Connect with us

Chikmagalur

ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಭಾರೀ ಅನಾಹುತವೊಂದು ಜಸ್ಟ್ ಮಿಸ್

Published

on

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಮಳೆ ಜೊತೆ ದಟ್ಟ ಮಂಜು ಕವಿದಿದ್ದು ವಾಹನ ಸವಾರರು ಪಾರ್ಕಿಂಗ್ ಲೈಟ್, ಹೆಡ್‍ಲೈಟ್, ಫಾಗ್ ಲೈಟ್ ಹಾಕಿಕೊಂಡು ಹೋದರೂ ವಾಹನ ಸಂಚಾರ ದುಸ್ತರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 22 ಕಿ.ಮೀ. ವ್ಯಾಪ್ತಿಯ ಕೊಟ್ಟಿಗೆಹಾರ-ಚಾರ್ಮಾಡಿ ಮಾರ್ಗದಲ್ಲಿ ಭಾರೀ ಮಂಜು ಕವಿದಿದ್ದು, ಆ ಮಂಜಿನಲ್ಲಿ ವಾಹನ ಸಂಚರಿಸಲಾಗದೆ ಸಂಜೆ ಎರಡು ಅಪಘಾತಗಳು ಕೂಡಾ ಸಂಭವಿಸಿವೆ. ಬಿದಿರುತಳ ಗ್ರಾಮದ ಬಸ್ ನಿಲ್ದಾಣದ ಬಳಿ ಮಂಗಳೂರಿಗೆ ಹೋಗುತ್ತಿದ್ದ ಬೊಲೆರೋ ವಾಹನವೊಂದು ದಟ್ಟ ಮಂಜಿನಲ್ಲಿ ಸರಿಯಾಗಿ ದಾರಿ ಕಾಣದೆ ರಸ್ತೆಯ ಒಂದು ಬದಿಯ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿಯೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಅಪಘಾತ ಅಣ್ಣಪ್ಪಸ್ವಾಮಿ ದೇಗುಲದ ಸಮೀಪದ ಕಿರಿದಾದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ದಾರಿ ಕಾಣದೆ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಸರ್ಕಾರಿ ಬಸ್ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮುಗಿಸಿ ಧಾರವಾಡಕ್ಕೆ ಹೊರಟಿದ್ದ ಬೊಲೆರೋ ಕಾರು ತಿರುವಿನ ಕಿರು ರಸ್ತೆಯಲ್ಲಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯೊಡೆದಿದ್ದು, ತಡೆಗೋಡೆಯೇ ಕುಸಿದು ಬಿದ್ದಿದೆ. ಕಾರು ಹಾಗೂ ಬಸ್ಸಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಸಣ್ಣ ಕಿರು ರಸ್ತೆಯಲ್ಲಿ ಸಾವಿರಾರು ಅಡಿ ಪ್ರಪಾತವಿದ್ದು, ಸ್ವಲ್ಪ ಹೆಚ್ಚು-ಕಡಿಮೆಯಾಗಿದ್ದರೂ ಬಸ್ ಹಾಗೂ ಕಾರು ಎರಡು ಪ್ರಪಾತಕ್ಕೆ ಬೀಳುತ್ತಿತ್ತು. ಆದರೆ, ಬಹುದೊಡ್ಡ ಅನಾಹುತವೊಂದು ಜಸ್ಟ್ ಮಿಸ್ ಆದಂತಾಗಿದೆ. ಚಾರ್ಮಾಡಿ ಘಾಟಿಯ ಈ ರಸ್ತೆಯಲ್ಲಿ ಈ ಕಿರು ರಸ್ತೆ ಅಂದಿನಿಂದಲೂ ಇದೆ. ಹೆದ್ದಾರಿ ಪ್ರಾಧಿಕಾರ ಈ ಚಿಕ್ಕ ರಸ್ತೆಯನ್ನ ಅಗಲ ಮಾಡಬೇಕೆಂದು ಸ್ಥಳಿಯರು ಮನವಿ ಮಾಡಿದ್ದರು. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಡೆಕೆಡಿಸಿಕೊಳ್ಳದ ಕಾರಣ ಇಂದು ಈ ಅನಾಹುತ ಸಂಭವಿಸಿದೆ ಎಂದು ಸ್ಥಳಿಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಈಗ ಘಾಟಿಯಲ್ಲಿ ಭಾರೀ ಮಂಜು ಕವಿದಿದೆ. ತಡೆಗೋಡೆ ಬೇರೆ ಕುಸಿದಿದೆ. ರಸ್ತೆಯೂ ಕಿರಿದಾಗಿದ್ದು. ಮತ್ತೊಂದು ಅನಾಹುತ ಸಂಭವಿಸೋ ಮೊದಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ರಸ್ತೆಗೊಂದು ಬಂದೋಬಸ್ತ್ ಕಲ್ಪಿಸಿ ಶೀಘ್ರದಲ್ಲೇ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

