State
ಧರ್ಮಸ್ಥಳಕ್ಕೆ ಹೊರಟ ಕಾರು ಇಪ್ಪತ್ತು ಅಡಿ ಆಳಕ್ಕೆ ಬಿದ್ದು ಜಖಂ; ಪ್ರಯಾಣಿಕರು ಪಾರು
Dharmasthala: ಧರ್ಮಸ್ಥಳಕ್ಕೆಂದು ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಹೊಳೆಗೆ ಬಿದ್ದಿರುವ ಘಟನೆಯೊಂದು ಚಾರ್ಮಾಡಿ ಘಾಟ್‌ನ ಮಲಯ ಮಾರುತ ಬಳಿ ಸೋಮವಾರ ಸಂಭವಿಸಿರು ಕುರಿತು ವರದಿಯಾಗಿದೆ.

ಕಾರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ನಾಲ್ವರು ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೃಷ್ಟವಶಾನ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಪ್ಪತ್ತು ಅಡಿ ಕೆಳಗೆ ಬಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
State
ಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತನ್ನ 2025–26ನೇ ಸಾಲಿನ ಅಪ್ರೆಂಟೀಸ್‌ಶಿಪ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಒಟ್ಟು 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
* ಅಧಿಸೂಚನೆ ಪ್ರಕಟಣೆ: 06 ಫೆಬ್ರವರಿ 2026
* ಆನ್‌ಲೈನ್ ಅರ್ಜಿ ಆರಂಭ: 12 ಫೆಬ್ರವರಿ 2026
* ಕೊನೆಯ ದಿನಾಂಕ: 02 ಮಾರ್ಚ್ 2026
ಹುದ್ದೆಗಳ ವಿವರ:
•ಹುದ್ದೆ ಶ್ರೇಣಿ: ಎಂಜಿನಿಯರಿಂಗ್ ಗ್ರಾಜುಯೇಟ್ (E&E)
* ಹುದ್ದೆಗಳ ಸಂಖ್ಯೆ: 130
* ಬೇರೆ ಎಂಜಿನಿಯರಿಂಗ್ ಹಾಗೂ ಸಾಮಾನ್ಯ ಪದವಿ ಗ್ರಾಜುಯೇಟ್: 315
* ಡಿಪ್ಲೊಮಾ ಹೋಲ್ಡರ್ಸ್: 75
* ಒಟ್ಟು ಹುದ್ದೆಗಳು: 520
ಅರ್ಹತಾ ಮಾನದಂಡ
* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
* ಅಭ್ಯರ್ಥಿಗಳು 2021 ನಂತರ ಶಿಕ್ಷಣ ಪೂರ್ಣಗೊಳಿಸಿರುವವರಾಗಿರಬೇಕು.
ಸ್ಟೈಪೆಂಡ್:
ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ₹9,000/-
ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ ₹8,000/-
(ಪ್ರತಿ ತಿಂಗಳಿಗೆ)
ಆಯ್ಕೆ ಮಾಪನ:
ಯಾವುದೇ ಲಿಖಿತ ಪರೀಕ್ಷೆ ಇಲ್ಲ; ಆಯ್ಕೆ ಮೆರಿಟ್ ಆಧಾರಿತ, ಅಂದರೆ ಪದವಿ/ಡಿಪ್ಲೊಮಾ ಅಂಕಗಳನ್ನು ಆಧರಿಸಿ.
ಆಯ್ಕೆಯಾಗಿದ್ದವರಿಗೆ ದಾಖಲೆ ಪರಿಶೀಲನೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
* ಆಸಕ್ತ ಅಭ್ಯರ್ಥಿಗಳು BESCOM ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯಲ್ಲಿ ನಿಮ್ಮ ವಿದ್ಯಾರ್ಹತೆ, ಗುರುತಿನ ದಾಖಲೆಗಳು, ಫೋಟೋ ಮತ್ತು ಸಹಿ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕು.
•ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ಯುವಕರಿಗೆ ಈ ನೇಮಕಾತಿ ಅದ್ಭುತ ಅವಕಾಶವಾಗಿದ್ದು, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಕೆಲಸವನ್ನು ಪಡೆಯುವ ಸುವರ್ಣಾವಕಾಶ ಇದಾಗಿದೆ.
Special
ದಂತ ಭಾಗ್ಯ ಯೋಜನೆ, ಹಿರಿಯರ ಆರೋಗ್ಯಕ್ಕೆ ಸರ್ಕಾರದ ಭರವಸೆ.
ಹಿರಿಯ ನಾಗರಿಕರು ಇಳಿವಯಸ್ಸಿನಲ್ಲಿ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದಾಗಿದೆ. ಈ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಹಿರಿಯ ನಾಗರಿಕರಿಗೆ ಗುಣಮಟ್ಟದ ದಂತ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿದೆ.
ಯೋಜನೆಯಡಿ ದೊರೆಯುವ ಸೌಲಭ್ಯಗಳು:
ದಂತ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಗಳ ಜೋಡಣೆ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಬಳಸುವ ಉಪಕರಣಗಳು ಉನ್ನತ ಗುಣಮಟ್ಟದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ದೀರ್ಘಕಾಲ ಬಳಕೆಗೆ ಬರುತ್ತವೆ.

ಅರ್ಹತಾ ಮಾನದಂಡಗಳು:
ಈ ಯೋಜನೆಯ ಲಾಭ ಪಡೆಯಲು 45 ವರ್ಷ ಮೇಲ್ಪಟ್ಟವರು ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಅರ್ಹರಾಗಿರುತ್ತಾರೆ. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.
ಸೇವೆ ಲಭ್ಯವಿರುವ ಸ್ಥಳಗಳು:
ರಾಜ್ಯಾದ್ಯಂತ ಇರುವ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರದಿಂದ ಗುರುತಿಸಲ್ಪಟ್ಟ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
ಯೋಜನೆಯ ಸಾಧನೆ:
ಈವರೆಗೆ 41,218ಕ್ಕೂ ಹೆಚ್ಚು ಹಿರಿಯ ನಾಗರಿಕರು ದಂತ ಭಾಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಯೋಜನೆಯ ಯಶಸ್ಸು ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ.
ದಂತ ಭಾಗ್ಯ ಯೋಜನೆ ಹಿರಿಯರ ಆರೋಗ್ಯವನ್ನು ಕಾಪಾಡುವ ಜೊತೆಗೆ ಅವರ ಜೀವನಕ್ಕೆ ಹೊಸ ಸಂತೋಷವನ್ನು ತರುವ ಅತ್ಯುತ್ತಮ ಯೋಜನೆಯಗಿದ್ದು, ಹಿರಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು.
Politics
ರಾಜ್ಯ ಸರ್ಕಾರದಿಂದ ಮೆಟ್ರೋ ಟಿಕೆಟ್ ಏರಿಕೆ: ತೇಜಸ್ವಿ ಸೂರ್ಯ
ಬೆಂಗಳೂರು: ರಾಜ್ಯ ಸರ್ಕಾರದಿಂದಲೇ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದ್ದು, ಸರ್ಕಾರವೇ ದರ ಏರಿಕೆ ಮಾಡಿ ಕೇಂದ್ರದ ಮೇಲೆ ಆರೋಪ ಮಾಡಿದೆ ಎಂದು ಸಿಎಂ, ಡಿಸಿಎಂ ನಿತ್ಯ ಡ್ರಾಮಾ ಮಾಡುತ್ತಾ ಇದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಪದೇ ಪದೇ ಕೇಂದ್ರಕ್ಕೆ ಪತ್ರ ಬರೆದು ಫೇರ್ ಫಿಕ್ಸ್ ಸಮಿತಿ ಮಾಡಬೇಕೆಂದು ಒತ್ತಾಯ ಮಾಡಿದರು. ಅದರಂತೆ ಸಮಿತಿಯನ್ನು ಕೇಂದ್ರ ಮಾಡಿದೆ. ಈ ಫೇರ್ ಫಿಕ್ಸ್ ಸಮಿತಿ ಈಗ ದರ ಏರಿಕೆ ಮಾಡಿರೋದು. ಇದಕ್ಕೂ ಕೇಂದ್ರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೆಟ್ರೋ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಎಂಒಯು ಆಗಿದೆ. ರಾಜ್ಯ ಸರ್ಕಾರದ ಆಗ್ರಹದ ಮೇಲೆಯೇ ದರ ಏರಿಕೆ ಆಗಿರೋದು , ರಾಜ್ಯ ಸರ್ಕಾರ ದಿವಾಳಿ ಆಗಿದೆ. ಹೀಗಾಗಿ ಜನರಿಗೆ ಏರಿಕೆ ಬರೆ ಹಾಕಿದ್ದಾರೆ. ಬಡವರು ಮೆಟ್ರೋದಲ್ಲಿ ಓಡಾಡದಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಸೋಮವಾರದಿಂದ ಆಗುತ್ತಿರೋ ಮೆಟ್ರೋ ಟಿಕೆಟ್ ದರ ನಿಲ್ಲಿಸಬೇಕು. ನಾಳೆ (ಫೆ.8) ಈ ಸಂಬಂಧ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ಫೇರ್ ಫಿಕ್ಸ್ ಕಮಿಟಿ ಮಾಡಿ ಎಂದು ರಾಜ್ಯ ಸರ್ಕಾರ ಪತ್ರ ಬರೆದರೆ ಅದನ್ನು ಹೋಲ್ಡ್ ನಲ್ಲಿ ಇಡಬೇಕು. ರಾಜ್ಯ ಸರ್ಕಾರ ಸಮಿತಿ ಬೇಕೆಂದು ಪತ್ರ ಬರೆದರೆ ತಕ್ಷಣವೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಬೇಕೆಂದು ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರದ ಸಚಿವರು ಒಪ್ಪಿದ್ದಾರೆ ಎಂದಿದ್ದಾರೆ.

ರಾಜ್ಯದ ಜನರು ಸಿಎಂ ಹಾಗೂ ಡಿಸಿಎಂ ಮೇಲೆ ಒತ್ತಡ ಹಾಕಬೇಕು. ಹೊಸ ಫೇರ್ ಫಿಕ್ಸ್ ಕಮಿಟಿ ಮಾಡಲು ಕೇಂದ್ರಕ್ಕೆ ಪತ್ರ ಬರೆಯಲು ಒತ್ತಾಯ ಮಾಡಬೇಕೆಂದು ಜನರಿಗೆ ಸಲಹೆ ನೀಡಿದರು. ಸಂಸದನಾಗಿ ನಾನು ಕೇಂದ್ರದ ಸಚಿವರ ಜೊತೆ ಮಾತಾಡಿದ್ದೇನೆ. ಮೆಟ್ರೋ ಮುಂದೆ ಪ್ರತಿಭಟನೆ ಮಾಡಿದ್ದೇನೆ. ಡಿಸಿಎಂ ಭೇಟಿಯಾಗಿ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೋರ್ಟ್ ನಲ್ಲಿ ಹೋರಾಟ ಮಾಡಿದ್ದೇನೆ. ಇದಕ್ಕಿಂತ ಹೆಚ್ಚು ಸಂಸದನಾಗಿ ಮಾಡೋಕೆ ಏನು ಸಾಧ್ಯ? ಎಲ್ಲವೂ ಕೋರ್ಟ್‌ನಿಂದಲೇ ಆಗೊಲ್ಲ. ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ. ಇದನ್ನ ಮೊದಲು ನಿಲ್ಲಿಸಬೇಕು. ಕೂಡಲೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಿ ಎಂದು ಸಿಎಂ, ಡಿಸಿಎಂ ಅವರು ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಒತ್ತಾಯ ಮಾಡಿದ್ದಾರೆ.
-
Chamarajanagar14 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan12 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu12 hours agoಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
-
Uncategorized5 hours agoದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
-
Kodagu5 hours agoಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
-
Kodagu5 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Uncategorized5 hours agoಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
-
State6 hours agoಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
