Connect with us

Chamarajanagar

SSLC-PUC ಯಲ್ಲಿ 85% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ.

Published

on

ಯಳಂದೂರು :2025-26ನೇ ಸಾಲಿನ SSLC ಮತ್ತು ದ್ವಿತೀಯ PUC ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಯಳಂದೂರು ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಅರ್ಜಿ ಆಹ್ವಾನಿಸಿದೆ. ಈ ಕುರಿತು ಸಂಘದ ಅಧ್ಯಕ್ಷರು ಬಿ ನಂಜುಂಡಸ್ವಾಮಿ ದಿನಪತ್ರಿಕೆಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 09-08-2026 ರಂದು ಭಾನುವಾರ ಸಂಘದ 22ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಳಂದೂರು ತಾಲ್ಲೋಕಿನ ಕೆಸ್ತೂರು ಗ್ರಾಮದ ಶ್ರೀ ಪಟ್ಟದ ಮಠದಲ್ಲಿ ಯಳಂದೂರು ತಾಲ್ಲೂಕಿನ ಮಠಾಧೀಶರುಗಳ ದಿವ್ಯ ಸಮ್ಮುಖದಲ್ಲಿ ನಡೆಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಯಳಂದೂರು ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಬಿ ನಂಜುಂಡಸ್ವಾಮಿ ಕಾರ್ಯದರ್ಶಿಗಳಾದ ಮಲ್ಲಣ್ಣ ಹಾಗೂ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-07-2026

ಅರ್ಹತೆಗಳು:

1. ವಿದ್ಯಾರ್ಥಿಯು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು.

2. 2025-26ನೇ ಸಾಲಿನ SSLC ಅಥವಾ ದ್ವಿತೀಯ PUC ಪರೀಕ್ಷೆಯಲ್ಲಿ ಶೇ.85% ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

3. ಯಳಂದೂರು ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಆದ್ಯತೆ.

 

ಸಲ್ಲಿಸಬೇಕಾದ ದಾಖಲೆಗಳು:

ಶಾಲೆಯ ಹೆಸರು ಮತ್ತು ವಿಳಾಸ, ಅಂಕಪಟ್ಟಿ,ಜಾತಿ ಪ್ರಮಾಣ ಪತ್ರ, ಭಾವಚಿತ್ರ ಮತ್ತು ಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

 

ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ:

1. ಅಧ್ಯಕ್ಷರು: ಬಿ ನಂಜುಂಡಸ್ವಾಮಿ (ಗಿರೀಶ್) ಅಂಬಳೆ – 7090872795

2. ಕಾರ್ಯದರ್ಶಿ: ಮಲ್ಲಣ್ಣ ಕೆಸ್ತೂರು – 6363815406

Chamarajanagar

ಖಾಸಗಿ ಬಸ್-ಬೈಕ್ ನಡುವೆ ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

Published

on

ಗುಂಡ್ಲುಪೇಟೆ: ಖಾಸಗಿ ಬಸ್ – ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ತಾಲೂಕಿನ ರಂಗನಾಥಪುರ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ತರದಲೆ ಗ್ರಾಮದ ರಂಗಶೆಟ್ಟಿ ಗಾಯಾಳು. ಈತ ಬೇಗೂರಿನಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ತೀವ್ರತರವಾದ ಗಾಯಗಳಾಗಿದೆ. ಕೂಡಲೇ ಗಾಯಾಳುವನ್ನು ಪೊಲೀಸರು ಬೇಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Continue Reading

