲ ಆರೊಗ್ಯ ತಪಾಸಣಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಆರೋಗ್ಯ ಶಿಬಿರದಲ್ಲಿ ನೂರಾರು ವಿದ್ಯಾಥರ್ಿಗಳು ವಾಕ್ ಶ್ರವಣ ದೋಷ ಹಾಗೂ ಕಣ್ಣಿನ ತಪಾಸಣೆ ಶಿಬಿರದ ಪ್ರಯೋಜನ ಪಡೆದುಕೊಂಡರು.
ಲಯನ್ಸ್ ಸಂಸ್ಥೆಯ ಅಂತರಾಷ್ಟ್ರೀಯ ಮಾಜಿ ಅಧ್ಯಕ್ಷ ವಿ.ವಿ.ಕೃಷ್ಣಾರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವ ಚೇರ್ಮನ್ ಡಾ.ಎನ್.ಕೃಷ್ಣೇಗೌಡ, ಜಿಲ್ಲಾ ಮಾಜಿ ರಾಜ್ಯಪಾಲೆ ಶಶಿ ಖುರಾನ, ವಾಕ್ ಶ್ರವಣ ಜಿಲ್ಲಾ ಅಧ್ಯಕ್ಷ ಹರ್ಷವರ್ಧನರೆಡ್ಡಿ, ಟಿರಾ ಕನ್ಸ್ಟ್ರಕ್ಷನ್ನ ದೇವೇಗೌಡ, ಜಿಲ್ಲಾ ಖಜಾಂಚಿ ಕೆ.ಎಸ್.ಸುನಿಲ್‌ ಕುಮಾರ್‌, ಪ್ರಾಂತಿಯ ಅಧ್ಯಕ್ಷರಾದ ವಿ.ರಮೇಶ್, ರೇಣುಕಪ್ರಕಾಶ್, ವಲಯ ಅಧ್ಯಕ್ಷರಾದ ಸುಬ್ಬಾರೆಡ್ಡಿ, ಕೆಂಗಲ್‌ ಗೌಡ, ಮದ್ದೂರು ಲಯನ್ಸ್ ಅಧ್ಯಕ್ಷ ರಾಮಕೃಷ್ಣೇಗೌಡ, ಮದ್ದೂರು ಕದಂಬ ಲಯನ್ಸ್‌ನ ಅಧ್ಯಕ್ಷ ಕೆ.ಶಿವಕುಮಾರ್, ಲೇಡಿ ಬರ್ಡ್‌ ಲಯನ್ಸ್ ಅಧ್ಯಕ್ಷೆ ಬಿಭಾಕುಮಾರಿ ಇದ್ದರು.

Continue Reading

Mandya

ಗಾಂಧಿ ಸ್ಮಾರಕ ಭವನ ನಿರ್ಮಿಸಲು 2 ಎಕರೆ ಜಾಗ ಮೀಸಲು: ಬಿ.ರಾಮಕೃಷ್ಣ

Published

on

ಮದ್ದೂರು : ಕೆ. ಹೊನ್ನಲಗೆರೆಯ ಆರ್. ಕೆ. ವಿದ್ಯಾಸಂಸ್ಥೆಯ ಬಳಿ ಸಂಸ್ಥೆಯಿಂದ ಗಾಂಧಿ ಸ್ಮಾರಕ ಭವನವನ್ನು ನಿರ್ಮಿಸಲು 2 ಎಕರೆ ಜಾಗವನ್ನು ನೀಡಲು ಬದ್ಧರಾಗಿರುವುದಾಗಿ ಸಂಸ್ಥೆಯ ಅಧ್ಯಕ್ಷ ಬಿ. ರಾಮಕೃಷ್ಣ ತಿಳಿಸಿದ್ದಾರೆ.

ತಾಲೂಕಿನ ಕೆ. ಹೊನ್ನಲಗೆರೆಯ ಆರ್. ಕೆ.ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ನಡೆದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ, ಗಾಂಧೀಜಿ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿದ ಗಾಂಧೀಜಿರವರ ಸ್ಮಾರಕವು ನಮ್ಮ ತಾಲೂಕಿನಲ್ಲಿ ಅದರಲ್ಲೂ ನಮ್ಮ ಸಂಸ್ಥೆಯ ಬಳಿ ಆಗುವುದೂ ಸಂತಸ.  ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಹಕರಿಸಬೇಕು ಎಂದು ಮನವಿ ಪತ್ರವನ್ನು ವೇದಿಕೆಯಲ್ಲಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣರಿಗೆ ಹಸ್ತಾಂತರಿಸಿದರು.

ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ರವರ ತತ್ವ, ಆದರ್ಶಗಳನ್ನು ಅನುಸರಿಸಬೇಕು. ಅವರ ಬಗ್ಗೆಗಿನ ಜೀವನ ಚರಿತ್ರೆಗಳು ಸೇರಿದಂತೆ ಪುಸ್ತಕಗಳನ್ನು ಓದಬೇಕು. ಆ ಮೂಲಕ ಕನಿಷ್ಠ ಶೇ. 1 ರಷ್ಟಾದರೂ ಅವರ ಆದರ್ಶಗಳನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಬೆಂಗಳೂರಿನಲ್ಲಿರುವ ಎಷ್ಟೋ ದೊಡ್ಡ ದೊಡ್ಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಯಾರೆಂದೆ ಗೊತ್ತಿಲ್ಲ ಇದು ವಿಪರ್ಯಾಸವೆಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ರವರು ದೇಶ ಹಾಗೂ ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ ಹಾಗೂ ಶಕ್ತಿ, ಅವರ ತ್ಯಾಗ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಿಯನ್ನು ಜನತೆ ಎಂದಿಗೂ ಮರೆಯುವುದಿಲ್ಲ. ಮಹಾತ್ಮರ ಸ್ಮಾರಕ ನಿರ್ಮಾಣಕ್ಕೆ ತಾಲೂಕಿನಿಂದ ಆರ್. ಕೆ.ವಿದ್ಯಾ ಸಂಸ್ಥೆಯವರು ಭೂಮಿ ನೀಡಲು ಮುಂದೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಪ್ರೊ. ಜಿ.ವಿ.ಶಿವರಾಜುರವರು ಗಾಂಧೀ ತತ್ವಗಳ ಬಗ್ಗೆ ಉಪನ್ಯಾಸ ನೀಡಿದರು. ಮಧ್ಯಾಹ್ನದ ನಂತರ ವಿಚಾರ ಗೋಷ್ಠಿಗಳಲ್ಲಿ ವಿಶ್ರಾಂತ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸೇರಿದಂತೆ ಹಲವರು ಪಾಲ್ಗೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಮರೀತಿಬ್ಬೆಗೌಡ, ಸಂಸ್ಥೆಯ ಪ್ರಾಂಶುಪಾಲರಾದ ಸತೀಶ್ ಬಾಬು, ಸೇರಿದಂತೆ ಹಲವರು ಹಾಜರಿದ್ದರು.

Continue Reading

Mandya

ಡಿ. 21 ರಿಂದ ಮೂರು ದಿನಗಳ ಕಾಲ ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ, ಹೊಂಬಾಳೆ ನಾಟಕೋತ್ಸವ : ದರ್ಶನ್ ಪುಟ್ಟಣ್ಣಯ್ಯ

Published

on

ಮಂಡ್ಯ: ಹಸಿರು ಭೂಮಿ ಟ್ರಸ್ಟ್ ಹಾಗೂ ಮೇಲುಕೋಟೆ ದೃಶ್ಯ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿ.21 ರಿಂದ 3 ದಿನಗಳು ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ, ಹೊಂಬಾಳೆ ನಾಟಕೋತ್ಸವ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 77 ಹುಟ್ಟುಹಬ್ಬದ ಅಂಗವಾಗಿ ನಾಟಕೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 6 ಗಂಟೆ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಮೂರೂ ದಿನವೂ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 3 ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು.

ಡಿ.21 ರಂದು ಬೆಂಗಳೂರಿನ ಕಲಾಮಾಧ್ಯಮ ರಂಗ ತಂಡದಿಂದ `ನನ್ನ ತೇಜಸ್ವಿ’ ನಾಟಕವನ್ನು ನಾಗತೀಹಳ್ಳಿ ಚಂದ್ರಶೇಖರ್, ಡಿ.22ರಂದು ಚಿತ್ರ ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ರಂಗ ತಂಡದಿಂದ `ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕವನ್ನು ಪ್ರೊ.ಕೃಷ್ಣೇಗೌಡ, ಡಿ.23 ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ದೇವನೂರು ಮಹದೇವ ರಚನೆಯ `ಒಡಲಾ’ ನಾಟಕವನ್ನು ಟಿ.ಎನ್.ಸೀತಾರಾಮು ಉದ್ಘಾಟಿಸುವರು ಎಂದು ವಿವರಿಸಿದರು.

ಡಿ.23ರಂದು ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಇಲ್ಲಿ 2 ಸ್ಥಳೀಯ ಸಂಸ್ಥೆಗಳು ಸೇರಿ 45 ಸಂಸ್ಥೆಗಳು ಉದ್ಯೋಗಾಕಾಂಕ್ಷಿಗಳ ಆಯ್ಕೆ ಮಾಡಲಿವೆ. ಈ ಬಾರಿ 500 ಕ್ಕೂ ಹೆಚ್ಚು ಉದ್ಯೋಗ ಒದಗಿಸುವ ನಿರೀಕ್ಷೆಯಿದೆ ಎಂದು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಹಸಿರು ಭೂಮಿ ಟ್ರಸ್ಟ್ ಅಧ್ಯಕ್ಷ ಜ್ಞಾನೇಶ್, ಎನ್.ಸಿ.ಸೋಮೇಗೌಡ, ಕೆ.ಆರ್.ಗಿರೀಶ್, ಕೋಕಿಲ, ಶಿವಣ್ಣ ಇದ್ದರು.

Continue Reading

Trending

error: Content is protected !!