 

Chikmagalur

ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್

Published

on

ಚಿಕ್ಕಮಗಳೂರು : ರಾಜಕೀಯ ದ್ವೇಷಕ್ಕೆ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಮಾಡಿಸಿದ ತಪ್ಪಿಗೆ ಶೃಂಗೇರಿ ಗ್ರಾಮ ಪಂಚಾಯ್ತಿ ಸದಸ್ಯ ಶಬರೀಶ್ ಇದೀಗ ತಾನೆ ತಗಾಲಾಕಿಕೊಂಡಿದ್ದಾನೆ ಶಬರೀಶ್ ವಿರುದ್ಧವೇ ಫೋಕ್ಲೋ ಪ್ರಕರಣ ದಾಖಲಾಗಿದ್ದು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಕೇಸಲ್ಲಿ MLC ಸೂರಜ್ ರೇವಣ್ಣ ಬಂಧನ ಬೆನ್ನಲೇ ಕಾಫಿನಾಡಲ್ಲೂ ಬಿಜೆಪಿ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರಿಬ್ಬರ ಮೇಲೆ ದೌರ್ಜನ್ಯದ ಆರೋಪ ಎಂಬ ಸುದ್ದಿ ನಿನ್ನೆ ದಿನವಿಡೀ ಹರಿದಾಡಿತ್ತು, ಆದರೆ ದಾಲ್ ಮೆ ಕುಚ್ ಕಾಲಾ ಹೈ ಎಂದು ಅನಿಸಿತ್ತು ಅದು ಇಂದು ಸತ್ಯ ವಾಗಿದೆ. ಶೃಂಗೇರಿ ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಲಿತ ಬಾಲಕರ ಮೇಲೆ ಬಿಜೆಪಿ ಮುಖಂಡನಿಂದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ

ಸಲಿಂಗಕಾಮಕ್ಕೆ ಅಪ್ರಾಪ್ತ ಬಾಲಕರನ್ನ ಬಳಸಿಕೊಂಡ ಆರೋಪ ಸುಳ್ಳಾಗಿದೆ. ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಪ್ರಾಪ್ತ ಬಾಲಕರ ವಿಡಿಯೋ ಮಾಡಿ ಅದು ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ್ದ ಶೃಂಗೇರಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕೌನ್ಸಿಲಿಂಗ್ ನಲ್ಲಿ ಸತ್ಯ ಬಯಲಾಗಿದೆ. ಅಪ್ರಾಪ್ತ ಬಾಲಕನ ಬಳಸಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಇಬ್ಬರ ವಿರುದ್ಧ ಪೋಕೋ ಕೇಸ್ ದಾಖಲಾಗಿದೆ. ರಾಜಕೀಯ ದ್ವೇಷಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವಂತೆ ಬಾಲಕರಿಗೆ ಧಮ್ಮಿ ಹಾಕಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ FIR ದಾಖಲಾಗಿದೆ. ಇಬ್ಬರಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕರನ್ನ ಬಳಸಿಕೊಂಡು ದುರ್ಬಳಕೆಗೆ ಯತ್ನ ಮಾಡಿದ್ದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರರಿಂದ ಶೃಂಗೇರಿ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಶಬರೀಶ್ ಹಾಗೂ ಸೂರ್ಯ ವಿರುದ್ಧ ರಾಘವೇಂದ್ರ ದೂರು ನೀಡಿದ್ದಾರೆ. ಸದ್ಯ ಶಬರೀಶ್ ನನ್ನು ಬಂಧಿಸಿರುವ ಶೃಂಗೇರಿ ಇನ್ಸ್‌ಪೆಕ್ಟರ್ ಜಿ.ಎಸ್ ಸಂದೀಪ್ ವಿಚಾರಣೆ ನಡೆಸುತ್ತಿದ್ದಾರೆ

. ಪಟ್ಟಣ ಪಂಚಾಯ್ತಿ ಸದಸ್ಯ ಹರೀಶ್ ಶೆಟ್ಟಿ ಹಾಗೂ ಶಬರೀಶ್ ನಡುವೆ ವೈಯಕ್ತಿಕ. ಹಾಗೂ ರಾಜಕೀಯ ದ್ವೇಷವಿತ್ತು.
ಸೂರಜ್ ರೇವಣ್ಣ ಪ್ರಕರಣ ಹೊರ ಬರುತ್ತಿದ್ದಂತೆ ಬಾಲಕರನ್ನ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿ ಶೃಂಗೇರಿ ಬಿಜೆಪಿ ಮುಖಂಡ ಹರೀಶ್ ಶೆಟ್ಟಿ ವಿರುದ್ಧ ಇದೇ ರೀತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಶಬರೀಶ್ ವಿರುದ್ಧ ಫೋಕೋ ಕೇಸ್ ದಾಖಲಾಗಿದೆ.

