Cinema
ಬೆಟ್ಟಿಂಗ್ ಆಪ್ ಪ್ರಚಾರ: 25 ಸೆಲೆಬ್ರಿಟಿಸ್ ವಿರುದ್ಧ ದೂರು ದಾಖಲು; ಯಾರ್ಯಾರು ಗೊತ್ತಾ?

ತೆಲಂಗಾಣ: ಬೆಟ್ಟಿಂಗ್ ಆಪ್ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಪಂಚಭಾಷಾ ತಾರಾನಟ ಪ್ರಕಾಶ್ ರಾಜ್, ತೆಲುಗಿನ ಖ್ಯಾತ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಒಟ್ಟು 25 ಮಂದಿ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಫಣೀಂದ್ರ ಶರ್ಮಾ ಎಂಬ 32 ವರ್ಷದ ಉದ್ಯಮಿಯೊಬ್ಬರು ನೀಡಿದ ಆಧಾರದಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಕಾಶ್ ರಾಜ್ ಹಾಗೂ ರಾಣಾ ದಗ್ಗುಬಾಟಿ ಅವರು ಜಂಗ್ಲಿ ರಮ್ಮಿ ಆಪ್, ವಿಜಯ್ ದೇವರಕೊಂಡ A23 ಆಪ್, ಪ್ರಣೀತಾ ರೈ ಫೈರ್ ಪ್ಲೇ ಆಪ್, ನಿಧಿ ಅಗರ್ವಾಲ್ ಜೀತ್ ವಿನ್ ಆಪ್, ಮಂಚು ಲಕ್ಷ್ಮೀ ಯೊಲೊ247 ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಾರೆ. ಇನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವ ಮೂಲಕ ಬೆಟ್ಟಿಂಗ್ ಆಪ್ ಪರ ಪ್ರಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ನಟ ನಟಿಯರಲ್ಲದೇ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್‌ಗಳಾದ ಶ್ರೀಮುಖಿ, ವರ್ಷಿಣಿ, ಸನ್ನಿ ಯಾದವ್, ಅನನ್ಯಾ ಸೇರಿದಂತೆ ಹಲವರ ವಿರುದ್ಧವೂ ದೂರು ದಾಖಲಿಸಲಾಗಿದೆ.
Cinema
ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ಬಿಗ್‌ಬಾಸ್ ಖ್ಯಾತಿಯ ರಜತ್ ಮತ್ತೆ ಬಂಧನ

ಬೆಂಗಳೂರು: ಲಾಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್‌ಬಾಸ್ ಖ್ಯಾತಿಯ ರಜತ್‌ನನ್ನು ಬುಧವಾರ ಬಂಧಿಸಲಾಗಿದೆ.
ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆಯಲ್ಲಿ ಎರಡು ಬಾರಿ ನೋಟಿಸ್ ನೀಡಿದ್ದು. ಆದರೆ ರಜತ್ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನು ಬಂಧಿಸಿದ್ದಾರೆ.
Cinema
ಬಾಲಿವುಡ್ ಭಾಯ್ ಜಾನ್‌ಗೆ ಮತ್ತೆ ಕೊಲೆ ಬೆದರಿಕೆ ಸಂದೇಶ: ಆತಂಕದಲ್ಲಿ ಫ್ಯಾನ್ಸ್

