Mandya
ನಾಳೆ ಮಂಡ್ಯ ಲೋಕಸಭಾ ಚುನಾವಣೆ : ಮತಗಟ್ಟೆಗಳತ್ತ ಮತಯಂತ್ರಗಳೊಂದಿಗೆ ತೆರಳಿದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು
ಮಂಡ್ಯ: ನಾಳೆ ಮಂಡ್ಯ ಲೋಕಸಭಾ ಚುನಾವಣೆ ನಢಯಲಿದ್ದು, ಇಂದು ಚುನಾವಣಾಧಿಕಾರಿಗಳು ಮತ್ತು ಸಿಬ್ಬಂಧಿಗಳು ಮತಯಂತ್ರ ಹಾಗೂ ಅಗತ್ಯ ಪರಿಕರಗಳೊಂದಿಗೆ ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿದರು.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,79,243 ಮತದಾರರು: ಡಾ.ಕುಮಾರ
ಮಂಡ್ಯ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ 17,79,243 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಮಳವಳ್ಳಿಯಲ್ಲಿ ಗಂಡು-126118 ಹೆಣ್ಣು-127487, ತೃತೀಯ ಲಿಂಗಿಗಳು-23, ಒಟ್ಟು 253628 ಮತದಾರರಿದ್ದಾರೆ.

ಮದ್ದೂರಿನಲ್ಲಿ ಗಂಡು-104280, ಹೆಣ್ಣು-111443, ತೃತೀಯ ಲಿಂಗಿಗಳು-22, ಒಟ್ಟು 215745 ಮತದಾರರಿದ್ದಾರೆ.
ಮೇಲುಕೋಟೆಯಲ್ಲಿ ಗಂಡು-100379, ಹೆಣ್ಣು-103010, ತೃತೀಯ ಲಿಂಗಿಗಳು-9, ಒಟ್ಟು 203398 ಮತದಾರರಿದ್ದಾರೆ.
ಮಂಡ್ಯದಲ್ಲಿ ಗಂಡು-111868, ಹೆಣ್ಣು-117759, ತೃತೀಯ ಲಿಂಗಿಗಳು- 36, ಒಟ್ಟು 229663 ಮತದಾರರಿದ್ದಾರೆ.
ಶ್ರೀರಂಗಪಟ್ಟಣ ಗಂಡು-106157, ಹೆಣ್ಣು-111431, ತೃತೀಯ ಲಿಂಗಿಗಳು- 44, ಒಟ್ಟು 217632 ಮತದಾರರಿದ್ದಾರೆ.
ನಾಗಮಂಗಲದಲ್ಲಿ ಗಂಡು-107760, ಹೆಣ್ಣು-108783, ತೃತೀಯ ಲಿಂಗಿಗಳು- 11, ಒಟ್ಟು 216554 ಮತದಾರರಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ ಗಂಡು-111542 ಹೆಣ್ಣು-112284 ತೃತೀಯ ಲಿಂಗಿಗಳು- 11, ಒಟ್ಟು 223837 ಮತದಾರರಿದ್ದಾರೆ.
ಕೆ. ಆರ್ ನಗರದಲ್ಲಿ ಗಂಡು-108008, ಹೆಣ್ಣು-110766, ತೃತೀಯ ಲಿಂಗಿಗಳು- 12, ಒಟ್ಟು 218786 ಮತದಾರರಿದ್ದಾರೆ.
2076 ಮತಗಟ್ಟೆಗಳು
ಮತದಾನಕ್ಕಾಗಿ 2076 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-264, ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಮತಗಟ್ಟೆಗಳನ್ನು ನಿಯೋಜಿಸಲಾಗಿದೆ.
1120 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್
ಮಳವಳ್ಳಿ – 137, ಮದ್ದೂರು – 127, ಮೇಲುಕೋಟೆ – 192, ಮಂಡ್ಯ – 131, ಶ್ರೀರಂಗಪಟ್ಟಣ – 125, ನಾಗಮಂಗಲ – 150, ಕೃಷ್ಣರಾಜಪೇಟೆ – 132, ಕೆ. ಆರ್. ನಗರ – 126, ಒಟ್ಟು – 1120 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅನ್ನು ಅಳವಡಿಸಲಾಗುವುದು ಎಂದರು.
