Hassan
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಖಂಡಿಸಿ ಬಿಜೆಪಿಯಿಂದ ಜೂನ್ 17 ರಂದು ಉಗ್ರ ಹೋರಾಟ ಬಿ.ವೈ. ವಿಜಯೇಂದ್ರ ಹೇಳಿಕೆ
ಹಾಸನ : ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಜೊತೆಗೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ನಾವು ಸೋಮವಾರದಿಂದಲೇ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ನಗರದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಹತಾಷವಾಗಿ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ನೆನ್ನೆ ಯಾರೂ ಕೂಡ ಊಹಿಸದ ರೀತಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯೊ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಜನರು ಶಾಪಹಾಕುತ್ತಿದ್ದಾರೆ. ಬರಗಾಲದ ಬೇಗೆಯಿಂದ ಇನ್ನೂ ಹೊರ ಬರಲು ಸಾದ್ಯವಾಗಿಲ್ಲ. ಈಗ ಪೆಟ್ರೋಲ್ ಡೀಸೆಲ್ ದರ ಹೆಚ್ಚು ಮಾಡಿದಾರೆ. ಇದರಿಂದ ಸಾಗಣೆ ವೆಚ್ಚ ಜಾಸ್ತಿ ಆಗುತ್ತೆ, ತರಕಾರಿ ಬೆಲೆ ಜಾಸ್ತಿ ಆಗುತ್ತದೆ. ರೈತರಿಗೂ ಅನಾನುಕೂಲ ಆಗಲಿದೆ. ರೈತರ ಪಂಪ್ ಸೆಟ್ ಟ್ರ್ಯಾಕ್ಟರ್ ಬಳಸೋರಿಗೆ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗು ಹೊರೆ ಆಗುತ್ತೆ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ರೀತಿಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊರ್ಳಳುತಿರುವುದರಿಂದ ಈ ಬಗ್ಗೆ ಖಂಡಿಸಲು ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಜೂನ್ ೧೭ ರಂದು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಮತ್ತೆ ಏನು ಮಾಡಬೇಕೆಂದು ನಾಳೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ.
ನಿಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾದ್ಯವಾಗದೆ ಇಂತಹ ತೀರ್ಮಾನ ಮಾಡಿದ್ರೆ ಎಲ್ಲ ವರ್ಗದ ಜನರಿಗೆ ಅನಾನುಕೂಲ ಆಗಲಿದೆ. ಈಗಲು ಕಾಲ ಮಿಂಚಿಲ್ಲ. ಪೆಟ್ರೋಲ್ ಮೇಲೆ ೩ ರೂ ಡೀಸಲ್ ಮೇಲೆ ೩.೫ ರೂ ಜಾಸ್ತಿ ಮಾಡಿದಿರಿ ಕೂಡಲೆ ಇದನ್ನ ಹಿಂಪಡೆಯಿರಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇವೆ. ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿದರೂ ಸಿಎಂ ಅವರು ತಮ್ಮ ಕೈಯನ್ನು ಕಟ್ಟಾಕಿಕೊಂಡಿದಾರೆ.
ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿರುವುದಿಲ್ಲ. ಯಾವುದೆ ಹೊಸ ಯೋಜನೆ ಕೊಡಲು ಸಾಧ್ಯವಾಗಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿಕೊಂಡು ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ ೭೦ ರಿಂದ ೮೦ ಸಾವಿರ ಕೋಟಿ ಸಾಲ ಮಾಡಿ ರಾಜ್ಯದ ಜನರಿಗೆ ಹೊರೆ ಹಾಕುತ್ತಿದ್ದಾರೆ ಎಂದು ದೂರಿದರು. ಇನ್ನೊಂದು ಕಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿ ಬರೆ ಎಳೆದಿದ್ದಾರೆ. ಇದೆಲ್ಲವನ್ನು ನಾವು ಬೇರೆ ಬೇರೆ ಸಂಘಟನೆ ಮಾತಾಡಿ ಮುಂದಿನ ಹೋರಾಟ ತೀರ್ಮಾನ ಮಾಡುವುದಾಗಿ ಎಚ್ಚರಿಸಿದರು. ತೆರಿಗೆ ಮೂಲಕ ಬಂದ ಹಣ ಅಭಿವೃದ್ಧಿಗೆ ಬಳಕೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ ಒಂದು ವರ್ಷದಲ್ಲಿ ಯಾವ ಅಭಿವೃದ್ಧಿ ಆಗಿದೆ? ಒಂದು ವರ್ಷದಲ್ಲಿ ಸಿಎಂ ಸೇರಿ ಯಾವುದೇ ಶಂಕುಸ್ಥಾಪನೆ ಮಾಡಿಲ್ಲ ಮತ್ತು ಅಭಿವೃದ್ಧಿ ಅಗಿರುವುದಿಲ್ಲ. ಹೊಸ ಯೋಜನೆಯನ್ನು ಇನ್ನು ಘೋಷಣೆ ಮಾಡಿರುವುದಿಲ್ಲ. ಯಾಕೆ ಮಾಡೋಕೆ ಸಾದ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದರು. ರಾಜ್ಯದ ಜನರು ನಿಮ್ಮ ಮೇಲೆ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಆಗುತ್ತೆ ಎಂದು ಕನಸು ಕಾಣ್ತಾ ಇದಾರೆ. ಯಾವುದೇ ಶಾಸಕರ ಕ್ಷೇತ್ರದಲ್ಲಿ ಒಂದೇ ಒಂದು ಶಾಲಾ ಕೊಠಡಿ ಕಟ್ಟೋಕೆ ಸಾದ್ಯವಾಗಿಲ್ಲ. ಆಸ್ಪತ್ರೆ ರಸ್ತೆ ಮಾಡೋಕೆ ಸಾದ್ಯವಾಗ್ತಾ ಇಲ್ಲ. ಯಾವುದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ಈ ಸರ್ಕಾರ ಬಂದ ನಂತರ ಆಗಿದೆ. ಇನ್ನು ಇವರು ಗ್ಯಾರಂಟಿ ಗ್ಯಾರಂಟಿ ಎಂದು ಜನರ ಮೇಲೆ ಬರೆ ಎಳೆಯಲು ಹೊರಟಿದಾರೆ ಎಂದು ಬೇಸರವ್ಯಕ್ತಪಡಿಸಿದ ಅವರು, ಇದಕ್ಕೆ ನಾವು ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಕಾಂಗ್ರೆಸ್ ಸರ್ಕಾರ ಬಂದ ಎಲ್ಲಾ ಹಣವನ್ನು ಗ್ಯಾರಂಟಿಗೆ ಬಳಸುತ್ತಿದೆ. ಹಿಂದೆ ಎಸ್ಸಿಪಿ ಟಿಎಸ್ಪಿ ಹಣವನ್ನು ಸಂಪೂರ್ಣವಾಗಿ ಗ್ಯಾರಂಟಿಗೆ ವರ್ಗಾವಣೆ ಮಾಡಿದ್ರು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಣ ಕೂಡ ಅದಕ್ಕೆ ಹೋಗುತ್ತದೆ. ಅದರಿಂದಲೂ ಇವರು ಅಭಿವೃದ್ಧಿ ಮಾಡಲು ಹೊರಟಿಲ್ಲ. ಇವರ ಆಡಳಿತ ವೈಖರಿ ಹೇಗಿದೆ ಎಂದರೆ ಅಭಿವೃದ್ಧಿ ಶೂನ್ಯವಾಗಿದೆ. ಅಭಿವೃದ್ಧಿ ಶೂನ್ಯ ರಾಜ್ಯ ಸರ್ಕಾರ ಜನರ ಮೇಲೆ ಬರೆ ಎಳೆಯಲು ಹೊರಟಿದೆ. ತಮ್ಮ ಗ್ಯಾರಂಟಿ ಗಾಗಿ ಪ್ರಾಪರ್ಟಿ ತೆರಿಗೆ ಹೆಚ್ಚಳ,ಎಲ್ಲವೂ ಈ ಸರ್ಕಾರ ಬಂದ ಮೇಲೆ ದುಬಾರಿ ಆಗಿದೆ. ಗ್ಯಾರಂಟಿ ಉಳಿಸಿಕೊಳ್ಳೋದು ನಂತರದ ಮಾತು ಆದರೆ ಅಭಿವೃದ್ಧಿ ಎಲ್ಲಿದೆ?