Chamarajanagar

ಸಂತ ಪೌಲರ ಚರ್ಚ್‌ನಲ್ಲಿ ಸಡಗರದಿಂದ ಜರುಗಿದ ವಾರ್ಷಿಕ ಹಬ್ಬ

Published

on

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಸಂತ ಪೌಲರ ಚರ್ಚ್‌ನಲ್ಲಿ ಸಡಗರ ಸಂಭ್ರಮದಿಂದ ವಾರ್ಷಿಕ ಹಬ್ಬ ನಡೆಯಿತು.
ಚಾಮರಾಜನಗರ, ನಾಗವಳ್ಳಿ, ದೊಡ್ಡರಾಯಪೇಟೆ, ಕೋಡಿಉಗನೆ ಹಾಗೂ ತಾಳವಾಡಿ ವ್ಯಾಪ್ತಿಯ ನೂರಾರು ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಆಡಂಬರ ಗಾಯನ ದಿವ್ಯ ಬಲಿಪೂಜೆ: ಮೈಸೂರು ಕೃಪಾಲಯದ ಗುರು ಅಲೆಕ್ಸ್ ಆಡಂಬರ ಗಾಯನ ದಿವ್ಯ ಬಲಿಪೂಜೆ ಸಮರ್ಪಿಸಿದರು. ಬೈಬಲ್ ವಾಚನ, ಸಂದೇಶ ಪಠನ ನಡೆಯಿತು. ಪ್ರಬೋಧನೆ ನೀಡಿದ ಗುರು ಅಲೆಕ್ಸ್, ಸೌಲನಾಗಿದ್ದ ಪೌಲನು ಯೇಸುವಿನ ಅಶರೀರವಾಣಿ ಕೇಳಿ ಜ್ಞಾನೋದಯವಾಗಿ ಕ್ರಿಸ್ತನ ಸಂದೇಶ ಸಾರಿದರು. “ಈಸಬೇಕು ಭಕ್ತರೇ, ಜೈಸಬೇಕು ಮಿತ್ರರೇ” ಎಂಬುದು ಆತನ ಧ್ಯೇಯವಾಕ್ಯ. ಆತ ಪ್ರೀತಿ, ಸಹನೆ, ಸೈರಣೆಯನ್ನು ಅಳವಡಿಸಿಕೊಳ್ಳುವಂತೆ ಪತ್ರಗಳ ಮೂಲಕ ಕರೆ ನೀಡಿದರು ಎಂದು ಹೇಳಿದರು. ಬಲಿಪೂಜೆ ಬಳಿಕ ಗುರುವರ್ಯರು ಮತ್ತು ಹಬ್ಬದ ದಾನಿಗಳನ್ನು ಗೌರವಿಸಲಾಯಿತು.

ಪೂರ್ವ ಸಿದ್ಧತೆ: ಹಬ್ಬದ ಮೂರು ದಿನಗಳ ಮೊದಲು ಧ್ವಜಾರೋಹಣ ಮತ್ತು ವಿವಿಧ ಧರ್ಮಕೇಂದ್ರಗಳ ಗುರುಗಳಿಂದ ದಿವ್ಯ ಬಲಿಪೂಜೆ, ಪ್ರಬೋಧನೆಯೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಚರ್ಚ್ ಅನ್ನು ವಿದ್ಯುತ್ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು.

ತೇರಿನ ಮೆರವಣಿಗೆ: ಪೂಜಾ ವಿಧಿಗಳ ಬಳಿಕ ಸರ್ವಾಲಂಕೃತ ಸಂತ ಪೌಲರ ಪುತ್ಥಳಿಯ ತೇರು ಚರ್ಚ್‌ನಿಂದ ಹೊರಟು ರಾಮಸಮುದ್ರ, ಬಾಗೇಮರದ ಮೂಲಕ ಡಿವೈಎಸ್ಪಿ ಕಛೇರಿ ವರೆಗೆ ಸಾಗಿ ಮತ್ತೆ ಚರ್ಚ್‌ಗೆ ಮರಳಿತು. ಮೆರವಣಿಗೆಯಲ್ಲಿ ಹೂ ಕುಂಡಗಳು, ಪಟಾಕಿ ಸಿಡಿಸಲಾಯಿತು. ಕೇರಳದ ಚಂಡೆ ಮದ್ದಳೆ ತಂಡ ವಿಶೇಷ ಆಕರ್ಷಣೆಯಾಗಿತ್ತು. ಗುರುವರ್ಯರು, ಬ್ರದರ್ಸ್, ಸಿಸ್ಟರ್ಸ್, ಮಕ್ಕಳು ಹಾಗೂ ಭಕ್ತರು ಭಕ್ತಿಗೀತೆ ಹಾಡುತ್ತಾ, ಜಪಸರ ಹೇಳುತ್ತಾ ಪಾಲ್ಗೊಂಡರು. ಕೊನೆಯಲ್ಲಿ ಪರಮಪ್ರಸಾದದ ಆಶೀರ್ವಾದ ಮತ್ತು ಪ್ರಸಾದ ವಿತರಣೆ ನಡೆಯಿತು.


