Connect with us

Hassan

ಚೆಕ್‌ಪೋಸ್ಟ್ ತಪಾಸಣೆ ಬಿಗಿಗೊಳಿಸಲು ಕೇಂದ್ರ ವೀಕ್ಷಕರಿಂದ ಸೂಚನೆ

Published

on

ಹಾಸನ, ಏ.5. (ಕರ್ನಾಟಕ ವಾರ್ತೆ):- ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳಿಗೆ ನಿಯಂತ್ರಿಸಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಾದ ಚಂದ್ರಮೋಹನ್ ಠಾಕೂರ್ ಸೂಚಿಸಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ವಿವಿಧ ಚುನಾವಣಾ ತಂಡಗಳ ಮುಖ್ಯಸ್ಥರ ಸಭೆ ನಡೆಸಿ ಅವರು ಮಾತನಾಡಿದರು.


ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚುವೆಚ್ಚಗಳು ನಿಯಮಾನುಸಾರವೇ ನಡೆಯಬೇಕು. ಬ್ಯಾಂಕ್ ಖಾತೆಯ ಮೂಲಕವೇ ಪಾವತಿಯಾಗಬೇಕು. ಅಕ್ರಮವಾಗಿ ಪಾವತಿ ಮತ್ತು ವೆಚ್ಚ ಮಾಡಲು ಅವಕಾಶ ನೀಡಬಾರದು. ಚೆಕ್‌ಪೋಸ್ಟ್ ತಪಾಸಣೆಯನ್ನು ಬಿಗಿಗೊಳಿಸಿ, ಅಕ್ರಮ ಸಾಗಾಟಗಳನ್ನು ನಿಯಂತ್ರಿಸಬೇಕು. ಅಕ್ರಮ ಹಣ ಮತ್ತು ಸರಕು ಸಾಗಾಟ ಕಂಡುಬAದಕೂಡಲೇ ವಶಪಡಿಸಿ, ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕು ಎಂದು ಅವರು ತಿಳಿಸಿದರು.
ಇವಿಎಂ ಸಾಗಾಟವನ್ನು ಬಿಗಿ ಭದ್ರತೆಯಲ್ಲಿ ಮತ್ತು ಜಿಪಿಎಸ್ ಆಧಾರಿತ ವಾಹನಗಳಲ್ಲಿ ಸಾಗಿಸಬೇಕು. ಮುಂದಿನ ದಿನಗಳಲ್ಲಿ ತಾನು ಸೂಕ್ಷö್ಮ ಮತ್ತು ಸಂಭಾವ್ಯ ಆಮಿಷಕ್ಕೊಳಗಾಗುವ ಪ್ರದೇಶಗಳು ಸೇರಿದಂತೆ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ನಿರಂತರ ಭೇಟಿ ನೀಡಲಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ತಂಡಗಳು ರಾಜಕೀಯ ಪಕ್ಷಗಳ ತಂಡಗಳಿಗಿAತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸರ್ವರೀತಿಯ ಏರ್ಪಾಡುಗಳನ್ನು ಮಾಡಬೇಕು ಎಂದು ವೀಕ್ಷಕರಾದ ಚಂದ್ರಮೋಹನ್ ಠಾಕೂರ್ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾಧ ವಿಕಾಸ್ ಸಿಂಗ್ ಭಗ್ರಿ ಹಾಗೂ ವೈಭವ್ ಅಗರವಾಲ್ ಮಾತನಾಡಿ, ತಪಾಸಣಾ ತಂಡಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಸಂಶಯಾಸ್ಪದ ವ್ಯವಹಾರ ಕಂಡುಬAದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು. ಆದಾಯ ತೆರಿಗೆ ಇಲಾಖೆಯೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮದ್ಯ ಮಾರಾಟ ಅಂಗಡಿಗಳಲ್ಲಿ ಮಾರಾಟದಲ್ಲಿ ಒಮ್ಮಲೇ ಏರಿಕೆಯಾಗುವ ವ್ಯವಹಾರದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಗಾ ಇಡಬೇಕು. ಇತರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗಟ್ಟಲು ಫ್ಲೆöÊಯಿಂಗ್ ಸ್ಕಾ÷್ವಡ್ ತಂಡಗಳು ನಿರಂತರ ತಪಾಸಣೆ ನಡೆಸಬೇಕು. ಚೆಕ್‌ಪೋಸ್ಟ್ಗಳು ನಿರಂತರವಾಗಿ ಸ್ಥಳ ಬದಲಾಯಿಸಿ ತಪಾಸಣೆ ನಡೆಸಲು ವೀಕ್ಷಕರು ತಿಳಿಸಿದರು.