ಮುಂಬೈ: ಬಾಲಿವುಡ್‌ನ ಭಾಯ್ ಜಾನ್ ಎಂದೇ ಹೆಸರುವಾಸಿಯಾಗಿರುವ ನಟ ಸಲ್ಮಾನ್ ಖಾನ್‌ಗೆ ಇಂದು (ಸೋಮವಾರ) ಮತ್ತೆ ಕೊಲೆ ಬೆದರಿಕೆ ಸಂದೇಶ ರವಾನೆಯಾಗಿದ್ದು, ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.
ಮುಂಬೈನ್ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಅವರ ಕಾರನ್ನು ಸ್ಫೋಟಿಸುವ ಮೂಲಕ ಸಲ್ಮಾನ್‌ಖಾನ್ ಕೊಲೆ ಮಾಡುತ್ತೇವೆ ಎಂದು ವರ್ಲಿಯಲ್ಲಿರುವ ಸಾರಿಗೆ ಇಲಾಖೆ ವಾಟ್ಸಪ್ ನಂಬರ್‌ಗೆ ಸಂದೇಶ ಬಂದಿದೆ.
ಬೆದರಿಕೆ ಸಂದೇಶ ರವಾನಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಇದೀಗ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಬೆದರಿಕೆಯ ಹೊಣೆಯನ್ನೂ ಯಾರು ಸಹ ಹೊತ್ತುಕೊಂಡಿಲ್ಲ. ಇನ್ನು ನಟ ಸಲ್ಮಾನ್ ಖಾನ್ ಅವರಾಗಲಿ ಹಾಗೂ ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆಯೂ ಹಲವು ಬಾರಿ ಸಲ್ಮಾನ್ ಖಾನ್‌ಗೆ ಬೆದರಿಕೆಗಳು ಬಂದಿದ್ದವು. ಗ್ಯಾಂಗ್‌ಸ್ಟರ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನಿಂದ ಬೆದರಿಕೆಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಮನೆಯ ಸುತ್ತಮತ್ತ ಹಲವು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
Cinema
ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಏ.16ರಿಂದ ಶುರುವಾಗಲಿದೆ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್.16ರಂದು ಏನು ಎಂದು ಅಭಿಮಾನಿಗಳು ಹುಳ ಬಿಟ್ಟುಕೊಂಡರು. ಕೆಲವರು ಚಿತ್ರದ ಮುಹೂರ್ತವಿರಬಹುದು ಎಂದರೆ, ಇನ್ನೂ ಕೆಲವರು ಇನ್ನೇನೋ ಘೋಷಣೆ ಇರಬಹುದು ಅಂದುಕೊಂಡರು.
ಈಗ ಏಪ್ರಿಲ್.16ಕ್ಕೆ ಏನಾಗಲಿದೆ ಎಂದು ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ‘ಏಪ್ರಿಲ್.16ರಂದು ಏನಾಗಲಿದೆ ಎಂಬ ಕುತೂಹಲವಿರುವವರಿಗೆ, ಅಂದು ನಮ್ಮ ‘ಬಿಲ್ಲ ರಂಗ ಭಾಷಾ’ ಚಿತ್ರ ಪ್ರಾರಂಭವಾಗಲಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.
ಕಳೆದ ವರ್ಷ ಸುದೀಪ್ ಹುಟ್ಟುಹಬ್ಬದಂದು ಹೊಸ ಸುದ್ದಿಯೊಂದನ್ನು ಘೋಷಿಸುವುದಾಗಿ ಹೇಳಿದ್ದರು ನಿರ್ದೇಶಕ ಅನೂಪ್ ಭಂಡಾರಿ. ಅದರಂತೆ, ಅದು ‘ಬಿಲ್ಲ ರಂಗ ಭಾಷಾ’ ಚಿತ್ರದ ಅಧಿಕೃತ ಘೋಷಣೆಯಾಗಿತ್ತು. ಆದರೆ, ಸುದೀಪ್ ಆ ನಂತರ ‘ಬಿಗ್ ಬಾಸ್’, ‘ಮ್ಯಾಕ್ಸ್’, ಸಿಸಿಎಲ್‍ನಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರವು ವಿಳಂಬವಾಯಿತು. ಈಗ ಕೊನೆಗೂ ಚಿತ್ರ ಏಪ್ರಿಲ್.16ಕ್ಕೆ ಪ್ರಾರಂಭವಾಗುತ್ತಿದೆ.
‘ಬಿಲ್ಲ ರಂಗ ಭಾಷಾ ತಮ್ಮ ಜೀವನದಲ್ಲೇ ದೊಡ್ಡ ಚಿತ್ರವಾಗಲಿದೆ ಎಂದು ಸುದೀಪ್ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು. ’ವಿಕ್ರಾಂತ್ ರೋಣ’ ನಂತರ ಒಂದು ತಂಡವಾಯಿತು. ನಮಗೆ ನಮ್ಮ ಮೇಲೆ ನಂಬಿಕೆ ಬಂತು. ಈಗ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಕೈ ಹಾಕಿದ್ದೇವೆ. ಈ ಚಿತ್ರ ನನ್ನ ಮತ್ತು ಅನೂಪ್ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾ ಆಗಲಿದೆ. ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಸಾಕಷ್ಟು ಸಮಯವಾಯಿತು. ಇದೊಂದು ಅಪರೂಪದ ಚಿತ್ರವಾಗಲಿದೆ’ ಎಂದು ಅವರು ಹೇಳಿದ್ದರು.
ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲ ‘ಹನುಮಾನ್’ ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಹೆಸರುಗಳನ್ನು ಚಿತ್ರತಂಡ ಸದ್ಯದಲ್ಲೇ ಘೋಷಿಸಲಿದೆ.
-
Mandya22 hours ago
ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಬರ್ಬರ ಹತ್ಯೆ…!
-
Chamarajanagar22 hours ago
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ
-
Kodagu18 hours ago
ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ.
-
Chamarajanagar22 hours ago
ಬೋನಿಗೆ ಬಿದ್ದ 3 ನೇ ಚಿರತೆ
-
Kodagu15 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Chamarajanagar13 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Chikmagalur16 hours ago
ಅಕ್ರಮ ಸಂಬಂಧಕ್ಕಾಗಿ ಪತಿಯನ್ನ ಕೊಂದ ಸತಿ
-
Mysore10 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