Connect with us

Hassan

ಕ್ಯಾನ್ಸರ್ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆ ನೇಮಕ ಮಾಡಲಿ ಹಿರಿಯ ನಾಗರೀಕರ ವೇದಿಕೆಯಿಂದ ಮನವಿ

Published

on

ಹಾಸನ : ಜಿಲ್ಲೆಯ ಹಿಮ್ಸ್ ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ವಿವಿಧ ಚಿಕಿತ್ಸಾವಿಧಾನಗಳ ಲಭ್ಯತೆಯಿದ್ದು, ಕ್ಯಾನ್ಸರ್ ಕೇಂದ್ರವು ರೋಗಿಗಳ ಬಾಳಿನಲ್ಲಿ ಬೆಳಕು ಸಿಕ್ಸಿದಂತಾಗಿದೆ. ಈಗ ಕ್ಯಾನ್ಸರ್ ಕೇಂದ್ರ ಹಿಮ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಲು ತುರ್ತು ಆದೇಶ ಮಾಡಬೇಕೆಂದು ಜಿಲ್ಲಾ ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ೨೦೨೩ ನವೆಂಬರ್ ತಿಂಗಳಲ್ಲಿ ನಮ್ಮ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಸಂಬಂಧಿತ ತಪಾಸಣೆ ಹಾಗೂ ಚಿಕಿತ್ಸೆಗಳ ಕೇಂದ್ರ ಸ್ಥಾಪನೆಚಿiiಗಿದೆ. ಕ್ಯಾನ್ಸರ್ ಚಿಕಿತ್ಸೆಯೂ ಹಿಮ್ಸ್ ಸಿಬ್ಬಂಧಿಯ ನೇಮಕಾತಿಯ ಮೂಲಕವೇ ಪ್ರಾರಂಭವಾಗಲೂ ಅಂದಿನ ಹಿಮ್ಸ್ ಡೈರೆಕ್ಟರ್ ಆದ ಡಾ? ಬಿ.ಸಿ. ರವಿಕುಮಾರ್ ರವರು ಈ ಕೇಂದ್ರದ ಬಗ್ಗೆ ತೋರಿದ ಪ್ರೀತಿ ಪ್ರೋತ್ಸಾಹಗಳೇ ಕಾರಣ.

ಅಂದಿನಿಂದ ೨೦೧೯ರ ಕರೋನಕಾಲದ ಘಟ್ಟದವರೆಗೂ ಅವಿರತವಾಗಿ ಮುಂದುವರೆದ ಕ್ಯಾನ್ಸರ್ ವಿಕಿರಣ ಚಿಕಿತ್ಸಾ ಘಟಕವು ಕಾರಣಾಂತರಗಳಿಂದಾಗಿ ಮತ್ತೆ ನೆನೆಗುದಿಗೆ ಬಿದ್ದರೂ ೨೦೧೮ರಲ್ಲಿ ನಮ್ಮೆಲ್ಲರ ಭಗಿರಥ ಪ್ರಯತ್ನದಿಂದ ಈ ವಿಭಾಗವು ಭೋಧಕ ವಿಭಾಗವಾಗಿ ಪರಿವರ್ತನೆಗೊಂಡು ಅಲ್ಲಿಗೆ ಸಿಬ್ಬಂಧಿಗಳು ನೇಮಕಾತಿಗೊಂಡು ೨೦೧೯ ರಿಂದ ಇಂದಿನವರೆಗೆ ಪೂರ್ಣ ಪ್ರಮಾಣದ ಸಲಹಾಕೇಂದ್ರ ಹಾಗೂ ಪೂರ್ಣ ಪ್ರಮಾಣದ ಉಚಿತ ಕಿಮೋಥೆರಪಿ ಚಿಕಿತ್ಸಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಗೂ ಸಹಸ್ರಾರು ಕ್ಯಾನ್ಸರ್ ರೋಗಿಗಳ ಬಾಳಿನಲ್ಲಿ ದಾರಿ ದೀಪವಾಗಿ ಬೆಳಕು ನೀಡುವಲ್ಲಿ ಸಫಲವಾಗಿದೆ ಎಚಿದರು.

