Connect with us

Hassan

ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

Published

on

ಬೆಂಗಳೂರು/ಹಾಸನ: ಹಾಸನ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಎರಡು ಪ್ರಮುಖ ನೀರಾವರಿ ಯೋಜನೆಗಳಿಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಎರಡೂ ಯೋಜನೆಗಳು ನೀರಾವರಿ ಇಲಾಖೆಯಡಿ ಕೈಗೆತ್ತಿಕೊಳ್ಳಲಾಗಲಿದ್ದು, ಜಿಲ್ಲೆಯ ಬರಪೀಡಿತ ಪ್ರದೇಶಗಳ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿವೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಸೇರಿ 20ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿಯಿಂದ ಲಿಫ್ಟ್ ನೀರಾವರಿ ಮೂಲಕ ನೀರು ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚನೆ ನೀಡಿದ್ದರು. ಅದರಂತೆ, ಬರಪ್ರದೇಶದ ನೀರಿನ ಸಮಸ್ಯೆ ನಿವಾರಣೆಗೆ 32 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

 

ಇನ್ನೊಂದೆಡೆ, ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಲಿಫ್ಟ್ ನೀರಾವರಿ ಯೋಜನೆಯ ಪುನಶ್ಚೇತನಕ್ಕೂ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಈಗಿರುವ ಈ ಯೋಜನೆ ನಿರಂತರ ತಾಂತ್ರಿಕ ದೋಷ, ಪಂಪುಗಳ ವೈಫಲ್ಯ, ರೈಜಿಂಗ್ ಮೇನ್ ಹಾಗೂ ಕಾಲುವೆಗಳ ಹಾನಿಯಿಂದ ಬಳಲುತ್ತಿತ್ತು. ಹೀಗಾಗಿ ಹೊಸ ಪಂಪುಗಳು, ಮೋಟಾರ್‌ಗಳು, ಪೈಪ್‌ಲೈನ್‌ಗಳ ಅಳವಡಿಕೆ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 11.50 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಮೂಲಕ ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಒಟ್ಟಾರೆ 43.50 ಕೋಟಿ ರೂ.  ವೆಚ್ಚದ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದಂತಾಗಿದೆ.

ಹಾಸನ ಜಿಲ್ಲೆಯ ಪರವಾಗಿ, ಜಿಲ್ಲೆಯ ಜನತೆಯ ಅಗತ್ಯಗಳಿಗೆ ಸ್ಪಂದಿಸಿ ಈ ಮಹತ್ವದ ಯೋಜನೆಗಳನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಕೃತಜ್ಞತೆ
ಸಲ್ಲಿಸಿದ್ದಾರೆ.

Continue Reading

Hassan

ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಫೇಸ್ ಬುಕ್ ಹ್ಯಾಕ್

Published

on

ಹಾಸನ: ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ಅವರ ಭಾವಚಿತ್ರವಿರುವ ಫೇಸ್‌‍ ಬುಕ್‌ ಐಡಿಯಿಂದ ಸಂದೇಶಗಳು ಬೇರೆಯವರ ಮೊಬೈಲ್‌ಗಳಿಗೆ ರವಾನೆಯಾಗುತ್ತಿರುವುದು ಕಂಡು ಬಂದಿದ್ದು, ಫೇಸ್‌‍ ಬುಕ್‌ ಐಡಿಯಿಂದ ಯಾವುದೇ ಸಂದೇಶ ಜಿಲ್ಲಾಧಿಕಾರಿ ಕಳುಹಿಸುತ್ತಿಲ್ಲ.


ಫೇಸ್‌‍ ಬುಕ್‌ ಐಡಿ ನಕಲಿ ಖಾತೆಯನ್ನು ಬಳಸುತ್ತಿರುವುದು ಕಂಡು ಬಂದಿದೆ. ನಕಲಿ ಖಾತೆಯಿಂದ ಬರುವ ಮೇಸೆಜ್‌ಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಹಾಗೂ ಯಾವುದೇ ದೂರುಗಳು ಇದ್ದರೆ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ದೂರು ನೀಡಬಹುದಾಗಿದೆ. ಸೈಬರ್‌ ಅಪರಾಧದ ಬಗ್ಗೆ ಜಾಗೃತರಾಗುವಂತೆ ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ತಿಳಿಸಿದ್ದಾರೆ.

