Chamarajanagar
ವಿಶೇಷ ಕಣ್ಣಿನ ಚಿರತೆ
ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಉದ್ಯಾನವನ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ವಲಯದಲ್ಲಿ ವಿಶೇಷ ಕಣ್ಣಿನ ಚಿರತೆ ಪತ್ತೆಯಾಗಿದೆ . ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಎರಡು ವಿಭಿನ್ನ ಬಣ್ಣದ ವಿಶೇಷ ಕಣ್ಣುಗಳುಳ್ಳ ಚಿರತೆ. ಪತ್ತೆಯಾಗಿದೆ ವನ್ಯ ಜೀವಿ ಛಾಯಾಗ್ರಹಕ ಧ್ರುವ ಪಾಟೀಲ್ ಎಂಬುವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ
Chamarajanagar
ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಬಹಳ ದೊಡ್ಡ ಪಾಠ ಶಾಲೆ : ಪ್ರಾಂಶುಪಾಲ ವಿಜಯ್
ಯಳಂದೂರು ಆಗಸ್ಟ್ 7
ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಕಾಲೇಜಿಗೆ ಬಂದಿರುವ ನೀವು ನೋಡದೆ ಇರುವ ಇನ್ನೊಂದು ಪ್ರಪಂಚ ಇದೆ. ಅದು ನಿಮ್ಮ ತಂದೆ ತಾಯಿಯ ಕಷ್ಟ. ಎಂತಹ ಕಷ್ಟಬಂದರೂ ತಂದೆ ತಾಯಿ ನಿಮ್ಮ ಮುಂದೆ ತೋರಿಸಿಕೊಳ್ಳುವುದಿಲ್ಲ. ಆ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಕಷ್ಟ ಜೀವನವೇ ಶಿಸ್ತನ್ನು ಕಲಿಸುವ ಬಹಳ ದೊಡ್ಡ ಪಾಠ ಶಾಲೆಯಾಗಿದೆ. ತಂದೆ ತಾಯಿಯ ನಿರೀಕ್ಷೆಗಿಂತ ದೊಡ್ಡ ಸಾಧನೆ ಮಾಡಿ ತೋರಿಸಬೇಕೆಂದು ವೈ .ಎಂ . ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ ಹನೂರು ಅವರು ತಿಳಿಸಿದರು.
ಅವರು ಪಟ್ಟಣದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಶೈಕ್ಷಣಿಕವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಪ್ರಸ್ತುತತೆಯ ಬಗೆಗೆ ಮಾತನಾಡುತ್ತಾ, ದೃಢವಾದ ಶರೀರ ಇದ್ದರೆ ದೃಢವಾದ ಮನಸ್ಸು ನಮ್ಮದಾಗಿರುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಜ್ಞಾನವಂತರಾಗಬೇಕು. ಜಗತ್ತಿನಲ್ಲಿ ಅಪಹರಿಸಲು ಆಗದಿರುವ ಒಂದು ಸಂಪತ್ತು ಜ್ಞಾನ. ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಬಾಳೆಹಣ್ಣು ಬೆಳೆದಂತೆ ಬಾಗುವ ರೀತಿಯಲ್ಲಿ ನಿಜವಾದ ಜ್ಞಾನವಂತರು ಫಲತುಂಬಿದ ಮರಗಳ ರೀತಿ ಬಾಗುತ್ತಾರೆ. ಪ್ರತಿಯೊಂದು ಫಲವು ಸಿಪ್ಪೆಯಿಂದ ಬಂಧಿತವಾಗಿರುವAತೆ ಜ್ಞಾನವನ್ನು ನಮ್ಮ ಚಕ್ಷÄಗಳ ಮೂಲಕ ಬಂಧಿಸಿಕೊಳ್ಳಬೇಕೆAದು ತಿಳಿಸುತ್ತಾ ಹಿರಿಯರು ಕಿರಿಯರ ಜೊತೆಯಲ್ಲಿ ನಿಮ್ಮ ವರ್ತನೆ ಹೇಗಿದೆ ಎಂಬುದು ಮುಖ್ಯ. ಸಮಾಜದ ಕಟ್ಟುಪಾಡುಗಳನ್ನು ಪಾಲಿಸುತ್ತಾ ಮಾದರಿಯಾಗಿ ಬದುಕಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿ. ಚಂದ್ರಕಲಾ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆ ಇದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಕಾಲದಲ್ಲಿ ಹೊರಹಾಕಬೇಕು. ಪಠ್ಯ-ಪಠ್ಯೇತರ ಚಟುವಟಿಕೆಗಳು ತುಂಬ ಮುಖ್ಯವಾದದ್ದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡು ಸ್ಫರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಮೊದಲು ಪೋಷಕರ ಮತ್ತು ಸಂಸ್ಥೆಯ ಹೆಸರನ್ನು ಉಳಿಸಿ ಬೆಳಸಬೇಕು. ಅವಕಾಶಗಳು ಮತ್ತು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಂದೆ, ತಾಯಿಗೆ, ಗುರು, ಹಿರಿಯರಿಗೆ ಗೌರವ ಕೊಡಬೇಕು. ನಾವು ಸಮಾಜಕ್ಕೆ ಹೊಂದಿಕೊಳ್ಳಬೇಕು. ನಿಮ್ಮ ಬಾಳಿಗೆ ನೀವೇ ದಾರಿದೀಪವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕು. ಆಶಾ ಮತ್ತು ತಂಡ ಪ್ರಾರ್ಥನೆಯನ್ನು ಸಲ್ಲಿಸಿದರು. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸಂಜನಾ ಅವರು ನಿರೂಪಿಸಿದರು.