ಹಿರಿಯ ನಾಗರೀಕರ ವೇದಿಕೆ ಸದಸ್ಯರಾದ ಜಗದೀಶ್ ಮಾತನಾಡಿ, ಹಿಮ್ಸ್ ಸಿಬ್ಬಂಧಿಯ ಹಾಗೂ ಎಸ್.ವಿ.ವೈ.ಎಂ. ನ ಈ ನಿಸ್ವಾರ್ಥ ಸೇವೆಯೂ ಹಾಸನದ ಅನೇಕ ಸಂಸಾರಗಳಲ್ಲಿ ಸಾಚಿತ್ವನದ ಬೆಳಕಾಗಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿ ಉಚಿತವಾಗಿ ಸೇವೆಚಿiನ್ನು ಸಲ್ಲಿಸುತ್ತಿದೆ. ಇನ್ರ್ನೆಂದು ತಿಂಗಳೊಳಗಾಗಿ ಕಾರಣಾಂತರಗಳಿಂದ ಮತ್ತೊಮ್ಮೆ ನೆನೆಗುದಿಗೆ ಬಿದ್ದಿದ್ದ ರೇಡಿಯೋಥೆರಪಿ ಚಿಕಿತ್ಸೆಯನ್ನು ಪೂರ್ಣ ಹಾಗೂ ಇನ್ನೂ ಉತ್ತಮ ಪ್ರಮಾಣದಲ್ಲಿ ಬಾಬಾ ಟ್ರಾನ್-೩ ಎಂಬ ಟೆಲಿಕೋಬಟ್ ವಿಕಿರಣ ಚಿಕಿತ್ಸೆ ಯಂತ್ರದ ಮೂಲಕ ನೀಡಲು ಭರದಿಂದ ಸಿದ್ಧತೆ ಸಾಗುತ್ತಿದೆ ಎಚಿದರು. ಇದೇ ಕೇಂದಕ್ಕೆ ಇನ್ನೂ ಹೆಚ್ಚುವರಿ ಹಾಗೂ ಪರಿಪೂರ್ಣವಾದ ರೇಡಿಯೋ ಥೆರಪಿ ಚಿಕಿತ್ಸೆ ದೊರಕಿಸಿಕೊಡಲೆಚಿದು ಲೀನಿಯರ್ ಹಾಗೂ ಬ್ರೇಕಿ ಥೆರಪಿ ಚಿಕಿತ್ಸೆಗಳು ಈ ಹಿಂದೆ ೨೦೧೮ ರಲ್ಲಿ ಸರ್ಕಾರಕ್ಕೆ ಕೋರಿ ಬರೆಯಲಾಗಿದ್ದ ಪ್ರಾಜೆಕ್ಟ್ ಪರಿಪೂರ್ಣವಾಗದೆ ಕಾರಣಾಂತರಗಳಿಂದ ಉಳಿದುಬಿಟ್ಟಿದೆ ಎಂದು ಬೇಸರವ್ಯಕ್ತಪಡಿಸಿದರು. ಇದಕ್ಕಾಗಿ ಸರ್ಕಾರದಿಂದ ರೂ. ೧೮.೨೫ ಕೋಟಿ ಆದೇಶ ಸಿಕ್ಕಿದ್ದರೂ ಹಾಗೂ ಇದರ ಪರವಾಗಿ ಇದರಲ್ಲಿ ರೂ. ೫ ಕೋಟಿ ಹಿಮ್ಸ್‌ಗೆ ಈಗಾಗಲೇ ಬಂದಿರುತ್ತದೆಯಾದರೂ ಕರೋನ ಸ್ಥಿತಿಗಳಿಂದಾಗಿ ಈ ಪ್ರಾಜೆಕ್ಟ್ ನೆನೆಗುದಿಗೆ ಬಿದ್ದಿತ್ತು ಹಾಗೂ ಇದರ ವೆಚ್ಚ ರೂ. ೧೮.೨೫ ಕೋಟಿಯಿಚಿದ ಸುಮಾರು ರೂ. ೩೭ ಕೋಟಿಗೆ ಜಿಗಿದಿತ್ತು. ಇದರ ಬಗ್ಗೆ ಹಿಮ್ಸ್ ಡೈರೆಕ್ಟರ್ ಹಾಗೂ ಡಿ.ಎಂ.ಇ. ಹಾಗೂ ಎಲ್ಲಾ ವಿಶೇಷ ತಜ್ಞರ ಜೊತೆ ಅನೇಕ ಮ್ಭಿಟಿಂಗ್‌ಗಳು ನೆಡೆದಿದ್ದು ಇತ್ತೀಚೆಗೆ ನಡೆದ ಇದರ ಮುಂದುವರೆಕೆಗೆ ಬೇಕಾದ ೩೭ ಕೋಟಿ ರೂ. ಗಳನ್ನು ಪುನಃ ಪರಿಶೀಲಿಸಿ ನೀಡುವುದಕ್ಕಾಗಿ ಮೂರು ಜನರ ಕಮಿಟಿ ಡಾ. ಸಿ.ಎನ್. ಜಗದೀಶ್, ಹಿಮ್ಸ್ ಡೈರೆಕ್ಟರ್ ಹಾಗೂ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಶನ್ ಡಿ.ಎಂ.ಇ ರವರನ್ನು ವರದಿ ಒಪ್ಪಿಸುವಚಿತೆ ಕೋರಲಾಗಿದೆ.