ಯಾವುದೇ ಶಾಸಕರು ಏನೂ ಮಾಡಲು ಆಗುತ್ತಿಲ್ಲ ಎಂದರು. ಹೊಸ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಯೋಜನೆ ಜಾರಿ ಮಾಡೋಕೆ ಆಗಿಲ್ಲ? ಎಂದು ಗುಡುಗಿದರು.
ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನ ವಿಚಾರವಾಗಿ ಮಾತನಾಡಿ, ಇಂತಹ ಹೇಯ ಕೃತ್ಯ ಮಾಡಿದವರು ಯಾರೇ ಆದರೂ ತಕ್ಕ ಶಿಕ್ಷೆ ಆಗಬೇಕು. ನಮ್ಮ ರಾಜ್ಯದಲ್ಲಿ ನಡೆಯುತ್ತಿರೊ ಘಟನೆ ನೋಡಿದರೆ ಯಾರೂ ತಲೆ ಎತ್ತಿ ಓಡಾಡಲು ಆಗದಂತಾಗಿದೆ. ಯಾರೇ ಪ್ರಭಾವಿ ಶಕ್ತಿ ಶಾಲಿ ಇದ್ದರೂ ಕೂಡ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಶಾಸಕ ಹೆಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಹೆಚ್.ಎನ್. ನಾಗೇಶ್,ಇನ್ನಿತರು ಇದ್ದರು.
Hassan
ಕಾಫಿ ಕಳ್ಳತನ ಮಾಡಿದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಕೇಸು ಹಾಕುವ ಬೆದರಿಕೆ : ನ್ಯಾಯ ಕೊಡಿಸುವಂತೆ ಅಕ್ಷಿತಾ ಮನವಿ
ಹಾಸನ: ಜಮೀನಿನಲ್ಲಿ ಕಾಫಿ ಕದ್ದು ಕೂಯ್ದ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮತ್ತು ಅಟ್ರಾಸಿಟಿ ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದ್ದು, ನಮಗೆ ನ್ಯಾಯಕೊಡಿಸಬೇಕೆಂದು ಕೊಡಗಲವಾಡಿ ಗ್ರಾಮದ ಅಕ್ಷತಾ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಕ್ಷತಾ ಕೊಡಗಲವಾಡಿ ಯಾದ ನಾನು ಸುಮಾರು ೭-೮ ವರ್ಷಗಳಿಂದ ಆಲೂರು ತಾಲೂಕಿನ ಕೊಡಗಲವಾಡಿ ಗ್ರಾಮದ ಸರ್ವೆ ನಂ ೧೭/೨ ರಲ್ಲಿ ನಮ್ಮ ಮನೆಯಲ್ಲಿ ವಾಸವಾಗಿರುತ್ತೇನೆ. ಮನೆಯ ಪಕ್ಕದಲ್ಲೇ ಕಾಫಿ ಗಿಡಗಳಿದ್ದು, ಅದರ ಕಾಫಿ ಹಣ್ಣನ್ನು ನನ್ನ ಚಿಕ್ಕಮ್ಮ ಕುಯ್ಯುತಿದ್ದಾಗ ಪಕ್ಕದ ತೋಟದ ಮಂಜುನಾಥ್ ಎಂಬುವವರ ಅಣ್ಣ ಕಾಂತಾ ಮತ್ತು ಅವರ ಮಗ ಬಾಲರಾಜ್ ಎಂಬುವವರು ಅಲ್ಲಿಗೆ ಬಂದು ನನ್ನ ಚಿಕ್ಕಮ್ಮನಿಗೆ ಅವ್ಯಾಚ ಶಬ್ದಗಳಿಂದ ಬೈದು ಅವರು ಅದಕ್ಕೆ ಯಾಕೆ ಎಂದು ಕೇಳುವಾಗ ಅವರ ತಲೆ ಕೂದಲಿಗೆ ಕೈ ಹಾಕಿ ಮುಡಿ ಎಳೆದಾಡುತ್ತಿದ್ದಾಗ ಅವರು ಕಿರುಚಡುತಿದ್ದನ್ನು ಕಂಡು ನಾನು ಮನೆಯಿಂದ ಹೋಗಿ ಬಿಡಿಸಲು ಯತ್ನಿಸಿದಾಗ ನನ್ನ ಮೇಲೂ ಹಲ್ಲೆ ಮಾಡಿ ನನ್ನನ್ನು ಕೆಳಗೆ ತಳ್ಳಿ ಬೀಳಿಸಿರುತ್ತಾರೆ ಎಂದು ದೂರಿದರು. ಅಲ್ಲೇ ಬಿದ್ದಾಗ ರಕ್ತಸ್ರಾವ ಉಂಟಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೊರಬರುವಾಗ ನನ್ನನ್ನು ಅವ್ಯಚ್ಯಾ ಶಬ್ದಗಳಿಂದ ನಿಂದಿಸಿ ನಿನ್ನ ಮನೆಯನ್ನು ಪುಡಿ ಮಾಡುವುದಾಗಿ ಮತ್ತು ಮುಂದೆ ನಾವು ಅವರು ಹೇಳಿದಂತೆ ಕೆಳದಿದ್ದರೆ ಅಟ್ರಾಸುಟಿ ಕೇಸ್ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಮತ್ತು ಅಲ್ಲೇ ಇದ್ದ ೬-೭ ಕಾಫಿ ಮೂಟೆಯ ಚೀಲಾಗಳನ್ನು ತೆಗೆದುಕೊಂಡು ಮುಂದೆ ನಾವು ಹೇಳಿದಂತೆ ಕೆಳದಿದ್ದರೆ ಇಲ್ಲಿರುವ ಗಿಡಗಳನ್ನು ಕಡಿದು ಬೆಂಕಿಗೆ ಹಾಕುತ್ತೆನೆಂದು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದು, ಆಲೂರು ಪೊಲೀಸ್ ಸ್ಟೇಷನ್ ಅಲ್ಲಿ ಸುಮಾರು ೨ ಗಂಟೆಗೆ ದೂರು ದಾಖಲಾಯಿಸಲು ಹೋದಾಗ ನಮ್ಮ ದೂರನ್ನು ತೆಗೆದುಕೊಳ್ಳದೆ ೨ ಗಂಟೆಯವರೆಗೂ ಕಾಯಿಸಿರುತಾರೆ. ನನಗೆ ಹಲ್ಲೆ ಮಾಡಿದ ವ್ಯಕ್ತಿ ಬರುತ್ತಿದ್ದಾರೆ ಇರಿ ಎಂದು ಹೇಳಿದ್ದಾರೆ. ನಂತರ ನನಗೆ ಹೊಟ್ಟೆ ನೋವಾಗಿದೆ ಮತ್ತು ಸುಸ್ತು ಅಗುತಿದೆ ಹಾಗಾಗಿ ದೂರು ದಾಖಲಾಯಿಸಲು ತಡವಾದರೆ ಹಿಂಬಾರ ಕೊಡಿ ಎಂದು ಹೇಳಿದಾಗ ನನ್ನ ಚಿಕ್ಕಮ್ಮನಾ ದೂರನ್ನು ತೆಗೆದುಕೊಂಡು ಎಫ್.ಐ.ಆರ್. ಮಾಡುತ್ತಾರೆ. ನಂತರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ನಿಮಗೆ ಪೆಟ್ಟು ಬಿದ್ದಿದ್ದರಿಂದ ಮತ್ತು ಮಾನಸಿಕ ಒತ್ತಡದಿಂದ ಹೀಗಾಗಿದೆ ಎಂದು ಎಂ.ಎಲ್.ಸಿ. ಮಾಡಿರುತಾರೆ. ನನ್ನ ೧೭/೨ ರಲ್ಲಿ ನ್ಯಾ ಲೋನ್ ಗಳಿದ್ದು ಪ್ರತಿ ವರ್ಷ ನನ್ನ ಜಾಗದ ಕಾಫಿ ಹಣ್ಣು ಕುಯುತಿದ್ದಾರೆ ಮುಂದೆ ನನ್ನ ತರ ರೈತರು ಹೇಗೆ ಜೀವನ ಮಾಡುವುದೆಂದು ಪ್ರಶ್ನೆ ಮಾಡಿದರು. ನಾನು ಒಬ್ಬ ಜನಪ್ರತಿನಿಧಿಯಾಗಿ ಒಬ್ಬ ೨೦ ರಿಂದ ೨೫ ವರ್ಷದ ಹುಡುಗ ಹೀಗೆ ಮಾಡಿದ್ದಾರೆ ಮುಂದಿನ ಆಗುಹೋಗುಗಳನ್ನು ಗಮನಿಸಿ ದೂರು ಕೊಟ್ಟಿರುತೇವೆ. ನಾನು ಅಟ್ರಾಸಿಟಿ ವಿರೋಧಿ ಅಲ್ಲ. ಇದರ ದುರುಪಯೋಗದ ವಿರೋಧಿ ಎಂದು ಹೇಳಿದರು. ಇವುಗಳನೆಲ್ಲ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಗಮನಿಸಿ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದರು.
