Connect with us

Hassan

ಕೊಬ್ಬರಿ ಬೆಲೆ ಬಗೆಹರಿಸಲು ರೈತರು ನನಗೆ ಬೆಂಬಲ ನೀಡಿ ; ಸಿಇಓ ಅಶೋಕ್ ಮನವಿ

Published

on

ಹಾಸನ : ಇಲ್ಲಿನ ಮೆಗಾ ಪಾರ್ಕ್ ಅನ್ನು ಇಓಯು ಎಂದು ಘೋಷಣೆ ಮಾಡಲು ಮನವಿ. ರೈತರು ಅನುಭವಿಸುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳುವಂತೆ ಹಾಸನ ಮೆಗಾ ಪುಡ್ ಪಾರ್ಕ್ ಸಿಇಓ ಅಶೋಕ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನ ಮೆಗಾ ಫುಡ್ ಪಾರ್ಕ್‌ನ ಎಲ್ಲ ಪದಾರ್ಥಗಳು ರಫ್ತು ಗುಣಮಟ್ಟ ಹೊಂದಿರುವ ಕಾರಣ ಪುಡ್ ಪಾರ್ಕ್ ನ ಜಾಗವಾದ ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹಳ್ಳಿ ಮೈಸೂರು ಹೋಬಳಿಯ, ಒಡನಹಳ್ಳಿ ಗ್ರಾಮ ಸರ್ವೇ ನಂಬರ್ ೧೨೪/೧೨ ಅನ್ನು ಕರ್ನಾಟಕ ಅಗ್ರಿ ಬ್ಯೂಸ್ನೆಸ್ ಮತ್ತು ಫುಡ್ ಪ್ರೋಸಸಿಂಗ್ ಪಾಲಿಸಿ ೨೦೧೫ ಹಾಗೂ ಇಂಡಸ್ಟ್ರಿ ಪಾಲಿಸಿ ೨೦೨೦-೨೪ ಅನ್ವಯ ಅಗ್ರಿ ಇಒಯು ಕೃಷಿ ರಫ್ತು ಆಧಾರಿತ ಘಟಕ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರದ ಗಮನಕ್ಕೆ ತಂದು ಘೋಷಿಸಬೇಕು. ಇದಕ್ಕೆ ಬೇಕಿರುವ ಎಲ್ಲ ಷರತ್ತುಗಳಿಗೂ ಮತ್ತು ನಿಬಂಧನೆಗಳಿಗೂ ನಾವು ಅರ್ಹತೆ ಪಡೆದುಕೊಂಡಿರುತ್ತೇವೆ ಎಂದರು. ಘೋಷಿಸಿದ ಮರುದಿನವೇ ೧೦೦೦ ಮೆಟ್ರಿಕ್ ಟನ್ ಕೊಬ್ಬರಿಯನ್ನು ಕನಿಷ್ಠ ೧೧,೦೦೦ ಗರಿಷ್ಟ ೧೧,೫೦೦ ರೂಪಾಯಿಗಳಂತೆ ಖರೀಧಿ ಮಾಡಲು ನಿರ್ಧರಿಸಲಾಗಿದೆ, ರೈತರಿಗೆ ಯಾವುದೇ ಷರತ್ತು ಹಾಕದೆ, ಯಾವುದೇ ಗರಿಷ್ಟ ಮಟ್ಟ ಘೋಷಿಸದೆ (ಓo Uಠಿಠಿeಡಿ ಐimiಣ) ಖರೀದಿ ಮಾಡಲು ನಿರ್ಧರಿಸಲಾಗಿದೆ, ಖರೀದಿಯಲ್ಲಿ ಪಾರದರ್ಶಕತೆ ಕಾಯುವ ಉದ್ದೇಶದಿಂದ ರೈತರು ತಂದ ಕೊಬ್ಬರಿಯನ್ನು ಅವರಮುಂದೆಯೇ ಗುಣಮಟ್ಟ ಪರೀಕ್ಷೆ ಮಾಡಿ ನಂತರ ಪಡೆದುಕೊಂಡು ಅಲ್ಲಿಯೇ ತಕ್ಷಣವೇ ಹಣ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಮತ್ತು ಇದರ ವಿಡಿಯೋ ಚಿತ್ರೀಕರಣ ಸಹ ನಡೆಸಲಾಗುವುದು. ಇದರಿಂದ ರೈತರಿಗೂ ಒಂದಷ್ಟು ನಂಬಿಕೆ ತರಿಸುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ೧೬ ನೇ ಫೆಬ್ರವರಿ ೨೦೨೪ ರಂದು ಮಂಡಿಸಿದ ಬಜೆಟ್ ಪ್ರತಿಯ ೪೧ನೇ ಅಂಶದ ಪ್ರಕಾರ ನಾವು ಕೃಷಿ ವಲಯದ ನವೋದ್ಯಮ ವಾಗಿರುತ್ತೇವೆ. ೨೦೧೯ ಗೆಜೆಟ್ ನೋಟಿಫಿಕೇಶನ್ ಪ್ರಕಾರಪ ಅರ್ಹತೆ ಹೊಂದಿರುತ್ತೇವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ) ಉದ್ಯೋಗ  ಘಟಕವು ಉತ್ಪನ್ನಗಳ ನಾವೀನ್ಯತೆ, ಅಭಿವೃದ್ಧಿ ಅಥವಾ ಸುಧಾರಣೆಗೆ ಕೆಲಸ ಮಾಡುತ್ತಿದೆ ಅಥವಾ ಪ್ರಕ್ರಿಯೆಗಳು ಅಥವಾ ಸೇವೆಗಳು, ಅಥವಾ ಇದು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಸ್ಕೆಲೆಬಲ್ ವ್ಯವಹಾರ ಮಾದರಿಯಾಗಿದ್ದರೆ ಉದ್ಯೋಗ ಸೃಷ್ಟಿ ಅಥವಾ ಸಂಪತ್ತು ಸೃಷ್ಟಿ. ರೈತರು ಅನುಭವಿಸುತ್ತಿರುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ಮುಂದೆ ಬಂದಿರುತ್ತೇವೆ, ಆದ ಕಾರಣ ಎಲ್ಲ ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಗುಡ್ಡಗಾಡು ಓಟ: ಕಲಾ ಕಾಲೇಜು ಅತ್ಯುತ್ತಮ ಸಾಧನೆ