Chamarajanagar
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಳಂಕರಹಿತ ಆಡಳಿತ ಬಿಜೆಪಿಗೆ ಹೊಟ್ಟೆ ಉರಿ ಉಂಟುಮಾಡಿದೆ – ಶಾಸಕ ಎ.ಆರ್.ಕೃಷ್ಣಮೂರ್ತಿ
ಯಳಂದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಳಂಕರಹಿತ ಆಡಳಿತ ಬಿಜೆಪಿಗೆ ಹೊಟ್ಟೆ ಉರಿ ಉಂಟುಮಾಡಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಮೈಸೂರು ಜನಾಂದೋಲನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ ‘ಬಿಜಿಪಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ. ಸಂವಿಧಾನ ವಿರೋಧಿ ಚಟುಚವಟಿಕೆ ಯಲ್ಲಿ ತೊಡಗಿದೆ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಮಾತನಾಡುತ್ತಿದೆ. ಏಕ ಚುನಾವಣೆ, ಏಕ ಪ್ರಧಾನಿ, ಏಕ ಭಾಷೆ, ಏಕ ಸರ್ಕಾರ ರಚಿಸುವ ಲಾಲಸೆ ಹೊಂದಿದೆ’ ಎಂದು ಟೀಕಿಸಿದರು.
ಜನಪರ ಆಡಳಿತ ನಡೆಸುವ ಉದ್ದೇಶ ದಿಂದ ಹತ್ತಾರು ಯೋಜನೆ ಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ಸರ್ಕಾರವನ್ನು ಹಿಂಬಾಗಿಲಿ ನಿಂದ ಉರುಳಿಸಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಚು ಮಾಡಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಜೊತೆ ಕೈಜೋಡಿಸಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಕುತಂತ್ರ ಖಂಡಿಸಿ ಇದೇ 9ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಆ.10ರಂದು ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಜಯಣ್ಣ, ಹೊಂಗ ನೂರು ಚಂದ್ರು, ತೋಟೇಶ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಸದಾ ಶಿವಮೂರ್ತಿ, ಶಿವಕುಮಾರ್, ಜೆ.ಯೋಗೇಶ್, ವಡಗೆರೆ ದಾಸ್, ಕೇತಮ್ಮ, ಕಮಲ್ ನಾಗರಾಜು, ನಂಜುಂಡಸ್ವಾಮಿ, ಕಿನಕಹಳ್ಳಿ ರಾಚಯ್ಯ ಇದ್ದರು.
Chamarajanagar
ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಒಂದು ಮೇಕೆ ಮತ್ತು ಒಂದು ಕುರಿಮರಿಯನ್ನೂ ಬಲಿ ಪಡೆದ ಚಿರತೆ
ಕೊಳ್ಳೇಗಾಲ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಒಂದು ಮೇಕೆ ಮತ್ತು ಒಂದು ಕುರಿಮರಿಯನ್ನೂ ಬಲಿ ಪಡೆದ ಚಿರತೆ ಕುರಿಮರಿಯನ್ನು ಹೊತ್ತೋಯ್ದಿರುವ ಘಟನೆ ತಾಲೂಕಿನ ಚಿಕ್ಕಿಂದುವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಳ್ಳೆಗೌಡ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಹಸು ಮೇಕೆ ಕುರಿಗಳನ್ನು ಕಟ್ಟಿಹಾಕಿದ್ದರು. ನಿನ್ನೆ ತಡರಾತ್ರಿ ಚಿರತೆ ದಾಳಿ ನಡೆಸಿ ಮೇಕೆಯೊಂದನ್ನು ಕಚ್ಚಿ ಸಾಯಿಸಿದೆ. ಮೆಕ್ಕೆಗೆ ಕಟ್ಟಿದ್ದ ಹಗ್ಗ ಗತ್ತಿಯಾಗಿದ್ದರಿಂದ ಅದನ್ನು ಎಳೆಯಲು ಸಾಧ್ಯವಾಗದಿದ್ದಾಗ ಪಕ್ಕದಲ್ಲಿ ಕಟ್ಟಿದ್ದ ಕುರಿಯನ್ನು (ಟಗರು)
ಬಲಿಪಡೆ ಎಳೆದುಕೊಂಡು ಹೋಗಿದೆ.
ವಾರದ ಹಿಂದೆ ಕರಿಯನಪುರ ಗ್ರಾಮದ ಚಿಕ್ಕಸಿದ್ದಯ್ಯ ಎಂಬುವರು ಕುರಿ ಮೇಯಿಸುತ್ತಿದ್ದ ಸಮಯದಲ್ಲೆ ಕುರಿಯೊಂದನ್ನು ಕಚ್ಚಿಕೊಂಡು ಹೋಗಿತ್ತು. ಈ ಘಟನೆ ಮಾಡುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸುಮಾರು ಎರಡು ತಿಂಗಳಿನಿಂದಲೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗುತ್ತಿದೆ. ಗ್ರಾಮದ ರಾಮರಾವ್ ಎಂಬುವರ ತೋಟದ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಹಾಗೂ ಅಕ್ಕ ಪಕ್ಕದ ಜಮೀನಿನ ರೈತರಿಗೂ ಕಾಣಿಸಿಕೊಂಡಿರುವ ಬಗ್ಗೆ ಈಗಾಗಲೇ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೂ ಸಹ ಚಿರತೆ ಸೆರೆಹಿಡಿಯುವಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.