ಹಬ್ಬದ ನೇತೃತ್ವವನ್ನು ಧರ್ಮಕೇಂದ್ರದ ಗುರು ಇಜ್ಞಾಸಿ ಮುತ್ತು ವಹಿಸಿದ್ದರು. ಮೈಕೆಲ್ ಅಗುಷ್ಟಿನ್, ಕ್ರಿಸ್ಟೋಫರ್ ಸಹಾಯರಾಜ್, ಪ್ರಶಾಂತ್, ದೊರೈಸ್ವಾಮಿ ಸೇರಿದಂತೆ ವಿವಿಧ ಧರ್ಮಕೇಂದ್ರಗಳ ಗುರುಗಳು ಪೂಜಾ ವಿಧಿಗಳಲ್ಲಿ ಭಾಗವಹಿಸಿದ್ದರು.

Continue Reading

Chamarajanagar

ರೈತ ಸಂಘದ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

Published

on

ಗುಂಡ್ಲುಪೇಟೆ: ಜು.20- ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು, ಮಹಿಳಾ ಹಾಗೂ ಯುವ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಪಟ್ಟಣದ ಜ್ಞಾನ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗೀಯ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜ್ ವಹಿಸಿದ್ದರು. ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ನಾಗರಾಜಪ್ಪ, ಕಾರ್ಯಾಧ್ಯಕ್ಷರಾಗಿ ಸಿದ್ದಶೆಟ್ಟಿ, ಅಧ್ಯಕ್ಷರಾಗಿ ಮಲ್ಲಯ್ಯನಪುರ ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್, ಉಪಾಧ್ಯಕ್ಷರಾಗಿ ಶಿವಕುಮಾರ್, ಸುಭಾಷ್, ಪ್ರಕಾಶ್ ಹಾಗೂ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ರವಿಚಂದ್ರ ಮತ್ತು ಸಿದ್ದರಾಜು, ಕೋಶಾಧ್ಯಕ್ಷರಾಗಿ ನಾಗಶೆಟ್ಟಿ ಹಾಗೂ ಖಜಾಂಜಿಯಾಗಿ ಮೂರ್ತಿ ಸರ್ವಾನುಮತದಿಂದ ಆಯ್ಕೆಯಾದರು.


ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಪ್ರವೀಣ್, ಪ್ರಧಾನ ಕಾರ್ಯದರ್ಶಿಯಾಗಿ ರಘು, ಉಪಾಧ್ಯಕ್ಷರಾಗಿ ಪ್ರಜ್ವಲ್, ಸಾಗರ್, ಮಂಜು ಹಾಗೂ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್, ಮಹದೇವಸ್ವಾಮಿ ಮತ್ತು ರೋಹಿತ್ ಗೌಡ ಆಯ್ಕೆಯಾದರು.ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಬಸಮ್ಮ, ಗೌರವಾಧ್ಯಕ್ಷರಾಗಿ ನಾಗಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಚಿಕ್ಕಸಿದ್ದಮ್ಮ ಹಾಗೂ ಉಪಾಧ್ಯಕ್ಷರಾಗಿ ಬೆಳ್ಳಮ್ಮ ಮತ್ತು ರಶ್ಮಿ ಆಯ್ಕೆಯಾದರು. ಈ ವೇಳೆ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಸಹ ನಡೆಯಿತು.

ಜಿಲ್ಲಾ ಅಧ್ಯಕ್ಷ ಶಿವಪುರ ಮಹಾದೇವಪ್ಪ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರ, ಸಂಘಟನೆ ಬಲವರ್ಧನೆ ಹಾಗೂ ಗ್ರಾಮ ಮಟ್ಟದಲ್ಲಿ ರೈತ ಸಂಘವನ್ನು ಮತ್ತಷ್ಟು ಸಶಕ್ತಗೊಳಿಸುವ ಅಗತ್ಯವನ್ನು ಒತ್ತಿಹೇಳಿದರು.

ನೂತನ ಪದಾಧಿಕಾರಿಗಳು ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಹಾಗೂ ಸಂಘಟನೆಯನ್ನು ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಯುವ ಘಟಕದ ಸಂಚಾಲಕ ಯಶ್ವಂತ್, ಮಲ್ಲಣ್ಣ, ಸಿದ್ದರಾಜು ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Continue Reading

Trending

error: Content is protected !!