Hassan
ಸುತ್ತೂರು ಮಠದಿಂದ 2 ಲಕ್ಷಕ್ಕೂ ಅಧಿಕ ಉಪಕರಣ ಸರಕಾರಿ ವಾಣಿವಿಲಾಸ ಶಾಲೆಗೆ ಕೊಡುಗೆ
ಹಾಸನ: ಶ್ರೀಕ್ಷೇತ್ರ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕೃಪಾ ಆಶೀರ್ವಾದದಿಂದ ಸುಮಾರು ೨ ಲಕ್ಷಕ್ಕೂ ಅಧಿಕ ಮೊತ್ತದ ದೂರದರ್ಶಕ ಯಂತ್ರ, ಸೂಕ್ಷ್ಮ ದರ್ಶಕ ಯಂತ್ರ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿ ವಿಲಾಸ ಶಾಲೆಗೆ ನೀಡಿದ್ದಾರೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದರು.
ನಗರದ ಮಹಾವೀರ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರಾದ ಮೀನಾಕ್ಷಿ ಅವರಿಗೆ ಉಪಕರಣಗಳನ್ನು ಹಸ್ತಂತರಿಸಿದ ನಂತರ ಮಾತನಾಡಿದ ಅವರು, ಸುತ್ತೂರು ಮಠದಿಂದ ಸುಮಾರು ೮೦ ಸಾವಿರ ಮೌಲ್ಯದ ದೂರದರ್ಶಕ ಯಂತ್ರ, ಸುಮಾರು ೮ ಸಾವಿರ ಮೌಲ್ಯದ ಸೂಕ್ಷ್ಮದರ್ಶಕ ಯಂತ್ರಗಳು ಮತ್ತು ಸುಮಾರು ೧ ಲಕ್ಷಕ್ಕೂ ಮೀರಿದ ಮೌಲ್ಯದ ಸಾವಿರಕ್ಕೂ ಅಧಿಕ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕವಾದ ಅಕ್ವಾಗಾರ್ಡ್‌ಗಳು ಸುತ್ತೂರು ಮಠದಿಂದ ಮಹಾಪ್ರಸಾದವಾಗಿ ಶಾಲೆಗೆ ದೊರೆತ ಸುದಿನವಾಗಿದೆ ಎಂದರು.
ಸಹಕಾರವನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿಯವರೊಂದಿಗೆ ಇತ್ತೀಚಗೆ ಸುತ್ತೂರು ಜಗದ್ಗುರುಗಳು ಹಾಸನದ ಧಾರ್ಮಿಕ ಕಾರ್ಯಕ್ರಮಕ್ಕೆ ಅಗಮಿಸಿದ ಸಂದರ್ಭದಲ್ಲಿ ನಮ್ಮ ಸರ್ಕಾರಿ ಪ್ರಾಥಮಿಕ ವಾಣಿವಿಲಾಸ ಶಾಲೆಯಲ್ಲಿ ವಚನ ಕಂಠಪಾಠ ಕಾರ್ಯಕ್ರಮಕ್ಕೆ ಕರೆಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮಾಡಿದ ಅವರು ಹೆಚ್ಚಿನ ಸಹಕಾರ ನೀಡಿ ಸುತ್ತೂರು ಮಠದಿಂದ ಉಪಕರಣಗಳನ್ನು ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ. ಮಧು ಕುಮಾರ್ ಹಾಗೂ ಬಾಲು ಸ್ವತಃ ಶಾಲೆಗೆ ಭೇಟಿ ನೀಡಿ ದೂರದರ್ಶಕ ಯಂತ್ರ ಸೂಕ್ಷ್ಮದರ್ಶಕ ಯಂತ್ರ ಹಾಗೂ ಅಕ್ವಾಗಾರ್ಡನ್ನು ನಮ್ಮ ಶಾಲೆಗೆ ನೀಡಿದ್ದಾರೆ.