ಆದರೆ ಈ ನಿಟ್ಟಿನಲ್ಲಿ ಇದರ ಮುಂದುವರೆದ ಹಚಿತದಲ್ಲಿ ಯಾವರೀತಿ ಹಿಮ್ಸ್ ಆಡಳಿತ ಮಂಡಳಿಯ ಸದಸ್ಯರು ನಿರ್ಧಾರ ತೆಗೆದುಕೊಳ್ಳಲ್ಲಿದ್ದಾರೋ ಅದು ಅತೀ ಮುಖ್ಯವಾಗಿದೆ. ದಯವಿಟ್ಟು ಒಪ್ಪಿಗೆಯ ಹಚಿತದಲ್ಲಿರುವ ಈ ಕೀಟರ್ನ್ ಪ್ರಾಜೆಕ್ಟ್ ಎ.ಇ.ಆರ್.ಪಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯದಂತೆ ಹಾಗೂ ಈಗಾಗಲೇ ಹಿಮ್ಸ್ ಕೇಂದ್ರದಲ್ಲಿ ಅಳವಡಿಕೆಯಾಗಿ ಮುಂಬರುವ ಎರಡೂ ತಿಂಗಳೊಳಗೆ ಚಿಕಿತ್ಸೆಗೆ ಸಜ್ಜಾಗಿರುವ ಬಾಬಾ ಟ್ರಾನ್-೩೧ ಎಂಬ ತತ್ಸಂಬಂಧಿತ ರೇಡಿಯೋ ಥೆರಪಿ ಕೋಬಾಲ್ಟ್ ಮಿಷನ್ ಅನ್ನು ಆದಷ್ಟು ಮುತುವರ್ಜಿಯಿಚಿದ ಶೀಘ್ರವೇ ಲೋಕಾರ್ಪಣೆ ಮಾಡಿಸುವ ಸಲುವಾಗಿ ತಮ್ಮಲ್ಲಿ ಅತ್ಯಂತ ಕಳಕಳಿಯಿಚಿದ ಹಿರಿಯ ನಾಗರೀಕರ ವೇದಿಕೆಯ ವತಿಯಿಚಿದ ವಿನಚಿತಿಸುತ್ತಿದ್ದೇವೆ.

ಈಗಾಗಲೇ ಡಾ. ರವಿಕಿರಣ್, ಮುಖ್ಯಸ್ಥರು, ಕ್ಯಾನ್ಸರ್ ಕೇಂದ್ರ, ಹಿಮ್ಸ್ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಚಿiಲ್ಲಿ ತೆರವಾಗಲಿರುವ ಸ್ಥಾನ ಅಸೋಸಿಯೇಟ್ ಪ್ರೋಫೆಸರ್ ಹಾಗೂ ಖಾಲಿ ಇರುವ ಅಸಿಸ್ಟಂಟ್ ಪ್ರೋಫೆಸರ್ ಸ್ಥಾನದ ಜೊತೆಗೆ ಇನ್ನೂ ಒಬ್ಬ ಸೀನಿಯರ್ ರೆಸಿಡೆಂಟ್ ರೇಡಿಯೇಷನ್ ಆಂಕಾಲಜಿ ಎಂ.ಡಿ. ಅವರನ್ನು ಕೂಡಲೆ ಈ ಕೇಂದ್ರಕ್ಕೆ ನೇಮಕ ಮಾಡಲು ತುರ್ತು ಆದೇಶ ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ಅತ್ಯಂತ ಕಳಕಳಿಯಿಚಿದ ವಿನಚಿತಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಹಿರಿಯ ನಾಗರೀಕರ ವೇದಿಕೆ ಉಪಾಧ್ಯಕ್ಷ ಬಾಳ್ಳುಗೋಪಾಲ್, ಸದಸ್ಯರಾದ ಮಹಾಲಕ್ಷ್ಮಿ ದೊಡ್ಡಯ್ಯ, ಡಾ. ಹೇಮಾಲತಾ, ಖಜಾಂಚಿ ಕೆ. ರಮೇಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ

Published

on

ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.

ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನದಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ

Published

on

ಕಾವೇರಿ ನೀರನ್ನು ಉಳಿಸಲು ಶತಸಿದ್ಧ : ಹೆಚ್.ಡಿ. ದೇವೇಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು ಹಾಸನದಲ್ಲಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕರಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಮೂರು ಕ್ಷೇತ್ರದಲ್ಲೂ ಜಯಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿ, ಕಾವೇರಿ ನೀರನ್ನು ಉಳಿಸಲು ಶತಸಿದ್ಧ ಎಂದು ಶಪತ ಮಾಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನ ಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ. ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.೭ ರಂದು ನಡೆಯಲಿದೆ. ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ ಎಂದರು.