Published

on

ಹಾಸನ: ಹಾಸನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಅತ್ಯುತ್ತಮ ಸಾಧನೆ ಮೆರೆದಿದೆ.

ಪುರುಷರ ತಂಡವು ಸತತ ಎರಡನೇ ಬಾರಿ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ಮಹಿಳೆಯರ ತಂಡವು ತಂಡ ಕೂಡ ದ್ವಿತೀಯ ಸ್ಥಾನ ಗಳಿಸಿದೆ.

ಪುರುಷರ ವಿಭಾಗದಲ್ಲಿ ಬಿ.ಕೆ. ಲಕ್ಷ್ಮಣ ತೃತೀಯ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ತಂಡದಲ್ಲಿ ಲಕ್ಷ್ಮಣ ಬಿ.ಕೆ., ಹೇಮಂತ್ ಕುಮಾರ್ ಬಿ.ಜೆ., ಶ್ರೀಜನ್ ಕೆ.ಎಸ್., ಜೀವನ್ ಕುಮಾರ್ ಟಿ.ಎಸ್., ಪ್ರಶಾಂತ್ ಎ.ಆರ್. ಹಾಗೂ ರಕ್ಷಿತ್ ಗೌಡ ಕೆ.ಎನ್. ಭಾಗವಹಿಸಿದ್ದರು.

ಮಹಿಳೆಯರ ತಂಡದಲ್ಲಿ ಬಿಂದುಶ್ರೀ ಜೆ.ಎಸ್., ಭಾವನಾ ಜಿ.ಎಚ್., ತೇಜಸ್ವಿನಿ ಸಿ.ಎಲ್., ಮಾನಸ ಕೆ.ವೈ., ಸಿಂಚನ ಸಿ.ಡಿ. ಮತ್ತು ಮಮತಾ ಎಂ.ಎಲ್. ಸ್ಪರ್ಧಿಸಿದ್ದರು.

ವಿಜೇತ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪವನ್ ಕೆ.ಜೆ. ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಇರ್ಷಾದ್ ಎಂ.ಬಿ., ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಪರೀಕ್ಷಾ ನಿಯಂತ್ರಕ ಡಾ. ಮುರಳೀಧರ ಕೆ.ಡಿ. ಮತ್ತು ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅಭಿನಂದಿಸಿ ಶುಭ ಹಾರೈಸಿದರು.

