Connect with us

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

 

ಚಿಕ್ಕಮಗಳೂರು

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿಮಾ ಪರಿಹಾರ ಬಡ್ಡಿ ಸಹಿತ ನೀಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

Published

on

ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ವಿಮಾ ಹಣವನ್ನು ಭರಿಸದ ವಿಮಾ ಕಂಪನಿಯ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಸಹಿತ ಹಣ ಪಾವತಿಸುವಂತೆ ಆದೇಶ ನೀಡಿದೆ.

ಕಡೂರು ಪಟ್ಟಣದ ಕೆ.ಎಂ.ದಿನೇಶ್ ಎಂಬುವವರು ನಗರದ ಮಧುವನ ಲೇಔಟ್‌ನಲ್ಲಿರುವ ಮೆ. ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ಸಂಬಂಧಿಸಿದಂತೆ ಮೆ. ಎಕ್ಸೈಡ್ ಜೀವ ವಿಮಾ ಕಂಪನಿಯ ಚಿಕ್ಕಮಗಳೂರು ಶಾಖೆಯಿಂದ ವಿಮೆಯನ್ನು ಪಡೆದುಕೊಂಡಿದ್ದರು. ದುರದೃಷ್ಟವಶಾತ್ 2023ರ ಅಕ್ಟೋಬರ್ 26 ರಂದು ದಿನೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು.

ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ವಿಮಾ ಕಂಪನಿಯಿಂದ ವಿಮಾ ಪರಿಹಾರದ ಮೊತ್ತವನ್ನು ನೀಡುವಂತೆ ಕೋರಿದ್ದರೂ ವಿಮಾ ಕಂಪನಿ ಹಣ ಪಾವತಿಸದೆ ಸೇವಾ ನ್ಯೂನತೆ ಎಸಗಿತ್ತೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 2025ರ ಜುಲೈ.8 ರಂದು ಮೆ.ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರು ಹಾಗೂ ಚಿಕ್ಕಮಗಳೂರು ಶಾಖಾ ವ್ಯವಸ್ಥಾಪಕರು, ಮೆ.ಶಿಕ್ಷಕರ ಸಹಕಾರ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆಯ ವ್ಯವಸ್ಥಾಪಕರುಗಳ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಜನವರಿ 23 ರಂದು ತೀರ್ಪು ನೀಡಿದ್ದು, ಮೆ.ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿ ಹಾಗೂ ಚಿಕ್ಕಮಗಳೂರು ಶಾಖಾ ಕಚೇರಿಯ ವಿರುದ್ಧದ ದೂರನ್ನು ಖರ್ಚಿನೊಂದಿಗೆ ಭಾಗಶಃ ಪುರಸ್ಕರಿಸಿ ಮೆ.ಶಿಕ್ಷಕರ ಸಹಕಾರಿ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆ ವಿರುದ್ಧದ ದೂರನ್ನು ವಜಾಗೊಳಿಸಿದೆ.

ವಿಮಾ ಕಂಪನಿಯು ವಿಮಾ ಪರಿಹಾರ ಮೊತ್ತ 11.50 ಲಕ್ಷ ರೂ.ಗಳನ್ನು 2024ರ ಫೆಬ್ರವರಿ 8 ರಿಂದ ಇದುವರೆಗೆ ವಾರ್ಷಿಕ ಶೇ.9ರ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಪರಿಹಾರವಾಗಿ 40 ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು-ವೆಚ್ಚವೆಂದು 10 ಸಾವಿರ ರೂ.ಗಳನ್ನು ಜಯಂತಿ ಅವರಿಗೆ ನೀಡುವಂತೆ ಆದೇಶ ನೀಡಲಾಗಿದೆ.

ತಪ್ಪಿದಲ್ಲಿ ಆದೇಶದ ಮೊತ್ತಕ್ಕೆ ಶೇ.6 ಭವಿಷ್ಯ ಬಡ್ಡಿಯನ್ನು ಪಾವತಿಸುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ,ಬಮ್ಮನಕಟ್ಟಿ ಅವರು ಈ ತೀರ್ಪನ್ನು ಪ್ರಕಟಿಸಿದ್ದು, ಗ್ರಾಹಕರ ಹಿತರಕ್ಷಣೆ ಮಾಡಲಾಗಿದೆ.
ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲರಾದ ಎಂ.ಕೆ.ರಮೇಶ್ ಅವರು ವಾದ ಮಂಡಿಸಿದ್ದರು.

Continue Reading

Chikmagalur

ನಿವೃತ್ತ ಬ್ಯಾಂಕ್‌ ಸಿಬ್ಬಂದಿಗೆ ಫೇಸ್‌ಬುಕ್‌ ಮೂಲಕ ವಂಚನೆ

Published

on

ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮಹಿಳಾ ನೌಕರರೊಬ್ಬರಿಗೆ ಫೇಸ್ ಬುಕ್ ನಲ್ಲಿ BOB PENSION CARD ಎಂಬ ಜಾಹೀರಾತು ಬಂದಿದ್ದು ಅದನ್ನು ಕ್ಲಿಕ್ಕಿಸಿದ್ದಾರೆ.