ಮತಗಟ್ಟೆಯ 100 ಮೀಟರ್ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ ಹಾಗೂ ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್ ಗಳನ್ನು ತೆರೆಯುವಂತಿಲ್ಲ ಹಾಗೂ ಮತಗಟ್ಟೆಯ 200 ಮೀ. ನಿಂದ ಹೊರಗೆ ತಾತ್ಕಾಲಿಕ ಬೂತ್ ತೆರೆಯಲು ಬಯಸಿದ್ದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಹಾಗೂ ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಈ ಟೆಂಟ್ ನಲ್ಲಿ ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಟಾರ್ಪಲಿನ್ ಅಥವಾ ಛತ್ರಿ ಮೇಲ್ಚಾವಣಿ ಹೊಂದಬಹುದಾಗಿದ್ದು, 2 ಕುರ್ಚಿ ಮತ್ತು ಮೇಜು ಹೊಂದಲು ಮಾತ್ರ ಅವಕಾಶವಿರುತ್ತದೆ.

ವಿಕಲಚೇತನರು ಹಾಗೂ ಹಿರಿಯ ನಾಗರಿಕ ಮತದಾರರಿಗೆ ಅನುಕೂಲಕರ ವ್ಯವಸ್ಥೆ
20 – ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ವಿಕಲಚೇತನ ಹಾಗೂ ಹಿರಿಯ ನಾಗರೀಕ ಮತದಾರರಿಗೆ ಸುಗಮವಾಗಿ ಮತದಾನ ಮಾಡಲು ಪ್ರತಿ ಮತಗಟ್ಟೆಗೆ ಇಳಿಜಾರು ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿರುತ್ತದೆ. ದೃಷ್ಟಿ ದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕ ವಾಗುವಂತೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈನ್ ಬ್ಯಾಲೆಟ್ ಪೇಪರ್ ವ್ಯವಸ್ಥೆ, ಶ್ರವಣದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕವಿದ್ದಲ್ಲಿ ಸಂಜ್ಞಾ ಭಾಷೆ ತಜ್ಞರಿಂದ ಸಂಜ್ಞಾ ಭಾಷೆ (Signed Language) ಮೂಲಕ ಅವಶ್ಯಕ ಕಲ್ಪಿಸಲಾಗಿದೆ. ಮಂದದೃಷ್ಟಿಯುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಲ್ಲಿ ಬೂತಕನ್ನಡಿ ವ್ಯವಸ್ಥೆ ಹಾಗೂ ವಿಕಲಚೇತನರು, ಅಶಕ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1822 ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲು 2099 ಪಿಆರ್ ಒ ಗಳು, 2099 ಎ ಪಿ ಆರ್ ಒ ಗಳು, 4198 ಪಿಒಗಳು, ಒಟ್ಟು 8396 ಸಿಬ್ಬಂದಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದು.

ಶುಷ್ಕ ದಿನ ಘೋಷಣೆ
ಚುನಾವಣೆಯ ಮತದಾನವು ಏಪ್ರಿಲ್ 26 ರಂದು ಹಾಗೂ ಮತ ಎಣಿಕೆಯ ಕಾರ್ಯವು ಜೂನ್ 4 ರಂದು ನಡೆಯಲಿದೆ. ಮತದಾನದ ಸಮಯದಲ್ಲಿ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತದಾನದ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮತದಾನ ಮತ್ತು ಮತ ಎಣಿಕೆ ದಿನದಂದು ಶುಷ್ಕ ದಿನವೆಂದು ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆಯಾದ್ಯಂತ ಏಪ್ರಿಲ್ 24 ರ ಸಂಜೆ 6 ಗಂಟೆಯಿಂದ ಏಪ್ರಿಲ್ 27 ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದಲ್ಲಿ ಜೂನ್ 4 ರಂದು ಮತ ಎಣಿಕೆ ಕಾರ್ಯವು ನಡೆಯುವ ಹಿನ್ನೆಲೆ ಮಂಡ್ಯ ನಗರ ವ್ಯಾಪ್ತಿ ಹಾಗೂ ನಗರದ ವ್ಯಾಪ್ತಿಯಿಂದ 5 ಕಿ. ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಜೂನ್ 3 ರಂದು ಸಂಜೆ 6 ಗಂಟೆಯಿಂದ ಜೂನ್ 5 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್/ ಕ್ಲಬ್‌ಗಳನ್ನು ಮುಚ್ಚುವಂತೆ ಹಾಗೂ ಸದರಿ ಅವಧಿಯಲ್ಲಿ ಮದ್ಯ ತಯಾರಿಕ ಘಟಕಗಳು, ಮದ್ಯ ಮಾರಾಟ, ಹಂಚಿಕೆ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಶುಷ್ಕ ದಿನಗಳೆಂದು ಆದೇಶ ಹೊರಡಿಸಲಾಗಿದೆ.