Continue Reading

Hassan

ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ರೈತ ಆತ್ಮಹ*ತ್ಯೆ

Published

on

ಹಾಸನ : ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ, ಶ್ರವಣಬೆಳಗೊಳ ಹೋಬಳಿ ಕೊತ್ತನಘಟ್ಟ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯೋಗೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ.

ಚನ್ನರಾಯಪಟ್ಟಣದ ಶ್ರೀರಾಮ ಫೈನಾನ್ಸ್‌ನಲ್ಲಿ ಏಳು ಲಕ್ಷ ಸಾಲ ಪಡೆದಿದ್ದ ಯೋಗೇಶ್ ಅವರು ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಶ್ರೀರಾಮ ಫೈನಾನ್ಸ್‌ನ ಇಬ್ಬರು ಸಿಬ್ಬಂದಿಗಳು ನಿನ್ನೆ ರಾತ್ರಿ ಮನೆಗೆ ಬಂದು ಗಲಾಟೆ ಮಾಡಿ, ಮನೆ ಸೀಜ಼್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇದರಿಂದ ಮಾನಕ್ಕೆ ಅಂಜಿ ರಾತ್ರಿ ಎರಡು ಗಂಟೆ ಸಮಯದಲ್ಲಿ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನೂ ಫೈನಾನ್ಸ್ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. . ಈ ಘಟನೆ ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 

Continue Reading

Hassan

ತಂಬಾಕು ಹರಾಜು ಮಾರುಕಟ್ಟೆಯನ್ನು ನಿಲ್ಲಿಸಿ: ರೈತರಿಂದ ಪ್ರತಿಭಟನೆ

Published

on

ವರದಿ: ಶಂಕರ್ ಕಟ್ಟೆಮಳಲವಾಡಿ

ಹುಣಸೂರು: ಐಟಿಸಿ ಕಂಪನಿಯವರು ಕಳೆದ ವರ್ಷ ರೈತರು ಬೆಳೆದ ಹೊಗೆ ಸೊಪ್ಪು ಇನ್ನೂ ಮಾರುಕಟ್ಟೆ ಆಗಿಲ್ಲ, ಆದರೆ ಪುನಃ ಎರಡನೇ ಬೆಳೆಗೆ ಬೀಜ ಕೊಟ್ಟು ಹಾಳು ಮಾಡುತ್ತಿದ್ದಾರೆ.

2, 3, 4ನೇ ಗ್ರೇಡ್ ಹೋಗೆ ಸೊಪ್ಪಿಗೆ 250, 240, 220 ರೂ ಬೆಲೆಗೆ ಖರೀದಿ ಮಾಡುತ್ತಿದ್ದಾರೆ ಬಹಳ ತೊಂದರೆಯಾಗುತ್ತಿದೆ 320 ರೂ. ಗೆ ಖರೀದಿಸುವವರೆಗೆ ಮಾರುಕಟ್ಟೆ ಮಾಡಲು ಬಿಡುವುದಿಲ್ಲ ಎಂದು ರೈತ ನಾಗೇಗೌಡ, ಕರೀಂ ಸಾಬ್ ಹಾಗೂ ರೈತ್ ಸಂಘದ ಕಾರ್ಯದರ್ಶಿ ರಾಮೇಗೌಡ ಆರೋಪಿಸಿದರು.


ಇವರು ಗುರುವಾರ ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಎಂದು ರೈತರು ಕಚೇರಿಯ ಮುಂದೆ ಜಮಾಗೊಂಡು ಪ್ರತಿಭಟಿಸಿದರು.

ಈ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.

Continue Reading

Trending

error: Content is protected !!