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ! ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ-ಆಪರೇಟ್ ಮಾಡ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ.

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ. ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ.

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು ೧೨೫ ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುಬೇಕು. ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ ಈ ದೇವೇಗೌಡ ೯೧ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ. ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ. ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ. ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ.

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ. ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ.

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನಕ್ಕೆ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಮೂವರು ಇದ್ದರೂ ಆದರೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ತಾರೆ. ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ.ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ. ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ ಎಂದು ಹೇಳಿದರು.

ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.

 

Continue Reading

Hassan

ನೀಡಿದ ಭರವಸೆ ಈಡೇರಿಸುವಲ್ಲಿ ಬಿಜೆಪಿ ಸರಕಾರ ವಿಫಲ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಮತ ನೀಡುವಂತೆ ಮರಿತಿಬ್ಬೇಗೌಡ ಮನವಿ

Published

on

ಹಾಸನ: ಹಾಸನ : ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಕೇಂದ್ರ ಸರಕಾರವು ತಾನು ನೀಡಿದ ಭರವಸೆಯನ್ನು ಇದುವರೆಗೂ ಒಂದನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಈಬಾರಿ ಕಾಂಗ್ರೆಸ್ ಗಎ ಹೆಚ್ಚಿನ ಒಲವು ಇದ್ದು, ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಿ ಸೇವೆಗೆ ಅವಕಾಶ ಕಲ್ಪಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ೨೦೨೪ ಏಪ್ರಿಲ್ ೨೬ ರಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ರವರ ಪರವಾಗಿ ಮತದಾರ ಬಂಧುಗಳಲ್ಲಿ ಮನವಿ. ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾನು ಕೊಟ್ಟ ಭರವಸೆಗಳಲ್ಲಿ ಬಂದನ್ನೂ ಪೂರೈಸಿರುವುದಿಲ್ಲ. ಪ್ರಧಾನಮಂತ್ರಿಗಳಿರು ಮೈಸೂರಿನ ಚುನಾವಣಾ ಪ್ರಚಾರಕ್ಕೆ ಬಂದಾಗ ಕನ್ನಡ ನಾಡಿನ ಜನತೆಗೆ ತಮ್ಮ ಅವಧಿಯಲ್ಲಿ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟಿರುವುದರ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು ಇದಕ್ಕೆ ಸಾಕ್ಷಿ ಎಂದರು. ಕೇಂದ್ರ ಸರ್ಕಾರ ಕನ್ನಡ ನಾಡಿನ ಜನತೆಯ ಬರಪರಿಹಾರ ಹಾಗೂ ಬಾಕಿ ತೆರಿಗೆ ನೀಡಿಲ್ಲ. ಯಾವುದೇ ನೀರಾವರಿ ಯೋಜನೆಗೆ ಅನುಮೋದನೆ ನೀಡಿಲ್ಲ. ಬಡವರ-ರೈತರ ಹಾಗೂ ಸಂವಿಧಾನ ವಿರೋಧಿ ಸರ್ವಾಧಿಕಾರಿ ಸರ್ಕಾರವಾಗಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನೇತರರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಅಧಿಕಾರಕ್ಕೆ ಬಂದ ೧೦ ತಿಂಗಳ ಅವಧಿಯಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಕನ್ನಡ ನಾಡಿನ ಪ್ರತಿ ಕುಟುಂಬಕ್ಕೂ ತಲುಪಿಸಿರುವುದು ಹೆಮ್ಮೆಯ ಸಂಗತಿ. ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ೫ ಗ್ಯಾರಂಟಿ ಯೋಜನೆಗಳಿಗೆ ೫೩,೦೦೦ ಕೋಟಿ ಮತ್ತು ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ೮೯,೦೦೦ ಕೋಟಿ ಹಣವನ್ನು ನಿಗಧಿಗೊಳಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಜಿ, ರಾಹುಲ್‌ಜಿ ಇವರುಗಳ ನೇತೃತ್ವದಲ್ಲಿ ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ರಾಷ್ಟ್ರದ ಮತದಾರ ಬಂಧುಗಳಿಗೆ ನೀಡುವುದಾಗಿ ಭರವಸೆಕೊಟ್ಟಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಸಿದ್ಧಾಂತಗಳ ಆಧಾರದ ಮೇಲೆ ರೂಪಿತವಾದ ಸಂವಿಧಾನದ ಸದಾಶಯದಂತೆ ಎಲ್ಲಾ ಸಮುದಾಯದ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿರುವ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರ ಹಸ್ತದ ಗುರುತಿಗೆ ಮತ ನೀಡಬೇಕೆಂದು ಮತದಾರ ಬಂಧುಗಳಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಶಿವಣ್ಣಗೌಡ, ಮಂಜೇಗೌಡ, ರವಿಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!