Mandya
ಹುಟ್ಟಿನಿಂದಲೇ ಬರುವ ಖಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಿ: ಕೆ.ಆರ್.ನಂದಿನಿ



Mandya
ಅಪೌಷ್ಠಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಜಿ.ಪಂ. ಸಿಇಒ ಭೇಟಿ
ಮಂಡ್ಯ : ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಅಪೌಷ್ಠಿಕ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ ಮಾಡುವ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡುವಂತೆ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಸೂಚಿಸಿದರು.
ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿನ ಅಪೌಷ್ಠಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಕ್ಕೆ ಕರೆತರಲು ಮಕ್ಕಳ ತಾಯಂದಿರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಈವರೆಗೆ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಕ್ಕೆ ಎಷ್ಟು ಮಕ್ಕಳು ದಾಖಲಾಗಿದ್ದಾರೆ, ಎಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಹೊರಬಂದಿದ್ದಾರೆ ಎಂಬುದರ ಬಗ್ಗೆ ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದರು. ಮುಂದಿನ ಸಭೆಯಲ್ಲಿ ಅಂಕಿ- ಅಂಶಗಳೊಂದಿಗೆ ವರದಿ ನೀಡಬೇಕು. ಮಕ್ಕಳು ಹಾಗೂ ತಾಯಿಂದಿರಿಗೆ 14 ದಿನ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಬೇಕು ಎಂದು ತಿಳಿಸಿದರು.
ಪೌಷ್ಠಿಕಾಂಶ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳಿಗೆ ಹಾಗೂ ತಾಯಂದಿರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆರಿಂದ ವ್ಯಾಪಕ ಅರಿವು ಮೂಡಿಸಲು ಅಗತ್ಯ ಕ್ರಮವಹಿಸುವಂತೆ ಸಿಇಓ ಅವರು ಸೂಚಿಸಿದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್ (ವಿಪರೀತ ಕಡಿಮೆ ತೂಕ ಮಕ್ಕಳು) ಮತ್ತು ಮ್ಯಾಮ್ (ಸಾಧಾರಣ ತೂಕದ ಮಕ್ಕಳು) ಮಕ್ಕಳನ್ನು ಗುರುತಿಸಿ ಮಕ್ಕಳನ್ನು ಎನ್ ಆರ್ ಸಿ ಕೇಂದ್ರಕ್ಕೆ ಕರೆತರುವಂತಹ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಆಯಾ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಚಿಸಬೇಕು ಎಂದು ತಿಳಿಸಿದರು.
ಅಪೌಷ್ಠಿಕ ಮಕ್ಕಳನ್ನು ಸ್ಕ್ರೀನಿಂಗ್ ಮಾಡಿ ಸ್ಯಾಮ್ ಹಾಗೂ ಮ್ಯಾಮ್ ಗುರುತಿಸಲಾಗುತ್ತಿದೆ ಆದರೆ ತಾಯಿ ಹಾಗೂ ಮಕ್ಕಳನ್ನು ಒಪ್ಪಿಸಿ ಎನ್ ಆರ್ ಸಿ ಗೆ ಕರೆತರಲು ಕಷ್ಟವಾಗುತ್ತಿದೆ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಪ್ರತಿ ಸೋಮವಾರ ಕ್ಷೇತ್ರ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಎಷ್ಟು ಮಕ್ಕಳನ್ನು ಎನ್ ಆರ್ ಸಿ ಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಪ್ರಸ್ತುತಪಡಿಸಲು ಕೋರಿದರು.