Continue Reading

Chikmagalur

ಲಾಂಗ್, ತಲವಾರ್ ಹಿಡಿದು ಹುಚ್ಚಾಟ, ಇಬ್ಬರ ಬಂಧನ

Published

on

ಚಿಕ್ಕಮಗಳೂರು : ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿದ್ದ ಇಬ್ಬರು ಯುವಕರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಬೆಟ್ಟಗೆರೆ ನಿವಾಸಿ ಸೈಯ್ಯದ್ ಸಲ್ಮಾನ್ (22) ಹಾಗೂ ಮಹಮ್ಮದ್ ಸಾಧಿಕ್ (25) ಬಂಧಿತರು.

ಶೆಟ್ಟಿಕೊಪ್ಪ ಕಡೆಯಿಂದ ಕಾರಿನಲ್ಲಿ ಇಬ್ಬರು ಯುವಕರು ಲಾಂಗ್ ಇಟ್ಟುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸೌತಿಕೆರೆ ಸಮೀಪ ವಾಹನ ಪರಿಶೀಲನೆ ನಡೆಸಿದಾಗ ಇಬ್ಬರು ಆರೋಪಿಗಳು ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ವಿಚಾರಿಸಿದಾಗ ನಮ್ಮನ್ನು ನೋಡಿ ಜನರು ಹೆದರಿಕೊಳ್ಳಲಿ ಎಂದು ಲಾಂಗ್ ತೋರಿಸಿಕೊಂಡು ಓಡಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಲಾಂಗ್ ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಅಪ್ ಲೋಡ್ ಮಾಡಿರುವುದು ತಿಳಿದುಬಂದಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Continue Reading

Chikmagalur

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ

Published

on

ಚಿಕ್ಕಮಗಳೂರು : ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಿಬೀರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿಯೇ ಪತಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾಳೆ. ಜಯಣ್ಣ (42) ಮೃತ ದುರ್ದೈವಿಯಾಗಿದ್ದು, ಪತ್ನಿ ಶೃತಿ (35) ಹಾಗೂ ಆಕೆಯ ಪ್ರಿಯಕರ ಕಿರಣ್ (27) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದೊಡ್ಡಿಬೀರನಹಳ್ಳಿ ಗ್ರಾಮದ ಜಯಣ್ಣ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಕಳೆದ 15 ರಂದು(ಶನಿವಾರ) ರಾತ್ರಿ ಏಕಾಏಕಿ ಸಾವನ್ನಪ್ಪಿದ್ದರು. ಈ ವೇಳೆ ಗಂಡ ಹೊಟ್ಟೆ ನೋವಿನಿಂದ ಬಳುತ್ತಿದ್ದರು. ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು ಫಲಕಾರಿ ಆಗಿಲ್ಲ ಎಂದು ನಾಟಕ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಳಂತೆ. ಆದರೆ, ಮೃತ ಜಯಣ್ಣ ಸಂಬಂಧಿಕರಿಗೆ ಸಾವಿನ ಬಗ್ಗೆ ಅನುಮಾನ ಬಂದಿದ್ದು, ಈ ಬಗ್ಗೆ ಆತನ ಮಗಳನ್ನು ಕೇಳಿದ ವೇಳೆ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ ಎಂದು ಹೇಳಿದ್ದರಂತೆ. ಬಳಿಕ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪತ್ನಿಗೆ ಶಾಕ್ ಕೊಟ್ಟಿದ್ದರು.

ಮೃತ ಜಯಣ್ಣ

 

ಸದ್ಯ ಮಗಳಿಂದ ಹತ್ಯೆಯ ಹಿಂದಿನ ಅಸಲಿ ಕಥೆ ರಿವಿಲ್ ಆಗಿದ್ದು, ವಿಚಾರಣೆ ವೇಳೆ ಮೃತ ಜಯಣ್ಣನ ಅಣ್ಣನ ಮಗ ಕಿರಣ್ ಜೊತೆ ಅನೈತಿಕ ಸಂಬಂಧ ಇದಿದ್ದು ದೃಢವಾಗಿದೆ. ಅಲ್ಲದೇ ಮರಣೋತ್ತರ ವರದಿಯಲ್ಲಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಾದ ಮೃತನ ಪತ್ನಿ ಶೃತಿ ಹಾಗೂ ಮಗ ಕಿರಣ್ ರನ್ನು ಸಖರಾಯಪಟ್ಟಣ ಠಾಣೆ ಪೊಲೀಸ್ ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Continue Reading

Trending

error: Content is protected !!