ಪೊಲೀಸ್ ವೀಕ್ಷಕರಾದ ದಿವ್ಯ ಸತ್ಯನ್ ಅವರು ಮಾತನಾಡಿ, ಸೂಕ್ಷö್ಮ ಮತ್ತು ಸಂಭಾವ್ಯ ಆಮಿಷಕ್ಕೊಳಗಾಗುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲು ಸೂಚಿಸಿದರು.
ಸಭೆಯಲ್ಲಿ ವೀಕ್ಷಕರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಾಚರಣೆಗಳ ಮಾಹಿತಿ ಪಡೆದರು.
ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮಾ ಅವರು ಕೇಂದ್ರ ವೀಕ್ಷಕರಿಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಮುಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಳಾ, ಆದಾಯ ತೆರಿಗೆ ಇಲಾಖೆ ಅಧಿಕಾರಿ ದರ್ಶನ್ ಕುಮಾರ್ ಮತ್ತಿತರರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಏ.12, 13ರಂದು ಹಾಸನದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ

Published

on

ಹಾಸನ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಟಿ.ವಿ. ಶಿವಾನಂದ್ ತಗಡೂರು ಸೂಚನೆಯಂತೆ ಏಪ್ರಿಲ್ 12 ಮತ್ತು 13 ರಂದು ನಗರದ ಸರಕಾರಿ ಕಲಾ ಕಾಲೇಜು ಮತ್ತು ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್ ನಡೆಸಲು ಹಾಸನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸಭೆ ನಡೆಸಿ ಯಶಸ್ವಿಯಾಗಿ ನಡೆಸಲು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಟಿ.ವಿ. ಶಿವಾನಂದ್ ತಗಡೂರು ಮಾತನಾಡಿ, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಾಸನದಲ್ಲಿ ಆಯೋಜಿಸಲು ತೀರ್ಮಾನ ಮಾಡಲಾಗಿದ್ದು, ಕಳೆದ ವರ್ಷ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಅದಕ್ಕಿಂತ ಬಿನ್ನವಾಗಿ ಇಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲು ಆಲೂಚನೆ ಇಟ್ಟುಕೊಂಡು ನಿರ್ಧರಿಸಲಾಗಿದೆ. ಕೊಪ್ಪಳದಲ್ಲಿ ನಡೆದ ಸಮ್ಮೇಳನದಲ್ಲಿ ಮದನ್ ಗೌಡರು ತಿಳಿಸಿದ್ದರು. ಏಪ್ರಿಲ್ ೧೨ ಮತ್ತು ೧೩ನೇ ದಿನಾಂಕದಂದು ಹಾಸನದಲ್ಲಿ ಏರ್ಪಡು ಮಾಡಲು ಭಾನುವಾರದಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.

ಯಾರು ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ತಂಡ ಭಾಗವಹಿಸಲು ಅವಕಾಶ ಇರುತ್ತದೆ. ಪ್ರತಿಯೊಬ್ಬರ ಐಡಿ ಕಾರ್ಡ್ ಪರೀಕ್ಷೆ ಮಾಡಲಾಗುದು. ಹೊರ ಜಿಲ್ಲೆಯಿಂದ ಬರುವ ಪತ್ರಕರ್ತ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕ್ರೀಡಾಕೂಟ ಯಶಸ್ವಿಗೆ ಜಿಲ್ಲಾ ಸಮಿತಿ, ಉಪ ಸಮಿತಿ ಮಾಡಿಕೊಂಡು ಆವರವರ ಜವಬ್ಧಾರಿಯನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಹಿಸಿಕೊಡಲಿದೆ. ಪ್ರಾರಂಭದ ದಿನದಲ್ಲಿ ಮೊದಲ ಆಟ ಸೆಲೆಬ್ರೆಟಿ ಕ್ರಿಕೆಟ್ ನಡೆಯಲಿದೆ. ಮಂಗಳೂರಿನಲ್ಲಿಯೂ ಕೂಡ ಸೆಲಬ್ರಿಟಿ ಜನಪ್ರತಿನಿಧಿಗಳಿಂದ ಆಟೋಟ ನಡೆದಿತ್ತು. ಒಟ್ಟಾರೆ ರಾಜ್ಯ ಮಟ್ಟದ ಈ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿ ಮನವಿ ಮಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂರ್ಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಕ್ರಿಕೆಟ್ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ವಿಶೇಷವಾಗಿ ರಾಜ್ಯ ಸಭಾಪತಿ ಯೂ.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆಗಮಿಸಲಿದ್ದಾರೆ. .

ಸಭೆಯಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಹೆಚ್.ಬಿ. ಮದನ್ ಗೌಡ, ಮಾಜಿ ಅಧ್ಯಕ್ಷರಾದ ಮಂಜುನಾಥ್, ರವಿನಾಕಲಗೂಡು, ಬಿ.ಆರ್. ಉದಯಕುಮಾರ್, ಪ್ರಸನ್ನಕುಮಾರ್, ಕಾರ್ಯದರ್ಶಿ .ಪಿ.ಎ. ಶ್ರೀನಿವಾಸ್, ಕುಮಾರ್, ನಟರಾಜು, ಜಿ. ಪ್ರಕಾಶ್, ಹೆತ್ತೂರ್ ನಾಗರಾಜು, ಜ್ಞಾನೇಶ್, ಕುಶ್ವಂತ್, ಕೃಷ್ಣ, ನಾಗರಾಜು, ಮಂಜು, ಮೆಹಾಬೂಬ್, ದಯಾನಂದ್, ಶರತ್ ಇತರರು ಉಪಸ್ಥಿತರಿದ್ದರು.

Continue Reading

Hassan

ಇನ್ನು 15 ದಿನದಲ್ಲಿ ಎಲ್ಲಾ ಶಾಸಕರ ಜೊತೆ ವಿವಿ ಉಳಿಸಿ ಹೋರಾಟ ಸಮಿತಿಯಿಂದ ಸಿಎಂ ಭೇಟಿ: ಸಂಸದ ಶ್ರೇಯಸ್ ಪಟೇಲ್

Published

on

ಹಾಸನ: ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಎಲ್ಲಾ ಶಾಸಕರ ಒಟ್ಟುಗೂಡಿ, ನಮ್ಮ ಜೊತೆ ಸಮಿತಿಯಿಂದ 15 ಜನರ ತಂಡ ಈ ವಾರದಲ್ಲಿ ದಿನ ನಿಗಧಿ ಮಾಡಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನ ಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಭರವಸೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದ ಶ್ರೇಯಸ್.ಎಂ. ಪಟೇಲ್ ಮಾತನಾಡಿ, ವಿಶ್ವ ವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧರಿತ ಚರ್ಚೆಗಳು ನಡೆದಿದ್ದು, ಅಭಿವೃದ್ಧಿ ಮತ್ತು ಯೋಗಕ್ಷೇಮ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಎಲ್ಲಾರ ಪರ ನಿಂತು ಕೊಳ್ಳುವ ಕೆಲಸ ಮಾಡಲಾಗುವುದು ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿರುವುದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಇಲ್ಲಿವರೆಗೂ ತೆಗೆದುಕೊಂಡಿರುವುದಿಲ್ಲ. ಯಾರು ಗಾಬರಿ ಪಡಬಾರದೆಂದು ಶಿಕ್ಷಣ ಸಚಿವರು ಹೇಳಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಆಗಬಹುದಾದಂತಹ ಬೇಡಿಕೆಯನ್ನು ಮುಂದಿಟ್ಟು ಮನವಿಯನ್ನು ಮಾಡೋಣ ಎಂದರು.

ಶಾಸಕ ಎ. ಮಂಜು ಮಾತನಾಡಿ, ವಿಶ್ವವಿದ್ಯಾಲಯ ಇಲ್ಲೆ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಕಾಲೇಜುಗಳನ್ನು ಯಾವ ಸರಕಾರ ಬಂದರೂ ಮುಚ್ಚುವುದಕ್ಕೆ ಆಗುವುದಿಲ್ಲ. ಆದರೇ ವಿಲೀನಗೊಳಿಸಲಾಗುತ್ತದೆ. ಹಳ್ಳಿ ಸೇರಿದಂತೆ ಎಲ್ಲಾ ಮಕ್ಕಳಿಗೂ ವಿಧ್ಯೆ ಸಿಗಬೇಕಾದರೇ ವಿವಿಗಳು ಆಯಾ ಜಿಲ್ಲೆ ಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಆಗಬೇಕು. ಹೆಚ್ಚಿನ ಹೋರಾಟಕ್ಕೆ ಮುಂದಾದ ಜಿಲ್ಲೆ ಇದ್ದರೇ ಹಾಸನ. ಈ ಹೋರಾಟದಲ್ಲಿ ಯಾವ ರಾಜಕಾರಣ ಆಗಬಾರದು. ವಿವಿ ರಾಜ್ಯ ಸರಕಾರದಿಂದ ಮಾತ್ರ ನಡೆಯುವುದಿಲ್ಲ. ಕೇಂದ್ರದ ಯುಜಿಸಿ ಸ್ಕೇಲ್ ಕೂಡ ಇದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳ ಮೊದಲ ಆಯ್ಕೆ ಸರಕಾರ ಶಿಕ್ಷಣ ಸಂಸ್ಥೆಗಳು. ಇಂಜಿನಿಯರ್, ವೈದ್ಯಕೀಯ ಯಾವುದೇ ಆಗಿರಲಿ ಸರಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗೀ ಕಡೆ ಹೋಗುತ್ತಾರೆ. ಏನಾದರೂ ಈ ರೀತಿ ತಾತ್ಸರ ಮಾಡಿದರೇ ಮುಂದಿನ ದಿನಗಳಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೇ ಆ ಖಾಸಗೀಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ ಎಂದು ಎಚ್ಚರಿಸಿದರು.

ಇದರಿಂದ ಯಾವ ಯಾವ ಸಂಸ್ಥೆ ಯಾವ ಯಾವ ಮೌಲ್ಯವನ್ನು ಭಿತ್ತಬಹುದು. ಸರಕಾರದವರು ಹೀಗೆ ಮುಂದುವರೆದರೇ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದುಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ ಆಗಿತು ಎಂದು ಬೇಸರವ್ಯಕ್ತಪಡಿಸಿದರು.

ಹಸಿರುಭೂಮಿ ಪ್ರತಿಷ್ಠಾನದ ಬಿ.ಕೆ. ಮಂಜುನಾಥ್ ಮಾತನಾಡಿ, ಸರಕಾರದಲ್ಲಿ ಗೊಂದಲವಿದ್ದು, ಜನರಲ್ಲಿ ವಿಶ್ವವಿದ್ಯಾಲಯ ಉಳಿಯುತ್ತದೆಯೂ ಇಲ್ಲವೊ ಎಂಬುದು ಬೇರೂರಿದೆ. ಈ ಕಮಿಟಿ ಶಾಸಕರು. ಸಂಸದರು ಎಲ್ಲಾ ಸೇರಿ ಸಭೆ ಮಾಡಿ ದೃಢವಾದ ನಿಲುವು ತೆಗೆದುಕೊಂಡರೇ ಖಂಡಿತ ಸರಕಾರ ಒಪ್ಪಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಹೆಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಹೆಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪ ಹಾಸನ್, ತಾರಾಚಂದನ್, ರಮೇಶ್, ಎಣ.ಬಿ. ಪುಷ್ಪ, ಸಮೀರ್ ಅಹಮದ್ ಇತರರು ಉಪಸ್ಥಿತರಿದ್ದರು.