ಎನ್ ಆರ್ ಸಿ ಯಲ್ಲಿ ದಾಖಲಾಗಿರುವ ಸ್ಯಾಮ್ ಮತ್ತು ಮ್ಯಾಮ್ ಮಕ್ಕಳ ತಾಯಿಂದರ ಜೊತೆ ಮಾತನಾಡಿದ ಅವರು ಮಕ್ಕಳಿಗೆ ಮನೆಯಲ್ಲಿ ನೀಡುತ್ತಿರುವ ಪೌಷ್ಠಿಕ ಆಹಾರದ ಬಗ್ಗೆ ತಾಯಿಂದಿರಿಂದ ಮಾಹಿತಿ ಪಡೆದರು. ಅಂಗನವಾಡಿ ಕಾರ್ಯಕರ್ತೆಯರು ನೀಡಿದ ಸಲಹೆಯ ಮೇರೆಗೆ ಎನ್ ಆರ್ ಸಿ ಕೇಂದ್ರಕ್ಕೆ ಬಂದಿರುವುದಾಗಿ ತಾಯಿಂದಿರು ಮಾಹಿತಿ ನೀಡಿದರು.
ಇದೇ ವೇಳೆ ಮಿಮ್ಸ್ ಹೆಚ್.ಒ.ಡಿ ಡಾ. ಶ್ರೀಧರ್, ಎನ್ ಆರ್ ಸಿ ನೊಡೆಲ್ ಅಧಿಕಾರಿ ಡಾ. ಮಂಜುಳಾ, ಆರ್. ಸಿ. ಹೆಚ್ ಡಾ. ಅಶ್ವತ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
Mandya
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಜಿ.ಪಂ. ಸಿಇಓ ಭೇಟಿ
ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ರಂಗನಾಥ ಪುರ ಕ್ರಾಸ್ ಗ್ರಾಮ ಪಂಚಾಯಿತಿಯ ಆದಿಹಳ್ಳಿ ಗ್ರಾಮದಲ್ಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕೊಠಡಿಗಳಿಗೆ ಭೇಟಿ ನೀಡಿ ಹಾಸಿಗೆ ವ್ಯವಸ್ಥೆ ಹಾಗೂ ಕುಡಿಯುವ ನೀರು, ಅಡುಗೆ ಕೋಣೆ, ದಾಸ್ತಾನು ಕೊಠಡಿ ಹಾಗೂ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿದರು.
ದ್ವಿತೀಯ ಪಿ.ಯು.ಸಿ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ನೀಡಿ ಜೀವಕೋಶವನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿರುವುದನ್ನು ವೀಕ್ಷಿಸಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಶಾಲೆಯಲ್ಲಿನ ಗಣಕಯಂತ್ರ ಕೊಠಡಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಭವಿಷ್ಯದಲ್ಲಿ ಯಾವ ರೀತಿಯ ಸೇವೆಗೆ ಸೇರಬೇಕು ಎಂಬ ಕನಸನ್ನು ಹೊಂದಿದ್ದೀರಿ ಎಂಬ ಬಗ್ಗೆ ಮಾಹಿತಿ ಪಡೆದು ಕನಸು ಸಾಕಾರಗೊಳಿಸಿಕೊಳ್ಳಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ಸಿ.ಬಿ.ಎಸ್.ಇ ಪಠ್ಯಕ್ರಮ ಇರುವ ಶಾಲೆ ಇದಾಗಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ನಡೆಸುವಂತೆ ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿದ್ಯಾಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗೀ ನಿಮ್ಮ ಜೀವನದ ಗುರಿ ತಲುಪಲು ಹಾಗೂ ನಿಮ್ಮ ಕನಸನ್ನು ಸಕಾರಗೊಳಿಸಿಕೊಳ್ಳಲು ವಿದ್ಯಾಬ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಂಡ್ಯ ಉಪವಿಭಾಗದ ತಾಲ್ಲೂಕು ವಿಸ್ತರಣಾಧಿಕಾರಿ ರುದ್ರೇಶ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
-
Mandya12 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
State10 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Chamarajanagar4 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Mandya10 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
State5 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Hassan7 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Hassan7 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
-
Chamarajanagar6 hours agoರಾಗಿ ಒಕ್ಕಣೆ ಮಿಷನ್ ನಿಂದ ಕೂಲಿ ಕಾರ್ಮಿಕಳೊಬ್ಬಳ ಕೈ ತುಂಡು