ಈ ಒಂದು ಶುಭ ಕಾರ್ಯಕ್ರಮದಲ್ಲಿ ಚಾಪು ಮೂಡಿಸಿ ಸಹಕಾರ ನೀಡಿದ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತಾ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ.
ಈ ಸಂದರ್ಭದಲ್ಲಿ ಜೆಎಸ್‌ಎಸ್ ಕಾಲೇಜು ಪ್ರಾಂಶುಪಾರು ಮಧುಕುಮಾರ್, ಬಾಲು, ಶಿಕ್ಷಣಾಧಿಕಾರಿಗಳು ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಈ ಶಾಲೆಯ
ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆ ಸಲ್ಲಿಸಿ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಎಂ.ಎಚ್. ಮೀನಾಕ್ಷಿ ಕೃತಜ್ಞತೆ ಸಲ್ಲಿಸಿದರು.
Hassan
ಪತ್ನಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಪತಿ
ಹಾಸನ : ಪತ್ನಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಪತಿ
ಪತ್ನಿಯ ಅಂಗಾಗಗಳನ್ನು ದಾನ ಮಾಡಿದ ಪತಿ
ಜ.9 ರಂದು ಪತಿ ಮಂಜೇಗೌಡ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ ಮತ್ತೊಂದು ಬೈಕ್
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಮ್ಯಾ (28)
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಹೋಬಳಿ, ಕಾವಲುಬಾರೆ ಗ್ರಾಮದ ಬಳಿ ನಡೆದಿದ್ದ ಘಟನೆ
ಹೊನ್ನಶೆಟ್ಟಿಹಳ್ಳಿ ಗ್ರಾಮದ ಮಂಜೇಗೌಡ ಅವರ ಪತ್ನಿ ರಮ್ಯಾ
ತೀವ್ರವಾಗಿ ಗಾಯಗೊಂಡಿದ್ದ ರಮ್ಯಾ ಅವರನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿದ್ದ ಮಂಜೇಗೌಡ
ತಲೆಗೆ ತೀವ್ರವಾದ ಗಾಯವಾಗಿದ್ದರಿಂದ ನಿಷ್ಕ್ರಿಯಗೊಂಡಿದ್ದ ಮೆದುಳು
ರಮ್ಯಾ ಅಂಗಾಗಳನ್ನು ದಾನ ಮಾಡಿದ ಪತಿ ಮಂಜೇಗೌಡ ಹಾಗೂ ಪೋಷಕರು
ಆದಿಚುಂಚನಗಿರಿ ಆಸ್ಪತ್ರೆ ಅಂಗಾಂಗಗಳನ್ನು ದಾನ ಮಾಡಿದ ಪೋಷಕರು
-
Mysore21 hours ago
ಮೈಸೂರು ಮಹಾರಾಜರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ
-
Sports20 hours ago
ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಸುರೇಶ್ ರೈನಾ
-
Sports19 hours ago
Kho Kho world cup 2025: ಭಾರತ ಮಹಿಳಾ ಹಾಗೂ ಪುರುಷ ತಂಡಗಳೇ ಚಾಂಪಿಯನ್
-
National - International19 hours ago
ಮಹಾ ಕುಂಭಮೇಳ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ವಿಶೇಷ ರೈಲು ವ್ಯವಸ್ಥೆ : ಈ ದಿನ ಮಾತ್ರ!
-
Kodagu24 hours ago
ಕ್ರೀಡಾ ಪರಂಪರೆ ಮುಂದುವರೆಸಲು ಶಾಸಕ ಎ.ಎಸ್. ಪೊನ್ನಣ್ಣ ಕರೆ
-
Mysore22 hours ago
ತಾಲೂಕು ಕಚೇರಿಗಳು ಪ್ರಾರಂಭವಾಗಲು ಒತ್ತಾಯ: ಹೊಸೂರು ಕುಮಾರ್
-
Mysore24 hours ago
ವಿಜಯೇಂದ್ರ ಮೊದಲು ಕುರ್ಚಿ ಭದ್ರಪಡಿಸಿಕೊಳ್ಳಲಿ: ಬಿ.ಸುಬ್ರಹ್ಮಣ್ಯ
-
Kodagu23 hours ago
ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