ಅದರಲ್ಲಿ ಕೇಳಿರುವಂತೆ ಪೋನ್ ನಂಬರ್ ಮತ್ತು ಕೆಲಸವನ್ನು ನಮೂದಿಸಿದ್ದಾರೆ .ನಂತರ ಅನುಮಾನ ಬಂದು ಸದರಿ ಅಪ್ಲೀಕೇಷನ್ ನಿಂದ ವಾಪಸ್ ಬಂದಿರುತ್ತಾರೆ.


ಮಧ್ಯಾಹ್ನದ ವೇಳೆಗೆ ಮೋಬೈಲ್ ನಂಬರ್ ಗೆ ಪೋನ್ ಬಂದಿದ್ದು ತನ್ನ ಹೆಸರು ಶ್ಯಾಮ್ ಎಂದೂ ಬ್ಯಾಂಕ್ ಆಫ್ ಬರೋಡಾದ ಪೆನ್ ಷನ್ ಕಾರ್ಡ್ ವಿಭಾಗದಿಂದ ಮಾತನಾಡುತ್ತಿದ್ದೇನೆ ಎಂದು ನಂಬಿಸಿದ್ದಾರೆ.
ಪೆನ್ ಷನ್ ಕಾರ್ಡ್ ಮಾಡಿಕೊಡುತ್ತೇನೆ ಎಂದು ಹೇಳಿ ವಾಟ್ಸ್ ಆಫ್ ಅನ್ನು ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡಿದ್ದಾನೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಎಫ್ ಡಿ ಖಾತೆಯಲ್ಲಿ 5,00,000/- ರೂಗಳನ್ನು ಒಂದು ವಾರದ ಹಿಂದೆ ಡೆಪಾಸಿಟ್ ಮಾಡಿದ್ದು , ಈ ಎಫ್ ಡಿ ಖಾತೆಯಿಂದ ತನ್ನ ಬಾಬ್ತು ಬ್ಯಾಂಕ್ ಆಫ್ ಬರೋಡಾದ ಎಸ್ ಬಿ ಖಾತೆಗೆ 4,75,000/- ರೂ ಓವರ್ ಡ್ರಾಪ್ಟ್ ಆನ್ ಎಫ್ ಡಿ ಆಗಿರುವ ಬಗ್ಗೆ ಪೋನ್ ಗೆ ಮೆಸೇಜ್ ಬಂದಿದೆ.


ನಂತರ ಖಾತೆಯಿಂದ 1,50,000/- ರೂ ಡ್ರಾ ಆಗಿದ್ದು, ತಕ್ಷಣ ನನಗೆ ಇದು ಪ್ರಾಡ್ ಪೋನ್ ಕಾಲ್ ತಿಳಿದು ಪೋನ್ ಸಂಪರ್ಕ ಕಡಿತಗೊಳಿಸಿ ಬ್ಯಾಂಕ್ ಗೆ ಪೋನ್ ಮಾಡಿ ತನ್ನ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿ ವಾಟ್ಸ್ ಆಫ್ ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡು ತನ್ನ ಎಫ್ ಡಿ ಖಾತೆಯಿಂದ 4,75,000/- ರೂ ಲೋನ್ ಮಾಡಿ ಅದರಲ್ಲಿ 1,50,000/- ರೂಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ನಿಂತಿದ್ದ ಕಂಟೇನರ್ ಗೆ ಕಾರು ಅಪ್ಪಳಿಸಿ ವ್ಯಕ್ತಿ ಸಾ*ವು

Published

on

ಚಿಕ್ಕಮಗಳೂರು: ನಿಂತಿದ್ದ ಕಂಟೇನರ್ ಗೆ ಕಾರು ಅಪ್ಪಳಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಫೆ 17 ರ ಬೆಳಗಿನ ಜಾವ ಸುಮಾರು 02.10 ಗಂಟೆಗೆ ದೀಪಕ್ ಕಾರಿನಲ್ಲಿ ಹೌಸಿಂಗ್ ಬೋರ್ಡ್ ನಲ್ಲಿರುವ ಬಾಡಿಗೆ ಮನೆಗೆ ತೆರಳುತ್ತಿದ್ದರು.


ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಸಮೀಪದ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗ ಕಂಟೇನರ್ ಅನ್ನು ಯಾವುದೇ ಸಿಗ್ನಲ್ ಇಲ್ಲದೇ ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಈ ವಾಹನ ಕಾಣಿಸದೇ ದೀಪಕ್ ರವರ ಕಾರು ಕಂಟೇನರ್ ಗೆ ಡಿಕ್ಕಿಯಾಗಿ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ .


ಕಂಟೈನರ್ ವಾಹನದಲ್ಲಿದ್ದ ಚಾಲಕ ಗಾಯಗೊಂಡಿದ್ದವರನ್ನು ಉಪಚರಿಸಿ ಚಿಕಿತ್ಸೆ ಕೊಡಿಸದೆ ಸ್ಥಳದಿಂದ ಪರಾರಿ ಆಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

Trending

error: Content is protected !!