Continue Reading

Hassan

ಯಶಸ್ವಿಗೊಂಡ ಪತಂಜಲಿ ಯೋಗಾ ಪರಿವಾರದ ಮಹಿಳಾ ದಿನಾಚರಣೆ

Published

on

ಹಾಸನ: ನಗರದ ಹಾಸನಾಂಬೆ ದೇವಾಲಯ ರಸ್ತೆ ಬಳಿ ಇರುವ ಶ್ರೀ ಕನ್ನಿಕಾಪರಮೇಶ್ವರಿ ಯೋಗಾ ಕೇಂದ್ರದಲ್ಲಿ ಭಾನುವಾರ (ಮಾ.16) ಹೋಳಿ ಹುಣ್ಣಿಮೆ ಹಾಗೂ ಮಹಿಳಾ ದಿನಚರಣೆಯೂ ಸಂಭ್ರಮದಿಂದ ಯಶಸ್ವಿಯಾಗಿ ಆಚರಿಸಲಾಯಿತು.

ಇದೆ ವೇಳೆ ಶ್ರೀ ಕನ್ನಿಕಾ ಪರಮೇಶ್ವರಿ ಯೋಗ ಕೇಂದ್ರದ ಸಾಧಕಿ ಹಾಗೂ ಪತಂಜಲಿ ಜಿಲ್ಲಾ ಪ್ರಭಾರಿ ಶಾರದ ಧರ್ಮಾನಂದ್ ಮತ್ತು ಜಿಲ್ಲಾ ಸಂರಕ್ಷಕರಾದ ಲೋಕನಾಥ್ ಮಾತನಾಡಿ, ನಾವುಗಳು ಪತಾಂಜಲಿ ಪರಿವಾರದಿಂದ ಮಹಿಳಾ ದಿನಾಚರಣೆ ಮತ್ತು ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪಾದರ್ಪಣೆ ಮಾಡಿದ್ದು, ಮಹಿಳೆಯರಿಗೆ ಗೌರವ ಕೊಡುವುದಕ್ಕಾಗಿ ಈ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕುಟುಂಬದಲ್ಲಿ ಎಲ್ಲಾವನ್ನು ನಿಬಾಯಿಸಿಕೊಂಡು ಬರುವವಳು ಮಹಿಳೆ. ತಾಯಿ ಶಕ್ತಿ ಆಕೆಯಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮವು ಹೋಳಿ ಹುಣ್ಣಿಮೆ ಹಾಗೂ ಮಹಿಳಾ ದಿನಚರಣೆಯ ಮೊದಲು ಅಗ್ನಿಹೋತ್ರದೊಂದಿಗೆ ಪ್ರಾರಂಭವಾಯಿತು. ಇದೆ ವೇಳೆ ಮಹಿಳಾ ಪೌರಕಾರ್ಮಿಕರಾದ ರಾಗಿಣಿ ಹಾಗೂ ನೇತ್ರಾವತಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಮಹಿಳೆಯರಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಮಹಿಳೆಯರಿಗೆ ಆಟೋಟ ಸ್ಪರ್ದ ನಡೆಸಿ ಬಹಮಾನ ವಿತರಿಸಿದರು. ನಂತರ ಬಣ್ಣ ಬಣ್ಣದ ಹೂವಿನ ಎಸಳುಗಳಿಂದ ಮಹಿಳೆಯರು ಹೋಳಿ ಹುಣ್ಣಿಮೆ ಆಚರಿಸಿ ಸಂಭ್ರಮಿಸಿದರು.

ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಹಿಳಾ ಪತಂಜಲಿ ಯೋಗ ಸಮಿತಿಯ ನಿಕಟಪೂರ್ವ ಜಿಲ್ಲಾ ಪ್ರಭಾರಿಗಳಾದ ಹೇಮಲತಾ, ಪತಂಜಲಿ ಜಿಲ್ಲಾ ಪ್ರಭಾರಿ ಎಂ.ವಿ. ಗಿರೀಶ್, ಕಿಸಾನ್ ಸೇವಾ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಜಿಲ್ಲಾ ಸಹ ಪ್ರಭಾರಿ ಧರ್ಮಾನಂದ್, ಪತಂಜಲಿ ಜಿಲ್ಲಾ ಸಹ ಪ್ರಭಾರಿ ದೊರೆಸ್ವಾಮಿ, ತವರು ಚಾರಿಟಬಲ್ ಟ್ರಸ್ಟ್ ನ ಡಾ. ಪಾಲಾಕ್ಷ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!