Continue Reading

Hassan

ವಿದ್ಯಾರ್ಥಿಗಳ ಕೌಶಲ್ಯ ಮತ್ತು ಜ್ಞಾನ ವೃದ್ಧಿಗೆ ಎ.ಇ.ಡಿ.ಪಿ. ಸಹಕಾರಿ: ಡಾ. ನಾಗೇಶ್

Published

on

ಹಾಸನ, ಫೆ 12: ಕೌಶಲ್ಯಾಧರಿತ ಶಿಕ್ಷಣದಿಂದ ಉದ್ಯೋಗ ಖಾತ್ರಿಯ ವಿಫುಲ ಅವಕಾಶಗಳಿದ್ದು, ಅದಕ್ಕಾಗಿ ಪದವಿ ಶಿಕ್ಷಣದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಎ.ಇ. ಡಿ.ಪಿ. ಕಾರ್ಯಕ್ರಮದ ಮೂಲಕ ತರಬೇತುಗೊಳಿಸಲಾಗುತ್ತಿದೆ ಎಂದು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯ ನೋಡಲ್ ಆಫೀಸರ್ ಡಾ.ನಾಗೇಶ್ ಆರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ರೂಸಾ ವತಿಯಿಂದ ನಡೆದ ಒಂದು ದಿನದ ಎ. ಇ. ಡಿ. ಪಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಅಳಿಸಿದಾಗ ವಿದ್ಯಾರ್ಥಿಗಳು ಕೌಶಲ್ಯ ಮತ್ತು ಜ್ಞಾನ ಎರಡಕ್ಕೂ ಮುಕ್ತರಾಗುತ್ತಾರೆ. ಅದೇ  ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಲ್ಲಿ ಅಪ್ರೆಂಟಿಸ್ ಶಿಪ್ ಅನ್ನು ಪರಿಚಯಿಸಿದ್ದು,  ಕೌಶಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ ಇರ್ಷಾದ್ ಅವರು,  ವಿದ್ಯಾರ್ಥಿಗಳು ಪದವಿ ಕಲಿಯುವಾಗಲೇ ವೃತ್ತಿಪರ ತರಬೇತಿಗೆ ತೆರೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಕಡೆಯ ವರ್ಷದ ಪದವಿಯಲ್ಲಿ ಓದಿನ ಜೊತೆಗೆ ದುಡಿಮೆಗೂ ಸಹಕಾರಿಯಾಗಿದೆ ಎಂದರು. ಬಿ.ಕಾಂ. ರೀಟೇಲ್ ಆಪರೇಷನ್ ಕೋರ್ಸಿನಲ್ಲಿ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿದ್ದು  ಶೇ. 90ರವರೆಗಿನ ಉದ್ಯೋಗ ಖಾತ್ರಿ ಇದೆ. ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ  ರೀಟೇಲ್ ಆಪರೇಷನ್ ಕೋರ್ಸ್ ಯಶಸ್ವಿಯಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ್ ಶತ್ರುಂಜಯ್, ಉಜ್ವಲ್ ಕಿರಣ್, ಶ್ರೀನಾಥ್ ಗಟ್ಟು, ಆರ್. ಸುಬ್ರಹ್ಮಣ್ಯನ್, ಹರೀಶ್ ಜಿ. ವಿ, ಜೈನಾ ಎಂ ಹರನ್ ಅವರು ಮೈಸೂರು, ಮಂಗಳೂರು, ಉಡುಪಿ, ಕಾರ್ಕಳ,  ತಿಪಟೂರು, ತುಮಕೂರು ಸೇರಿದಂತೆ ಹಲವೆಡೆಯಿಂದ ಆಗಮಿಸಿದ್ದ ಆರ್. ಓ . ವಿದ್ಯಾರ್ಥಿಗಳಿಗೆ ಎಇಡಿಪಿ ಬಗ್ಗೆ  ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ರಾಜು ಡಿ. ಎಸ್,  ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ್ ಕೆ.ಡಿ., ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಕೆ.ಟಿ, ಎಇಡಿಪಿ ಸಂಯೋಜಕರಾದ ಶಿವರಾಜ್ ಕುಮಾರ್ ಜೆ, ಕಛೇರಿ ಅಧೀಕ್ಷಕರಾದ ಮಾರುತಿ   ಕೆ. ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಹಾಜರಿದ್ದರು.

ರೂಸಾ ಸಂಯೋಜಕರಾದ ಡಾ. ದಿನೇಶ್ ಕೆ.ಎಸ್. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಡಾ. ಸವಿತಾ ಕಾರ್ಯಕ್ರಮ ನಿರೂಪಿಸಿದರು. ಬನುಮಾ ಗುರುದತ್ ಪ್ರಾರ್ಥಿಸಿದರು.

Trending

error: Content is protected !!